ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೊದಲ ಪಂದ್ಯಕ್ಕೆ ಕ್ಷಣಗಣನೆ- ಕಿಂಗ್ ಕೊಹ್ಲಿ ಆಡಲ್ಲ ಯಾಕೆ?

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಮೊದಲ ಪಂದ್ಯಕ್ಕೆ ಕ್ಷಣಗಣನೆ-  ಕಿಂಗ್ ಕೊಹ್ಲಿ ಆಡಲ್ಲ ಯಾಕೆ?

ಫೈನಲ್​ ಟಿ-20 ಸೀರಿಸ್​.. ವರ್ಲ್ಡ್​​ಕಪ್​​ಗೂ ಮುನ್ನ ಟೀಂ ಇಂಡಿಯಾ ಆಡ್ತಿರೋ ಕೊನೆಯ ಟಿ20 ಸೀರಿಸ್​ ಇವತ್ತಿನಿಂದ ಶುರುವಾಗ್ತಾ ಇದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಸೀರಿಸ್​​ನ ಫಸ್ಟ್ ಮ್ಯಾಚ್​​ ಗುರುವಾರ ನಡೆಯುತ್ತಿದೆ. ಟೀಂ ಇಂಡಿಯಾದ ಪಾಲಿಗೆ ಇದು ತುಂಬಾನೆ ಇಂಪಾರ್ಟೆಂಟ್ ಸೀರಿಸ್. ಕ್ಯಾಪ್ಟನ್​ ರೋಹಿತ್ ಶರ್ಮಾ ಮತ್ತು ವಿರಾಟ್​​ ಕೊಹ್ಲಿಗಂತೂ ಉಳಿದವರಿಗಿಂತಲೂ ಹೆಚ್ಚು ಕ್ರೂಶಿಯಲ್ ಆಗಿರೋ ಸೀರಿಸ್. ಆದ್ರೆ ಫಸ್ಟ್​​ ಮ್ಯಾಚ್​​ನಲ್ಲಿ ವಿರಾಟ್​​ ಕೊಹ್ಲಿ ಆಡ್ತಾ ಇಲ್ಲ. ಅದಕ್ಕೆ ಕಾರಣ ಏನು? ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಅಪ್ಘಾನಿಸ್ತಾನ ವಿರುದ್ಧದ ಟಿ20 ಸೀರಿಸ್‌ಗೆ ಟೀಮ್ ಆಯ್ಕೆ – ಇವರಲ್ಲಿ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರು ಯಾರಿದ್ದಾರೆ?

