ಲಕ್ಷದ್ವೀಪಕ್ಕೆ ಟ್ರಿಪ್ ಗೆ ಪ್ಲಾನ್ ಮಾಡಿದ್ದರೆ ಮಾಡಬೇಕಾಗಿದ್ದೇನು? – ಲಕ್ಷದ್ವೀಪವನ್ನ ತಲುಪೋದು ಹೇಗೆ?
ಲಕ್ಷದ್ವೀಪ.. ನೀವು ಕೂಡ ಈ ಹೆಸರನ್ನ ಗೂಗಲ್ನಲ್ಲೂ, ಯೂಟ್ಯೂಬ್ನಲ್ಲೋ ಅಥವಾ ಇನ್ಯಾವುದೇ ಸೋಷಿಯಲ್ ಮೀಡಿಯಾದಲ್ಲಿ ಈಗಾಗ್ಲೇ ಸರ್ಚ್ ಮಾಡಿರ್ತೀರಾ. ಹೇಳಿಕೇಳಿ ಈಗ ಟೂರಿಸಂ ಸೀಸನ್ ಶುರುವಾಗಿದೆ. ಎಲ್ಲರೂ ಟೂರಿಸ್ಟ್ ಡೆಸ್ಟಿನೇಶನ್ಗಳ ಸರ್ಚ್ ಮಾಡ್ತಾ ಇದ್ದಾರೆ. ಈ ಪೈಕಿ ನಂಬರ್-1 ಪೊಸೀಶನ್ನಲ್ಲಿರೋದು ಲಕ್ಷದ್ವೀಪ. ಕರ್ನಾಟಕದಿಂದ ಹಿಡಿದು ದೇಶಾದ್ಯಂತ ಸಾಕಷ್ಟು ಮಂದಿ ಲಕ್ಷಾದ್ವೀಪಕ್ಕೆ ಟ್ರಿಪ್ ಪ್ಲ್ಯಾನ್ ಮಾಡ್ತಾ ಇದ್ದಾರೆ. ಮಾಲ್ಡೀವ್ಸ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿ ಎಲ್ಲರೂ ಲಕ್ಷಾದ್ವೀಪದತ್ತ ಹೊರಟಿದ್ದಾರೆ. ಅದೆಷ್ಟೋ ಮಂದಿಗೆ ಲಕ್ಷದ್ವೀಪ ಅನ್ನೋ ಐಲ್ಯಾಂಡ್ ಇದೆ ಅನ್ನೋದೆ ಗೊತ್ತಿರಲಿಲ್ಲ. ಆದ್ರೆ ಪ್ರಧಾನಿ ಮೋದಿಯ ಒಂದೇ ಒಂದು ವಿಸಿಟ್.. ನಾಲ್ಕೈದು ಫೋಟೋಸ್ ಇಡೀ ದ್ವೀಪವನ್ನೇ ಜಗಜ್ಜಾಹೀರು ಮಾಡಿದೆ. ವಿಶ್ವವಿಖ್ಯಾತ ಗೊಳಿಸಿದೆ. ನೀವು ಲಕ್ಷದ್ವೀಪಕ್ಕೆ ಟ್ರಿಪ್ ಗೆ ಪ್ಲಾನ್ ಮಾಡಿದ್ದರೆ ಮಾಡಬೇಕಾಗಿದ್ದೇನು? ಲಕ್ಷದ್ವೀಪವನ್ನ ತಲುಪೋದು ಹೇಗೆ? ಏನೆಲ್ಲಾ ಡಾಕ್ಯುಮೆಂಟ್ಸ್ಗಳು ಬೇಕು? ಎಷ್ಟು ದಿನದ ಟ್ರಿಪ್ ಪ್ಲ್ಯಾನ್ ಮಾಡಬಹುದು? ಅಲ್ಲಿ ಏನೆಲ್ಲಾ ಫೆಸಿಲಿಟಿಗಳಿವೆ? ಇವೆಲ್ಲದರ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಚೀನಾ ತೆಕ್ಕೆಗೆ ಬಿದ್ದ ಮಾಲ್ಡೀವ್ಸ್ ಸ್ಥಿತಿ ಏನಾಗಿದೆ ? – ಭಾರತಕ್ಕೆ ಚೀನಾದಿಂದ ಕಾದಿದೆಯಾ ಅಪಾಯ?
