ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್‌ಗೆ ಟೀಮ್‌ನಲ್ಲಿ ಸಿಕ್ಕಿಲ್ಲ ಸ್ಥಾನ – ಕನ್ನಡಿಗನಿಗೆ ಯಾಕೆ ಅನ್ಯಾಯ ಎಂದು ಕೇಳುತ್ತಿದ್ದಾರೆ ಫ್ಯಾನ್ಸ್

ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್‌ಗೆ ಟೀಮ್‌ನಲ್ಲಿ ಸಿಕ್ಕಿಲ್ಲ ಸ್ಥಾನ – ಕನ್ನಡಿಗನಿಗೆ ಯಾಕೆ ಅನ್ಯಾಯ ಎಂದು ಕೇಳುತ್ತಿದ್ದಾರೆ ಫ್ಯಾನ್ಸ್

10 ಐಪಿಎಲ್​ ಫ್ರಾಂಚೈಸಿಗಳಿಂದ ಆಟಗಾರರು ಅಫ್ಘಾನಿಸ್ತಾನ ವಿರುದ್ಧ ಸೀರಿಸ್​ನಲ್ಲಿ ಆಡ್ತಾ ಇದ್ದಾರೆ. ಹಾಗೂ ವರ್ಲ್ಡ್​​ಕಪ್​ ಹಿಟ್​​ಲಿಸ್ಟ್​ನಲ್ಲಿದ್ದಾರೆ. ಐಪಿಎಲ್​​ನಲ್ಲಿ ಯಾವ ರೀತಿ ಆಡ್ತಾರೆ ಅನ್ನೋದ್ರ ಆಧಾರದ ಮೇಲೆಯೇ ಬಿಸಿಸಿಐ ಟೀಂ ಇಂಡಿಯಾ ವರ್ಲ್ಡ್​​​ಕಪ್​ ಸ್ಕ್ವಾಡ್​ನ್ನ ರೆಡಿ ಮಾಡುತ್ತೆ. ಆದರೆ, ಈಗ ಇಬ್ಬರು ಆಟಗಾರರಿಗೆ ಅನ್ಯಾಯವಾಗಿದೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ.

ಇದನ್ನೂ ಓದಿ: 20 ಟೀಮ್, 5 ಗ್ರೂಫ್ ರೆಡಿ – ಐಸಿಸಿ ಟಿ-20 ವಿಶ್ವಕಪ್ ಶೆಡ್ಯೂಲ್ ರಿಲೀಸ್

ಕೆಎಲ್​ ರಾಹುಲ್​ ಮತ್ತು​ ಇಶಾನ್ ಕಿಶನ್. ಸೌತ್​ ಆಫ್ರಿಕಾ ವಿರುದ್ಧದ ಸೀರಿಸ್​​ನಲ್ಲಿ ಇಶಾನ್ ಕಿಶನ್ ಆಡಿಲ್ಲ. ಅಫ್ಘಾನಿಸ್ತಾನ ವಿರುದ್ಧವೂ ಆಡ್ತಾ ಇಲ್ಲ. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​​ನಲ್ಲಿ ಎಲ್ಲಾ ಮ್ಯಾಚ್​ಗಳಲ್ಲೂ ಪ್ಲೇಯಿಂಗ್-11ನಲ್ಲಿ ಇಶಾನ್​ ಕಿಶನ್​​ಗೆ ಚಾನ್ಸ್ ಸಿಗುತ್ತೆ ಅನ್ನೋದು ಗ್ಯಾರಂಟಿ ಇಲ್ಲ. ಸೋ ವರ್ಲ್ಡ್​ಕಪ್​ ಸೆಲೆಕ್ಟ್ ಆಗೋ ಸಾಧ್ಯತೆ ತೀರಾ ಕಡಿಮೆ ಇದೆ.

ಇನ್ನು ಕೆಎಲ್ ರಾಹುಲ್ ಕೂಡ ಅಷ್ಟೇ. ಎಕ್ಸ್​​ಪೀರಿಯನ್ಸ್ ಪ್ಲೇಯರ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಟಿ-20 ಫಾರ್ಮೆಟ್​​ನಲ್ಲಿ ಕೆಎಲ್​​ ರಾಹುಲ್​ ಇನ್ನೂ ಕೂಡ ದಿ ಬೆಸ್ಟ್ ಪ್ಲೇಯರ್ ಅಂತಾ ಅನ್ನಿಸಿಕೊಂಡಿಲ್ಲ. ವಂಡೇ ಮತ್ತು ಟೆಸ್ಟ್​​ಗೆ ಹೇಳಿ ಮಾಡಿಸಿದಂಥಾ ಬ್ಯಾಟ್ಸ್​ಮನ್​. ಆದ್ರೆ, ಟಿ-20 ಫಾರ್ಮೆಟ್​ನಲ್ಲಿ ಈವರೆಗೂ ಕೆಎಲ್​​ ರಾಹುಲ್​​ ಟೀಂ ಇಂಡಿಯಾದಲ್ಲಿ ಪರ್ಮನೆಂಟ್​​ ಪ್ಲೇಸ್​​ಮೆಂಟ್​​ನ್ನ ಪಡ್ಕೊಂಡಿಲ್ಲ. ಹೀಗಾಗಿ ವರ್ಲ್ಡ್​​ಕಪ್​ನಲ್ಲಿ ಆಡಿಯೇ ಆಡ್ತಾರೆ ಅಂತಾ ಹೇಳೋಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಇನ್ನು ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ಸಂಜು ಸ್ಯಾಮ್ಸನ್​ಗೆ ನ್ಯಾಯ ಒದಗಿಸಲು ಮುಂದಾಗಿರುವ ಆಯ್ಕೆ ಸಮಿತಿ, ಕೆಎಲ್ ರಾಹುಲ್​ಗೆ ಅನ್ಯಾಯ ಮಾಡಿದ್ದಾರೆ ಎಂಬ ಮಾತು ಕೂಡಾ ಕೇಳಿಬರುತ್ತಿದೆ.

Sulekha