ಕೂಚ್ ಬೆಹರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಿಂಚಿದ ಕನ್ನಡಿಗ – 18 ವರ್ಷದ ಪ್ರಖರ್ ಚತುರ್ವೇದಿಯ ಅಮೋಘ ಬ್ಯಾಟಿಂಗ್
ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಕನ್ನಡಿಗರ ದೊಡ್ಡ ದಂಡೇ ಇತ್ತು. 11 ಮಂದಿಯಲ್ಲಿ ಮೂರು ನಾಲ್ಕು ಮಂದಿ ಕನ್ನಡಿಗರೇ ಇರ್ತಿದ್ರು. ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ರಾಹುಲ್ ದ್ರಾವಿಡ್ ಹೀಗೆ ತಂಡದಲ್ಲಿ ಕನ್ನಡಿಗರ ಹವಾ ಜೋರಾಗಿತ್ತು. ಆದ್ರೆ ಟೀಂ ಇಂಡಿಯಾದಲ್ಲಿ ಕನ್ನಡಿಗರ ಡಾಮಿನೇಷನ್ ನೋಡಿ ಈಗ ದಶಕಗಳೇ ಕಳೆದಿದೆ. ಸದ್ಯ ಕೆಎಲ್ ರಾಹುಲ್ರನ್ನ ಬಿಟ್ರೆ ಮತ್ತಿನ್ಯಾರೂ ತಂಡದಲ್ಲಿ ಪರ್ಮನೆಂಟ್ ಸ್ಥಾನ ಕೂಡ ಪಡೆದಿಲ್ಲ. ಒಂದು ಸೀರಿಸ್ನಲ್ಲಿ ಆಡಿದ್ರೆ, ಇನ್ನೊಂದು ಸೀರಿಸ್ಗೆ ಆಗೋವಾಗ ಇರೋದಿಲ್ಲ. ಆದ್ರೀಗ ಕರ್ನಾಟಕದಿಂದ ನೆಕ್ಸ್ಟ್ ಜನರೇಷನ್ ಕ್ರಿಕೆಟರ್ಸ್ಗಳಂತೂ ರೆಡಿಯಾಗ್ತಾ ಇದ್ದಾರೆ. ಅದ್ರಲ್ಲೂ ಯಂಗ್ ಬ್ಯಾಟ್ಸ್ಮನ್ ಪ್ರಖರ್ ಚತುರ್ವೇದಿ ಬರೋಬ್ಬರಿ 404 ರನ್ ಹೊಡಿಯೋ ಮೂಲಕ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಹೊಸ ದಾಖಲೆಯನ್ನೇ ಬರೆದಿದ್ದಾರೆ.
ಮುಂಬೈ ವಿರುದ್ಧದ ಕೂಚ್ ಬೆಹರ್ ಟ್ರೋಫಿ ಫೈನಲ್ ಮ್ಯಾಚ್ನಲ್ಲಿ 18 ವರ್ಷದ ಕನ್ನಡಿಗ ಪ್ರಖರ್ ಚತುರ್ವೇದಿ ಇಡೀ ದೇಶವೇ ತಮ್ಮತ್ತ ತಿರುಗಿ ನೋಡುವಂಥಾ ಇನ್ನಿಂಗ್ಸ್ ಆಡಿದ್ದಾರೆ. 638 ಬಾಲ್ಗಳಲ್ಲಿ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿದ್ದಾರೆ. ಪ್ರಖರ್ ಚತುರ್ವೇದಿಯ ಅಮೋಘ ಬ್ಯಾಟಿಂಗ್ನಿಂದಾಗಿ ಫಸ್ಟ್ ಟೈಮ್ ಕರ್ನಾಟಕ ಅಂಡರ್-19 ಟೂರ್ನಿಯೊಂದನ್ನ ಗೆದ್ದುಕೊಂಡಿದೆ. ಇದ್ರ ಜೊತೆಗೆ ಪ್ರಖರ್ ಚತುರ್ವೇದಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರ ಯುವರಾಜ್ ಸಿಂಗ್ 24 ವರ್ಷಗಳ ಹಿಂದೆ ಸೃಷ್ಟಿಸಿದ್ದ ದಾಖಲೆಯನ್ನ ಕೂಡ ಬ್ರೇಕ್ ಮಾಡಿದ್ದಾರೆ. ಕೂಚ್ ಬೆಹರ್ ಅಂಡರ್-19 ಟೂರ್ನಿಯ ಫೈನಲ್ ಮ್ಯಾಚ್ನಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಕರ್ನಾಟಕ 223 ಓವರ್ಗಳಲ್ಲಿ 8 ವಿಕೆಟ್ಗಳನ್ನ ಕಳೆದುಕೊಂಡು ಬರೋಬ್ಬರಿ 890 ರನ್ ಗಳಿಸಿತ್ತು. ಈ ಪೈಕಿ ಪ್ರಖರ್ ಚತುರ್ವೇದಿಯೇ 404 ರನ್ ಗಳಿಸಿ ನಾಟ್ಔಟಾಗಿದ್ರು. ಅತ್ತ ಮುಂಬೈ 380 ರನ್ಗಳಿಗೆ ಅಲೌಟ್ ಆಯ್ತು.
