ಒಂದೇ ಟಿ20 ಮ್ಯಾಚ್‌ನಲ್ಲಿ ಮೂರು ಬಾರಿ ಬ್ಯಾಟಿಂಗ್ – ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್? OR ರಿಟೈರ್ಡ್ ಔಟ್?

ಒಂದೇ ಟಿ20 ಮ್ಯಾಚ್‌ನಲ್ಲಿ ಮೂರು ಬಾರಿ ಬ್ಯಾಟಿಂಗ್ – ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್? OR ರಿಟೈರ್ಡ್ ಔಟ್?

ಸೂಪರ್​​ ಓವರ್​ನಲ್ಲಂತೂ ರೋಹಿತ್​​ ಸ್ಟ್ರ್ಯಾಟಜಿಯಿಂದಾಗಿಯೇ ಮ್ಯಾಚ್​​ ಗೆಲ್ಲೋಕೆ ಸಾಧ್ಯವಾಗಿತ್ತು. ಕೋಚ್ ರಾಹುಲ್ ದ್ರಾವಿಡ್ ಕೂಡ ರೋಹಿತ್ ಶರ್ಮಾರ ಮಾಸ್ಟರ್​ ಪ್ಲ್ಯಾನ್​ಗೆ ಫಿದಾ ಆಗಿದ್ರು. ಈ ವರದಿಯಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್, ಕ್ಯಾಪ್ಟನ್ಸಿ, ಹಾಗೆಯೇ ಸೆಕೆಂಡ್ ಸೂಪರ್​ ಓವರ್​​ನಲ್ಲೂ ಕೂಡ ಹಿಟ್​​ಮ್ಯಾನ್​ಗೆ ಬ್ಯಾಟಿಂಗ್​ಗೆ ಅವಕಾಶ ಕೊಟ್ಟಿದ್ಯಾಕೆ? ಎಂಬ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ: ಕೂಚ್ ಬೆಹರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಿಂಚಿದ ಕನ್ನಡಿಗ – 18 ವರ್ಷದ ಪ್ರಖರ್ ಚತುರ್ವೇದಿಯ ಅಮೋಘ ಬ್ಯಾಟಿಂಗ್

