20 ಟೀಮ್, 5 ಗ್ರೂಫ್ ರೆಡಿ – ಐಸಿಸಿ ಟಿ-20 ವಿಶ್ವಕಪ್ ಶೆಡ್ಯೂಲ್ ರಿಲೀಸ್

20 ಟೀಮ್, 5 ಗ್ರೂಫ್ ರೆಡಿ – ಐಸಿಸಿ ಟಿ-20 ವಿಶ್ವಕಪ್ ಶೆಡ್ಯೂಲ್ ರಿಲೀಸ್

ಕಳೆದ ವರ್ಷ ಏಕದಿನ ವರ್ಲ್ಡ್​​ಕಪ್.. ಈ ವರ್ಷ ಟಿ-20 ವರ್ಲ್ಡ್​​ಕಪ್​.. ಜೂನ್​ನಲ್ಲಿ ವೆಸ್ಟ್​ಇಂಡೀಸ್​ ಮತ್ತು ಅಮೆರಿಕಾದಲ್ಲಿ ವಿಶ್ವಕಪ್ ನಡೀತಾ ಇದೆ. ಹೀಗಾಗಿ ಐಸಿಸಿ ಶೆಡ್ಯೂಲ್​​ನ್ನ ಕೂಡ ರೆಡಿ ಮಾಡಿದೆ. 2007ರಲ್ಲಿ ಧೋನಿ ಟೀಂ ವರ್ಲ್ಡ್​​ಕಪ್​​ ಗೆದ್ದ ಬಳಿಕ ಟೀಂ ಇಂಡಿಯಾ ಇದುವರೆಗೂ ಟ್ರೋಫಿ ಗೆದ್ದಿಲ್ಲ. ಫಸ್ಟ್ ಟಿ-20 ವರ್ಲ್ಡ್​​ಕಪ್​ನ್ನ ಗೆದ್ದಿದ್ದೇ ಟೀಮ್ ಇಂಡಿಯಾ. ಅದೇ ಲಾಸ್ಟ್ ಕೂಡಾ. ಕಳೆದ 12 ವರ್ಷಗಳಿಂದ ಐಸಿಸಿ ಟ್ರೋಫಿಗಾಗಿ ಭಾರತದ ಕಾಯುತ್ತಿದೆ. 2024ರ ಐಸಿಸಿ ಟಿ-20 ವರ್ಲ್ಡ್​​ಕಪ್​ ಶೆಡ್ಯೂಲ್​ ಕುರಿತು ವಿವರಣೆ ಇಲ್ಲಿದೆ.

ಇದನ್ನೂ ಓದಿ: ಒಂದೂವರೆ ದಿನಕ್ಕೆ ಟೆಸ್ಟ್ ಮ್ಯಾಚ್ ರಿಸಲ್ಟ್ – ಹೀಗೆ ಆದರೆ ಟೆಸ್ಟ್ ಪಂದ್ಯದ ಭವಿಷ್ಯವೇನು?

