ಫೀಲ್ಡಿಂಗ್‌ನಲ್ಲಿ ವಿರಾಟ್ ಕೊಹ್ಲಿ ಮೀರಿಸುವವರಿಲ್ಲ – ಟೀಂ ಇಂಡಿಯಾದ ಬೆಸ್ಟ್ ಫೀಲ್ಡರ್ ಕಿಂಗ್ ಕೊಹ್ಲಿ
ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್ನಲ್ಲಿ ವಿರಾಟ್ ಕೊಹ್ಲಿ ಆಡಿರೋದು ಎರಡು ಮ್ಯಾಚ್. ಆದ್ರೆ ಕೊಹ್ಲಿ ಬ್ಯಾಟ್ನಿಂದ ರನ್ ಬಾರದೆ ಇದ್ರೂ ಕೂಡ ಟೀಮ್ನಲ್ಲಿ ವಿರಾಟ್ ಕೊಹ್ಲಿ ಇಂಪಾರ್ಟೆಂಟ್ ಯಾಕೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಆಫ್ಘನ್ ವಿರುದ್ಧದ 3ನೇ ಮ್ಯಾಚ್ ಕೊಹ್ಲಿ ಆಡದೆ ಇರ್ತಿದ್ರೆ ಟೀಂ ಇಂಡಿಯಾ ಮ್ಯಾಚ್ನ್ನೇ ಸೋಲ್ತಿತ್ತು ಅಂದ್ರೂ ತಪ್ಪಾಗೋದಿಲ್ಲ. ನಿಮಗೆ ಗೊತ್ತಿರೋ ಹಾಗೆ ಫೈನಲ್ ಮ್ಯಾಚ್ ಟೈ ಆಗಿತ್ತು. ಸೂಪರ್ ಓವರ್ನಲ್ಲಿ ಭಾರತ ಗೆದ್ದಿತ್ತು. ಆದ್ರೆ, ಅಂದು ವಿರಾಟ್ ಕೊಹ್ಲಿ ಇರದೇ ಇರ್ತಿದ್ರೆ ಸೂಪರ್ ಓವರ್ ಕೂಡ ನಡೀತಾ ಇರಲಿಲ್ವೋ ಏನೊ. ಅಫ್ಘಾನಿಸ್ತಾನವೇ ಮ್ಯಾಚ್ ಗೆಲ್ಲುವ ಚಾನ್ಸ್ ಇತ್ತು. ಅದಕ್ಕೆ ಕಾರಣ ವಿರಾಟ್ ಕೊಹ್ಲಿಯ ಫೀಲ್ಡಿಂಗ್.. ಆ ಮ್ಯಾಚ್‌ನಲ್ಲಿ ಕೊಹ್ಲಿ ಫೀಲ್ಡಿಂಗ್‌ನಲ್ಲಿ ಯಾವ ರೀತಿ ಕಾಂಟ್ರಿಬ್ಯೂಟ್ ಮಾಡಿದ್ರು ಅನ್ನೋ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಒಂದೇ ಟಿ20 ಮ್ಯಾಚ್‌ನಲ್ಲಿ ಮೂರು ಬಾರಿ ಬ್ಯಾಟಿಂಗ್ – ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್? OR ರಿಟೈರ್ಡ್ ಔಟ್?