ಲಕ್ಷದ್ವೀಪದಲ್ಲಿ ಹಲವು ದ್ವೀಪಗಳಿವೆ. ಈ ಪೈಕಿ ಎಲ್ಲಾ ದ್ವೀಪಗಳಿಗೂ ಎಂಟ್ರಿ ಇಲ್ಲ. ಕೆಲ ನಿಗದಿತ ದ್ವೀಪಗಳಿಗಷ್ಟೇ ಟೂರಿಸ್ಟ್ಗಳು ವಿಸಿಟ್ ಮಾಡಬಹುದು. ಹಾಗಂತಾ ನಾವು ದೇಶದ ಬೇರೆ ಟೂರಿಸ್ಟ್ ಪ್ಲೇಸ್ಗಳಿಗೆ ವಿಸಿಟ್ ಮಾಡಿದ ಹಾಗೆ ಲಕ್ಷಾದ್ವೀಪಕ್ಕೆ ಹೋಗೋಕೆ ಆಗಲ್ಲ. ಇದು ಕೇಂದ್ರಾಡಳಿತ ಪ್ರದೇಶವಾಗಿದ್ದು 1967ರ ಕಾನೂನಿನ ಪ್ರಕಾರ ಲಕ್ಷಾದ್ವೀಪದ ಪ್ರವೇಶಕ್ಕೆ ಮತ್ತು ಅಲ್ಲಿನ ನಿವಾಸಿಯಾಗೋಕೆ ಒಂದಷ್ಟು ನಿಯಮಗಳನ್ನ ಹೇರಲಾಗಿದೆ. ಲಕ್ಷಾದ್ವೀಪದ ಮೂಲ ನಿವಾಸಿಗಳಲ್ಲದವರು ಪರ್ಮಿಷನ್ ಇಲ್ಲದೆ ಲಕ್ಷಾದ್ವೀಪವನ್ನ ಪ್ರವೇಶಿಸುವಂತೆಯೇ ಇಲ್ಲ. ವಿದೌಟ್ ಪರ್ಮಿಷನ್ ಅಲ್ಲಿ ಉಳಿದುಕೊಳ್ಳೋಕೂ ಸಾಧ್ಯವಿಲ್ಲ. ಕೇವಲ ಸರ್ಕಾರಿ ಅಧಿಕಾರಿಗಳು, ಸೇನೆಯ ಸಿಬ್ಬಂದಿ ಮತ್ತು ಕುಟುಂಬಸ್ಥರು ಮಾತ್ರ ಲಕ್ಷಾದ್ವೀಪಕ್ಕೆ ನೇರವಾಗಿ ತೆರಳಬಹುದು. ಅಂದ್ರೆ ಇತರೆ ನಾಗರೀಕರಿಗೆ ಇರೋ ಥರಾ ಯಾವುದೇ ಫಾರ್ಮ್ನ್ನ ಫಿಲ್ಲಪ್ ಮಾಡಬೇಕಿಲ್ಲ.