ಜೂನ್ 1 ರಿಂದ ಜೂನ್​ 29ರವರೆಗೆ 9ನೇ ಟಿ20 ವರ್ಲ್ಡ್​​ಕಪ್​​ ಟೂರ್ನಿ ನಡೆಯಲಿದೆ. ಅಮೆರಿಕದ ಮೂರು ಗ್ರೌಂಡ್​​ಗಳಲ್ಲಿ ಮತ್ತು ವೆಸ್ಟ್​​ಇಂಡೀಸ್​​ನ 6 ಗ್ರೌಂಡ್​​ಗಳಲ್ಲಿ ವಿಶ್ವಕಪ್​​ ಮ್ಯಾಚ್​ಗಳು ನಡೆಯುತ್ತೆ. ಈ ಬಾರಿಯ ಟಿ-20 ವರ್ಲ್ಡ್​ಕಪ್​ ತುಂಬಾನೆ ಸ್ಪೆಷಲ್ ಆಗಿರಲಿದೆ. ಯಾಕಂದ್ರೆ, ಒಟ್ಟು 20 ಟೀಂಗಳಿದ್ದು, ಎ, ಬಿ, ಸಿ, ಡಿ ಹೀಗೆ ಒಟ್ಟು ನಾಲ್ಕು ಗ್ರೂಪ್​​ಗಳನ್ನ ಮಾಡಲಾಗಿದೆ. ಒಂದೊಂದು ಗ್ರೂಪ್​ನಲ್ಲಿ ತಲಾ ಐದು ಟೀಂಗಳಿರುತ್ತೆ. ಇದೇ ಮೊದಲ ಬಾರಿಗೆ ಕ್ರಿಕೆಟ್​​ ವರ್ಲ್ಡ್​​ಕಪ್​ನಲ್ಲಿ 20 ಟೀಂಗಳು ಭಾಗಿಯಾಗ್ತಾ ಇವೆ. ಎಲ್ಲಾ ನಾಲ್ಕು ಗ್ರೂಪ್​​ಗಳಿಂದ ಒಟ್ಟು 2 ಟೀಮ್​ಗಳು ಸೂಪರ್-8 ಸ್ಟೇಜ್​ಗೆ ಎಂಟ್ರಿಯಾಗುತ್ತೆ. ಸೂಪರ್​-8 ಸ್ಟೇಜ್​​ನಲ್ಲಿ ಮತ್ತೆ ಎರಡು ಗ್ರೂಪ್​ಗಳನ್ನ ಮಾಡಲಾಗುತ್ತೆ. ಎರಡೂ ಗ್ರೂಪ್​​ಗಳಲ್ಲೂ ತಲಾ 4 ಟೀಮ್​ಗಳಿರುತ್ತೆ. ಈ ಪೈಕಿ ಎರಡೂ ಗ್ರೂಪ್​​ನ ಟಾಪ್​-2 ಟೀಮ್​ಗಳು ಸೆಮಿಫೈನಲ್​ಗೆ ಎಂಟ್ರಿಯಾಗುತ್ತವೆ.

