ರೋಹಿತ್-ಕೊಹ್ಲಿಗೆ IPL ಫೈನಲ್! – 30 ಪ್ಲೇಯರ್ಸ್ ಲಿಸ್ಟ್ ಮಾಡಿದ್ದೇಕೆ?
ಟೀಂ ಇಂಡಿಯಾ ಸದ್ಯ ಸೌತ್ ಆಫ್ರಿಕಾ ಟೂರ್ನಲ್ಲಿದ್ರೂ ಕೂಡ ಇತ್ತ ಬಿಸಿಸಿಐನ ಫೋಕಸ್ ಮಾತ್ರ ಕಂಪ್ಲೀಟ್ ಆಗಿ ಐಪಿಎಲ್ ಮತ್ತು ಟಿ-20 ವರ್ಲ್ಡ್ಕಪ್ನತ್ತ ಶಿಫ್ಟ್ ಆಗಿದೆ. ಟಿ-20 ವಿಶ್ವಕಪ್ನ ಟೀಂ ಸೆಲೆಕ್ಷನ್ ಮಾಡೋದೆ ಬಿಸಿಸಿಐಗೆ ದೊಡ್ಡ ಚಿಂತೆಯಾಗಿದೆ. ಟಿ-20 ವರ್ಲ್ಡ್ಕಪ್ಗೂ ಮುನ್ನ ಟೀಂ ಇಂಡಿಯಾ ಆಡ್ತಿರೋ ಏಕೈಕ ಟಿ-20 ಸೀರಿಸ್ ಅಂದ್ರೆ ಅದು ಅಫ್ಘಾನಿಸ್ತಾನದ ವಿರುದ್ಧ. ಹೀಗಾಗಿ ಆಫ್ಘಾನಿ ವಿರುದ್ಧದ ಸೀರಿಸ್ಗೆ ಟೀಂ ಇಂಡಿಯಾ ಸ್ಕ್ವಾಡ್ನಲ್ಲಿ ಯಾರೆಲ್ಲಾ ಇರ್ತಾರೆ ಅನ್ನೋದು ಕೂಡ ತುಂಬಾನೆ ಇಂಪಾರ್ಟೆಂಟ್ ಆಗುತ್ತೆ. ಯಾಕಂದ್ರೆ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್ ಮುಂಬರುವ ಟಿ-20 ವರ್ಲ್ಡ್ಕಪ್ನ್ನ ಗಮನದಲ್ಲಿಟ್ಟುಕೊಂಡೇ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ಗೆ ಪ್ಲೇಯರ್ಸ್ಗಳನ್ನ ಸೆಲೆಕ್ಟ್ ಮಾಡೋಕೆ ಪ್ಲ್ಯಾನ್ ಮಾಡ್ತಾ ಇದ್ದಾರಂತೆ. ಅದ್ರಲ್ಲೂ ಟೀಂ ಇಂಡಿಯಾದ ಇಬ್ಬರು ಸೀನಿಯರ್ ಪ್ಲೇಯರ್ಸ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೊತೆಗೆ ಬಿಸಿಸಿಐ ಸಭೆ ಬೇರೆ ನಡೆಸಲಿದೆ. ಹಾಗಿದ್ರೆ ಇಲ್ಲಿ ಬಿಸಿಸಿಐನ ಪ್ಲ್ಯಾನ್ ಏನು? ರೋಹಿತ್ ಮತ್ತು ಕೊಹ್ಲಿ ಟಿ-20 ವರ್ಲ್ಡ್ಕಪ್ ಆಡ್ತಾರಾ? ಇಲ್ವಾ? ಆಫ್ಘನ್ ಸೀರಿಸ್ಗೆ ಇಬ್ಬರನ್ನೂ ಸೆಲೆಕ್ಟ್ ಮಾಡಲಾಗುತ್ತಾ? ಇಲ್ಲಾ ಡ್ರಾಪ್ ಆಗ್ತಾರಾ? ಇವೆಲ್ಲದರ ಕುರಿತ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಟೀಮ್ ಇಂಡಿಯಾ ಪಾಲಿಗೆ ಮಾರಕವಾಗುತ್ತಾ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದ ಪಿಚ್ – ಹಸಿರು ಪಿಚ್ನಲ್ಲಿ ಮ್ಯಾಜಿಕ್ ಮಾಡುತ್ತಾ ಭಾರತ