ಅಫ್ಘಾನಿಸ್ತಾನ ವಿರುದ್ಧದ ಎರಡೂ ಸೂಪರ್​​ ಓವರ್​ಗಳಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿರೋದು. ಫಸ್ಟ್ ಸೂಪರ್​ ಓವರ್​ನಲ್ಲಿ ರೋಹಿತ್ ರಿಟೈರ್ಡ್ ಹರ್ಟ್ ಇಲ್ಲಾ ರಿಟೈರ್ಡ್ ಔಟ್ ಅನ್ನೋ ಬಗ್ಗೆ ಈಗ ಸಾಕಷ್ಟು ಚರ್ಚೆಯಾಗ್ತಿದೆ. ಇಲ್ಲೊಂದಷ್ಟು ಕನ್​ಫ್ಯೂಷನ್​​ಗಳು ಕೂಡ ಇವೆ. ಫಸ್ಟ್ ಸೂಪರ್​​ ಓವರ್​​ನಲ್ಲಿ ಅಫ್ಘಾನಿಸ್ತಾನ ಟೀಂ ಇಂಡಿಯಾಗೆ 17 ರನ್​ಗಳ ಟಾರ್ಗೆಟ್ ನೀಡುತ್ತೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಕ್ರೀಸ್​ಗೆ ಇಳೀತಾರೆ. ರೋಹಿತ್ ಎರಡು ಸಿಕ್ಸರ್​​ ಹೊಡೆದು ಒಂದು ಸಿಂಗಲ್ ತೆಗೀತಾರೆ. ಲಾಸ್ಟ್​ ಬಾಲ್​ನಲ್ಲಿ ಮ್ಯಾಚ್​ ಗೆಲ್ಲೋಕೆ ಎರಡು ರನ್​ಗಳು ಬೇಕಾಗಿರುತ್ತೆ. ಯಶಸ್ವಿ ಜೈಸ್ವಾಲ್​ ಕ್ರೀಸ್​ನಲ್ಲಿರ್ತಾರೆ. ಈ ವೇಳೆ ರೋಹಿತ್​ ಶರ್ಮಾ ರಿಟೈರ್ಡ್ ಆಗ್ತಾರೆ. ನಾನ್​ಸ್ಟ್ರೈಕರ್​ ಎಂಡ್​ನಿಂದ ಸೀದಾ ಗ್ರೌಂಡ್​​ನಿಂದ ಹೊರಗೆ ಹೋಗ್ತಾರೆ. ರಿಂಕು ಸಿಂಗ್​ ನಾನ್​​ಸ್ಟ್ರೈಕ್​ ಎಂಡ್​​ಗೆ ಬರ್ತಾರೆ. ಇಲ್ಲಿ ರೋಹಿತ್​ ಶರ್ಮಾ ರಿಟೈರ್ ಆಗಿರೋದ್ರ ಉದ್ದೇಶ ಇಷ್ಟೇ. ನಿಮಗೆ ಗೊತ್ತಿರೋ ಹಾಗೆ ಕೊನೆಯ ಬಾಲ್​ನಲ್ಲಿ ಎರಡು ರನ್​ ಬೇಕಾಗಿತ್ತು. ಹೀಗಾಗಿ ರನ್ನಿಂಗ್​ ಬಿಟ್ವೀನ್​ ದಿ ವಿಕೆಟ್ ಇಂಪಾರ್ಟೆಂಟ್ ಆಗುತ್ತೆ. ರೋಹಿತ್​ ಶರ್ಮಾಗೆ ಅಷ್ಟೊಂದು ಸ್ಪೀಡ್ ಆಗಿಯಂತೂ ಓಡೋಕೆ ಆಗಲ್ಲ. ಹೀಗಾಗಿಯೇ ರೋಹಿತ್ ರಿಟೈರ್ ಆಗಿ ರಿಂಕು ಸಿಂಗ್​​ರನ್ನ ಕಳಿಸಿದ್ರು ಅನ್ನೋದು ಒಂದು ಆ್ಯಂಗಲ್.. ಆದ್ರೆ ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಕೂಡ ಇದೆ. ಸೆಕೆಂಡ್​ ಸೂಪರ್ ಓವರ್​ ವೇಳೆಯೂ ರೋಹಿತ್​ ಶರ್ಮಾರೇ ಬ್ಯಾಟಿಂಗ್​ಗೆ ಬಂದಿದ್ರು. ಇಲ್ಲೇ ನೋಡಿ ಹಿಟ್​​ಮ್ಯಾನ್​ ಸ್ಟ್ರ್ಯಾಟಜಿ ಮಾಡಿರೋದು.