ಸದ್ಯ ಐಸಿಸಿ ಗ್ರೂಪ್​​ ಸ್ಟೇಜ್​ನ ತಂಡಗಳನ್ನ ಫಿಕ್ಸ್​ ಮಾಡಿ ಟಿ-20 ವರ್ಲ್ಡ್​ಕಪ್​ ಶೆಡ್ಯೂಲ್​ ರಿಲೀಸ್ ಮಾಡಿದೆ. ಕಳೆದ ವರ್ಷ ನಡೆದ ವಂಡೇ ವರ್ಲ್ಡ್​​ಕಪ್​​ನಲ್ಲಿ ಎ,ಬಿ,ಸಿ ಅಂತಾ ಯಾವುದೇ ಗ್ರೂಪ್​ ಇರಲಿಲ್ಲ. ರಾಬಿನ್ ರೌಂಡ್​ ಸ್ಟೇಜ್​ನಲ್ಲಿ ಎಲ್ಲಾ 10 ಟೀಮ್​ಗಳು ಕೂಡ ಪ್ರತಿ ತಂಡವನ್ನ ಕೂಡ ಫೇಸ್​ ಮಾಡಬೇಕಿತ್ತು. ಎಲ್ಲಾ ಟೀಮ್​ಗಳು ತಲಾ 9 ಮ್ಯಾಚ್​​ಗಳನ್ನ ಆಡಿದ್ವು. ಬಳಿಕ ನಾಲ್ಕು ಟೀಂಗಳು ನೇರವಾಗಿ ಸೆಮಿಫೈನಲ್​​ಗೆ ಎಂಟ್ರಿಯಾಗಿತ್ತು. ಟೀಂ ಇಂಡಿಯಾ ಅಂತೂ ರಾಬಿನ್​ ರೌಂಡ್​ ಸ್ಟೇಜ್​ನಲ್ಲಿ ಎಲ್ಲಾ 9 ಮ್ಯಾಚ್​ಗಳನ್ನ ಕೂಡ ಗೆದ್ದಿತ್ತು. ಬಟ್, ಈ ಬಾರಿಯ ಟಿ-20 ವರ್ಲ್ಡ್​​ಕಪ್​​ನಲ್ಲಿ ಮಾತ್ರ ಹಾಗಿಲ್ಲ 4 ಗ್ರೂಪ್​​ಗಳನ್ನ ಮಾಡಿದ್ದಾರೆ. ಯಾಕಂದ್ರೆ ವಂಡೇ ವರ್ಲ್ಡ್​​ಕಪ್​ನಲ್ಲಿ ಆಡಿದ್ದು 10 ತಂಡಗಳು ಮಾತ್ರ. ಆದ್ರೆ ಟಿ-20 ವರ್ಲ್ಡ್​ಕಪ್​ನಲ್ಲಿ ಒಟ್ಟು 20 ಟೀಂಗಳಿರೋದ್ರು 4 ಗ್ರೂಪ್​​ಗಳನ್ನ ಮಾಡೋದು ಅನಿವಾರ್ಯ. ಹೀಗಾಗಿ ಗ್ರೂಪ್​​ ಸ್ಟೇಜ್​ನಲ್ಲಿ ಎಲ್ಲಾ 20 ಟೀಂಗಳು ಕೂಡ ಪರಸ್ಪರ ಫೇಸ್ ಆಗೋದಿಲ್ಲ. ಓನ್ಲಿ, ಆಯಾ ಗ್ರೂಪ್​​ಗಳಲ್ಲಿರೋ ಟೀಂಗಳ ಮಧ್ಯೆಯೇ ಸೂಪರ್​-8 ಸ್ಟೇಜ್​​ಗಾಗಿ ಫೈಟ್ ನಡೆಯುತ್ತೆ ಹಾಗಿದ್ರೆ ಈ 4 ಗ್ರೂಪ್​ಗಳಲ್ಲಿ ಯಾವ್ಯಾವ ಟೀಮ್​ಗಳಿವೆ? ಟೀಂ ಇಂಡಿಯಾದ ಗ್ರೂಪ್​ ಯಾವುದು? ನಮ್ಮ ಗ್ರೂಪ್​​ನಲ್ಲಿ ಇನ್ಯಾವೆಲ್ಲಾ ಟೀಂಗಳಿವೆ. ಟೀಂ ಇಂಡಿಯಾದ ಶೆಡ್ಯೂಲ್ ಹೇಗಿದೆ ಎಂಬ ಬಗ್ಗೆ ಈ ಕೆಳಗೆ ಮಾಹಿತಿಯಿದೆ.

ಟಿ20 ವರ್ಲ್ಡ್​ ಕಪ್ ಗ್ರೂಪ್!

  • GROUP A – ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಅಮೆರಿಕ
  • GROUP B – ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್​ಲ್ಯಾಂಡ್, ಒಮನ್
  • GROUP C – ನ್ಯೂಜಿಲ್ಯಾಂಡ್, ವೆಸ್ಟ್​ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡ, ಪಪುವ ನ್ಯೂಗಿನಿಯಾ
  • GROUP D – ದ.ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್​ ಲ್ಯಾಂಡ್, ನೇಪಾಳ

ಪಾಕಿಸ್ತಾನದ ಜೊತೆಗೆ ಎ ಗ್ರೂಪ್​ನಲ್ಲಿರೋ ಟೀಂ ಇಂಡಿಯಾದ ಮ್ಯಾಚ್​​ ಶೆಡ್ಯೂಲ್​ ಹೇಗಿದೆ? ಗ್ರೂಪ್​ ಸ್ಟೇಜ್​ನಲ್ಲಿ ಯಾವಾಗ ಯಾವ ಟೀಮ್​ ಜೊತೆಗೆ ಆಡಲಿದೆ ಅನ್ನೋದರ ವಿವರಣೆ ಇಲ್ಲಿದೆ.

ಗ್ರೂಪ್ ಚಾಲೆಂಜ್!