2000ನೇ ಇಸವಿಯಲ್ಲಿ ಅಂದ್ರೆ 24 ವರ್ಷಗಳ ಹಿಂದೆ ಪಂಜಾಬ್ ಮತ್ತು ಬಿಹಾರದ ನಡುವೆ ಕೂಚ್ ಬೆಹಾರ್ ಟೂರ್ನಿಯ ಮ್ಯಾಚ್ನಲ್ಲಿ ಪಂಜಾಬ್ ಪರ ಯುವರಾಜ್ ಸಿಂಗ್ ಆಡಿದ್ರು. ಬಿಹಾರದ ಪರ ಮಹೇಂದ್ರ ಸಿಂಗ್ ಧೋನಿ ಆಡಿದ್ರು. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಆಗ ಇಬ್ಬರೂ ಎದುರಾಳಿಯಾಗಿದ್ರು. ಆದ್ರೆ ಧೋನಿ ಟೀಮ್ನ ವಿರುದ್ಧ ಯುವರಾಜ್ ಸಿಂಗ್ 358 ರನ್ ಚಚ್ಚಿದ್ರು. ಧೋನಿಯ ಬಯೋಪಿಕ್ ಸಿನಿಮಾದಲ್ಲೂ ಈ ವಿಚಾರವನ್ನ ಮೆನ್ಷನ್ ಮಾಡಿದ್ದಾರೆ. ಅಂದು ಬಿಹಾರದ ಬೌಲರ್ಗಳ ಮೇಲೆ ಯುವರಾಜ್ ಅಕ್ಷರಶ: ಸವಾರಿ ಮಾಡಿದ್ರು. ಆಲ್ ಓವರ್ ದ ಪಾರ್ಕ್ ಬೌಂಡರಿ, ಸಿಕ್ಸರ್ ಹೊಡೆದಿದ್ರು. ಈಗ ಅದಕ್ಕಿಂತಲೂ ಮೆಗಾ ಇನ್ನಿಂಗ್ಸ್ನ್ನ ಕನ್ನಡಿಗ ಪ್ರಖರ್ ಚತುರ್ವೇದಿ ಆಡಿದ್ದಾರೆ. 638 ಬಾಲ್ಗಳಲ್ಲಿ 404 ರನ್. ಅದ್ರೂ ಕೂಡ ಪ್ರಖರ್ರದ್ದು ಈಗ ಸೆಕೆಂಡ್ ಹೈಯೆಸ್ಟ್ ರೆಕಾರ್ಡ್ ಆಗಿತ್ತು. ಈ ಹಿಂದೆ 2011ರಲ್ಲಿ ಮಹಾರಾಷ್ಟ್ರದ ವಿಜಯ್ ಜೋಲ್ ಅಸ್ಸಾಂ ವಿರುದ್ಧದ ಮ್ಯಾಚ್ನಲ್ಲಿ 451 ರನ್ ಹೊಡೆದು ನಾಟ್ಔಟಾಗಿದ್ರು.
