ದಳಕ್ಕೆ ಫಿಕ್ಸ್ ಆಗಿರುವ ಹಾಸನದ ಪರಿಸ್ಥಿತಿ ಹೇಗಿದೆ? – ಪ್ರಜ್ವಲ್ ರೇವಣ್ಣಗೆ ಒಳಗಿಂದಲೂ ವಿರೋಧ.. ಹೊರಗಿಂದಲೂ ವಿರೋಧ!

ದಳಕ್ಕೆ ಫಿಕ್ಸ್ ಆಗಿರುವ ಹಾಸನದ ಪರಿಸ್ಥಿತಿ ಹೇಗಿದೆ? – ಪ್ರಜ್ವಲ್ ರೇವಣ್ಣಗೆ ಒಳಗಿಂದಲೂ ವಿರೋಧ.. ಹೊರಗಿಂದಲೂ ವಿರೋಧ!

ಹಾಸನ ಹೇಳಿಕೇಳಿ ದೇವೇಗೌಡರ ತವರೂರು, ಜೆಡಿಎಸ್‌ನ ಭದ್ರಕೋಟೆ.. ಆದ್ರೆ ಮಗ ರೇವಣ್ಣ ಅವರು ಚಕ್ರಾಧಿಪತ್ಯದಲ್ಲಿ ಹಾಸನದ ಜೆಡಿಎಸ್‌ ನಲುಗಿ ಹೋಗಿದೆ.. ಹಾಸನದಲ್ಲೆಲ್ಲಾ ನಮ್ಮ ಫ್ಯಾಮಿಲಿ ಬಿಟ್ರೆ ಬೇರೆ ಇನ್ಯಾರೂ ಇಲ್ಲ, ನನಗೂ ಇರಲಿ, ನನ್ನ ಹೆಂಡ್ತಿಗೂ ಇರಲಿ, ನಮ್ಮಿಬ್ಬರು ಮಕ್ಕಳಿಗೂ ಇರಲಿ ಅಂತ ಸೀಟಿನ ಮೇಲೆ ಸೀಟು ಕೇಳಿ, ಪಕ್ಷದ ಕಾರ್ಯಕರ್ತರ ಸಿಟ್ಟಿಗೂ ಗುರಿಯಾಗಿದ್ದಾರೆ ರೇವಣ್ಣ..

ಇದನ್ನೂ ಓದಿ:  ಮಲ್ಲಿಕಾರ್ಜುನ ಖರ್ಗೆಗೆ ಸಂಸದ ಉಮೇಶ್ ಜಾಧವ್ ಸವಾಲು – ಈ ಬಾರಿಯೂ ಸೋಲಿಸ್ತೀನಿ ಎಂದು ಶಪಥ

ಹೊಳೆನರಸೀಪುರದಲ್ಲಿ ಈ ಬಾರಿ ಕಷ್ಟಪಟ್ಟು ಗೆದ್ದರೂ ರೇವಣ್ಣ ಮಾತ್ರ ಹಳೇ ಗುಂಗಿನಿಂದ ಹೊರಬಂದಿಲ್ಲ.. ಅಥವಾ ಫ್ಯಾಮಿಲಿ ಬಗೆಗಿನ ಕುರುಡು ಪ್ರೇಮದಿಂದ ಅವರಿಗೆ ಕಾರ್ಯಕರ್ತರ ಭಾವನೆಗಳೂ ಕಾಣ್ತಿಲ್ಲ.. ಇದರ ಜೊತೆಗೆ ಒಂದೂವರೆ ಕೋಟಿ ಕಾರಿನ ಬಗ್ಗೆ ರೋಡಲ್ಲಿ ನಿಂತು ಭವಾನಿ ರೇವಣ್ಣ ಹಾಕಿದ್ದ ಅವಾಜ್‌ ನೋಡಿದ ಮೇಲೆ ಜನರಿಗೆ ಇವರೆಲ್ಲಾ ಪ್ರಜಾಪ್ರಭುತ್ವದಲ್ಲಿರುವ ಜನರೋ.. ಅಥವಾ ಪಾಳೆಗಾರಿಕೆ ನಡೆಸುತ್ತಿರುವ ಜನರೋ ಎಂಬ ಅನುಮಾನ ಶುರುವಾಗಿದೆ.. ಇದರ ಪರಿಣಾಮ ಮಾತ್ರವಲ್ಲದೆ ಖುದ್ದು ತನ್ನ ನಡವಳಿಕೆ ಮೂಲಕವೂ ತುಂಬಾ ಎತ್ತರಕ್ಕೆ ಬೆಳೆಯಬಹುದಾಗಿದ್ದ ಯುವ ನಾಯಕ ಪ್ರಜ್ವಲ್‌ ರೇವಣ್ಣ ಈ ಬಾರಿ ವಿರೋಧ ಎದುರಿಸುತ್ತಿದ್ದಾರೆ..