  • ಜೂನ್-5 – ಭಾರತ VS ಐರ್ಲೆಂಡ್
  • ಜೂನ್-9 – ಭಾರತ VS ಪಾಕಿಸ್ತಾನ
  • ಜೂನ್-12 – ಭಾರತ VS ಅಮೆರಿಕ
  • ಜೂನ್-15 – ಭಾರತ VS ಕೆನಡಾ

ಭಾರತ ಮತ್ತು ಪಾಕಿಸ್ತಾನ ಎರಡೂ ಟೀಂಗಳು ಸೂಪರ್​-8 ಸ್ಟೇಜ್​​ಗೆ ಕ್ವಾಲಿಫೈಯಾಗೋದಂತೂ ಗ್ಯಾರಂಟಿ ಅಂತಾನೆ ಹೇಳಬಹುದು. ಇನ್ನು ವರ್ಲ್ಡ್​​ಕಪ್​ನ ಫಸ್ಟ್​ ಮ್ಯಾಚ್​​ ಜೂನ್ 1ರಂದು ಅಮೆರಿಕ ಮತ್ತು ಕೆನಡಾ ಮಧ್ಯೆ ನಡೆಯುತ್ತೆ. ಜೂನ್ 19ರಿಂದ ಜೂನ್ 24ರವರೆಗೆ ಸೂಪರ್​-8 ಸ್ಟೇಜ್​ನ ಮ್ಯಾಚ್​​ಗಳು ನಡೆಯಲಿವೆ. ಜೂನ್ 26 ಮತ್ತು ಜೂನ್ 27ಕ್ಕೆ ಸೆಮಿಫೈನಲ್​​ ಮ್ಯಾಚ್​ಗಳಾಗಲಿದ್ದು, ಜೂನ್ 29ಕ್ಕೆ ಬಾರ್ಬಡೋಸ್​​ನಲ್ಲಿ ಟಿ-20 ವರ್ಲ್ಡ್​​ಕಪ್​ನ ಫೈನಲ್ ಮ್ಯಾಚ್ ನಡೆಯುತ್ತೆ.

ಇನ್ನು ಟಿ-20 ಫಾರ್ಮೆಟ್​ಗೆ ಸಂಬಂಧಿಸಿ ವರ್ಲ್ಡ್​​ ಕ್ರಿಕೆಟ್​ನಲ್ಲಿ ನಿಜಕ್ಕೂ ದೊಡ್ಡ ರೆವೆಲ್ಯೂಷನೇ ಆಗ್ತಿದೆ. ಯಾಕಂದ್ರೆ ಈ ಬಾರಿ ಅಮೆರಿಕದಲ್ಲಿ ವರ್ಲ್ಡ್​​ಕಪ್​​ ಹೋಸ್ಟ್ ಮಾಡ್ತಾ ಇದ್ದಾರೆ. ಈ ವಿಚಾರದಲ್ಲಿ ಐಸಿಸಿಯನ್ನ ನಿಜಕ್ಕೂ ಮೆಚ್ಚಲೇಬೇಕು. ಯಾಕಂದ್ರೆ ಕ್ರಿಕೆಟ್​​ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ವಿಸ್ತರಿಸೋಕೆ ಎಲ್ಲಾ ರೀತಿಯ ಪ್ರಯತ್ನಗಳನ್ನ ಕೂಡ ಮಾಡ್ತಾ ಇದ್ದಾರೆ. ಆ್ಯಕ್ಚುವಲಿ ಇಲ್ಲಿ ಐಸಿಸಿಯ ಬೆನ್ನಿಗೆ ನಿಂತಿರೋದು ನಮ್ಮ ಬಿಸಿಸಿಐ. ಎದುರಿಗಷ್ಟೇ ಐಸಿಸಿ..ಹಿಂದೆ ನಿಂತು ಸೂತ್ರಧಾರನಾಗಿರೋದು ಬಿಸಿಸಿಐನೇ. ಅದ್ರಲ್ಲಿ ಯಾವುದೇ ಡೌಟ್ ಇಲ್ಲ. ಕ್ರಿಕೆಟ್ ದೃಷ್ಟಿಯಿಂದ ಒಳ್ಳೇ ಬೆಳವಣಿಗೆ. ಅಮೆರಿಕದಲ್ಲಿ ಟಿ-20 ವರ್ಲ್ಡ್​​ಕಪ್​ನಂಥಾ ಟೂರ್ನಿ ನಡೆಯೋದ್ರಿಂದ ಆರ್ಥಿಕವಾಗಿಯೂ ಕ್ರಿಕೆಟ್​​ಗೆ ಇನ್ನಷ್ಟು ಬಲ ಸಿಗುತ್ತೆ. ಅಮೆರಿಕದಂಥಾ ರಾಷ್ಟ್ರ ಕೂಡ ಕ್ರಿಕೆಟ್ ಆಡೋಕೆ ಶುರು ಮಾಡಿದ್ರೆ, ಅಲ್ಲೂ ಟೂರ್ನಿಗಳು ಆಗಾಗ ನಡೀತಾ ಇದ್ರೆ ಕ್ರಿಕೆಟ್​​ಗೆ ಎಲ್ಲಾ ರೀತಿಯಲ್ಲೂ ಇನ್ನಷ್ಟು ಬೂಸ್ಟ್​ ಸಿಗೋದ್ರಲ್ಲಿ ಯಾವುದೇ ಡೌಟ್ ಇಲ್ಲ.