ಹಾಗಿದ್ರೆ ನೀವು ಲಕ್ಷದ್ವೀಪಕ್ಕೆ ವಿಸಿಟ್ ಮಾಡೋಕೆ ಪರ್ಮಿಷನ್ ತೆಗೆದುಕೊಳ್ಳೋದು ಹೇಗೆ ಅನ್ನೋದನ್ನ ವಿವರಿಸ್ತೀನಿ. ಬೆಸ್ಟ್ ಆಪ್ಷನ್ ಆನ್ಲೈನ್.. ಆನ್ಲೈನ್ ಮೂಲಕ ಅಪ್ಲೈ ಮಾಡೋದು ಈಸಿಯೆಸ್ಟ್ ಮತ್ತು ಫಾಸ್ಟೆಸ್ಟ್ ಪ್ರೊಸೀಜರ್. ಈ ಪರ್ಮಿಟ್ ಪೋರ್ಟಲ್ ನಾವಿಲ್ಲಿ ಸ್ಕ್ರೀನ್ನಲ್ಲಿ ನಿಮಗೆ ತೋರಿಸ್ತಾ ಇದ್ದೀವಲ್ಲಾ https://epermit.utl.gov.in/pages/signup ಈ ಪೋರ್ಟಲ್ಗೆ ಸೈನ್ಅಪ್ ಆಗಿ, ಅಲ್ಲಿ ನಿಮ್ಮ ಅಕೌಂಟ್ ಓಪನ್ ಮಾಡಬೇಕು. ಹೆಸರು, ಈ ಮೇಲ್ ಸೇರಿದಂತೆ ಡಿಟೇಲ್ಸ್ ಫಿಲ್ಲಪ್ ಮಾಡ್ಬೇಕು. ಬಳಿಕ ಲಕ್ಷಾದ್ವೀಪದಲ್ಲಿ ಯಾವೆಲ್ಲಾ ದ್ವೀಪಕ್ಕೆ ವಿಸಿಟ್ ಮಾಡಬೇಕು ಅನ್ನೋದನ್ನ ಕೂಡ ನೀವು ಮೆನ್ಷನ್ ಮಾಡಬೇಕಾಗುತ್ತೆ. ಕವರಟ್ಟಿ, ಅಗಟ್ಟಿ, ಬಂಗಾರಮ್, ಕದ್ಮತ್ ಮತ್ತು ಮಿನಿಕೋಯ್ ದ್ವೀಪಗಳು ಟೂರಿಸಂಗೆ ತುಂಬಾ ಫೇಮಸ್. ಇದೇ ವೇಳೆ ಫ್ಲೈಟ್ ಟಿಕೆಟ್ ಮತ್ತು ಉಳಿದುಕೊಳ್ಳೋಕೆ ಗೆಸ್ಟ್ ಹೌಸ್ನ್ನ ಕೂಡ ಬುಕ್ಕಿಂಗ್ ಮಾಡಬೇಕಾಗುತ್ತೆ. ಇದ್ರ ಪ್ರೈಸ್ ನೀವು ಯಾವ ತಿಂಗಳಿನಲ್ಲಿ ವಿಸಿಟ್ ಮಾಡ್ತೀರಿ ಅನ್ನೋದ್ರ ಮೇಲೆ ಡಿಪೆಂಡ್ ಆಗಿರುತ್ತೆ. ಅಕ್ಟೋಬರ್ನಿಂದ ಫೆಬ್ರವರಿ ಲಕ್ಷದ್ವೀಪಕ್ಕೆ ವಿಸಿಟ್ ಮಾಡೋಕೆ ಬೆಸ್ಟ್ ಟೈಮ್.
ಇನ್ನು ಫಾರ್ಮ್ ಫಿಲ್ಲಪ್ ಮಾಡೋ ವೇಳೆ ಕೆಲ ಡಾಕ್ಯುಮೆಂಟ್ಸ್ಗಳನ್ನ ಕೂಡ ಸಬ್ಮಿಟ್ ಮಾಡಬೇಕಾಗುತ್ತೆ.
ಏನೆಲ್ಲಾ ಡಾಕ್ಯುಮೆಂಟ್ಸ್ ಬೇಕು?
- ಪಾಸ್ ಪೋರ್ಟ್ ಸೈಜ್ ಫೋಟೋ
- ಐಡಿ ಪ್ರೂಫ್ ನ ಫೋಟೋ ಕಾಪಿ
- ಆಧಾರ್ ಕಾರ್ಡ್, ವೋಟರ್ ಐಡಿ ಹೀಗೆ ಯಾವುದಾದ್ರು ಐಡಿ ಪ್ರೂಫ್
- ಟ್ರಾವೆಲಿಂಗ್ ಪ್ರೂಫ್-ಫ್ಲೈಟ್ ಟಿಕೆಟ್ or ಬೋಟ್, ಶಿಪ್ ಟಿಕೆಟ್
- ಹೋಟೆಲ್ or ರೆಸಾರ್ಟ್ ಬುಕ್ಕಿಂಗ್ ಕನ್ಫರ್ಮೇಶನ್
ಈ ಎಲ್ಲಾ ಪ್ರೊಸೀಜರ್ಗಳು ಕಂಪ್ಲೀಟ್ ಆದ 15 ದಿನಗಳಲ್ಲಿ ನಿಮಗೆ ಈ-ಮೇಲ್ ಮೂಲಕ ಲಕ್ಷಾದ್ವೀಪಕ್ಕೆ ವಿಸಿಟ್ ಮಾಡೋಕೆ ಪರ್ಮಿಷನ್ ಲೆಟರ್ ಸಿಗುತ್ತೆ. ಇನ್ನು ಆಫ್ಲೈನ್ ಮೂಲಕವೂ ಪರ್ಮಿಷನ್ ಲೆಟರ್ನ್ನ ನೀವು ಪಡೆದುಕೊಳ್ಳಬಹುದು. ಅದಕ್ಕೆ http://www.lakshadweeptourism.com/contact.html ಅಂದ್ರೆ ಲಕ್ಷಾದ್ವೀಪ ಅಡ್ಮಿನಿಸ್ಟ್ರೇಷನ್ ವೆಬ್ಸೈಟ್ಗೆ ಹೋಗಿ ಅಪ್ಲಿಕೇಶನ್ ಡೌನ್ಮಾಡಿಕೊಳ್ಳಬೇಕು. ಬಳಿಕ ಡಿಟೇಲ್ಸ್ ಫಿಲ್ಲಪ್ ಮಾಡಿ, ಡ್ಯಾಕ್ಯುಮೆಂಟ್ಸ್ನ್ನ ಕೂಡ ಅಟ್ಯಾಚ್ ಮಾಡಿ ಕಲೆಕ್ಟರ್ಸ್ ಆಫೀಸ್ನಲ್ಲಿ ಸಬ್ಮಿಟ್ ಮಾಡಬೇಕು. ಬಳಿಕ ಪರ್ಮಿಷನ್ ಲೆಟರ್ ಕೂಡ ಕಲೆಕ್ಟರ್ಸ್ ಆಫೀಸ್ಗೆ ಬಂದು ತಲುಪುತ್ತೆ. ಆದ್ರೆ ಈ ಪ್ರೊಸೀಜರ್ ಹೆಚ್ಚು ಟೈಮ್ ತಗೊಳ್ಳುತ್ತೆ. ಹೀಗಾಗಿ ಆದಷ್ಟು ಆನ್ಲೈನ್ ಬುಕ್ಕಿಂಗ್ನ್ನೇ ಪ್ರಿಫರ್ ಮಾಡೋದು ಬೆಟರ್. ಇನ್ನು ಈ ಪರ್ಮಿಷನ್ ಲೆಟರ್ನ ವ್ಯಾಲಿಡಿಟಿ 30 ದಿನಗಳವರೆಗೆ ಇರುತ್ತೆ. ಹೀಗಾಗಿ ಮ್ಯಾಕ್ಸಿಮಮ್ ಅಂದ್ರೆ 30 ದಿನಗಳವರೆಗೆ ಲಕ್ಷಾದ್ವೀಪದಲ್ಲಿ ನೀವು ಉಳಿದುಕೊಳ್ಳಬಹುದು.