ವಿರಾಟ್ ಕೊಹ್ಲಿಗೆ ಈಗ 35 ವರ್ಷ.. ಜಾಗತಿಕ ಕ್ರಿಕೆಟ್ನಲ್ಲಿ ಈ ಏಜ್ನಲ್ಲಿ ವಿರಾಟ್ ಕೊಹ್ಲಿಯಷ್ಟು ಫಿಟ್ ಆಗಿರೋ ಮತ್ತೊಬ್ಬ ಕ್ರಿಕೆಟರ್ ಈಗ ಯಾರೂ ಇಲ್ಲ. ಕೇವಲ ಫಿಟ್ನೆಸ್ ಅಷ್ಟೇ ಅಲ್ಲ, ಈ ಏಜ್ನಲ್ಲಿ ಕೊಹ್ಲಿಯಂತೆ ಪರ್ಫಾಮ್ ಮಾಡ್ತಾ ಇರೋ ಪ್ಲೇಯರ್ ಕೂಡ ಯಾರೂ ಇಲ್ಲ. ಅದ್ರಲ್ಲೂ ಸದ್ಯ ಟೀಂ ಇಂಡಿಯಾದಲ್ಲಿ ಬೆಸ್ಟ್ ಫೀಲ್ಡರ್ ಯಾರು ಅಂತಾ ಕೇಳಿದ್ರೆ ಟಾಪ್ ಪೊಸೀಶನ್ನಲ್ಲಿರೋದೆ ವಿರಾಟ್ ಕೊಹ್ಲಿ. ಸ್ಲಿಪ್ನಲ್ಲಾಗಲಿ, ಕವ್ರನಲ್ಲಾಗಲಿ ಇಲ್ಲಾ ಬೌಂಡರಿ ಲೈನ್ ಬಳಿಯೇ ಇರಲಿ. ವಿರಾಟ್ ಕೊಹ್ಲಿ ಇಡೀ ಗ್ರೌಂಡ್ನಲ್ಲಿ ಎಲ್ಲಿ ಬೇಕಾದ್ರೂ ಫೀಲ್ಡಿಂಗ್ ಮಾಡ್ತಾರೆ. ಫೀಲ್ಡಿಂಗ್ ಮೂಲಕವೂ ಒಪೋಸಿಟ್ ಟೀಂನ ಸ್ಕೋರ್ನ್ನ ಕಂಟ್ರೋಲ್ ಮಾಡ್ತಾರೆ. ಸೌರವ್ ಗಂಗೂಲಿ ಕ್ಯಾಪ್ಟನ್ ಆಗಿದ್ದ ಮೊಹಮ್ಮದ್ ಕೈಫ್ ಇದ್ರು ನೋಡಿ. ಆ್ಯಕ್ಚುವಲಿ ಕೈಫ್ ಬ್ಯಾಟಿಂಗ್ನಲ್ಲಿ ಅಷ್ಟೊಂದು ಕ್ಲಿಕ್ ಆಗ್ತಾ ಇರಲಿಲ್ಲ. ಬ್ಯಾಟಿಂಗ್ನಲ್ಲಿ ಕೈಫ್ರದ್ದು ಕನ್ಸಿಸ್ಟೆನ್ಸಿ ಇರಲಿಲ್ಲ. ಹಾಗಂತಾ ಅವರನ್ನ ಟೀಮ್ನಿಂದ ಡ್ರಾಪ್ ಮಾಡ್ತಾ ಇರಲಿಲ್ಲ. ಯಾಕಂದ್ರೆ ಬ್ಯಾಟಿಂಗ್ನಲ್ಲಿ ರನ್ ಮಾಡದಿದ್ರೂ ಮೊಹಮ್ಮದ್ ಕೈಫ್ ಫೀಲ್ಡಿಂಗ್‌ನಲ್ಲಿ ಒಪೊಸಿಟ್ ಟೀಮ್ನ ರನ್ ತಡೀತಿದ್ರು. ಒಂದೊಂದು ಮ್ಯಾಚ್‌ನಲ್ಲಿ ಸಿಂಗಲ್ ಹ್ಯಾಂಡೆಡ್ ಆಗಿ 30-35 ರನ್ಗಳನ್ನ ಕೈಫ್ ಫಿಲ್ಡಿಂಗ್ನಲ್ಲಿ ತಡೆದ ಉದಾಹರಣೆ ಇದೆ. ಮೊಹಮ್ಮದ್ ಕೈಫ್ ಕವರ್ನಲ್ಲಿ ಫೀಲ್ಡಿಂಗ್ಗೆ ನಿಂತ್ರು ಅಂದ್ರೆ ಕವರ್ ಡ್ರೈವ್ ಹೊಡಿಯೋಕೆ ಬ್ಯಾಟ್ಸ್ಮನ್ಗಳು ಹಿಂದೆ ಮುಂದೆ ನೋಡ್ತಾ ಇದ್ರು. ಲೆಫ್ಟ್, ರೈಟ್ಗೆ ಡೈವ್ ಹೊಡೆದು ಹೇಗಾದ್ರೂ ಮಾಡಿ ಕೈಫ್ ಬಾಲ್ನ್ನ ತಡೀತಾ ಇದ್ರು. ಸದ್ಯ ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಕೂಡ ಈ ರೋಲ್ನ್ನ ನಿಭಾಯಿಸ್ತಾ ಇದ್ದಾರೆ. ಗಂಗೂಲಿ ಟೈಮ್ನಲ್ಲಿ ಮೊಹಮ್ಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಇವರಿಬ್ಬರೇ ಬೆಸ್ಟ್ ಫೀಲ್ಡರ್ಸ್ಗಳು ಎನ್ನಿಸಿಕೊಂಡಿದ್ರು. ಆದ್ರೆ ಈಗ ಹಾಗಲ್ಲ, ಎಲ್ರೂ ಫಿಟ್ನೆಸ್ ಮೇಲೆ ಕಾನ್ಸಂಟ್ರೇಟ್ ಮಾಡುವವರೇ. ಈಗ ಟೀಮ್ಗೆ ಬರ್ತಿರೋ ಯಂಗ್ಸ್ಟರ್ಸ್ಗಳೆಲ್ಲಾ ಫೀಲ್ಡಿಂಗ್ನಲ್ಲೂ ಎಕ್ಸ್ಪರ್ಟ್ಗಳಾಗಿರ್ತಾರೆ. ಇವರ ಮಧ್ಯೆಯೂ ವಿರಾಟ್ ಕೊಹ್ಲಿಯೇ ಬೆಸ್ಟ್ ಫೀಲ್ಡರ್ ಎನ್ನಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ 3ನೇ ಮ್ಯಾಚ್ನಲ್ಲೇ ನೋಡಿ. ವಿರಾಟ್ ಕೊಹ್ಲಿಯ ಒಂದು ಕ್ಯಾಚ್, ಇನ್ನೊಂದು ಸಿಕ್ಸ್ನ್ನ ತಡೆದಿರೋದು ಇಡೀ ಮ್ಯಾಚ್ನ ರಿಸಲ್ಟ್ಗೇ ಟ್ವಿಸ್ಟ್ ಕೊಟ್ಟಿತ್ತು.
ಈ ಪೈಕಿ ತುಂಬಾ ಹೈಲೈಟ್ ಆಗಿರೋದು ಬೌಂಡರಿ ಲೈನ್ ಬಳಿ ಸಿಕ್ಸ್ನ್ನ ತಡೆದಿರೋದು. 16ನೇ ಓವರ್ನಲ್ಲಿ ಅಫ್ಘಾನಿಸ್ತಾನದ ಜನತ್ ಹೊಡೆದ ಶಾಟ್ ನೇರವಾಗಿ ಬೌಂಡರಿ ಲೈನ್ನನ್ನ ಕ್ರಾಸ್ ಆಗಿ ಸಿಕ್ಸ್ ಹೋಗುವಂತೆಯೇ ಇತ್ತು. ಆದ್ರೆ ಬೌಂಡರಿ ಲೈನ್ ಬಳಿಯೇ ಇದ್ದ ಕೊಹ್ಲಿ ಜಂಪ್ ಮಾಡಿ ಬಾಲ್ನ್ನ ಹಿಡೀತಾರೆ. ಇನ್ನೇನು ತಾವು ಬೌಂಡರಿ ಲೈನ್ನಿಂದ ಆಚೆಗೆ ಬೀಳ್ತೀನಿ ಅನ್ನೋವಷ್ಟರಲ್ಲಿ ಬಾಲ್ನ್ನ ಗ್ರೌಂಡ್ನ ಒಳಕ್ಕೆ ಎಸೀತಾರೆ. ವಿರಾಟ್ ಕೊಹ್ಲಿ ಸಿಕ್ಸರ್ನ್ನೇ ತಡೆದಿದ್ರು. ಬ್ಯಾಟ್ಸ್ಮನ್ ಡಬಲ್ ರನ್ ಏನೋ ತೆಗೀತಾರೆ. ಟೋಟಲ್ 4 ರನ್ಗಳನ್ನ ಕೊಹ್ಲಿ ಸೇವ್ ಮಾಡ್ತಾರೆ. ಲಾಸ್ಟ್ ಮೂಮೆಂಟ್ನಲ್ಲಿ ಫ್ರಾಕ್ಷನ್ ಆಫ್ ಸೆಕೆಂಡ್ನಲ್ಲಿ ವಿರಾಟ್ ಕೊಹ್ಲಿಯ ಅ ಜಂಪ್ ಇದ್ಯಾಲ್ಲಾ.. ನಿಜಕ್ಕೂ ಗ್ರೇಟ್ ಫೀಲ್ಡಿಂಗ್. ಬಾಲ್ ಬರೋವಾಗ ಆ ರೀತಿಯ ಟೈಮಿಂಗ್ ಜಂಪ್ ಎಲ್ಲರಿಗೂ ಆಗೋದಿಲ್ಲ. ಫಿಟ್ನೆಸ್ ಮತ್ತು ಶಾರ್ಪ್ನೆಸ್ ಇದ್ರಷ್ಟೇ ಆ ರೀತಿ ಫೀಲ್ಡಿಂಗ್ ಮಾಡೋಕೆ ಸಾಧ್ಯ. ಈ ಹಿಂದೆ ಆರ್ಸಿಬಿ ಪರ ಆಡೋವಾಗ ಎಬಿಡಿ ವಿಲಿಯರ್ಸ್ ಕೂಡ ಇಂಥದ್ದೇ ಟೈಮಿಂಗ್ ಜಂಪ್ ಮಾಡಿದ್ರು. ಬಟ್ ಎಬಿಡಿ ಅಂದು ಕ್ಯಾಚ್ ಹಿಡಿದಿದ್ರು. ಬಟ್ ಇಲ್ಲೂ ಬೌಂಡರಿ ಲೈನ್ ಒಳಗೆ ಆಗಿರ್ತಿದ್ರೆ ಕೊಹ್ಲಿ ಕ್ಯಾಚ್ ಹಿಡೀತಾ ಇದ್ರು. ಅದ್ರೆ, ಬಾಲ್ ಬೌಂಡರಿ ಲೈನ್ ಕ್ರಾಸ್ ಆಗಿಯೇ ಬೀಳುವಂತೆಯೇ ಇತ್ತು. ಹೀಗಾಗಿ ಕೊಹ್ಲಿ ಜಂಪ್ ಮಾಡಿದ್ರೂ ಬೌಂಡರಿ ಲೈನ್ ಒಳಗೆ ಲ್ಯಾಂಡ್ ಆಗೋಕೆ ಸಾಧ್ಯವಾಗ್ತಾ ಇರಲಿಲ್ಲ. ಬಟ್ ರೀಯಲಿ ಗ್ರೇಟ್ ಎಫರ್ಟ್..
ಇನ್ನು ವಿರಾಟ್ ಕೊಹ್ಲಿಯ ಈ ಕ್ಯಾಚ್ನ ಫೋಟೋ ಫುಲ್ ವೈರಲ್ ಆಗ್ತಿದೆ. ಯಾಕಂದ್ರೆ ಕೊಹ್ಲಿ ಜಂಪ್ ಮಾಡಿದಾಗ ಅವರ ಬಾಡಿ ಲಾಂಗ್ವೇಜ್ ಸೇಮ್ ಜಸ್ಪ್ರಿತ್ ಬುಮ್ರಾ ಬೌಲಿಂಗ್ ಸ್ಟೈಲ್ನಲ್ಲೇ ಇತ್ತು. ಈ ಫೋಟೋ ನೋಡಿ.. ಸೇಮ್ ಬುಮ್ರಾ ಬೌಲಿಂಗ್.. ಹೀಗಾಗಿಯೇ ಫೋಟೋವನ್ನ ಎಡಿಟ್ ಮಾಡಿ ಕೊಹ್ಲಿ ಜೊತೆಗೆ ಬುಮ್ರಾರನ್ನ ಕೂಡ ನಿಲ್ಲಿಸಿದ್ದಾರೆ. ಇಲ್ಲಿ ಜಸ್ಪ್ರಿತ್ ಬುಮ್ರಾ ಬಾಲ್ ರಿಲೀಸ್ ಮಾಡ್ತಾ ಇದ್ದಾರೆ. ಬಟ್ ಕೊಹ್ಲಿ ಬಾಲ್ನ್ನ ಕ್ಯಾಚ್ ಮಾಡಿದ್ದಾರೆ. ಅಷ್ಟೇ ಡಿಫರೇನ್ಸ್.. ಸೇಮ್ ಜಂಪ್.. ಸೇಮ್ ಹ್ಯಾಂಡ್.. ಸೇಮ್ ಬಾಡಿ ಲಾಂಗ್ವೇಜ್.
