ಇಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ ಪ್ರತಿ ತಿಂಗಳು 9250 ರೂ.! – ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಲಾಭವೇನು?
ದುಡಿದ ಹಣವನ್ನು ಜೋಪಾನವಾಗಿಟ್ಟುಕೊಂಡರೆ ಮಾತ್ರ ಜೀವನದಲ್ಲಿ ಆರ್ಥಿಕ ಸಂಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು.. ಅದರಲ್ಲೂ ಹಣ ಉಳಿತಾಯ ಮಾಡುವಾಗ ಹಲವು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.. ನಿಮ್ಮ ನಿರ್ಧಾರ ಸರಿಯಾಗಿದ್ದರೆ, ನಿಮಗೆ ಟೆನ್ಷನ್ ಫ್ರೀಯಾಗಿ ರಿಟರ್ನ್ಸ್ ಕೂಡ ಸಿಗುತ್ತದೆ.. ಸಾಮಾನ್ಯವಾಗಿ ಹಲವರು ಖಾಸಗಿ ಸಂಸ್ಥೆಗಳಲ್ಲಿ ಅಥವಾ ರಿಯಲ್ ಎಸ್ಟೇಟ್ನಲ್ಲಿ ಹಣ ಹೂಡಿಕೆ ಮಾಡ್ತಾರೆ.. ಆದ್ರೆ ಇದ್ರಲ್ಲಿ ರಿಸ್ಕ್ ಫ್ಯಾಕ್ಟರ್ ಜಾಸ್ತಿ.. ಇದೇ ಕಾರಣಕ್ಕೆ ಹೆಚ್ಚಿನವರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಇಷ್ಟ ಪಡುತ್ತಾರೆ.. ಇಂತವರಿಗಾಗಿ ಅಂಚೆ ಇಲಾಖೆಯು ಹೊಸ ವರ್ಷಕ್ಕೆ ಹೊಸ ಉಳಿತಾಯ ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾದರೆ ಈ ಯೋಜನೆ ಏನು? ಇದರಲ್ಲಿ ಹೂಡಿಕೆ ಮಾಡಲು ಏನು ಮಾಡಬೇಕು ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಬೆಳಗ್ಗಿನ ಸಿಹಿತಿಂಡಿ ಬ್ರೇಕ್ ಫಾಸ್ಟ್..! – ಆರೋಗ್ಯ ಕತೆಯೇನು?
ಅಂಚೆ ಕಚೇರಿಯ ಮಾಸಿಕ ಉಳಿತಾಯ ಯೋಜನೆ ಬಗ್ಗೆ ಜನರಲ್ಲೀಗ ಆಸಕ್ತಿ ಜಾಸ್ತಿಯಾಗುತ್ತಿದೆ.. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು 9250 ರೂಪಾಯಿಗಳನ್ನು ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಬಹುದು. ಅಲ್ಲದೆ ಗಂಡ ಹೆಂಡತಿ ಇಬ್ಬರು ಜೊತೆಯಾಗಿ ಜಂಟಿ ಖಾತೆ ಬೇಕಾದರೂ ಆರಂಭಿಸಬಹುದಾಗಿದೆ. ಅಂದಹಾಗೆ ಮಾಸಿಕ ಉಳಿತಾಯ ಯೋಜನೆ ಯಲ್ಲಿ ಒಮ್ಮೆ ಹೂಡಿಕೆ ಮಾಡಿದ ನಂತರ ಅದು ಮೆಚುರಿಟಿ ಬರುವ ಮುನ್ನವೇ ಆ ಹಣವನ್ನು ವಾಪಸ್ ಪಡೆಯಲು ಅವಕಾಶವಿದೆ.. ಆದರೆ ಅದಕ್ಕೆ ಕೆಲವೊಂದು ಮುಖ್ಯವಾದ ಕಂಡೀಷನ್ಗಳಿವೆ..
ಹೂಡಿಕೆ ಮಾಡಿದ ಒಂದು ವರ್ಷದ ವರೆಗೆ ಹಣ ಹಿಂಪಡೆಯಲು ಅವಕಾಶವಿಲ್ಲ. ಒಂದು ವರ್ಷದ ನಂತರ ಬೇಕಾದರೆ ಹಣ ವಿತ್ಡ್ರಾ ಮಾಡಬಹುದು. ಹಾಗಿದ್ದರೂ ಈ ರೀತಿ ವಿತ್ಡ್ರಾ ಮಾಡಿದರೆ ನಿಮಗೆ ನಷ್ಟವಾಗುತ್ತದೆ. ಯಾಕೆಂದರೆ ನೀವು ಕಟ್ಟಿದ ಹಣ ಪೂರ್ತಿಯಾಗಿ ಸಿಗೋದಿಲ್ಲ.. ಹೂಡಿಕೆ ಮಾಡಲು ಪ್ರಾರಂಬಿಸಿದ ಒಂದು ವರ್ಷದಿಂದ ಮೂರು ವರ್ಷದ ಒಳಗೆ ಹಣ ಹಿಂಪಡೆದರೆ ಶೇ. 2ರಷ್ಟು ಹಣವನ್ನು ದಂಡದ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ. ಮೂರು ವರ್ಷದಿಂದ ಐದು ವರ್ಷದ ಒಳಗೆ ಹಣ ವಾಪಸ್ ಪಡೆಯಲು ಇಚ್ಚಿಸಿದರೆ ಶೇ. 1ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ.
ಇನ್ನು ಅಂಚೆ ಇಲಾಖೆ ಜಾರಿಗೆ ತಂದಿರುವ ಮಾಸಿಕ ಉಳಿತಾಯ ಯೋಜನೆ ಅಡಿಯಲ್ಲಿ ನೀವು 9 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ ನಂತರ ಶೇ.7.4 ರಷ್ಟು ಬಡ್ಡಿ ಸಿಗಲಿದೆ. ಅಂದರೆ ಪ್ರತಿ ತಿಂಗಳು ಐದುವರೆ ಸಾವಿರ ರೂಪಾಯಿ ಸಿಗಲಿದೆ. ಒಂದು ವೇಳೆ 15 ಲಕ್ಷ ರೂ. ಹೂಡಿಕೆ ಮಾಡಿದಲ್ಲಿ ನಿಮಗೆ ಪ್ರತಿ ತಿಂಗಳು 9250 ರೂ. ಸಿಗಲಿದೆ. ಅಲ್ಲದೆ ಜಂಟಿಯಾಗಿ ಹೂಡಿಕೆ ಮಾಡಿದಲ್ಲಿ ಇನ್ನು ಹೆಚ್ಚಿನ ಲಾಭ ಗಳಿಸುವ ಅವಕಾಶ ಸಿಗಲಿದೆ.