ಇವೆಲ್ಲದ್ರ ಮಧ್ಯೆ ಇನ್ನೊಂದು ಇಂಪಾರ್ಟೆಂಟ್ ವಿಚಾರವನ್ನ ಹೇಳಲೇಬೇಕು. ವರ್ಲ್ಡ್​ಕಪ್​​ಗೂ ಮುನ್ನ ಟೀಂ ಇಂಡಿಯಾ ಆಡ್ತಿರೋ ಏಕೈಕ ಟಿ-20 ಸೀರಿಸ್ ಅಂದ್ರೆ ಅದು ಅಫ್ಘಾನಿಸ್ತಾನದ ವಿರುದ್ಧ. ಹೀಗಾಗಿ ಆಫ್ಘನ್ ಸೀರಿಸ್​ ಕ್ಯಾಪ್ಟನ್ ಯಾರಾಗ್ತಾರೆ ಅನ್ನೋದೆ ಇಂಟ್ರೆಸ್ಟಿಂಗ್ ಆಗಿದೆ. ಈ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮಹತ್ವದ ಮೀಟಿಂಗ್ ಕೂಡ ನಡೀತಾ ಇದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಜೊತೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್​ಕರ್​ ಚರ್ಚೆ ನಡೆಸಿ ಫೈನಲ್​ ಡಿಸೀಶನ್​​ ತೆಗೆದುಕೊಳ್ಳಲಿದ್ದಾರೆ. ಜೊತೆಗೆ ಆಫ್ಘನ್ ಸೀರಿಸ್​ ಟೀಂ ಇಂಡಿಯಾ ಸ್ಕ್ವಾಡ್​ ಕೂಡ ಇದೇ ವೇಳೆ ಫೈನಲ್ ಆಗಬಹುದು. ಟೋಟಲಿ, ಟಿ-20 ವರ್ಲ್ಡ್​​ಕಪ್​ಗೆ ಶೆಡ್ಯೂಲ್​ ಫಿಕ್ಸ್ ಆಗಿ..ಇತ್ತ​ ಟೀಂ ಇಂಡಿಯಾದ ಪ್ರಿಪರೇಷನ್​​ ಕೂಡ ಶುರುವಾಗಿದೆ. ಐಪಿಎಲ್​​ ಟೂರ್ನಿಯಲ್ಲಿನ ಪರ್ಫಾಮೆನ್ಸ್ ಕೂಡ ಮ್ಯಾಟರ್ ಆಗುತ್ತೆ. ಸೋ ಕ್ರಿಕೆಟ್​​ನಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಡೆವಲಪ್​​ಮೆಂಟ್​ಗಳಾಗಲಿವೆ.

Sulekha