ಹುಬ್ಬಿನ ಕೂದಲು ಚೆನ್ನಾಗಿ ಬೆಳೆಯಲು ಏನ್ ಮಾಡ್ಬೇಕು? – ಹುಬ್ಬು ಸುಂದರವಾಗಿರಲು ಯಾವ ಎಣ್ಣೆ ಹಾಕಬೇಕು?

ಹುಬ್ಬಿನ ಕೂದಲು ಚೆನ್ನಾಗಿ ಬೆಳೆಯಲು ಏನ್ ಮಾಡ್ಬೇಕು? – ಹುಬ್ಬು ಸುಂದರವಾಗಿರಲು ಯಾವ ಎಣ್ಣೆ ಹಾಕಬೇಕು?

ಹುಬ್ಬುಗಳು‌ ಒಪ್ಪವಾಗಿದ್ದರೆ ಮುಖದ ಸೌಂದರ್ಯ ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಐಬ್ರೋ ಮಾಡಿಸುವಾಗ ಮಹಿಳೆಯರು ಹುಬ್ಬುಗಳನ್ನು ಟ್ರಿಮ್ ಮಾಡಿಸಿಕೊಳ್ಳುತ್ತಿರುತ್ತಾರೆ. ಆದರೆ, ಈಗ ತೆಳುವಾದ ಹುಬ್ಬಿಗಿಂತಲೂ ದಪ್ಪ ಹುಬ್ಬುಗಳೇ ಟ್ರೆಂಡ್ ಆಗಿವೆ. ಹಾಗಾದರೆ, ತೆಳುವಾದ ನಿಮ್ಮ ಹುಬ್ಬನ್ನು ದಪ್ಪವಾಗಿ ಕಾಣುವಂತೆ ಮಾಡುವುದು ಹೇಗೆ? ಹುಬ್ಬುಗಳನ್ನು ಮತ್ತೆ ಬೆಳೆಯುವಂತೆ ಮಾಡುವುದು ಹೇಗೆ? ಎಂಬ ಪ್ರಶ್ನೆ ನಿಮಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ.

ಇದನ್ನೂ ಓದಿ: ಮಗುವಿನ‌ ಕಿವಿ ಚುಚ್ಚಿಸೋದು ಏಕೆ? – ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣಗಳೇನು?

ನಿಮ್ಮ ಆಹಾರದಲ್ಲಿ ಕಬ್ಬಿಣ ಮತ್ತು ಪ್ರೋಟೀನ್ ಸೇವನೆಯನ್ನು ಹೆಚ್ಚಿಸುವುದು, ಹುಬ್ಬಿನ ಸೀರಮ್ ಗಳನ್ನು ಹಚ್ಚುವುದು ಮತ್ತು ನೈಸರ್ಗಿಕ ತೈಲಗಳನ್ನು ಬಳಸುವುದರಿಂದ ಹುಬ್ಬಿನ ಕೂದಲು ಮತ್ತೆ ವೇಗವಾಗಿ ಬೆಳೆಯುವಂತೆ ಮಾಡಬಹುದು. ಇದರಿಂದ ತೆಳ್ಳಗಿರುವ ನಿಮ್ಮ ಹುಬ್ಬಿನಲ್ಲಿ ಕೂದಲು ಬೆಳೆದು, ದಪ್ಪವಾಗಿ ಕಾಣುತ್ತದೆ. ಹುಬ್ಬಿನ ಕೂದಲನ್ನು ನೀವು ಕಿತ್ತಷ್ಟೂ ಮತ್ತೆ ಮತ್ತೆ ಬೆಳೆಯುತ್ತಲೇ ಇರುತ್ತದೆ. ಈ ಕೂದಲು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಆದರೆ, ಆ ಎಳೆಯ ಕೂದಲು ನಿಮ್ಮ ಹಳೆಯ ಕೂದಲಿನಷ್ಟು ಉದ್ದ ಹಾಗೂ ದಪ್ಪವಾಗಬೇಕೆಂದರೆ ನೀವು ಕಾಯಬೇಕಾಗುತ್ತದೆ. ಅದರಲ್ಲೂ ಆಲಿವ್ ಮತ್ತು ರೋಸ್ಮರಿ ಎಣ್ಣೆಯಂತಹ ನೈಸರ್ಗಿಕ ತೈಲಗಳು ಹುಬ್ಬಿನ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

Shwetha M