ಇದು ಅಫ್ಘಾನಿಸ್ತಾನ ವಿರುದ್ಧದ ಮ್ಯಾಚ್‌ನಲ್ಲಿ ಕೊಹ್ಲಿಯ ಒಂದು ಎಫರ್ಟ್ ಆಯ್ತು. ಅದೇ ಮ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ಟಾಪ್ ಕ್ಲಾಸ್ ಕ್ಯಾಚ್ ಕೂಡ ಹಿಡಿದಿದ್ರು. ಅವೇಶ್ ಖಾನ್ ಬೌಲಿಂಗ್ನಲ್ಲಿ ನಜಿಬುಲ್ಲಾ ಜರ್ದಾನ್ ಹೊಡೆದ ಶಾಟ್ ಕೂಡ ಜಸ್ಟ್ ಸಿಕ್ಸ್ ಹೋಗುವಂತೆಯೇ ಇತ್ತು. ಬಟ್ ವಿರಾಟ್ ಕೊಹ್ಲಿ ಸುಮಾರು 40 ಮೀಟರ್ ದೂರ ಓಡಿ ಕ್ಯಾಚ್ ಹಿಡಿದಿದ್ರು. 40 ಮೀಟರ್ಸ್.. ವಿರಾಟ್ ಕೊಹ್ಲಿಯನ್ನ ಬೌಂಡರಿ ಲೈನ್ನಲ್ಲಿ ಫೀಲ್ಡಿಂಗ್ಗೆ ನಿಲ್ಲಿಸಿದ್ರೆ, ಒಬ್ಬರೇ ಇಡೀ ಗ್ರೌಂಡನ್ನೇ ಕವರ್ ಮಾಡ್ತಾರೆ ಬೇಕಾದ್ರೆ. ಸ್ನೇಹಿತರೇ, ಒಮ್ಮ ಯೋಚನೆ ಮಾಡಿ ನೋಡಿ.. ಆ ಮ್ಯಾಚ್‌ನಲ್ಲಿ ವಿರಾಟ್ ಕೊಹ್ಲಿ ಸಿಕ್ಸ್ನ್ನ ತಡೆದಿಲ್ಲ ಅಂದ್ರೆ, 40 ಮೀಟರ್ ಓಡ್ಕೊಂಡು ಹೋಗಿ ಕ್ಯಾಚ್ ಹಿಡಿದಿಲ್ಲ ಅಂದ್ರೆ, ಫಸ್ಟ್ ಸೂಪರ್ ಓವರ್ನಲ್ಲಿ ತಮ್ಮ ಸೂಪರ್ ಥ್ರೋ ಮೂಲಕ ಗುಲ್ಬದೀನ್ರನ್ನ ಕೊಹ್ಲಿ ರನ್ನೌಟ್ ಮಾಡಿಲ್ಲ ಅಂದ್ರೆ ಟೀಂ ಇಂಡಿಯಾ ಮ್ಯಾಚೇ ಗೆಲ್ತಾ ಇರಲಿಲ್ಲ. ಇದಕ್ಕೇ ನೋಡಿ ವಿರಾಟ್ ಕೊಹ್ಲಿ ಟೀಮ್ನಲ್ಲಿರಬೇಕು ಅನ್ನೋದು.
ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡಲ್ಲ ಎಂದ ಕೊಹ್ಲಿ!
ಇದು ಇನ್ನೊಂದು ಇಂಟ್ರೆಸ್ಟಿಂಗ್ ಸ್ಟೋರಿ. ಅಫ್ಘಾನಿಸ್ತಾನ ವಿರುದ್ಧದ 3ನೇ ಮ್ಯಾಚ್ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಬೆಸ್ಟ್ ಫೀಲ್ಡರ್ಗೆ ಮೆಡಲ್ ನೀಡಲಾಗಿತ್ತು. ನೀವು ವರ್ಲ್ಡ್ಕಪ್ನಲ್ಲಿ ನೋಡಿದ್ರಿ. ಫೀಲ್ಡಿಂಗ್ ಮೆಡಲ್ ಕೊಡ್ತಾ ಇದ್ದಿದ್ದನ್ನ. ಅದನ್ನೂ ಈಗಲೂ ಕೂಡ ಕಂಟಿನ್ಯೂ ಮಾಡಿದ್ದಾರೆ. ಬಟ್ ವರ್ಲ್ಡ್ಕಪ್ ಟೈಮ್ನಲ್ಲಿ ಮೆಡಲ್ ಪ್ರಸೆಂಟ್ ಮಾಡುವಾಗ ಇದ್ದ ಖುಷಿ, ಜೋಶ್ ಮಾತ್ರ ಈಗ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಣ್ತಿಲ್ಲ. ಯಾಕೆ ಅನ್ನೋದನ್ನ ಬಿಡಿಸಿ ಹೇಳ್ಬೇಕಾಗಿಲ್ಲ ಬಿಡಿ.. ಅದು ಮುಗಿದ ಅಧ್ಯಾಯ..ಆದ್ರೆ ಈ ಬಾರಿ ಆಫ್ಘನ್ ವಿರುದ್ಧ ಬೆಸ್ಟ್ ಫೀಲ್ಡರ್ ಮೆಡಲ್ ವಿರಾಟ್ ಕೊಹ್ಲಿಗೆ ಸಿಕ್ಕಿದೆ. ಈ ವೇಳೆ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಒಂದು ವಿಚಾರವನ್ನ ಬಹಿರಂಗಪಡಿಸ್ತಾರೆ. ಈ ಹಿಂದೆ ವೆಸ್ಟ್ಇಂಡೀಸ್ ಸೀರಿಸ್ ವೇಳೆ ವಿರಾಟ್ ಕೊಹ್ಲಿ ನಾನು ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡೋದಿಲ್ಲ ಅಂತಾ ನೇರಾನೇರ ಹೇಳಿದ್ರಂತೆ. ಅದಕ್ಕೆ ಕಾರಣ ಇಷ್ಟೇ, ಸ್ಲಿಪ್ನಲ್ಲಿ ಫೀಲ್ಡಿಂಗ್ ಮಾಡೋ ಸಾಮರ್ಥ್ಯ ಇಲ್ಲದೇನಲ್ಲ, ಬಟ್ ನನ್ನನ್ನ ಶಾರ್ಟ್ ಲೆಗ್ನಲ್ಲಿ ಅಥವಾ ಫೈನ್ಲೆಗ್ನಲ್ಲಿ ಫೀಲ್ಡಿಂಗ್ಗೆ ನಿಲ್ಲಿಸಿ. ಯಂಗ್ಸ್ಟರ್ಸ್ಗಳಿಗೆ ಚಾಲೆಂಜ್ ಮಾಡಿ ಐ ಆ್ಯಮ್ ಬೆಸ್ಟ್ ಇನ್ ದಿ ವರ್ಲ್ಡ್ ಅನ್ನೋದು ಪ್ರೂವ್ ಮಾಡಬೇಕು. ಐ ವಾಂಟೆಡ್ ಟು