11 ಬಾಲ್.. 6 ವಿಕೆಟ್ – ಟೆಸ್ಟ್ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
0..0..0..0..0..0..0.. ಒಟ್ಟು 7 ಜೀರೋ.. 11 ಬಾಲ್ಗಳಲ್ಲಿ 6 ವಿಕೆಟ್.. ಒಂದೇ ಒಂದು ರನ್ ಇಲ್ಲ. ಇದು ಟೀಂ ಇಂಡಿಯಾ ಫಸ್ಟ್ ಇನ್ನಿಂಗ್ಸ್ನಲ್ಲಿ ಔಟಾಗಿರೋ ರೀತಿ.. ಸೌತ್ ಆಫ್ರಿಕಾದಲ್ಲಿ ಟೆಸ್ಟ್ ಸೀರಿಸ್ ಗೆದ್ದು ಇತಿಹಾಸ ಸೃಷ್ಟಿಸುತ್ತಾರೆ ಎಂದರೆ, ಟೀಮ್ ಇಂಡಿಯಾ ಆಟಗಾರರು ಕ್ರಿಕೆಟ್ ಜಗತ್ತಿನಲ್ಲಿ ಇನ್ಯಾರೂ ಸಾಧಿಸದ ಅತ್ಯಂತ ಕೆಟ್ಟ ಸಾಧನೆಯನ್ನ ಮಾಡಿದ್ದಾರೆ. 147 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 11 ಬಾಲ್ಗಳಲ್ಲಿ ಒಂದೇ ಒಂದು ರನ್ ಗಳಿಸದೆ 6 ವಿಕೆಟ್ಗಳನ್ನ ಕಳೆದುಕೊಂಡಿರೋದು ಇದೇ ಮೊದಲು. ಒಂದು ಬ್ರೇಕ್ ವೇಳೆ 153/4 ವಿಕೆಟ್ ಕಳೆದುಕೊಂಡಿದ್ದ ಟೀಂ ಇಂಡಿಯಾ, ಬ್ರೇಕ್ ಮುಗಿದು ವಾಪಸ್ ಆಗಿ ಕೆಲವೇ ನಿಮಿಷಗಳಲ್ಲಿ ಕಂಪ್ಲೀಟ್ ಆಲ್ಔಟ್. ಸೌತ್ ಆಫ್ರಿಕಾ ವಿರುದ್ಧ ಸೆಕೆಂಡ್ ಟೆಸ್ಟ್ನ ಫಸ್ಟ್ ಡೇ ಬಿದ್ದಿರೋದು 23 ವಿಕೆಟ್. ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ಕ್ರಿಕೆಟ್ನ್ನ ಹೀಗೂ ಆಡಬಹುದು ಅಂತಾ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ರೋಹಿತ್-ಕೊಹ್ಲಿಗೆ IPL ಫೈನಲ್! – 30 ಪ್ಲೇಯರ್ಸ್ ಲಿಸ್ಟ್ ಮಾಡಿದ್ದೇಕೆ?
ಹೊಸ ವರ್ಷದ ಆರಂಭದಲ್ಲೇ ಟೀಮ್ ಇಂಡಿಯಾದ ಕಳಪೆ ಸಾಧನೆ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದಿದೆ. ಸೆಕೆಂಡ್ ಟೆಸ್ಟ್ನಲ್ಲಿ ಫಸ್ಟ್ ಸೌತ್ ಆಫ್ರಿಕಾ ಆಟಗಾರರು ಬ್ಯಾಟಿಂಗ್ ಮಾಡಿದ್ದರು. ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ಆಫ್ರಿಕನ್ಸ್ ಕೇವಲ 23.2 ಓವರ್ಗಳನ್ನಷ್ಟೇ ಆಡಿ ಬರೀ 55 ರನ್ಗೆ ಆಲೌಟ್ ಆಗಿದ್ದರು. ಸಿರಾಜ್ಗೆ ಬರೋಬ್ಬರಿ 6 ವಿಕೆಟ್.. 9 ಓವರ್ಗಳಲ್ಲಿ ಕೇವಲ 15 ರನ್ ಕೊಟ್ಟು 6 ವಿಕೆಟ್ ಬಾಚಿಕೊಂಡಿದ್ದರು. ಸಿರಾಜ್ ಬೌಲಿಂಗ್ ನೋಡೋವಾಗ ಶ್ರೀಲಂಕಾ ವಿರುದ್ಧದ ಏಷ್ಯಾಕಪ್ ಫೈನಲ್ ನೆನಪಾಗಿತ್ತು. ಈ ಸೌತ್ ಆಫ್ರಿಕನ್ಸ್ಗೆ ಏನಾಯ್ತಪ್ಪಾ.. ಅವರದ್ದೇ ನೆಲದಲ್ಲಿ ಈ ರೀತಿ ಆಡೋದಾ ಅಂತಾ ಅನ್ನಿಸಿಬಿಟ್ಟಿತ್ತು. ಮ್ಯಾಚ್ ಶುರುವಾಗೋ ಮೊದಲು ಕೊನೆಯ ಟೆಸ್ಟ್ ಆಡ್ತಿರೋ ಡೀನ್ ಎಲ್ಗರ್ ಒಂದು ಮಾತನ್ನ ಹೇಳಿದ್ದರು. ಇದು ನಮಗೆ ತುಂಬಾ ಇಂಪಾರ್ಟೆಂಟ್ ಮ್ಯಾಚ್. ಈ ಪಂದ್ಯವನ್ನ ವರ್ಲ್ಡ್ಕಪ್ ಆಡಿದಂತೆ ಆಡ್ತೀವಿ ಅಂತಾ.
