ಮಗುವಿನ ಕಿವಿ ಚುಚ್ಚಿಸೋದು ಏಕೆ? – ಸಂಪ್ರದಾಯದ ಹಿಂದಿನ ವೈಜ್ಞಾನಿಕ ಕಾರಣಗಳೇನು?
ಚಿಕ್ಕ ವಯಸ್ಸಿನಲ್ಲಿಯೇ ಮಗುವಿಗೆ ಕಿವಿಯನ್ನು ಚುಚ್ಚುವುದು ಭಾರತದಲ್ಲಿ ಸಾಮಾನ್ಯ ಪದ್ಧತಿ ಆಗಿದೆ. ಮಗು ಹುಟ್ಟಿದ ಮೂರು ತಿಂಗಳಿಂದ ಒಂದು ವರ್ಷದವರೆಗೆ ಅಥವಾ ಮೂರು ವರ್ಷದಿಂದ ಐದು ವರ್ಷಗಳವರೆಗೆ ಕಿವಿ ಚುಚ್ಚುವ ಪದ್ಧತಿ ಇದೆ. ಅಷ್ಟಕ್ಕೂ ಮಕ್ಕಳಿಗೆ ಕಿವಿಯನ್ನು ಚುಚ್ಚುವುದು ಏಕೆ ಎಂಬ ಪ್ರಶ್ನೆ ಹಲವರಿಗೆ ಇರಬಹುದು. ಇದು ಸಂಪ್ರದಾಯವಷ್ಟೇ ಅಲ್ಲ, ಇದರ ವೈಜ್ಞಾನಿಕ ಕಾರಣನೂ ಇದೆ.
ಇದನ್ನೂ ಓದಿ: ರಾಮಮಂದಿರವಿದ್ದ ಜಾಗದಲ್ಲೇ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಗಿದ್ಯಾ – ಪುರಾತತ್ವ ಇಲಾಖೆ ಉತ್ಖನನದ ವೇಳೆ ಬಯಲಾಗಿದ್ದೇನು?
ಕಿವಿ ಚುಚ್ಚುವುದರಿಂದ ಮಕ್ಕಳ ದೇಹ ಮತ್ತು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಮಕ್ಕಳ ಕಿವಿಗಳು ತುಂಬಾ ಮೃದುವಾಗಿರುವುದರಿಂದ, ಬೆಳ್ಳಿ ಅಥವಾ ಚಿನ್ನದಿಂದ ಮಾಡಿದ ಸಣ್ಣ ಕಿವಿಯೊಲೆಗಳನ್ನು ಬಳಸಬೇಕು. ಇನ್ನು ಕಿವಿ ಚುಚ್ಚಿಸಿ ಕಿವಿಯೊಲೆ ಹಾಕಿಸಿದಾಗ, ಶ್ರವಣೇಂದ್ರಿಯ ನರಗಳು ಉತ್ತೇಜಿಸಲ್ಪಡುತ್ತವೆ. ಮಕ್ಕಳ ಆಂತರಿಕ ತೆರೆಯುವಿಕೆ ಮತ್ತು ಶ್ರವಣ ಸಾಮರ್ಥ್ಯವು ಸುಧಾರಿಸುತ್ತದೆ.
ಇನ್ನು ಬಲ ಮತ್ತು ಎಡ ಮೆದುಳಿನೊಂದಿಗೆ ನೇರವಾಗಿ ಸಂಪರ್ಕಿಸುವ ಕಿವಿ ಹಾಲೆಗಳಲ್ಲಿ ವಿಶೇಷ ಬಿಂದುವಿದೆ. ಆ ಹಂತದಲ್ಲಿ ಕಿವಿ ಚುಚ್ಚಿದಾಗ ಮೆದುಳಿನ ಎರಡೂ ಬದಿಗಳು ಕ್ರಿಯಾಶೀಲವಾಗುತ್ತವೆ. ಇದು ಮೆದುಳಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ ಮತ್ತು ಸುಧಾರಿಸುತ್ತದೆ. ಇನ್ನು ಕಿವಿಗಳ ಮೇಲಿನ ಆಕ್ಯುಪ್ರೆಶರ್ ಪಾಯಿಂಟ್ಗಳು ಶ್ವಾಸಕೋಶ ಮತ್ತು ಉಸಿರಾಟದ ಆರೋಗ್ಯವನ್ನು ಸುಧಾರಿಸುತ್ತವೆ.