ಟಿ20 ವಿಶ್ವಕಪ್ ಶೆಡ್ಯೂಲ್ ರಿಲೀಸ್ – ಹಾರ್ದಿಕ್, ರೋಹಿತ್ ಇವರಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಯಾರು?

ಟಿ20 ವಿಶ್ವಕಪ್ ಶೆಡ್ಯೂಲ್ ರಿಲೀಸ್ – ಹಾರ್ದಿಕ್, ರೋಹಿತ್ ಇವರಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಯಾರು?

ಟಿ20 ವರ್ಲ್ಡ್​​ಕಪ್ ಶೆಡ್ಯೂಲ್​ನ್ನ ಐಸಿಸಿ ಈಗಾಗ್ಲೇ ರಿಲೀಸ್ ಮಾಡಿದೆ.​​​ ಈ ಪೈಕಿ ಟೀಂ ಇಂಡಿಯಾ ಎ ಗ್ರೂಪ್​ನಲ್ಲಿದೆ. ಆದ್ರೆ ಐಸಿಸಿ ಅಪ್ಲೋಡ್ ಮಾಡಿರೋ ಪೋಸ್ಟ್​​ನಲ್ಲಿ ರೋಹಿತ್​ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯಾ ಇಬ್ಬರನ್ನೂ ಟೀಂ ಇಂಡಿಯಾ ಕ್ಯಾಪ್ಟನ್ ಆಗಿ ಬಿಂಬಿಸಲಾಗಿದೆ. ಒಂದು ಪೋಸ್ಟರ್​​ನಲ್ಲಿ ರೋಹಿತ್​ ಫೋಟೋ ಇದೆ. ಜೂನ್ 9ಕ್ಕೆ ಇಂಡಿಯಾ-ಪಾಕಿಸ್ತಾನ ಮ್ಯಾಚ್​ ಪೋಸರ್​​ನಲ್ಲಿ ಹಾರ್ದಿಕ್ ಪಾಂಡ್ಯಾ ಫೋಟೋವನ್ನ ಐಸಿಸಿ ಅಪ್ಲೋಡ್ ಮಾಡಿದೆ. ಹಾಗಿದ್ರೆ ವರ್ಲ್ಡ್​​ಕಪ್​ಗೆ ಟೀಂ ಇಂಡಿಯಾ ಕ್ಯಾಪ್ಟನ್ ಯಾರು? ಈ ವಿಚಾರದಲ್ಲಿ ಈಗಲೂ ಗೊಂದಲಗಳಿವೆ. ಕನ್​ಫ್ಯೂಶನ್​​ಗಳಿವೆ. ವರ್ಲ್ಡ್​​ಕಪ್​ನಲ್ಲಿ ತಂಡವನ್ನ ಯಾರು ಲೀಡ್​​ ಮಾಡ್ತಾರೆ ಅನ್ನೋ ಬಗ್ಗೆ ಇನ್ನೂ ಕೂಡ ಯಾವುದೇ ಕ್ಲ್ಯಾರಿಟಿ ಸಿಕ್ಕಿಲ್ಲ.

ಇದನ್ನೂ ಓದಿ: 11 ಬಾಲ್.. 6 ವಿಕೆಟ್ – ಟೆಸ್ಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ

ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಮಾತ್ರ ವರ್ಲ್ಡ್​​ಕಪ್​ನಲ್ಲಿ ರೋಹಿತ್​​ ಶರ್ಮಾ ತಂಡವನ್ನ ಲೀಡ್​​ ಮಾಡಲಿದ್ದಾರೆ ಎಂದಿದ್ದಾರೆ. ಯಾಕಂದ್ರೆ ಹಾರ್ದಿಕ್ ಪಾಂಡ್ಯಾ ಅಪ್ಘಾನಿಸ್ತಾನ ವಿರುದ್ಧವೂ ಆಡ್ತಿಲ್ಲ. ನೆಕ್ಟ್ಸ್ ಡೈರೆಕ್ಟ್ ಐಪಿಎಲ್​​ನಲ್ಲಿ ಆಡಬಹುದು. ಹೀಗಾಗಿ ವರ್ಲ್ಡ್​​ಕಪ್​ನಲ್ಲಿ ಟೀಂ ಇಂಡಿಯಾವನ್ನ ಲೀಡ್ ಮಾಡೋಕೆ ರೋಹಿತ್​ ಶರ್ಮಾರೇ ಪರ್ಫೆಕ್ಟ್ ಲೀಡರ್ ಅಂತಾ ಆಕಾಶ್ ಚೋಪ್ರಾ ಹೇಳಿದ್ದಾರೆ. ಇಲ್ಲಿ ಆಕಾಶ್ ಹೇಳಿರೋದು ಕೂಡ ಕರೆಕ್ಟ್ ಆಗಿಯೇ. ಸದ್ಯದ ಸ್ವಿಚ್ಯುವೇಷನ್​​ನಲ್ಲಿ ಕ್ಯಾಪ್ಟನ್ಸಿಗೆ ರೋಹಿತ್​ ಬೆಸ್ಟ್​ ಚಾಯ್ಸ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಬಟ್ ರೋಹಿತ್​ ಮುಂದೆ ಇರೋದು ಒಂದೇ ಚಾಲೆಂಜ್..ಹೀ ಹ್ಯಾಸ್ ಟು ಪರ್ಫಾಮ್​ ಇನ್ ಟಿ-20 ಸೀರಿಸ್ & ಐಪಿಎಲ್​. ಒಂದು ವೇಳೆ ರೋಹಿತ್ ವಂಡೇ ವರ್ಲ್ಡ್​​ಕಪ್​​ನಲ್ಲಿ ಆಡಿದಂತೆ ಆಫ್ಘನ್ ಮತ್ತು ಐಪಿಎಲ್​​ನಲ್ಲೂ ಬ್ಯಾಟಿಂಗ್ ಮಾಡಿದ್ರು ಅಂದ್ರೆ. ಟಿ-20 ವರ್ಲ್ಡ್​​ಕಪ್​​ ಸ್ಕ್ವಾಡ್​ಗೆ ಸೆಲೆಕ್ಟ್ ಆಗೋದ್ರ ಜೊತೆಗೆ ಕ್ಯಾಪ್ಟನ್​ ಆಗೋದು ಕೂಡ ಆಲ್​ಮೋಸ್ಟ್ ಗ್ಯಾರಂಟಿ. ಯಾಕಂದ್ರೆ ಕರೆಂಟ್ ಫಾರ್ಮ್ ಯಾವಾಗಲೂ ಮ್ಯಾಟರ್ ಆಗಿಯೇ ಆಗುತ್ತೆ. ಫಾರ್ಮ್​​ನಲ್ಲಿ ಇಲ್ಲದಿದ್ರೆ ಎಷ್ಟೇ ದೊಡ್ಡ ಪ್ಲೇಯರ್ ಆದ್ರೂ ಟಿ-20 ವರ್ಲ್ಡ್​​​ಕಪ್​ಗೆ ಸೆಲೆಕ್ಟ್ ಆಗೋಕೆ ಸಾಧ್ಯವೇ ಇಲ್ಲ.

 

Sulekha