ವರ್ಲ್ಡ್ಕಪ್ನಲ್ಲಿ ಸೌತ್ ಆಫ್ರಿಕನ್ಸ್ ಯಾವ ರೀತಿ ಆಡ್ತಾರೆ ಅನ್ನೋದು ಗೊತ್ತಲ್ಲ. ಫಸ್ಟ್ ಇನ್ನಿಂಗ್ಸ್ನಲ್ಲಂತೂ ಅದೇ ರೀತಿ ಚೋಕರ್ಸ್ಗಳಂತೆಯೇ ಆಡಿದ್ರು..1932ರ ಬಳಿಕ ಟೆಸ್ಟ್ನಲ್ಲಿ ಇದು ಸೌತ್ ಆಫ್ರಿಕಾದ ಅತ್ಯಂತ ಲೋವೆಸ್ಟ್ ಸ್ಕೋರ್.. ಟೆಸ್ಟ್ ಕ್ರಿಕೆಟ್ನಲ್ಲಿ.. ಓಕೆ ಕೇವಲ 55 ರನ್ಗೆ ಹರಿಣಗಳನ್ನ ಬೇಟೆಯಾಡಿ, ಲಂಚ್ ಮಾಡಿ ನಮ್ಮವರು ಖುಷಿ ಖುಷಿಯಾಗಿ ಬ್ಯಾಟಿಂಗ್ಗೆ ಇಳಿದ್ರು.
ರೋಹಿತ್ ಶರ್ಮಾ..ಇನ್ನೂ ವರ್ಲ್ಡ್ಕಪ್ ಮೂಡ್ನಲ್ಲೇ ಇದ್ದಾರೆ. ಆರಂಭದಿಂದಲೇ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸೋಕೆ ಶುರು ಮಾಡಿದ್ದರು. ಕವರ್ ಡ್ರೈವ್..ಪುಲ್ ಶಾಟ್.. ಮೇಲಿಂದ ಮೇಲೆ ಬೌಂಡರಿ. ಅಂಥಾ ಬೌಲಿಂಗ್ ಪಿಚ್ನಲ್ಲಿ ರೋಹಿತ್ ಆಡಿದ್ದನ್ನ ನೋಡಿದ್ರು ಪಿಚ್ ಯೂ ಟರ್ನ್ ಹೊಡೀತಾ ಅನ್ನಿಸಿಬಿಡ್ತು. 50 ಬಾಲ್ಗಳಲ್ಲಿ 39 ರನ್.. ರೋಹಿತ್ ಹೊಡೆದಿದ್ದು 7 ಬೌಂಡರಿ.. ಮೊದಲ 10 ಓವರ್ಗಳಲ್ಲೇ ಸೌತ್ ಆಫ್ರಿಕಾ ಸ್ಕೋರ್ನ್ನ ದಾಟಿ ಟೀಂ ಇಂಡಿಯಾ ಲೀಡ್ ಪಡೆದುಕೊಂಡಿತ್ತು. ಆದ್ರೆ ರೋಹಿತ್ ಜೊತೆಗೆ ಬಂದಿದ್ದ ಜೈಸ್ವಾಲ್ ಸೊನ್ನೆಗೆ ಔಟಾದರು.. ಮತ್ತೊಮ್ಮೆ ಫೇಲ್. ಇನ್ನು ಶುಬ್ಮನ್ ಗಿಲ್ ಪರ್ವಾಗಿಲ್ಲ 36 ರನ್ ಹೊಡೆದ್ರು. ರೋಹಿತ್ ಮತ್ತು ಗಿಲ್ ಔಟಾಗ್ತಾ ಇದ್ದಂತೆ ನಂತರ ವಿರಾಟ್ ಕೊಹ್ಲಿ ನಿಂತು ಆಡೋಕೆ ಶುರುಮಾಡಿದ್ರು. ಆದ್ರೆ ಶ್ರೇಯಸ್ ಅಯ್ಯರ್ ಸಾಥ್ ಕೊಟ್ಟಿಲ್ಲ.. ಜೀರೋ…. ಬ್ರೇಕ್ ವೇಳೆಗೆ ಕೆಎಲ್ ರಾಹುಲ್ 8 ರನ್ಗಳಿಸಿ, 46 ರನ್ ಮಾಡಿದ್ದ ಕೊಹ್ಲಿ ಜೊತೆ ಕ್ರೀಸ್ನಲ್ಲಿದ್ರು. ಸರಿ ಬ್ರೇಕ್ ಆದ್ಮೇಲೆ ಕೊಹ್ಲಿ-ರಾಹುಲ್ ಮತ್ತೊಮ್ಮೆ ಇನ್ನಿಂಗ್ಸ್ ಬಿಲ್ಡ್ ಮಾಡ್ತಾರೆ ಅಂತಾನೆ ಅಂದುಕೊಳ್ಳಲಾಗಿತ್ತು. ಆದ್ರೆ ಆಮೇಲೆ ನಡೆದಿದ್ದೇ ಒಂದು ಇತಿಹಾಸ. ಭಾರತದ ಆಟಗಾರರು ಹೊಸ ವಿಶ್ವದಾಖಲೆಯನ್ನೇ ಬರೆದುಬಿಟ್ರು.
