ರಾಮನ 14 ವರ್ಷಗಳ ವನವಾಸದಿಂದ ಕಲಿಯಬೇಕಿದೆ ಜೀವನ ಪಾಠ – ಸಂದರ್ಭ ಹೇಗೆಯೇ ಇರಲಿ ಬದುಕು ಸಾಗುತ್ತಿರಬೇಕು..!
ರಾಮನ 14 ವರ್ಷಗಳ ವನವಾಸದಿಂದ ಕಲಿಯಬೇಕಾಗಿರೋ ಜೀವನ ಪಾಠ ಕೂಡ ಸಾಕಷ್ಟಿದೆ. ಇದ್ರ ಅರ್ಥ, ಜೀವನದ ಪ್ರತಿ ಹಂತದಲ್ಲೂ ಹೊಸತನ್ನ ಕಲಿಯುತ್ತಾ ಸಾಗಬೇಕು. ಸಂದರ್ಭ ಹೇಗೆಯೇ ಇರಲಿ, ಪರಿಸ್ಥಿತಿ ಎಂಥದ್ದೇ ಇರಲಿ, ಜೀವನ ಅನುಭವಿಸೋದನ್ನ ಮತ್ತು ಜ್ಞಾನ ಸಂಪಾದನೆಯನ್ನ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಅನ್ನೋದನ್ನ ರಾಮನನ್ನ ನೋಡಿ ಕಲಿಯಬಹುದು.
ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಆಯ್ಕೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ! – ಪೇಜಾವರ ಶ್ರೀ
ವನವಾಸದ ಸಂದರ್ಭದಲ್ಲಿ ಶ್ರೀರಾಮ ಲಕ್ಷ್ಮಣನ ಜೊತೆಗೂಡಿ ಚಿತ್ರಕೂಟದ ಬೆಟ್ಟ ಪ್ರದೇಶಕ್ಕೆ ತೆರಳಿ ಮಹರ್ಷಿ ವಾಲ್ಮೀಕಿಯವರನ್ನ ಭೇಟಿಯಾಗಿದ್ದ. ಮಹರ್ಷಿ ವಾಲ್ಮೀಕಿಯವರಿಂದ ಸಾಕಷ್ಟು ಲೋಕ ಜ್ಞಾನ ರಾಮನಿಗೆ ಸಿಗುತ್ತೆ. ವನವಾಸದ ಬಹುತೇಕ ಸಮಯವನ್ನ ರಾಮ ದಂಡಕಾರಣ್ಯದಲ್ಲೇ ಕಳೆದಿದ್ರು. ಅಲ್ಲೂ ಸಾಕಷ್ಟು ಋಷಿಮುನಿಗಳನ್ನ ಭೇಟಿಯಾಗಿ ತಪ್ಪಸ್ಸು ಮತ್ತು ಶಸ್ತ್ರಾಸ್ತ್ರ ಬಳಕೆಯನ್ನ ಕಲಿತುಕೊಳ್ಳುತ್ತಾನೆ.
ಕೈಕೇಯಿ ಯಿಂದಾಗಿ ಶ್ರೀರಾಮನಿಗೆ ಅಂದು ಅದೇನೇ ಸವಾಲುಗಳು ಎದುರಾಗಿದ್ದಿರಬಹುದು. 14 ವರ್ಷ ವನವಾಸ ಅನುಭವಿಸರಬಹುದು. ಆದ್ರೆ ಇಂದು ಶ್ರೀರಾಮನನ್ನ ದೇವರಂತೆ ಜನ ಪೂಜಿಸ್ತಾ ಇದ್ದಾರೆ ಅಂದ್ರೆ ಅದಕ್ಕೆ ಕಾರಣ ಶ್ರೀರಾಮ ಬದುಕಿದ ರೀತಿ. ಶ್ರೀರಾಮನ ಒಳ್ಳೆಯ ಗುಣ. 14 ವರ್ಷ ವನವಾಸ ಅನುಭವಿಸಿದ ಕಾರಣವೇ ಶ್ರೀರಾಮನಲ್ಲಿ ಜನರು ಭಗವಂತನನ್ನ ಕಾಣ್ತಾ ಇದ್ದಾರೆ. ನಿಮಗೆ ನೆನಪಿರಬಹುದು. ಲಾಕ್ಡೌನ್ ಸಂದರ್ಭದಲ್ಲಿ ದೂರದರ್ಶನ ಚಾನಲ್ನಲ್ಲಿ ರಾಮಾಯಣ ಸೀರಿಸ್ನ್ನ ಪ್ರಸಾರ ಮಾಡಲಾಗಿತ್ತು. ಲಾಕ್ಡೌನ್ನನ್ನ ಕಲಿಯುಗದ ವನವಾಸ ಅಂತಾನೆ ಹೇಳಲಾಗ್ತಾ ಇತ್ತು. ಹೇಗಾಗಿ ಜನರಿಗೆ ಲಾಕ್ಡೌನ್ ಸಮಯವನ್ನ ಯಾವ ರೀತಿ ಕಳಿಯಬೇಕು. ರಾಮನಿಂದ ಸ್ಫೂರ್ತಿ ಸಿಗಲಿ ಅನ್ನೋ ಕಾರಣಕ್ಕೆ ಅಂದು ರಾಮಾಯಣವನ್ನ ಪ್ರಸಾರ ಮಾಡಲಾಗಿತ್ತು. ಹೀಗಾಗಿ 14 ವರ್ಷಗಳ ಶ್ರೀರಾಮನ ವನವಾಸ ಅನ್ನೋದು ಪ್ರತಿಯೊಬ್ಬರಿಗೂ ಜೀವನ ಪಾಠವಾಗಿದೆ ಅನ್ನೋದ್ರಲ್ಲಿ ಯಾವುದೆ ಅನುಮಾನ ಇಲ್ಲ.