ಮಣಿಪುರದಲ್ಲಿ ಮತ್ತೆ ಸಂಘರ್ಷ – ಭದ್ರತಾ ಪಡೆ, ಬಂಡುಕೋರರ ಮಧ್ಯೆ ಭಾರಿ ಗುಂಡಿನ ಚಕಮಕಿ
ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರದ ಸಂಘರ್ಷ ಮುಂದುವರಿದಿದೆ. ಇದೀಗ ಭಾನುವಾರ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಸೇನಾಪಡೆ ಮತ್ತು ದಂಗೆಕೋರರ ನಡುವೆ ಸಂಘರ್ಷ ನಡೆದಿದೆ ಎಂದು ವರದಿಯಾಗಿದೆ.
ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಮಣಿಪುರದ ಮೊರೆಹ್ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಸೇನಪಡೆ ಹಾಗೂ ದಂಗೆಕೋರರ ಮಧ್ಯೆ ಗುಂಡಿನ ಚಕಮಕಿಯಾಗಿದೆ. ಹಿಲ್ಸ್ ಮೂಲದ ದಂಗೆಕೋರರು ರಾಜ್ಯ ಪೊಲೀಸ್ ಪಡೆಗಳ ಮೇಲೆ ದಾಳಿ ಮಾಡಿದ್ದಾರೆ. ಅದಕ್ಕೆ ಪ್ರತಿಕಾರವಾಗಿ ಸೇನಾಪಡೆ ಕೂಡ ದಾಳಿ ನಡೆಸಿದೆ. ಇದರ ಪರಿಣಾಮವಾಗಿ ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರಿ ಮಳೆಗೆ ತಮಿಳುನಾಡು ತತ್ತರ..! – ಮುಂದಿನ ಏಳು ದಿನ ಭಾರಿ ಮಳೆ ಸಾಧ್ಯತೆ!
ಟೆಂಗ್ನೌಪಾಲ್ ಜಿಲ್ಲೆಯ ಗಡಿ ಪಟ್ಟಣವು ಜನವರಿ 2 ರಂದು ಭಾರೀ ಗುಂಡಿನ ಚಕಮಕಿಯನ್ನು ಕಂಡಿತ್ತು. ಇದರಲ್ಲಿ ಬಿಎಸ್ಎಫ್ ಜವಾನ್ ಸೇರಿದಂತೆ ಆರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಉತ್ತಮ ಚಿಕಿತ್ಸೆಗಾಗಿ ಅವರನ್ನು ವಿಮಾನದಲ್ಲಿ ಇಂಫಾಲ್ಗೆ ಕರೆದೊಯ್ಯಲಾಯಿತು. ಅದಕ್ಕೂ ಮೊದಲು, ಡಿಸೆಂಬರ್ 30 ರಿಂದ ಪಟ್ಟಣವು ಇದೇ ರೀತಿಯ ಗುಂಡಿನ ಚಕಮಕಿ ಪ್ರಕರಣಗಳಿಗೆ ಸಾಕ್ಷಿಯಾಗಿದೆ.