19 ಮೊಮ್ಮಕ್ಕಳು, ಮರಿ ಮೊಮ್ಮಕ್ಕಳನ್ನು ಹೊಂದಿರುವ ಅಜ್ಜಿಗೆ ಮರುಮದುವೆ ಚಿಂತೆ! – 112ನೇ ವಯಸ್ಸಿಗೆ 8 ನೇ ವಿವಾಹಕ್ಕೆ ಮುಂದಾದ ವೃದ್ಧೆ!

ಮದುವೆ ಅನ್ನೋದು ಏಳೇಳು ಜನ್ಮದ ಬಂಧ ಎನ್ನುತ್ತಾರೆ. ವಯಸ್ಸಿಗೆ ಬಂದ ಕೂಡಲೇ ಹೆತ್ತವರು ತಮ್ಮ ಮಕ್ಕಳಿಗೆ ಮದುವೆ ಮಾಡಿಸಿಬಿಡುತ್ತಾರೆ. ಆದ್ರೆ ಈಗ ವಯಸ್ಸಾದವರು ಕೂಡ ಮದುವೆಯಾಗುತ್ತಿರುವ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಇದೀಗ ಇಲ್ಲೊಂದು ಅಜ್ಜಿ ತನ್ನ 112 ನೇ ವಯಸ್ಸಿನಲ್ಲಿ 8 ನೇ ಬಾರಿಗೆ ಮದುವೆಯಾಗಲು ಮುಂದಾಗಿದ್ದಾಳೆ. ಯಾರಾದ್ರೂ ಪ್ರಪೋಸ್ ಮಾಡಿದ್ರೆ ತಾನು ಮದುವೆಯಾಗಲು ರೆಡಿ ಅಂತಾ ಹೇಳಿದ್ದಾಳೆ.
ಈ ವಿಚಿತ್ರ ಆಫರ್ ನೀಡಿದ ಅಜ್ಜಿ ಸಿತಿ ಹವಾ. ಮಲೇಷಿಯಾದ ಮೂಲದ ಅಜ್ಜಿ ತನ್ನ 112 ನೇ ವಯಸ್ಸಿನಲ್ಲಿ ಮದುವೆಯಾಗಲು ಮುಂದಾಗಿದ್ದಾಳೆ. ಅದೂ 8 ನೇ ಮದುವೆ.. ಯಾರಾದರೂ ಪ್ರಪೋಸ್ ಮಾಡಿದರೆ ಮರುಮದುವೆಯಾಗಲು ಸಿದ್ಧವಿರುವೆ ಎಂದು ಹೇಳಿಕೊಂಡಿದ್ದಾಳೆ.
ಈ ಇಳಿವಯಸ್ಸಿನಲ್ಲೂ ತನ್ನ ದೈನಂದಿನ ಕೆಲಸಕಾರ್ಯಗಳಲ್ಲಿ ಸಕ್ರಿಯವಾಗಿರುವ ಇವರು ದಿನಕ್ಕೆ ಐದು ಬಾರಿ ಪ್ರಾರ್ಥನೆಯನ್ನು ಮಾಡುತ್ತಾರೆ. ಆರೋಗ್ಯಕರ ಜೀವನ ನಡೆಸುವ ಈ ಮಹಿಳೆ ತನ್ನ 7 ಪತಿಯರಿಂದ ವಿಚ್ಛೇದನ ಪಡೆದಿದ್ದಾಳೆ. ಇದೀಗಾ 8 ಮದುವೆಯಾಗಲು ರೆಡಿಯಾಗಿದ್ದಾರೆ. ಬಹುತೇಕ ಒಡಹುಟ್ಟಿದವರು ಮತ್ತು ಸ್ನೇಹಿತರು ನಿಧನರಾಗಿದ್ದು, ತಾನಿನ್ನೂ ಯಾರದೇ ನೆರವಿಲ್ಲದೇ ಆರೋಗ್ಯಕರ ಜೀವನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿಕೊಂಡಿದ್ದಾರೆ.
ಚೀನಾ ಕೊಸ್ಮೊ ಪ್ರೆಸ್ ವರದಿಯ ಪ್ರಕಾರ, ಸಿತಿ ಹವಾ ಅವರು ತಮ್ಮ ಏಳು ಮದುವೆಗಳಿಂದ 58 ಮತ್ತು 65 ರ ನಡುವಿನ ಐದು ಮಕ್ಕಳನ್ನು ಹೊಂದಿದ್ದಾರೆ. ಅವರ ಮಕ್ಕಳ ಮೂಲಕ, ಅವರು 19 ಮೊಮ್ಮಕ್ಕಳು ಮತ್ತುಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಪ್ರಸ್ತುತ ತನ್ನ ಕಿರಿಯ ಮಗ ಮತ್ತು ಸೊಸೆಯೊಂದಿಗೆ ವಾಸಿಸುತ್ತಿರುವ ಸಿತಿ ಹವಾ, ಯಾರಾದರೂ ತನಗೆ ಪ್ರಪೋಸ್ ಮಾಡಿದರೆ ಮರುಮದುವೆಯಾಗುವ ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ತನ್ನ 112 ನೇ ವಯಸ್ಸಿನಲ್ಲೂ ಯಾರ ಸಹಾಯವಿಲ್ಲದೇ ಆರಾಮವಾಗಿ ಓಡಾಡುತ್ತಾರೆ. ಆದರೆ ವಯೋಸಹಜವಾದ ಸ್ವಲ್ಪ ಶ್ರವಣ ದೋಷ ಮತ್ತು ದೃಷ್ಟಿದೋಷದ ಸಮಸ್ಯೆಯಿದೆ. ಆದರೆ ಶತಾಯುಷಿಯು ತನ್ನ ದೀರ್ಘಾಯುಷ್ಯದ ಬಗ್ಗೆ ಯಾವುದೇ ರಹಸ್ಯವನ್ನು ಹೇಳಿಕೊಂಡಿಲ್ಲ.

ನೋಡಿರಿ