ಅಫ್ಘನ್​ ವಿರುದ್ಧದ ಈ ಸೀರಿಸ್​​ ರೋಹಿತ್​​ ಶರ್ಮಾಗೆ ತುಂಬಾನೆ ಸ್ಪೆಷಲ್ ಆಗಿರಲಿದೆ. ಸುಮಾರು ಒಂದೂವರೆ ವರ್ಷಗಳ ಬಳಿಕ ಟಿ-20 ಇಂಟರ್​ನ್ಯಾಷನಲ್ ಮ್ಯಾಚ್​ ಆಡ್ತಿರೋದ್ರ ಜೊತೆಗೆ ಟಿ-20 ಟೀಮ್​​ನ ಕ್ಯಾಪ್ಟನ್​ ಕೂಡ ಆಗಿದ್ದಾರೆ. ಹೀಗಾಗಿ ಸೀರಿಸ್ ಗೆಲ್ಲೋದಷ್ಟೇ ಅಲ್ಲ, ರೋಹಿತ್ ಶರ್ಮಾ ಯಾವ ರೀತಿ ಪರ್ಫಾಮ್ ಮಾಡ್ತಾರೆ ಅನ್ನೋದ್ರ ಮೇಲೆಯೇ ಎಲ್ಲರ ನಿಗಾ ಇರುತ್ತೆ. ಇಂದಿನಿಂದ ರೋಹಿತ್​ ಶರ್ಮಾಗೆ ಟಿ20 ಟೆಸ್ಟ್​ ಶುರುವಾಗುತ್ತೆ. ಜೂನ್​ನಲ್ಲಿ ನಡೆಯೋ ವರ್ಲ್ಡ್​​ಕಪ್​ಗೆ ಸೆಲೆಕ್ಟ್ ಆಗಬೇಕು ಅನ್ನೋ, ಮತ್ತೊಮ್ಮೆ ಟೀಂ ಇಂಡಿಯಾವನ್ನ ಲೀಡ್ ಮಾಡಬೇಕು ಅನ್ನೋದಾದ್ರೆ ಆಫ್ಘನ್ ವಿರುದ್ಧದ ಮೂರು ಟಿ20 ಮ್ಯಾಚ್​ ಜೊತೆಗೆ ಮುಂಬರುವ ಐಪಿಎಲ್​ ಟೂರ್ನಿಯಲ್ಲೂ ರೋಹಿತ್ ಬ್ಯಾಟ್​​ನಿಂದ ರನ್ ಬರಲೇಬೇಕಿದೆ. ಜೊತೆಗೆ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆಯೂ ಬಿಸಿಸಿಐ ನಿಗಾ ವಹಿಸಿರುತ್ತೆ. ಇದು ಕೇವಲ ರೋಹಿತ್ ಶರ್ಮಾಗೆ ಮಾತ್ರವಲ್ಲಿ ನೆಕ್ಸ್ಟ್ ಮ್ಯಾಚ್​ ವೇಳೆಗೆ ಟೀಂ ಇಂಡಿಯಾವನ್ನ ಸೇರ್ಪಡೆಯಾಗೋ ವಿರಾಟ್ ಕೊಹ್ಲಿ ಸೇರಿದಂತೆ ಈಗ ಸ್ಕ್ವಾಡ್​​ನಲ್ಲಿರೋ ಪ್ರತಿಯೊಬ್ಬ ಪ್ಲೇಯರ್​​ಗಳಿಗೂ ಅಪ್ಲೈ ಆಗುತ್ತೆ. ಇವತ್ತಿನಿಂದ ಟಿ-20 ವರ್ಲ್ಡ್​​ಕಪ್​ ಸ್ಕ್ವಾಡ್​​ಗೆ ಸರ್ಚಿಂಗ್​ ಶುರುವಾಗಲಿದೆ. ವಿಶ್ವಕಪ್​​​ ಟೀಂನಲ್ಲಿ ಯಾರನ್ನೆಲ್ಲಾ ಪಿಕ್ ಮಾಡಬಹುದು ಅನ್ನೋ ಲೆಕ್ಕಾಚಾರಗಳು ನಡೆಯಲಿದೆ. ಐಪಿಎಲ್​​ನಲ್ಲಿ ಮೊದಲ ಒಂದು ತಿಂಗಳ ಪಂದ್ಯಗಳ ಬಳಿಕ ವರ್ಲ್ಡ್​​​ಕಪ್​ ಸ್ಕ್ವಾಡ್​​ನಲ್ಲಿ ಯಾರೆಲ್ಲಾ ಇರಬಹುದು ಅನ್ನೋ ಬಗ್ಗೆ ಒಂದಷ್ಟು ಕ್ಲ್ಯಾರಿಟಿ ಕೂಡ ಸಿಗಬಹುದು. ಯಾಕಂದ್ರೆ ಐಪಿಎಲ್​ ಪರ್ಫಾಮೆನ್ಸ್​ನ್ನ ಕೂಡ ಬಿಸಿಸಿಐ ವರ್ಲ್ಡ್​​ಕಪ್​ ಟೀಮ್ ಸೆಲೆಕ್ಷನ್​ಗೆ ಪರಿಗಣಿಸ್ತಾ ಇದೆ. ಸೋ ಮುಂದಿನ 4 ತಿಂಗಳು ಟೀಂ ಇಂಡಿಯಾದ ಪ್ರತಿಯೊಬ್ಬ ಪ್ಲೇಯರ್​ಗಳು ವರ್ಲ್ಡ್​​ಕಪ್​​ನ್ನ ಮೈಂಡ್​​ನಲ್ಲಿಟ್ಟುಕೊಂಡೇ ಆಡಬೇಕಾಗುತ್ತೆ.