ಬ್ರೇಕ್ ಬಳಿಕ ಕ್ರೀಸ್ಗಿಳಿದ ರಾಹುಲ್ ಔಟಾದ್ರು.. ನಂತರ ರವೀಂದ್ರ ಜಡೇಜಾ 0.. ಜಸ್ಪ್ರಿತ್ ಬುಮ್ರಾ 0.. ಮೊಹಮ್ಮದ್ ಸಿರಾಜ್ 0.. ಪ್ರಸಿಧ್ ಕೃಷ್ಣ 0.. ಮುಕೇಶ್ ಕುಮಾರ್ 0…. ಎಲ್ಲರೂ ಝೀರೋ ಪರೇಡ್ ಮಾಡ್ತಿದ್ದಿದ್ದನ್ನ ನೋಡಿ ಕೊಹ್ಲಿಗೆ ಶಾಕ್..ಮನಸ್ಸಲ್ಲೇ ಅಂದುಕೊಂಡಿರ್ತಾರೆ.. ಹೇ ಪ್ರಭು ಹೇ ಹರೀ ರಾಮ್ ಕೃಷ್ಣ ಜಗನ್ನಾಥ್ ಯೇ ಕ್ಯಾಹುವಾ.. ಪಾಪ ಕೊಹ್ಲಿ ಅತ್ತ ಸಿರಾಜ್ ನಾನ್ಸ್ಟ್ರೈಕ್ಗೆ ಬಂದಿದ್ದಾಗ ಒಂದಷ್ಟು ರನ್ ಆದ್ರೂ ಮಾಡೋಣ ಅಂತಾ ಹೊಡಿಯೋಕೆ ಹೋಗಿ ನಮ್ಮ ಕಿಂಗ್ ಔಟಾದ್ರು.
ಫೈನಲಿ 11 ಬಾಲ್ಗಳಲ್ಲಿ 6 ವಿಕೆಡ್ ಢಮಾರ್.. ನೋ ಸ್ಕೋರ್.. ಟೋಟಲ್ 153ಕ್ಕೆ ಟೀಂ ಇಂಡಿಯಾ ಆಲ್ಔಟ್. ಹೋಗ್ಲಿ ಬಿಡಿ.. 20 ವಿಕೆಟ್ ಬಿದ್ದು.. ಸೌತ್ ಆಫ್ರಿಕಾದ ಸೆಕೆಂಡ್ ಇನ್ನಿಂಗ್ಸ್ ಶುರುವಾಗೇ ಬಿಡ್ತು.. ಮೊದಲ ದಿನದಾಟದ ಅಂತ್ಯದ ವೇಳೆ ಮೂರು ವಿಕೆಟ್ ಕಳ್ಕೊಂಡಿದ್ರು. ಕೊನೆಯ ಟೆಸ್ಟ್ ಆಡ್ತಿರೋ ಡೀನ್ ಎಲ್ಗರ್ 12 ರನ್ಗೆ ಔಟಾದ್ರು. ಆಯ್ತು ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಗರ್ ಯಾವತ್ತೂ ಬ್ಯಾಟ್ ಮುಟ್ಟೋದೆ ಇಲ್ಲ. ವಿರಾಟ್ ಕೊಹ್ಲಿ ಕ್ಯಾಚ್ ಹಿಡಿದ್ರೂ ಕೂಡ ಸೆಲೆಬ್ರೇಟ್ ಮಾಡಿಲ್ಲ. ನೇರವಾಗಿ ಎಲ್ಗರ್ ಬಳಿಗೆ ಹೋಗಿ ಹಗ್ ಮಾಡಿ ಬೀಳ್ಕೊಟ್ರು.