ಇನ್ನು ಪ್ರಖರ್ ಚತುರ್ವೇದಿ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹೇಳಲೇಬೇಕು. ಪ್ರಖರ ತಂದೆ ಸಂಜಯ್ ಚತುರ್ವೇದಿ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. ತಾಯಿ ಡಿಆರ್ಡಿಒದಲ್ಲಿ ಟೆಕ್ನಿಕಲ್ ಆಫಿಸರ್ ಆಗಿ ಕೆಲಸ ಮಾಡ್ತಾರೆ. ಮೂಲತ: ಪ್ರಖರ್ ಚತುರ್ವೇದಿ ಕುಟುಂಬ ಉತ್ತರಪ್ರದೇಶದ ಘಾಜಿಪುರ್ನವರು. ಆದ್ರೆ ಪ್ರಖರ್ ಚತುರ್ವೇದಿ ಹುಟ್ಟಿ ಬೆಳೆದಿರೋದೆಲ್ಲ ಬೆಂಗಳೂರಿಲ್ಲೇ. 20 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದಾರೆ. ಸದ್ಯ ಪ್ರಖರ್ ಚತುರ್ವೇದಿ ಬಿಎ ಓದ್ತಾ ಇದ್ದಾರೆ. ಆದ್ರೆ ಅವರ ಅಪಾರ್ಟ್ಮೆಂಟ್ನಲ್ಲಿರೋ ವ್ಯಕ್ತಿಯೊಬ್ಬರು ಕ್ರಿಕೆಟ್ನಲ್ಲಿ ಪ್ರಖರ್ ಭವಿಷ್ಯವನ್ನೇ ಬದಲಾಯಿಸಿದ್ರು ಅಂತಾನೆ ಹೇಳಬಹುದು. ಯಾಕಂದ್ರೆ ಅಪಾರ್ಟ್ಮೆಂಟ್ನಲ್ಲಿ ಕ್ರಿಕೆಟ್ ಆಡ್ತಾ ಇದ್ದಾಗ, ವ್ಯಕ್ತಿಯೊಬ್ಬರು ಪ್ರಖರ್ ತಂದೆ ಬಳಿ ಹೇಳ್ತಾರೆ. ನಿಮ್ಮ ಮಗ ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡ್ತಾನೆ. ಯಾಕೆ ನೀವು ಅವನನ್ನ ಕ್ರಿಕೆಟ್ ಅಕಾಡೆಮಿಗೆ ಜಾಯಿನ್ ಮಾಡಿಸ್ಬಾರ್ದು ಅಂತಾ. ಹೀಗಾಗಿ ಪ್ರಖರ್ ತಂದೆ 2017ರಲ್ಲಿ ಮಗನನ್ನ ಬೆಂಗಳೂರಲ್ಲಿರೋ ಪಡುಕೋಣೆ-ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಅಕಾಡೆಮಿಗೆ ಸೇರಿಸ್ತಾರೆ. ಇದು ಪ್ರಖರ್ ಚತುರ್ವೇದಿ ಕೆರಿಯರ್ನ ದೊಡ್ಡ ಟರ್ನಿಂಗ್ ಪಾಯಿಂಟ್ ಆಯ್ತು. ಬಳಿಕ ಪ್ರಖರ್ ಕರ್ನಾಟಕದ ಪರ ಹಲವು ಅಂಡರ್-16, ಅಂಡರ್-19 ಟೂರ್ನಿಗಳನ್ನ ಆಡಿದ್ದಾರೆ. ಕರ್ನಾಟಕ ತಂಡದ ಮಾಜಿ ಕ್ಯಾಪ್ಟನ್ ಮತ್ತು ಕೋಚ್ ಆಗಿರೋ ಕೆ.ಜೆಶ್ವಂತ್ ಕಳೆದ 6 ವರ್ಷಗಳಿಂದ ಪ್ರಖರ್ ಚತುರ್ವೇದಿಯನ್ನ ಟ್ರೈನ್ ಮಾಡ್ತಾ ಇದ್ದಾರೆ. ಈ ಹಿಂದೆ ಕರ್ನಾಟಕ ಅಂಡರ್-16 ಮತ್ತು ಅಂಡರ್-19 ಟೀಮ್ಗೆ ಪ್ರಖರ್ ಸೆಲೆಕ್ಟ್ ಆಗಿರಲಿಲ್ಲ. ಆದ್ರೆ ಕೋಚ್ ಕೆ.ಜೆಶ್ವಂತ್ ಸೆಲೆಕ್ಷನ್ ಕಮಿಟಿ ಮಂದಿಗೆ ಪ್ರಖರ್ ಟ್ಯಾಲೆಂಟ್ ಬಗ್ಗೆ ಮನದಟ್ಟು ಮಾಡಿ ಟೀಮ್ಗೆ ಸೆಲೆಕ್ಟ್ ಆಗುವಂತೆ ಮಾಡಿದ್ರು.
