ರೈತರಿಗೂ ತಿಂಗಳಿಗೆ ₹3 ಸಾವಿರ ಪಿಂಚಣಿ – ಸರ್ಕಾರದ ಹಣ ಪಡೆಯಲು ಏನು ಮಾಡಬೇಕು?

ರೈತರಿಗೂ ತಿಂಗಳಿಗೆ ₹3 ಸಾವಿರ ಪಿಂಚಣಿ – ಸರ್ಕಾರದ ಹಣ ಪಡೆಯಲು ಏನು ಮಾಡಬೇಕು?

ರೈತರಿಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನ ಘೋಷಣೆ ಮಾಡುತ್ತವೆ. ಆದ್ರೆ ಎಷ್ಟೋ ರೈತರಿಗೆ ಅವುಗಳ ಬಗ್ಗೆ ಮಾಹಿತಿಯೇ ಇರೋದಿಲ್ಲ. ಅವುಗಳಲ್ಲಿ ಪಿಎಂ ಕಿಸಾನ್ ಮಾನಧನ್ ಯೋಜನೆಯೂ ಒಂದು. ಈ ಯೋಜನೆಯಲ್ಲಿ ರೈತರಿಗೆ ತಿಂಗಳಿಗೆ 3 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತೆ. ಹೇಗೆ ಅನ್ನೋ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಪೆನ್ಷನ್‌ ಜನವರಿ 31ಕ್ಕೆ ನಿಲ್ಲಲಿದೆ ಹುಷಾರ್! – ಪೆನ್ಷನ್‌ ಪಡೆಯಲು ಈ ದಾಖಲೆ‌ ಸಲ್ಲಿಕೆ‌ ಕಡ್ಡಾಯ

ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪಿಎಂ ಕಿಸಾನ್ ಮಾನಧನ್ ಯೋಜನೆ ಎರಡೂ ಕೂಡ ಭಿನ್ನವಾಗಿವೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ವ್ಯವಸಾಯಕ್ಕೆಂದು ಸರ್ಕಾರ ವರ್ಷಕ್ಕೆ 6 ಸಾವಿರ ರೂಪಾಯಿ ಧನಸಹಾಯ ನೀಡುತ್ತದೆ. ಆದರೆ, ಪಿಎಂ ಕಿಸಾನ್ ಮಾನಧನ್ ಯೋಜನೆಯಲ್ಲಿ ಸಣ್ಣ ರೈತರಿಗೆ ತಿಂಗಳಿಗೆ 3,000 ರೂಪಾರಿ ಪಿಂಚಣಿ ನೀಡಲಾಗುತ್ತದೆ. ಏನಿದು ಯೋಜನೆ ಅನ್ನೋದನ್ನ ಮೊದ್ಲು ಹೇಳ್ತೇನೆ. 2 ಹೆಕ್ಟೇರ್ ಅಥವಾ ಐದು ಎಕರೆವರೆಗೆ ಜಮೀನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರಾಗಿರುತ್ತಾರೆ.  18ರಿಂದ 40 ವರ್ಷದೊಳಗಿನ ರೈತರು ನೊಂದಣಿ ಮಾಡಿಕೊಳ್ಳಬಹುದು. ನೀವೇನಾದ್ರೂ 18 ವರ್ಷ ವಯಸ್ಸಿನಲ್ಲಿ ಈ ಯೋಜನೆ ಆರಂಭಿಸಿದರೆ ತಿಂಗಳಿಗೆ ಕನಿಷ್ಠ 55 ರೂಪಾಯಿಗಳನ್ನ ಪಿಂಚಣಿ ನಿಧಿಗೆ ತುಂಬುತ್ತಾ ಹೋಗಬೇಕು. ಅಥವಾ 40ನೇ ವಯಸ್ಸಿನಲ್ಲಿ ಯೋಜನೆ ಪಡೆದರೆ ತಿಂಗಳಿಗೆ ಕನಿಷ್ಠ 200 ರೂಪಾಯಿಗಳನ್ನ ಕಟ್ಟಬೇಕು. 60 ವರ್ಷದವರೆಗೆ ಪ್ರತೀ ತಿಂಗಳು ಪಿಂಚಣಿ ನಿಧಿಗೆ ಹಣ ಕಟ್ಟಬೇಕು. ಅಷ್ಟೇ ಮೊತ್ತವನ್ನ ಕೇಂದ್ರ ಸರ್ಕಾರ ಕೂಡ ನಿಮ್ಮ ಪಿಂಚಣಿ ನಿಧಿಗೆ ತುಂಬುತ್ತದೆ. 60 ವರ್ಷದ ಬಳಿಕ ತಿಂಗಳಿಗೆ 3,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಿಂಚಣಿಯನ್ನು ರೈತರು ಪಡೆಯಬಹುದು. ಇನ್ನು ಪಿಎಂ ಕಿಸಾನ್ ಮಾನಧನ್ ಯೋಜನೆಗೆ ನೊಂದಾಯಿಸುವುದು ಹೇಗೆ ಅನ್ನೋದನ್ನೂ ಹೇಳ್ತೇನೆ. ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಜಮೀನಿನ ದಾಖಲೆ ನೀಡಿ ನೊಂದಾಯಿಸಬೇಕು. ರೈತರ ವಯಸ್ಸಿಗೆ ಅನುಗುಣವಾಗಿ ಅವರು ಕನಿಷ್ಠ ಎಷ್ಟು ಹಣ ಕಟ್ಟಬೇಕು ಎಂಬುದನ್ನು ನಿರ್ದಿಷ್ಟ ಪಡಿಸಲಾಗುತ್ತದೆ. ಅರ್ಹ ರೈತರು ಮೊದಲ ಕಂತನ್ನು ನಗದು ರೂಪದಲ್ಲಿ ನೀಡಬೇಕು. ಬಳಿಕ ಆಟೊ ಡೆಬಿಟ್ ಅರ್ಜಿ ತುಂಬಿಸಿ ಸಲ್ಲಿಸಬೇಕು. ಆ ಬಳಿಕ ಪ್ರತೀ ತಿಂಗಳು ಕೂಡ ಎಸ್​ಬಿ ಖಾತೆಯಿಂದ ನಿರ್ದಿಷ್ಟ ಮೊತ್ತದ ಹಣವು ಪಿಂಚಣಿ ನಿಧಿಗೆ ಕಟ್ ಆಗುತ್ತದೆ. ನೊಂದಣಿ  ಬಳಿಕ ರೈತರಿಗೆ ವಿಶೇಷ ಕಿಸಾನ್ ಪೆನ್ಷನ್ ಅಕೌಂಟ್ ನಂಬರ್ ಕ್ರಿಯೇಟ್ ಆಗುತ್ತೆ. ಹಾಗೇ ಕಿಸಾನ್ ಕಾರ್ಡ್ ಕೊಡಲಾಗುತ್ತದೆ.

Sulekha