ರೂಲ್ಸ್ ಪ್ರಕಾರ ಫಸ್ಟ್ ಸೂಪರ್​ ಓವರ್​​​ನಲ್ಲಿ ಒಬ್ಬ ಬ್ಯಾಟ್ಸ್​​ಮನ್ ಔಟ್ ಆದ್ರೆ ಸೆಕೆಂಡ್​​ ಸೂಪರ್​ ಓವರ್​ ವೇಳೆ ಆತ ಮತ್ತೆ ಬ್ಯಾಟಿಂಗ್​ಗೆ ಬರುವಂತಿಲ್ಲ. ಒಂದು ವೇಳೆ ಫಸ್ಟ್ ಸೂಪರ್​​ ಓವರ್​​ನ ಲಾಸ್ಟ್​ ಬಾಲ್​​ನಲ್ಲಿ ಎರಡು ರನ್​ ತೆಗೆಯೋ ಭರದಲ್ಲಿ ರೋಹಿತ್ ರನ್ನೌಟ್ ಆಗ್ತಿದ್ರೆ ಸೆಕೆಂಡ್​ ಸೂಪರ್​​ ಓವರ್​ನಲ್ಲಿ ಬ್ಯಾಟಿಂಗ್​ಗೆ ಇಳಿಯೋಕೆ ಆಗ್ತಾ ಇರಲಿಲ್ಲ. ಹೀಗಾಗಿ ಫಸ್ಟ್ ಸೂಪರ್​ ಓವರ್​ನ ಲಾಸ್ಟ್ ಬಾಲ್​ನಲ್ಲಿ ಒಂದು ರನ್ ಅಂತೂ ಮಾಡ್ಬಹುದು. ಈಗ ರಿಟೈರ್​ ಆದ್ರೆ ಸೆಕೆಂಡ್​​ ಸೂಪರ್ ಓವರ್​ನಲ್ಲಿ ಮತ್ತೆ ನಾನೇ ಬ್ಯಾಟಿಂಗ್​ ಇಳಿಬಹುದು ಅನ್ನೋದು ರೋಹಿತ್ ಪ್ಲ್ಯಾನ್ ಆಗಿತ್ತು. ಸೋ ಫಸ್ಟ್ ಸೂಪರ್​ ಓವರ್​ನ ಲಾಸ್ಟ್​ ಬಾಲ್​ಗೂ ಮುನ್ನ ರೋಹಿತ್ ರಿಟೈರ್ ಆಗ್ತಾರೆ. ಸೆಕೆಂಡ್​ ಸೂಪರ್ ಓವರ್​ನಲ್ಲಿ ಮತ್ತೆ ಬ್ಯಾಟಿಂಗ್​ಗೆ ಇಳೀತಾರೆ. ಇಲ್ಲಿ ಒಂದೇ ಕಲ್ಲಿನಲ್ಲಿ ರೋಹಿತ್ ಶರ್ಮಾ ಎರಡು ಹಕ್ಕಿಗಳನ್ನ ಹೊಡೆದಿದ್ದಾರೆ. ಒಂದು ರನ್ನಿಂಗ್ ಬಿಟ್ವೀನ್​ ದಿ ವಿಕೆಟ್​ಗೆ ಸೊಲ್ಯೂಷನ್.. ಮತ್ತೊಂದು ಸೆಕೆಂಡ್​​ ಸೂಪರ್​ ಓವರ್​ನಲ್ಲಿ ಬ್ಯಾಟಿಂಗ್​ಗೆ ಇಳಿಯೋ ಪ್ಲ್ಯಾನ್. ಒಂದೇ ಟಿ20 ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಮೂರು ಬಾರಿ ಬ್ಯಾಟಿಂಗ್​ ಮಾಡಿದ್ದಾರೆ. ಈವನ್​ ಟೆಸ್ಟ್​ನಲ್ಲೇ ಎರಡು ಬಾರಿ ಮಾತ್ರ ಬ್ಯಾಟಿಂಗ್​ಗೆ ಅವಕಾಶ ಸಿಗೋದು. ಆದ್ರೆ ರೋಹಿತ್ ಟಿ20 ಮ್ಯಾಚ್​ನಲ್ಲೇ ಮೂರು ಬಾರಿ ಬ್ಯಾಟಿಂಗ್ ಮಾಡಿದ್ದಾರೆ. ಎಂಥಾ ಚಾಣಕ್ಯ ನೋಡಿ.. ರೋಹಿತ್ ಸುಮ್ನೆ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿಲ್ಲ.

ರೋಹಿತ್ ರಿಟೈರ್ಡ್ ಹರ್ಟ್? OR ರಿಟೈರ್ಡ್ ಔಟ್?