ಓಪನಿಂಗ್ ಬ್ಯಾಟ್ಸ್ಮನ್ ಆಗಿರೋ ಪ್ರಖರ್ ಚತುರ್ವೇದಿ ಟೆಸ್ಟ್, ವಂಡೇ ಮತ್ತು ಟಿ-20 ಮೂರೂ ಫಾರ್ಮೆಟ್ಗಳಲ್ಲಿ ಆಡೋ ಕೆಪಾಸಿಟಿ ಹೊಂದಿದ್ದಾರಂತೆ. ಕೋಚ್ ಹೇಳೋ ಪ್ರಕಾರ, ಈ ರೆಡ್ ಬಾಲ್ನಲ್ಲಿ ಪ್ರಖರ್ ಪರ್ಫಾಮೆನ್ಸ್ ಅಷ್ಟೇ ಹೊರ ಜಗತ್ತಿಗೆ ಗೊತ್ತಾಗಿದೆ. ಆದ್ರೆ ವೈಟ್ಬಾಲ್ನಲ್ಲಂತೂ ಪ್ರಖರ್ ನೆಕ್ಸ್ಟ್ ಲೆವೆಲ್ ಬ್ಯಾಟಿಂಗ್ ಮಾಡ್ತಾರಂತೆ. ಟೆಕ್ನಿಕಲಿ ತುಂಬಾನೆ ಸೌಂಡ್ ಆಗಿರೋ ಪ್ರಖರ್ ಚತುರ್ವೇದಿ, ರಿಸ್ಕ್ ಫ್ರೀ ಶಾಟ್ಸ್ಗಳನ್ನ ಆಡೋದ್ರಲ್ಲಿ ಎಕ್ಸ್ಪರ್ಟ್. ಟೀಂ ಇಂಡಿಯಾ ಪರ ಆಡಲೇಬೇಕು ಅಂದುಕೊಂಡಿರೋ ಪ್ರಖರ್ ಈಗ ಸಾಕಷ್ಟು ಹಾರ್ಡ್ವರ್ಕ್ ಮಾಡ್ತಾ ಇದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರೋ ಮನೆಯಿಂದ ಡೇಲಿ 100 ಕಿಲೋ ಮೀಟರ್ ದೂರ ಪ್ರಯಾಣಿಸಿ ಕ್ರಿಕೆಟ್ ಅಕಾಡೆಮಿಯನ್ನ ಟ್ರೈನಿಂಗ್ ಪಡೀತಾರೆ. ದೇವನಹಳ್ಳಿಯಿಂದಲೂ 50 ಕಿಲೋ ಮೀಟರ್ ದೂರದಲ್ಲಿ ಪಡುಕೋಣೆ-ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಅಕಾಡೆಮಿ ಇದೆ. ಇನ್ನು ಕರ್ನಾಟಕ ಟೀಮ್ನಲ್ಲಿರೋ 15 ಮಂದಿ ಆಟಗಾರರ ಪೈಕಿ 7 ಮಂದಿ ಪಡುಕೋಣೆ-ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೀತಾ ಇರುವವರೇ ಇದ್ದಾರೆ. ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಕೂಡ ಇದೇ ಅಕಾಡೆಮಿಯಲ್ಲಿ ಟ್ರೈನಿಂಗ್ ಪಡೀತಾ ಇದ್ದಾರೆ.