ಸೌತ್ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 2ನೇ ಟೆಸ್ಟ್ ಮ್ಯಾಚ್ ಆಡೋ ಹೊತ್ತಲ್ಲೇ ಅಜಿತ್ ಅಗರ್ಕರ್ ಮತ್ತು ಸೆಲೆಕ್ಷನ್ ಕಮಿಟಿ ಟೀಂ ದಕ್ಷಿಣ ಆಫ್ರಿಕಾದಲ್ಲಿ ಬೀಡುಬಿಟ್ಟಿದೆ. ಯಾವುದೇ ಕ್ಷಣದಲ್ಲಿದಲ್ಲಿ ಬೇಕಾದ್ರೂ ಬಿಸಿಸಿಐ ಸೆಲೆಕ್ಷನ್ ಕಮಿಟಿ ಕ್ರೂಶಿಯಲ್ ಮೀಟಿಂಗ್ ನಡೆಸಲಿದೆ. ಈ ಮೀಟಿಂಗ್ನಲ್ಲಿ ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾಗಿಯಾಗಲಿದ್ದಾರೆ. ಮೂವರ ಜೊತೆಗೂ ಚರ್ಚೆ ನಡೆಸಿ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸೀರಿಸ್ಗೆ ಟೀಂ ಇಂಡಿಯಾ ಸ್ಕ್ವಾಡ್ನ್ನ ಫೈನಲ್ ಮಾಡಲಿದ್ದಾರೆ. ಇಲ್ಲಿ ರೋಹಿತ್ ಮತ್ತು ವಿರಾಟ್ ಜೊತೆಗೆ ಸೆಲೆಕ್ಷನ್ ಕಮಿಟಿ ಚರ್ಚೆ ನಡೆಸೋದಕ್ಕೂ ಒಂದು ಮಹತ್ವದ ಕಾರಣ ಇದೆ. ಇಬ್ಬರೂ ಸೀನಿಯರ್ ಕ್ರಿಕೆಟರ್ಸ್ ಕಳೆದ ಒಂದೂವರೆ ವರ್ಷದಿಂದ ಟೀಂ ಇಂಡಿಯಾ ಪರ ಯಾವುದೇ ಟಿ20 ಮ್ಯಾಚ್ಗಳನ್ನ ಆಡಿಲ್ಲ. ಹೀಗಾಗಿ ಈ ವರ್ಷ ನಡೆಯೋ ಟಿ-20 ವರ್ಲ್ಡ್ಕಪ್ನಲ್ಲಿ ಆಡೋಕೆ ಬಯಸ್ತೀರಾ, ಇಲ್ವಾ ಅನ್ನೋ ಬಗ್ಗೆ ರೋಹಿತ್ ಮತ್ತು ಕೊಹ್ಲಿಯಿಂದ ಕ್ಲ್ಯಾರಿಟಿ ಪಡೆದುಕೊಳ್ಳೋ ಸಾಧ್ಯತೆ ಇದೆ. ಒಂದು ವರ್ಲ್ಡ್ಕಪ್ನಲ್ಲಿ ಆಡೋಕೆ ಬಯಸಿದ್ರೆ ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ಗೆ ಇಬ್ಬರನ್ನೂ ಸೆಲೆಕ್ಟ್ ಮಾಡೋ ವಿಚಾರವಾಗಿಯೂ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬಹುದು. ಟಿ-20 ವರ್ಲ್ಡ್ಕಪ್ಗೆ ಟೀಂ ಇಂಡಿಯಾ ಕ್ಯಾಪ್ಟನ್ಸಿ ವಿಚಾರವಾಗಿ ಬಿಸಿಸಿಐನ ಫಸ್ಟ್ ಪ್ರಯಾರಿಟಿ ಆಗಿರೋದೆ ರೋಹಿತ್ ಶರ್ಮಾ.