ಇನ್ನು ಲಕ್ಷಾದ್ವೀಪವನ್ನ ತಲುಪೋದು ಹೇಗೆ? ಲಕ್ಷಾದ್ವೀಪಕ್ಕೆ ಹೋಗೋ ಫ್ಲೈಟ್, ಶಿಪ್ ಎಲ್ಲಿಂದ ಅನ್ನೋದು ಕೂಡ ಇಂಪಾರ್ಟೆಂಟ್. ಕೇರಳದ ಕೊಚ್ಚಿನ್ ಲಕ್ಷಾದ್ವೀಪದ ಗೇಟ್ವೇ..ಲಕ್ಷಾದ್ವೀಪಕ್ಕೆ ಹೋಗಬೇಕು ಅನ್ನೋದಾದ್ರೆ ಕೊಚ್ಚಿನ್ ಮೂಲಕವೇ ತೆರಳಬೇಕು. ಕೊಚ್ಚಿನ್ನಿಂದ ವಿಮಾನ ಅಥವಾ ಶಿಪ್ ಮೂಲಕ ಲಕ್ಷಾದ್ವೀಪಕ್ಕೆ ತೆರಳಬಹುದು. ಕೊಚ್ಚಿನ್ನಿಂದ ಲಕ್ಷಾದ್ವೀಪದ ಅಗಟ್ಟಿ ಮತ್ತು ಬಂಗಾರಾಮ್ಗೆ ಡೈರೆಕ್ಟ್ ಫ್ಲೈಟ್ ಮತ್ತು ಶಿಪ್ ಇರುತ್ತೆ. ವಿಮಾನದಲ್ಲಿ ಕೇವಲ ಒಂದೂವರೆ ಗಂಟೆ ಜರ್ನಿ ಅಷ್ಟೇ. ಅದೇ ಕ್ರೂಸ್ ಶಿಪ್ನಲ್ಲಾದ್ರೆ 14-20 ಗಂಟೆಗಳು ಬೇಕು. ಲಕ್ಷಾದ್ವೀಪ ತಲುಪಿದ ಮೇಲೆ ಅಗಟ್ಟಿಯಿಂದ ಕವರಟ್ಟಿ ಮತ್ತು ಕದ್ಮಾತ್ ದ್ವೀಪಗಳಿಗೆ ತೆರಳೋಕೆ ಬೋಟ್ ಸರ್ವಿಸ್ ಇರುತ್ತೆ. ಮಳೆಗಾಲದ ಸಂದರ್ಭದಲ್ಲಿ ಹೆಲಿಕಾಪ್ಟರ್ಗಳ ಮೂಲಕ ತೆರಳಬಹುದು.
ಇನ್ನು ಉಳಿದುಕೊಳ್ಳೋಕೆ ಹೈಯೆಂಡ್ ರೆಸ್ಟೋರೆಂಟ್ಗಳು ಬೇಕು ಅನ್ನೋದಾದ್ರೆ ಲಕ್ಷಾದ್ವೀಪದ ಬಂಗಾರಾಮ್ಗೆ ಹೋಗಬೇಕು. ಹಾಗೆಯೇ ಲಗೂನ್ ಬೀಚ್ ಲಕ್ಷಾದ್ವೀಪದ ಅತ್ಯಂತ ಫೇಮಸ್ ಬೀಚ್. ಅಲ್ಲಿ ಸ್ಟೇ ಆಗೋಕೆ ಬೆಸ್ಟ್ ಹೋಮ್ ಸ್ಟೇಗಳಿವೆ. ಹಾಗೆಯೇ ಟೂರ್ ಆಪರೇಟರ್ಸ್ಗಳೆಲ್ಲಾ ಲಕ್ಷಾದ್ವೀಪಕ್ಕೆ ಸ್ಪೆಷಲ್ ಪ್ಯಾಕೇಜ್ನ್ನ ಅನೌನ್ಸ್ ಮಾಡಿದ್ದಾರೆ.