ಈಗ ಇಲ್ಲೊಂದು ಚರ್ಚೆ ಕೂಡ ಶುರುವಾಗಿದೆ. ರೋಹಿತ್​ ಶರ್ಮಾ ಅಕ್ಷರಶ: ಐಸಿಸಿ ರೂಲ್ಸ್​ಗೇ ಕಿಚ್ಚು ಹಚ್ಚಿಬಿಟ್ಟಿದ್ದಾರೆ. ಆ್ಯಕ್ಚುವಲಿ ರೋಹಿತ್ ಶರ್ಮಾರದ್ದು ರಿಟೈರ್ಡ್ ಹರ್ಟ್? ಇಲ್ಲಾ ರಿಟೈರ್ಡ್ ಔಟ್ ಅನ್ನೋದಾಗಿ. ಯಾವಾಗಲೂ ಬ್ಯಾಟ್ಸ್​ಮನ್​ ಗಾಯಗೊಂಡಾಗ ರಿಟೈರ್ಡ್ ಹರ್ಟ್ ಆಗ್ತಾರೆ. ಬಟ್ ಇಲ್ಲಿ ರೋಹಿತ್​​ಗೆ ಯಾವುದೇ ಇಂಜ್ಯೂರಿ ಅಂತೂ ಆಗಿಲ್ಲ. ಹೀಗಾಗಿ ಇದು ರಿಟೈರ್ಡ್ ಔಟಾ? ರಿಟೈರ್ಡ್ ಹರ್ಟಾ ಅನ್ನೋದಕ್ಕೆ ಇನ್ನೂ ಕೂಡ ಕ್ಲ್ಯಾರಿಟಿ ಸಿಕ್ಕಿಲ್ಲ. ಒಂದು ವೇಳೆ ಇದನ್ನ ರಿಟೈರ್ಡ್ ಹರ್ಟ್ ಅಂತಾ ಪರಿಗಣಿಸಿದ್ರೆ ರೋಹಿತ್​ ಶರ್ಮಾ ಸೆಕೆಂಡ್​ ಸೂಪರ್​ ಓವರ್​ನಲ್ಲೂ ಬ್ಯಾಟಿಂಗ್ ಮಾಡಿರೋದ್ರಲ್ಲಿ ಯಾವುದೇ ತಪ್ಪಿಲ್ಲ. ಆದ್ರೆ ರಿಟೈರ್ಡ್ ಔಟ್ ಅಂತಾ ಪರಿಗಣಿಸಿದ್ರೆ ಸೆಕೆಂಡ್​​ ಸೂಪರ್​ ಓವರ್​ನಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡಿರೋದೆ ರಾಂಗ್. ರಿಟೈರ್ಡ್ ಔಟಾಗಿದ್ರೆ ರೋಹಿತ್​​ಗೆ ಸೆಕೆಂಡ್​ ಸೂಪರ್​​ ಓವರ್​ನಲ್ಲಿ ಬ್ಯಾಟಿಂಗ್​ ಮಾಡೋಕೆ ಅವಕಾಶವೇ ಇಲ್ಲ. ಬಿಕಾಸ್ ಹೀ ಈಸ್ ಔಟ್. ಹೀಗಾಗಿ ರೋಹಿತ್​ ಶರ್ಮಾ ಈ ನಡೆಯಿಂದಾಗಿ ಈಗ ಕ್ರಿಕೆಟ್​ ಎಕ್ಸ್​​ಪರ್ಟ್​​ಗಳು, ಐಸಿಸಿ ಮಂದಿಯೂ ಇದನ್ನ ರಿಟೈರ್ಡ್ ಔಟ್ ಅನ್ನೋದಾ, ರಿಟೈರ್ಡ್ ಹರ್ಟ್ ಅನ್ನೋದಾ ಅಂತಾ ತಲೆಕೆಡಿಸಿಕೊಳ್ತಾ ಇದ್ದಾರೆ. ಇನ್ನು ಅದೇನೇ ಕ್ಲ್ಯಾರಿಫಿಕೆಶನ್ ಕೊಟ್ರೂ ಮ್ಯಾಚ್​ ಮುಗಿದಿದೆ. ಭಾರತ ಸೀರಿಸ್ ಗೆದ್ದಾಗಿದೆ. ಆಫ್ಘನ್ ಟೀಮ್ ಫ್ಲೈಟ್ ಹತ್ತಿಯಾಗಿದೆ. ಅಂತೂ ಇಲ್ಲಿ ವಿನ್ನರ್ ಆಗಿರೋದು ವನ್ ಆ್ಯಂಡ್ ಓನ್ಲಿ ರೋಹಿತ್ ಶರ್ಮಾ.

ಹಾಗೆಯೇ ಅಫ್ಘಾನಿಸ್ತಾನ ತಂಡ ಕೂಡ ಟಾಪ್​ ಕ್ಲಾಸ್ ಕ್ರಿಕೆಟ್ ಆಡಿದೆ. ನಿಜಕ್ಕೂ ಹ್ಯಾಟ್ಸಾಫ್. ನೋಡಿ ವರ್ಲ್ಡ್​ಕಪ್​ನಲ್ಲೂ ಆಫ್ಘನ್ನರು ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ರು. ಈ ಸೀರಿಸ್​ನಲ್ಲೂ ಅಷ್ಟೇ. ಫೈನಲ್​ ಮ್ಯಾಚ್​ನಲ್ಲಂತೂ ನಮಗೇ ಕುತ್ತಿಗೆವರೆಗೂ ನೀರು ಕುಡಿಸಿದ್ದಾರೆ. ಅಫ್ಘಾನಿಸ್ತಾನ ಟೀಮ್​ಗೆ ನಿಜಕ್ಕೂ ದೊಡ್ಡ ಫ್ಯೂಚರ್ ಇದೆ. ಅಂಥಾ ಟೀಮ್​ಗಳು ಬೆಳೀಬೇಕು. ಕ್ರಿಕೆಟ್​​ಗೂ ಒಳ್ಳೆಯದು.

Sulekha