ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ರಿ ಎಂಟ್ರಿ – ಕೆ.ಎಲ್ ಔಟ್, ಹಾರ್ದಿಕ್ ಕನಸು ಭಗ್ನ..!
ಇಂಡಿಯನ್ ಟಿ-20 ಟೀಮ್ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ರಿ ಎಂಟ್ರಿಯಾಗಿದೆ. ರೋಹಿತ್ ಮತ್ತೆ ಕ್ಯಾಪ್ಟನ್ ಆಗಿಯೂ ಕಮ್ಬ್ಯಾಕ್ ಮಾಡ್ತಿದ್ದಾರೆ. ಟಿ-20 ವರ್ಲ್ಡ್ಕಪ್ ಇದೆ. ಆ ದೃಷ್ಟಿಯಿಂದ ಈಗ ರೋಹಿತ್ ಮತ್ತು ಕೊಹ್ಲಿ ಕಮ್ಬ್ಯಾಕ್ ಆಗ್ತಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ.
ಇದನ್ನೂ ಓದಿ: 31 ವರ್ಷಗಳ ನಂತರ ಗೆಲುವು ಸಾಧಿಸಿದ ಟೀಮ್ಇಂಡಿಯಾ – ಸೌತ್ಆಫ್ರಿಕಾ ನೆಲದಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ ಪಡೆ
ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ನಲ್ಲಿ ಎಲ್ಲರ ಚಿತ್ತ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ. ಕಳೆದ ಒಂದೂವರೆ ವರ್ಷಗಳಿಂದ ಇಬ್ಬರೂ ಟೀಂ ಇಂಡಿಯಾ ಪರ ಒಂದೇ ಒಂದು ಟಿ20 ಮ್ಯಾಚ್ ಆಡಿಲ್ಲ. ಆದ್ರೆ ಈ ಬಾರಿಯ ಟಿ20 ವರ್ಲ್ಡ್ಕಪ್ನಲ್ಲಿ ಆಡೋಕೆ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಬಯಸಿದ್ದಾರೆ. ಅದ್ರಲ್ಲೂ ಬಿಸಿಸಿಐ ಅಂತೂ ರೋಹಿತ್ ಶರ್ಮಾರನ್ನೇ ವರ್ಲ್ಡ್ಕಪ್ ಕ್ಯಾಪ್ಟನ್ ಮಾಡೋ ಪ್ಲ್ಯಾನ್ನಲ್ಲಿದೆ. ಹೀಗಾಗಿಯೇ ವಿಶ್ವಕಪ್ಗೂ ಮುನ್ನ ನಡೆಯೋ ಏಕೈಕ ಟಿ20 ಸೀರಿಸ್ ಅಂದ್ರೆ ಅದು ಅಪ್ಘಾನಿಸ್ತಾನದ ವಿರುದ್ಧ ಮಾತ್ರ. ಇದೇ ಕಾರಣಕ್ಕೆ ರೋಹಿತ್ ಮತ್ತು ಕೊಹ್ಲಿಯನ್ನ ಈ ಸೀರಿಸ್ಗೆ ಪಿಕ್ ಮಾಡಲಾಗಿದೆ. ಈಗ ರೋಹಿತ್ ಮತ್ತು ಕೊಹ್ಲಿಗೆ ಇಬ್ಬರಿಗೂ ಅಗ್ನಿ ಪರೀಕ್ಷೆಯಾಗಲಿದೆ. ವರ್ಲ್ಡ್ಕಪ್ ಶುರುವಾಗೋದು ಜೂನ್ನಲ್ಲಿ. ಹೀಗಾಗಿ ಮುಂದಿನ ನಾಲ್ಕು ತಿಂಗಳುಗಳ ಕಾಲವೂ ಎಲ್ಲರ ಫೋಕಸ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆಯೇ ಇರುತ್ತೆ.