ಪ್ರಜ್ವಲ್‌ ಗೆ ರಾಜಕೀಯ ಗೊತ್ತಿದೆ.. ಮಹಾತ್ವಾಕಾಂಕ್ಷೆಯೂ ಇದೆ.. ಆದರೆ ರಾಜಕೀಯದಲ್ಲಿ ಅತ್ಯಂತ ಮುಖ್ಯವಾಗಿ ಬೇಕಿರುವ ಸಹನೆ, ಸಮಾಧಾನ ಎಂಬ ಪದಗಳ ಅರ್ಥ ಗೊತ್ತಿರುವಂತೆ ಕಾಣ್ತಿಲ್ಲ.. ಇದೇ ಅವರು ಎದುರಿಸುತ್ತಿರುವ ಸಮಸ್ಯೆ ಮೂಲ.. ಇನ್ನು ಪ್ರಜ್ವಲ್‌ ಅವರ ಚಿಕ್ಕಪ್ಪ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೂ ತೀರಾ ರೇವಣ್ಣ ಅವರ ಪುತ್ರ ಸ್ಪರ್ಧಿಸಲೇಬೇಕು ಎಂಬ ಆಸೆಯಿಲ್ಲ.. ಇದಕ್ಕೆ ಕಾರಣ ನನ್ನ ಮಗ ಒಂದಾದ್ಮೇಲೆ ಒಂದು ಚುನಾವಣೆ ಸೋಲುತ್ತಿರುವಾಗ ಇವ್ನ ಮಗ ಒಂದಾದ ಮೇಲೊಂದು ಚುನಾವಣೆ ಗೆಲ್ಬೇಕಾ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆಯೇ ಎಂಬ ಬಗ್ಗೆಯೂ ಅನುಮಾನವಿದೆ.. ಇದರ ಜೊತೆಗೆ ದೇವೇಗೌಡ ಫ್ಯಾಮಿಲಿಯ ವಿಶೇಷವಾಗಿ ರೇವಣ್ಣ ಫ್ಯಾಮಿಲಿಯ ಕಡುವಿರೋಧಿ ಪ್ರೀತಂ ಗೌಡರು ಯಾವುದೇ ಕಾರಣಕ್ಕೂ ಪ್ರಜ್ವಲ್‌ ಪರವಾಗಿ ನಿಲ್ಲುವ ಲಕ್ಷಣ ಕಾಣ್ತಿಲ್ಲ.. ಹೀಗಾಗಿ ಹಾಸನದಲ್ಲಿ ಬೇರೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗುತ್ತಿದ್ದರೂ ದೇವೇಗೌಡರು ಮಾತ್ರ ನನ್ನ ಮೊಮ್ಮಗನನ್ನು ಗೆಲ್ಲಿಸ್ರಪ್ಪಾ ಅನ್ನೋದ್ರ ಮೂಲಕ ಸ್ಪರ್ಧಿಸೋದು ಪ್ರಜ್ವಲ್‌ ಅವರೇ ಎನ್ನುವುದನ್ನು ಖಾತ್ರಿಪಡಿಸಿದ್ದಾರೆ.. ಹಾಗಿದ್ದರೂ ಕಡೇ ಕ್ಷಣದಲ್ಲೇನಾದರೂ ದೇವೇಗೌಡರು ಇದೇ ನನ್ನ ಕಡೇ ಚುನಾವಣೆ ಅಂತ ನಾಮಪತ್ರ ಸಲ್ಲಿಸಿದ್ರೆ ಹಾಸನದ ಚುನಾವಣೆಯ ಸ್ವರೂಪವೇ ಬದಲಾಗಬಹುದು..

ಕುಮರಾಸ್ವಾಮಿಯವರ ಆತುರದಿಂದ ಪಕ್ಷಕ್ಕೆ ಹೊಡೆತ ಬೀಳುತ್ತಾ?

