ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭಯಾನಕ ರೋಡ್ ರೇಜ್ ಕೇಸ್! – ಕಾರಿನ ಬ್ಯಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಚಾಲಕ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ಕಾರಿನ ಬ್ಯಾನೆಟ್ ಮೇಲೆ ಕುಳಿತವನನ್ನು 400 ಮೀಟರ್ನಷ್ಟು ದೂರ ಎಳೆದೊಯ್ದು ಹುಚ್ಚಾಟ ಮೆರೆಯಲಾಗಿದೆ. ಇದರ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಮೇಲುಕೋಟೆ ಬೆಟ್ಟದ ತಪ್ಪಲಲ್ಲಿ ರೀಲ್ಸ್ ಟೀಚರ್ ಶವ – ಶಿಕ್ಷಕಿಯ ಬರ್ಬರ ಹತ್ಯೆಗೆ ಕಾರಣವೇನು?
ಮಲ್ಲೇಶ್ವರಂ ಮಾರಮ್ಮ ಸರ್ಕಲ್ನಲ್ಲಿ ಈ ಘಟನೆ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಮಾರಮ್ಮ ಸರ್ಕಲ್ನಲ್ಲಿ ಕಾರು ಚಾಲಕ ಮುನೀರ್ ಕ್ಯಾಬ್ಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕ ಮುನೀರ್ ಅನ್ನು ಕಾರು ನಿಲ್ಲಿಸುವಂತೆ ಕ್ಯಾಬ್ ಡ್ರೈವರ್ ಅಶ್ವತ್ಥ್ ದುಂಬಾಲು ಬಿದ್ದಿದ್ದಾನೆ. ಈ ವೇಳೆ ಕಾರು ನಿಲ್ಲಸದೇ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಕ್ಯಾಬ್ ಡ್ರೈವರ್ ಕಾರಿನ ಮುಂದೆ ನಿಂತು ಕೆಳಗೆ ಬರುವಂತೆ ಪಟ್ಟು ಹಿಡಿದಿದ್ದಾನೆ. ಆಗ ತಕ್ಷಣವೇ ಚಾಲಕ ಕಾರು ಚಲಾಯಿಸಿದ್ದಾನೆ.
ಸರ್ಕಲ್ ಮಾರಮ್ಮ ದೇವಸ್ಥಾನ ಬಳಿಯಿಂದ ಕಾರು ಚಾಲಕ, ಕ್ಯಾಬ್ ಡ್ರೈವರ್ ಅನ್ನು ಬ್ಯಾನೆಟ್ ಮೇಲೆ ಎಳೆದೊಯ್ದಿದ್ದಾನೆ. 18ನೇ ಕ್ರಾಸ್ ಸಿಗ್ನಲ್ವರೆಗೆ ಬ್ಯಾನೆಟ್ ಮೇಲೆ ಎಳೆದೊಯ್ದಿದಿದ್ದು ಸ್ಥಳೀಯರು ಹಿಂದೆ ಹಿಂದೆ ಓಡಿಬಂದ್ರು ಚಾಲಕ ಕಾರು ನಿಲ್ಲಿಸದೆ ಹೋಗಿದ್ದಾನೆ. ಸಡನ್ ಆಗಿ ಬ್ರೇಕ್ ಹೊಡೆದು ಬ್ಯಾನೆಟ್ ಮೇಲಿದ್ದವನನ್ನು ಕೆಳಗೆ ಬೀಳಿಸಲು ಯತ್ನಿಸಲಾಗಿದೆ. ಇದರ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಯಾನೆಟ್ ಮೇಲೆ ಕ್ಯಾಬ್ ಚಾಲಕ ಅಶ್ವತ್ಥ್ ಮಲಗಿದ್ರೂ ಚಾಲಕ ಮುನೀರ್ ಕೇರ್ ಮಾಡದೇ ಹಾಗೆಯೇ ಕಾರು ಚಲಾಯಿಸಿಕೊಂಡು ಹೊರಟಿದ್ದಾನೆ. ಸಿಗ್ನಲ್ ಬಳಿ ಹೋಗ್ತಿದ್ದಂತೆ ಕಾರು ಅಡ್ಡಗಟ್ಟಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಮಲ್ಲೇಶ್ವರಂ ಹೊಯ್ಸಳ ಸಿಬ್ಬಂದಿ ಕೂಡಲೇ ಕಾರು ಚಾಲಕನನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಕೊನೆಗೆ ಎನ್ಸಿಆರ್ ದಾಖಲಿಸಿದ ಮಲ್ಲೇಶ್ವರಂ ಪೊಲೀಸರು ಚಾಲಕರನ್ನು ಕಳುಹಿಸಿದ್ದಾರೆ.