ವರ್ಲ್ಡ್ಕಪ್ಗೂ ಮುನ್ನ ಐಪಿಎಲ್ ಟೂರ್ನಿ ನಡೆಯುತ್ತೆ. ಅಲ್ಲೂ ಅಷ್ಟೇ, ಇಬ್ಬರೂ ರನ್ ಹೊಡಿಲೇಬೇಕು. ರೋಹಿತ್ ಮತ್ತು ಕೊಹ್ಲಿಗೆ ಈ ಬಾರಿಯ ಐಪಿಎಲ್ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ. ಯಾಕಂದ್ರೆ ಅಫ್ಘಾನ್ ವಿರುದ್ಧ ಬಿಟ್ರೆ ಟೀಂ ಇಂಡಿಯಾಗೆ ಇನ್ಯಾವುದೇ ಟಿ-20 ಸೀರಿಸ್ಗಳಿಲ್ಲ. ಹೀಗಾಗ ಐಪಿಎಲ್ನಲ್ಲಿ ನಮ್ಮ ಪ್ಲೇಯರ್ಸ್ಗಳ ಪರ್ಫಾಮೆನ್ಸ್ ಮೇಲೆ ಬಿಸಿಸಿಐ ನಿಗಾ ವಹಿಸಲಿದೆ. ಈಗಾಗ್ಲೇ 30 ಮಂದಿ ಆಟಗಾರರ ಲಿಸ್ಟ್ನ್ನ ಕೂಡ ಬಿಸಿಸಿಐ ರೆಡಿ ಮಾಡಿಕೊಂಡಿದೆ. ಈ 30 ಮಂದಿ ಪೈಕಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಇದ್ದಾರೆ. ಒಂದು ವೇಳೆ ಐಪಿಎಲ್ನಲ್ಲಿ ಇಬ್ಬರೂ ಫೇಲ್ ಆದ್ರೆ ವರ್ಲ್ಡ್ಕಪ್ ಸ್ಕ್ವಾಡ್ನಲ್ಲಿ ಏನು ಬೇಕಾದ್ರೂ ಆಗಬಹುದು. ರೋಹಿತ್ ಮತ್ತು ಕೊಹ್ಲಿ ಡ್ರಾಪ್ ಆದ್ರೂ ಆಶ್ಚರ್ಯ ಇಲ್ಲ. ಇವರಿಬ್ಬರಿಗೂ ಇದು ಕೊನೆಯ ಟಿ20 ವರ್ಲ್ಡ್ಕಪ್ ಟೂರ್ನಿಯಾಗಲಿದೆ. ಹೀಗಾಗಿ ಮುಂದಿನ ನಾಲ್ಕು ತಿಂಗಳು, ವರ್ಲ್ಡ್ಕಪ್ ಸ್ಕ್ವಾಡ್ಗೆ ಸೆಲೆಕ್ಷನ್ ಆಗೋವರೆಗೂ ರೋಹಿತ್ ಮತ್ತು ಕೊಹ್ಲಿ ಹಗ್ಗದ ಮೇಲೆಯೇ ನಡೀಬೇಕಾಗುತ್ತೆ. ಯಾಕಂದ್ರೆ ಟಿ20 ಫಾರ್ಮೆಟ್ನಲ್ಲಿ ಆ ಲೆವೆಲ್ಗೆ ಕಾಂಪಿಟೀಶನ್ ಇದೆ. 2022ರಲ್ಲಿ ಟಿ20 ವರ್ಲ್ಡ್ಕಪ್ ಸೆಮಿಫೈನಲ್ನಲ್ಲಿ ಸೋತ ಬಳಿಕ ಟೀಂ ಇಂಡಿಯಾ ಟಿ20 ಟೀಮ್ಗೆ ಸರ್ಜರಿ ಮಾಡೋಕೆ ಬಿಸಿಸಿಐ ಮುಂದಾಗಿತ್ತು. ಟಿ-20ಗೆ ಅಂತಾನೆ ಸಪರೇಟ್ ತಂಡವನ್ನ ರೆಡಿ ಮಾಡೋಕೆ ಕೆಲಸಕ್ಕೆ ಬಿಸಿಸಿಐ ಕೈ ಹಾಕಿತ್ತು. ಆ ಪ್ರಾಸೆಸ್ನ ಕಾರಣವೇ ಕಳೆದ ಒಂದೂವರೆ ವರ್ಷಗಳಿಂದ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಯಾವುದೇ ಟಿ20 ಮ್ಯಾಚ್ಗಳನ್ನ ನೋಡಿಲ್ಲ. ಪ್ರತಿ ಸೀರಿಸ್ನಲ್ಲೂ ಟಿ-20 ಎಕ್ಸ್ಪರ್ಟ್ಗಳನ್ನ ಸೆಲೆಕ್ಟ್ ಮಾಡಿ ಎಕ್ಸ್ಪರಿಮೆಂಟ್ ಮಾಡ್ತಾನೆ. ಇದ್ರು. ಈಗ ರೋಹಿತ್ ಮತ್ತು ಕೊಹ್ಲಿಯನ್ನ ಟೀಂಗೆ ಸೇರಿಸ್ಕೊಂಡು ಇನ್ನೊಂದು ಹಂತದ ಎಕ್ಸ್ಪರಿಮೆಂಟ್ ನಡೀತಾ ಇದೆ. ಟಿ-20 ವರ್ಲ್ಡ್ಕಪ್ ನಲ್ಲಿ ರೋಹಿತ್ ಮತ್ತು ಕೊಹ್ಲಿ ಆಡಿಯೇ ಆಡ್ತಾರೆ ಅಂತಾ 100 ಪರ್ಸೆಂಟ್ ಆಗಿ ಹೇಳೋಕೆ ಸಾಧ್ಯವಿಲ್ಲ. ಐಪಿಎಲ್ವರೆಗೂ ಕಾಯಲೇಬೇಕು..
ಜನವರಿ 11ರಿಂದ ಅಪ್ಘಾನಿಸ್ತಾನ ವಿರುದ್ಧ ಮೂರು ಮ್ಯಾಚ್ಗಳು ಟಿ-20 ಸೀರಿಸ್ಗೆ ಯಾರೆಲ್ಲಾ ಸೆಲೆಕ್ಟ್ ಆಗಿದ್ದಾರೆ. ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿದೆ ಅನ್ನೋದನ್ನ ನೋಡ್ತಾ ಹೋಗೋಣ.
- T20 ಟೀಂ ಇಂಡಿಯಾ
- ರೋಹಿತ್ ಶರ್ಮಾ
- ವಿರಾಟ್ ಕೊಹ್ಲಿ
- ಶುಬ್ಮನ್ ಗಿಲ್
- ಯಶಸ್ವಿ ಜೈಸ್ವಾಲ್
- ತಿಲಕ್ ವರ್ಮಾ
- ಸಂಜು ಸ್ಯಾಮ್ಸನ್
- ರಿಂಕು ಸಿಂಗ್
- ಜಿತೇಶ್ ಶರ್ಮಾ
- ಶಿವಮ್ ದುಬೆ
- ವಾಷಿಂಗ್ಟನ್ ಸುಂದರ್
- ಅಕ್ಸರ್ ಪಟೇಲ್
- ರವಿ ಬಿಷ್ಣೋಯಿ
- ಅರ್ಶ್ದೀಪ್ ಸಿಂಗ್
- ಕುಲ್ದೀಪ್ ಯಾದವ್
- ಅವೇಶ್ ಖಾನ್
- ಮುಕೇಶ್ ಕುಮಾರ್
ಇದು ಅಫ್ಘಾನಿಸ್ತಾನ ವಿರುದ್ಧ ಟಿ-20 ಸೀರಿಸ್ಗೆ ಟೀಂ ಇಂಡಿಯಾದ 15 ಮಂದಿ ಆಟಗಾರರ ಸ್ಕ್ವಾಡ್. ಆದ್ರೆ ಈ ಟೀಂನಲ್ಲೂ ಇನ್ನೂ ಕೆಲ ಪ್ರಮುಖ ಪ್ಲೇಯರ್ಸ್ಗಳು ಇಲ್ಲ. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ ಇವಱರು ಕೂಡ ಅಪ್ಘಾನಿಸ್ತಾನ ವಿರುದ್ಧ ಆಡ್ತಿಲ್ಲ.