ದೇವೇಗೌಡರು 1997ರಲ್ಲಿ ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡೋದಿಕ್ಕೂ ಮುಂಚಿತವಾಗಿ ಲೋಕಸಭೆಯಲ್ಲಿ ವಿಶ್ವಾಸಮತದ ಯಾಚನೆಯ ವೇಳೆ ಮತ್ತೆ ಧೂಳಿನಿಂದ ಎದ್ದು ಬರುತ್ತೇನೆ ಎಂದು ತನ್ನನ್ನು ಅಂದು ಕೆಡವಿದ್ದ ಕಾಂಗ್ರೆಸ್‌ ಎದುರು ಗುಡುಗಿದ್ದರು.. ಮುಂದೆಂದೂ ಜೆಡಿಎಸ್‌ ದಳಪತಿಗಳು ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಬಹುಮತದೊಂದಿಗೆ ಅಧಿಕಾರಕ್ಕೆ ಬರದಿದ್ದರೂ ಎರಡು ಬಾರಿ ಕಾಂಗ್ರೆಸ್‌ ಕೈ ಬಿಡಿದು ಮತ್ತು ಒಮ್ಮೆ ಕಮಲದ ತೆಕ್ಕೆಗೆ ಸೇರಿ ಅಧಿಕಾರದ ರುಚಿ ಅನುಭವಿಸಿದ್ದಾರೆ.. ಹಾಗಿದ್ದರೂ ದೇವೇಗೌಡರು ಮಾತ್ರ ತಮ್ಮ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಬೇಕಿದ್ದ ಎಲ್ಲಾ ತಂತ್ರಗಾರಿಕೆ, ಶ್ರಮ ಹಾಕಿದ್ದರಲ್ಲಿ ಯಾರಿಗೂ ಅನುಮಾನವಿಲ್ಲ..

ಎಸ್‌.ಎಂ.ಕೃಷ್ಣ ಸರ್ಕಾರವನ್ನು 2004ರಲ್ಲಿ ಕೆಡವೋದಿಕ್ಕೂ ದೇವೇಗೌಡರು ವಿಠಲೇನಹಳ್ಳಿಯಿಂದ ನಡೆಸಿದ್ದ ಪಾದಯಾತ್ರೆಯೇ ಕಾರಣವಾಗಿತ್ತು ಎನ್ನುವುದನ್ನು ನಾವು ಮರೆಯಬಾರದು.. ಆದ್ರೆ 1999ರಲ್ಲಿ ಜೆಡಿಎಸ್‌ ಇದ್ದ ಸ್ಥಿತಿಯಲ್ಲಿ 2023ರ ಚುನಾವಣೆಯ ನಂತರ ದಳಪತಿಗಳು ಇರಲಿಲ್ಲ.. ಹಾಗಿದ್ದರೂ ಕುಮಾರಸ್ವಾಮಿ ಕಂಗೆಟ್ಟಿದ್ದಾರೆ.. ಇದಕ್ಕೆ ಮುಖ್ಯಕಾರಣ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಜೋಡಿ, ಜೆಡಿಎಸ್‌ ಶಾಸಕರನ್ನೇ ಆಪರೇಷನ್‌ ಮಾಡಿ, ಜೆಡಿಎಸ್‌ ಮುಗಿಸಲು ಪ್ಲ್ಯಾನ್‌ ರೂಪಿಸಿರುವುದು.. ಹೀಗಾಗಿ ಈಗ ಇನ್ನೊಂದು ಪಕ್ಷದ ಆಸರೆ ಪಡೆದು ಅಧಿಕಾರಕ್ಕೆ ಬರದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲ ಎಂಬ ತೀರ್ಮಾನಕ್ಕೆ ಕುಮರಾಸ್ವಾಮಿ ಬಂದಂತೆ ಕಂಡುಬರುತ್ತಿದೆ.. ಇದೇ ಕಾರಣದಿಂದ ಬಿಜೆಪಿ ಜೊತೆ ಮೈತ್ರಿಗೆ ದೇವೇಗೌಡರನ್ನು ಒಪ್ಪಿಸಿದ್ದಾರೆ.. ಆದ್ರೆ ಇದು ಒಂದು ರೀತಿಯಲ್ಲಿ ಬಾಣಲೆಯಿಂದ ಬೆಂಕಿಗೆ ಬಿದ್ದಿರುವ ಪರಿಸ್ಥಿತಿಯಂತೆ ಕಂಡುಬರುತ್ತಿದೆ.. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರೂಪಿಸಿದ್ದ ಟಾರ್ಗೆಟ್‌ ಹಳೆ ಮೈಸೂರು ತಂತ್ರಗಾರಿಕೆಯಿಂದಾಗಿಯೇ ಜೆಡಿಎಸ್‌ ತೀವ್ರ ಹಿನ್ನಡೆ ಅನುಭವಿಸಿ, ಕಾಂಗ್ರೆಸ್‌ ಹೆಚ್ಚು ಸೀಟುಗಳಲ್ಲಿ ಗೆಲ್ಲುವಂತಾಗಿತ್ತು ಎನ್ನುವುದನ್ನು ಫಲಿತಾಂಶ ಹೇಳುತ್ತಿದೆ..