- ಥಾಮಸ್ ಕುಕ್-6 ದಿನಗಳ ಕ್ರೂಸ್ ಟ್ರಿಪ್ – 36,000 – 60,000 ರೂಪಾಯಿ
- ಮೇಕ್ ಮೈ ಟ್ರಿಪ್-ಪ್ಲೈಟ್ ಟಿಕೆಟ್ 2000 ಡಿಸ್ಕೌಂಟ್
- ಸ್ಟೇಟ್ ಎಕ್ಸ್ ಪ್ರೆಸ್-6 ದಿನಗಳ ಟ್ರಿಪ್-31,824 ರೂಪಾಯಿ
ಆದ್ರೆ ಇಲ್ಲಿ ಒಂದು ಪ್ರಶ್ನೆ ಇದೆ. ಎಲ್ಲರೂ ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿ ಲಕ್ಷಾದ್ವೀಪಕ್ಕೆ ಪ್ಲ್ಯಾನ್ ಮಾಡ್ತಾ ಇದ್ದಾರೆ. ಲಕ್ಷದ್ವೀಪಕ್ಕೆ ಪ್ರವಾಸಿಗರ ದಂಡ ಹರಿದು ಹೋಗೋದ್ರಲ್ಲಿ ಡೌಟೇ ಇಲ್ಲ. ಆದ್ರೆ ಟೂರಿಸ್ಟ್ಗಳ ರಶ್ನ್ನ ಈಗ ಲಕ್ಷದ್ವೀಪಕ್ಕೆ ಹ್ಯಾಂಡಲ್ ಮಾಡೋಕೆ ಸಾಧ್ಯಾನಾ? ಅಷ್ಟೊಂದು ವ್ಯವಸ್ಥೆಗಳು ಅಲ್ಲಿವೆಯಾ ಅನ್ನೋದು ಇಲ್ಲಿರುವ ಕ್ವಶ್ಚನ್. ಸದ್ಯ ಲಕ್ಷದ್ವೀಪದ ಫೇಮಸ್ ಮೂರು ದ್ವೀಪಗಳನ್ನ ಸೇರಿಸಿದ್ರೆ ಅಲ್ಲಿ ಸ್ಟೇ ಆಗೋಕೆ ಇರೋದೆ ಒಟ್ಟು 97 ಯುನಿಟ್ಗಳು. ಈ ಪೈಕಿ 61 ಕಾಟೇಜ್ಗಳಿವೆ. ಬಂಗಾರಾಮ್ನಲ್ಲಿ 31 ಕಾಟೇಜ್ಗಳಿದ್ದು, ಮಿನಿಕಾಯ್ನಲ್ಲಿ 20 ಕಾಟೇಜ್ಗಳಿವೆ. ಹಾಗೆಯೇ ಕಾವರಟ್ಟಿಯಲ್ಲಿ 16 ರೆಸಾರ್ಟ್ಗಳಿವೆ. ಇನ್ನೂ ಕೆಲವಡೆ ಒಂದಷ್ಟು ಟೆಂಟ್ಗಳಿವೆ. ಈಗಾಗ್ಲೇ ತಾಜ್ನವರು 2026ರ ವೇಳೆಗೆ 110 ರೂಮ್ನ ರೆಸಾರ್ಟ್, 60 ಬೀಚ್ ವಿಲ್ಲಾ ಮತ್ತು 50 ವಾಟರ್ ವಿಲ್ಲಾ ನಿರ್ಮಾಣ ಮಾಡೋದಾಗಿ ಘೋಷಿಸಿದ್ದಾರೆ.
ಆದ್ರೆ ಲಕ್ಷದ್ವೀಪದಲ್ಲಿ ವಾಟರ್ ವಿಲ್ಲಾ ಮತ್ತು ಬೀಚ್ ವಿಲ್ಲಾಗಳನ್ನ ನಿರ್ಮಾಣ ಮಾಡೋದು ಅಷ್ಟೊಂದು ಸುಲಭ ಇಲ್ಲ. ಇಲ್ಲೊಂದಷ್ಟು ಪ್ರಾಕೃತಿಕ ಚಾಲೆಂಜಸ್ಗಳು ಕೂಡ ಇವೆ. ಮಳೆಗಾಲದ ಸಂದರ್ಭದಲ್ಲಿ ಎಸ್ಪೆಷಲಿ ಮಾನ್ಸೂನ್ ವೇಳೆ ಗಾಳಿ ಭಾರಿ ರಭಸವಾಗಿ ಲಕ್ಷಾದ್ವೀಪದ ಮೇಲೆ ಹೊಡೆಯುತ್ತೆ. ಇದನ್ನ ತಡೆಯೋಕಂತೂ ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಈ ಗಾಳಿ ನೇರವಾಗಿ ವಿಲ್ಲಾಗಳ ಮೇಲೆಯೂ ಅಪ್ಪಳಿಸುತ್ತೆ. ಹೀಗಾಗಿ ಏನೇ ವಿಲ್ಲಾಗಳನ್ನ ನಿರ್ಮಿಸ್ತಿದ್ರು ಅದ್ರ ಅಡಿಪಾಯ ಮಾತ್ರ ತುಂಬಾನೆ ಗಟ್ಟಿಯಾಗಿರಬೇಕಾಗುತ್ತೆ. ಸಮುದ್ರ ನೀರಿನ ಮೇಲೆಯೇ ಈ ವಿಲ್ಲಾಗಳನ್ನ ನಿರ್ಮಿಸೋದ್ರಿಂದ ಇದ್ರಿಂದ ಅಲ್ಲಿನ ಕೋರಲ್ ರೀಫ್ ಅಂದ್ರೆ ಹವಳದ ಬಂಡೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತೆ. ಆದ್ರೆ ಮಾಲ್ಡೀವ್ಸ್ಗೆ ಈ ಗಾಳಿಯ ಹೊಡೆತದ ಸಮಸ್ಯೆ ಇಲ್ಲ. ಲಕ್ಷಾದ್ವೀಪಕ್ಕೆ ಬಡಿಯುವಷ್ಟು ರಭಸದಲ್ಲಿ ಅಲ್ಲಿ ಗಾಳಿ ಅಪ್ಪಳಿಸೋದಿಲ್ಲ. ಹೀಗಾಗಿ ಮಾಲ್ಡೀವ್ಸ್ನಲ್ಲಿರುವಂತೆ ವಾಟರ್ ವಿಲ್ಲಾ, ಬೀಚ್ ವಿಲ್ಲಾಗಳನ್ನ ಲಕ್ಷಾದ್ವೀಪದಲ್ಲಿ ನಿರ್ಮಾಣ ಮಾಡೋದೆ ಒಂದು ದೊಡ್ಡ ಚಾಲೆಂಜ್.
ಇಲ್ಲಿ ಇನ್ನೊಂದು ಸವಾಲು ಕೂಡ ಇದೆ. ಲಕ್ಷಾದ್ವೀಪದ ಹಲವು ಭೂಪ್ರದೇಶಗಳು ಜನರ ಹೆಸರಲ್ಲಿ ರಿಜಿಸ್ಟರ್ ಆಗಿದೆ. ಅಲ್ಲಿನ ಕೆಲ ಜಾಗಗಳಿಗೆ ಮಾಲೀಕರಿದ್ದಾರೆ. ಬ್ರಿಟೀಷರ ಕಾಲದಿಂದಲೂ ಅಲ್ಲಿನ ಜನರೇ ಕೆಲ ಪ್ರದೇಶಗಳ ಒಡೆಯರಾಗಿದ್ದಾರೆ. 1800ನೇ ಇಸವಿಯಿಂದಲೂ ಭೂಮಿ ಯಾಱರ ಹೆಸರಲ್ಲಿ ರಿಜಿಸ್ಟರ್ ಆಗಿದೆ ಅನ್ನೋದ್ರ ಡಾಕ್ಯೂಮೆಂಟ್ಸ್ಗಳಿವೆ. ಈ ಹಿಂದೆ ಪರಿಹಾರದ ಹಣ ತಗೊಂಡು ಭೂಮಿಯನ್ನ ಸರ್ಕಾರದ ಸುಪರ್ದಿಗೆ ನೀಡುವಂತೆ ಕೇಳಿದಾಗ ಭೂಮಾಲೀಕರು ಕೋರ್ಟ್ ಮೆಟ್ಟಿಲೇರಿರೋ ಹಲವು ಉದಾಹರಣೆಗಳಿವೆ. ಹೀಗಾಗಿ ಲಕ್ಷಾದ್ವೀಪದಲ್ಲಿ ಏನೇ ನಿರ್ಮಾಣ ಮಾಡಬೇಕಿದ್ರೂ, ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಿದ್ರೂ ಮೊದಲು ಅಧಿಕಾರಿಗಳು ಸ್ಥಳೀಯರ ಮನವೊಲಿಸಲೇಬೇಕಿದೆ.