ಪುಶ್ ಮೈ ಸೆಲ್ಫ್ ಅನ್ನೋ ಮಾತನ್ನ ಕೊಹ್ಲಿ ಹೇಳಿದ್ರಂತೆ. ಹೀಗಾಗಿಯೇ ವಂಡೇ, ಟಿ20 ಮ್ಯಾಚ್ಗಳಲ್ಲಿ ವಿರಾಟ್ ಕೊಹ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡ್ತಾರೆ. ಆ್ಯಕ್ಚುವಲಿ ಕೊಹ್ಲಿ ಫೀಲ್ಡಿಂಗ್ ಮಾಡ್ತಾ ಇದ್ದಾರೆ ಅಂದ್ರೆ ಅಲ್ಲೊಂದು ಇಂಟೆನ್ಸಿಟಿ ಕೂಡ ಕ್ರಿಯೇಟ್ ಆಗಿತ್ತು. ಟೀಮ್ಮೇಟ್ಗಳು ಮಾತ್ರವಲ್ಲ ಇಡೀ ಕ್ರೌಡನ್ನೇ ಕೊಹ್ಲಿ ಇನ್ಸ್ಪೈರ್ ಮಾಡ್ತಾರೆ. ಇದು ನಿಜಕ್ಕೂ ವಿರಾಟ್ ಕೊಹ್ಲಿಯ ಸ್ಪೆಷಲ್ ಕ್ವಾಲಿಟಿ. ಇದಕ್ಕಾಗಿ ವಿರಾಟ್ ಕೊಹ್ಲಿಯ ಅರ್ಧದಷ್ಟು ಎಫರ್ಟ್ ಹಾಕಿದ್ರೂ ಸಾಕು, ಉಳಿದ ಪ್ಲೇಯರ್ಸ್ಗಳೂ ಬೆಟರ್ ಆಗ್ತಾರೆ ಅಂತಾ ಫೀಲ್ಡಿಂಗ್ ಕೋಚ್ ದಿಲೀಪ್ ಡ್ರೆಸ್ಸಿಂಗ್ ರೂಮ್ ಸ್ಪೀಚ್ನಲ್ಲಿ ಹೇಳಿದ್ರು.
ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ನಲ್ಲಿ ಇಬ್ಬರು ಸೀನಿಯರ್ ಕ್ರಿಕೆಟರ್ಸ್ ವಿಚಾರವಾಗಿ ಒಂದಂತೂ ಕ್ಲ್ಯಾರಿಟಿ ಸಿಕ್ಕಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಟಿ20 ವರ್ಲ್ಡ್ಕಪ್ನಲ್ಲಿ ಆಡ್ಬೇಕಾದವರೇ. ಕೊಹ್ಲಿ ಕಂಪ್ಲೀಟ್ ಫಿಟ್ ಆಗಿದ್ದಾರೆ.. ರೋಹಿತ್ ಶರ್ಮಾ ಬ್ಯಾಟಿಂಗ್ನಲ್ಲಿ ತಮ್ಮ ಕೆಪಾಸಿಟಿಯನ್ನ ಪ್ರೂವ್ ಮಾಡಿದ್ದಾರೆ. ಹೀಗಾಗಿ ಈಗಿನ ಸ್ವಿಚ್ಯುವೇಷನ್ನಲ್ಲಂತೂ ಇವರಿಬ್ಬರನ್ನ ವರ್ಲ್ಡ್ಕಪ್ ಟೀಮ್ನಿಂದ ಡ್ರಾಪ್ ಮಾಡೋ ಪ್ರಶ್ನೆಯೇ ಬರೋದಿಲ್ಲ. ಐಪಿಎಲ್ನಲ್ಲೂ ಇದನ್ನ ಮೇಂಟೇನ್ ಮಾಡಿದ್ರೆ, ಇಬ್ಬರೂ ಒಂದಷ್ಟು ಹಾಫ್ ಸೆಂಚೂರಿ ಬಾರಿಸಿದ್ರೂ ಸಾಕು.. ಟಿ20 ವರ್ಲ್ಡ್ಕಪ್ನಲ್ಲೂ ರೋಹಿತ್ ಮತ್ತು ಕೊಹ್ಲಿಯೇ ಟೀಮ್ ಇಂಡಿಯಾವನ್ನ ಲೀಡ್ ಮಾಡಲಿದ್ದಾರೆ.