ಒಮ್ಮೆ ಬಿಜೆಪಿ ಕಡೆಗೆ ವಾಲಿರುವ ಮಂಡ್ಯ, ಮೈಸೂರು ಭಾಗದ ಮತದಾರರು ಮತ್ತೆ ಜೆಡಿಎಸ್‌ ಕಡೆಗೆ ಮರಳಿ ಬರುವುದು ಕಷ್ಟವಿದೆ.. ದೊಡ್ಡ ಪಕ್ಷ ಹಾಗೂ ರಾಜಕೀಯವಾಗಿ 2047ರ ಲೋಕಸಭಾ ಚುನಾವಣೆಗೂ ಈಗಿಂದಲೇ ತಯಾರಿ ನಡೆಸುವಷ್ಟು ದೂರದೃಷ್ಟಿ ಹೊಂದಿರುವ ಬಿಜೆಪಿಗೆ ಮೂರು ಸೀಟು ಬಿಟ್ಟುಕೊಟ್ಟು ಆರು ಸೀಟು ಪಡೆಯೋದು ಹೇಗೆ ಎಂಬುದು ಚೆನ್ನಾಗಿ ಗೊತ್ತಿದೆ.. ಇಂತಹ ಪ್ರಯೋಗಗಳ ಸಂದರ್ಭದಲ್ಲಿ ಸಣ್ಣ ಪುಟ್ಟ ಪಕ್ಷಗಳ ಅಸ್ತಿತ್ವವೇ ಇಲ್ಲದಾಗುವುದು ಸರ್ವೇ ಸಾಮಾನ್ಯ.. ಇಂದಿಗೂ ಅಧಿಕಾರ ಇಲ್ಲದಿದ್ದರೂ ಅತ್ಯಂತ ನಿಷ್ಠಾವಂತ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಅಂದರೆ ಅದು ಜೆಡಿಎಸ್‌.. ಯಾವುದೇ ಹಂತದಲ್ಲೂ ಪಕ್ಷದ

ನಾಯಕತ್ವದ ಮೇಲೆ ಕಾರ್ಯಕರ್ತರ ನಿಷ್ಠೆ ಕಮ್ಮಿಯಾಗಿಲ್ಲ.. ಆದ್ರೀಗ ಕುಮಾರಸ್ವಾಮಿಯವರ ಆತುರದ ನಿರ್ಧಾರದಿಂದ ಕಾರ್ಯಕರ್ತರ ಪಕ್ಷದ ಅಸ್ತಿತ್ವವೇ ಮಾಯವಾಗುತ್ತಾ ಎಂಬ ಅನುಮಾನ ರಾಜ್ಯ ರಾಜಕೀಯದಲ್ಲಿ ಶುರುವಾಗಿದೆ.. ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ತನಗೆ ಸಿಗಬಹುದಾದ ಮೂರುಕ್ಕೆ ಮೂರು ಕ್ಷೇತ್ರಗಳಲ್ಲಿ ಗೆದ್ದರೂ ಜೆಡಿಎಸ್‌ಗೆ ಇರುವ ಅಸ್ತಿತ್ವದ ಪ್ರಶ್ನೆ ಅಷ್ಟು ಸುಲಭವಾಗಿ ದೂರ ಆಗೋದಿಲ್ಲ ಎನ್ನುವುದು ಮಾತ್ರ ಸ್ಪಷ್ಟ..

 

Sulekha