ಇನ್ನು ಭಾರತ-ಅಫ್ಘಾನಿಸ್ತಾನ ಟಿ-20 ಸೀರಿಸ್​ನ್ನ ಸ್ಪೋರ್ಟ್ಸ್-18 ಚಾನೆಲ್​​ ಬ್ರಾಡ್​ಕಾಸ್ಟ್ ಮಾಡ್ತಿದೆ. ಸ್ಟಾರ್​ ಸ್ಪೋರ್ಟ್ಸ್ ಅಲ್ಲ.. ಹೀಗಾಗಿ ಜಿಯೋ ಸಿನಿಮಾ ಆ್ಯಪ್​ ಮತ್ತು ವೆಬ್​ಸೈಟ್​​ನಲ್ಲಿ ನೀವು ಮ್ಯಾಚ್​​ನ್ನ ಲೈವ್ ನೋಡಬಹುದು.

ಟೀಂ ಇಂಡಿಯಾ PLAYING-11?

  • ರೋಹಿತ್ ಶರ್ಮಾ
  • ಯಶಸ್ವಿ ಜೈಸ್ವಾಲ್
  • ಶುಬ್ಮನ್ ಗಿಲ್
  • ಸಂಜು ಸ್ಯಾಮ್ಸನ್
  • ತಿಲಕ್ ವರ್ಮಾ
  • ಶಿವಮ್ ದುಬೆ
  • ರಿಂಕು ಸಿಂಗ್
  • ಅಕ್ಸರ್ ಪಟೇಲ್
  • ಕುಲ್​ದೀಪ್ ಯಾದವ್
  • ಅರ್ಶ್​ದೀಪ್ ಸಿಂಗ್
  • ಮುಕೇಶ್ ಕುಮಾರ್

ಇದು ಅಫ್ಘಾನಿಸ್ತಾನ ವಿರುದ್ಧದ ಫಸ್ಟ್ ಟಿ-20 ಮ್ಯಾಚ್​ಗೆ ಟೀಂ ಇಂಡಿಯಾದ ಪ್ಲೇಯಿಂಗ್-11. ಮೊಹಾಲಿಯದ್ದು ಫುಲ್ ಬ್ಯಾಟಿಂಗ್ ಪಿಚ್ ಆಗಿರೋದ್ರಿಂದ 7 ಮಂದಿ ಫುಲ್​ ಫ್ಲೆಡ್ಜ್ ಬ್ಯಾಟ್ಸ್​​ಮನ್​ಗಳನ್ನಿಟ್ಟುಕೊಂಡು ರೋಹಿತ್ ಪಡೆ ಅಖಾಡಕ್ಕಿಳಿಯಬಹುದು.

ಅಫ್ಘಾನಿಸ್ತಾನ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿ ಆಡುವುದಿಲ್ಲ ಎಂದು ಹೆಡ್​ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಗುರುವಾರ ಮೊದಲ ಪಂದ್ಯ ನಡೆಯಲಿದ್ದು, ಟೀಂ ಇಂಡಿಯಾ ಆಫ್ಘಾನ್ ವಿರುದ್ಧ ಒಟ್ಟು 3 ಟಿ-20 ಪಂದ್ಯಗಳು ನಡೆಯಲಿವೆ. ಜನವರಿ 14 ಮತ್ತು 17 ರಂದು ನಡೆಯುವ ಎರಡನೇ ಹಾಗೂ ಮೂರನೇ ಪಂದ್ಯಗಳಿಗೆ ಕೊಹ್ಲಿ ಲಭ್ಯರಾಗಲಿದ್ದಾರೆ. ವೈಯಕ್ತಿಕ ಕಾರಣದಿಂದ ಕೊಹ್ಲಿ ಮೊದಲ ಪಂದ್ಯವನ್ನು ಆಡುತ್ತಿಲ್ಲ ಎಂದು ದ್ರಾವಿಡ್ ತಿಳಿಸಿದ್ದಾರೆ.

 

Sulekha