ಇನ್ನು ಅಫ್ಘಾನಿಸ್ತಾನ ವಿರುದ್ಧದ ಸೀರಿಸ್ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ಇಬ್ಬರೂ ಆಡೋದಿಲ್ಲ. ಹೀಗಾಗಿ ಅಫ್ಘನ್ ಸೀರಿಸ್ಗೆ ಟೀಂ ಇಂಡಿಯಾವನ್ನ ಯಾರು ಲೀಡ್ ಮಾಡ್ತಾರೆ ಅನ್ನೋದು ಈಗಿರುವ ಪ್ರಶ್ನೆ. ಮೋಸ್ಟ್ಲಿ ಅಫ್ಘನ್ ವಿರುದ್ಧ ರೋಹಿತ್ ಶರ್ಮಾಗೆ ತಂಡವನ್ನ ಲೀಡ್ ಮಾಡುವಂತೆ ಬಿಸಿಸಿಐ ಸೂಚಿಸಿದ್ರೂ ಆಶ್ಚರ್ಯ ಇಲ್ಲ. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಅಫ್ಘಾನಿಸ್ತಾನ 3 ಟಿ20 ಮ್ಯಾಚ್ಗಳನ್ನ ಆಡಿದ್ರೂ ಆಡಬಹುದು. ಈ ಮೂಲಕ ಟಿ-20 ಫಾರ್ಮೆಟ್ನಲ್ಲಿ ಇಬ್ಬರ ಪರ್ಫಾಮೆನ್ಸ್ ಮತ್ತು ಫಿಟ್ನೆಸ್ನ್ನ ಚೆಕ್ ಮಾಡುವ ಸಾಧ್ಯತೆ ಇದೆ.
IPL ಬಳಿಕವೇ ವರ್ಲ್ಡ್ ಕಪ್ ಟೀಂ ಫೈನಲ್!
ಇಲ್ಲಿ ಇನ್ನೊಂದು ಇಂಪಾರ್ಟೆಂಟ್ ವಿಚಾರ ಕೂಡ ಇದೆ. ಟಿ-20 ವರ್ಲ್ಡ್ಕಪ್ಗೂ ಮುನ್ನ ಐಪಿಎಲ್ ಟೂರ್ನಿ ನಡೆಯುತ್ತೆ. ಮಾರ್ಚ್ ಮತ್ತು ಮೇನಲ್ಲಿ ಐಪಿಎಲ್ ನಡೆಯಲಿದೆ. ಈ ವೇಳೆ ಭಾರತೀಯ ಕ್ರಿಕೆಟಿಗರು ನೀಡುವ ಪರ್ಫಾಮೆನ್ಸ್ ತುಂಬಾನೆ ಕ್ರೂಶಿಯಲ್ ಆಗಿರಲಿದೆ. ಸುಮಾರು 30 ಟಿ-20 ಸ್ಪೆಷಲಿಸ್ಟ್ ಪ್ಲೇಯರ್ಗಳ ಮೇಲೆ ಬಿಸಿಸಿಐ ನಿಗಾ ವಹಿಸುತ್ತೆ. 30 ಆಟಗಾರರ ಪರ್ಫಾಮೆನ್ಸ್ನ್ನ ಬಿಸಿಸಿಐ ಮಾನಿಟರ್ ಮಾಡುತ್ತೆ. ಮಾನಿಟರ್ ಮಾಡೋದಕ್ಕಾಗಿಯೇ ಬಿಸಿಸಿಐ ಸ್ಪೆಷಲ್ ಟೀಂನ್ನ ಕೂಡ ರೆಡಿ ಮಾಡಲಿದೆ. ಈ ಟೀಂ ಮೆಂಬರ್ಗಳು ಐಪಿಎಲ್ ವೇಳೆ ಎಲ್ಲಾ ಮ್ಯಾಚ್ಗಳನ್ನ ನೋಡೋಕೂ ಸ್ಟೇಡಿಯಂ ತೆರಳಲಿದ್ದಾರೆ. ತಾವು ಲಿಸ್ಟ್ ಮಾಡಿದ ಪ್ಲೇಯರ್ಸ್ಗಳ ಪರ್ಫಾಮೆನ್ಸ್, ಫಿಟ್ನೆಸ್ ಎಲ್ಲವನ್ನ ಕೂಡ ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಈ ಲಿಸ್ಟ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಹೀಗಾಗಿ ರೋಹಿತ್ ಮತ್ತು ಕೊಹ್ಲಿಯ ಟಿ-20 ವರ್ಲ್ಡ್ಕಪ್ ಭವಿಷ್ಯ ಕೂಡ ನಿರ್ಧಾರವಾಗೋದು ಐಪಿಎಲ್ ಪರ್ಫಾಮೆನ್ಸ್ ಆಧಾರದ ಮೇಲೆಯೇ. ಒಂದು ವೇಳೆ ಫೇಲ್ ಆದ್ರು ಅಂದ್ರೆ ವರ್ಲ್ಡ್ಕಪ್ ಟೀಮ್ನಿಂದ ಡ್ರಾಪ್ ಆದ್ರೂ ಆಶ್ಚರ್ಯ ಇಲ್ಲ. ಐಪಿಎಲ್ನಲ್ಲಿ 30 ಆಟಗಾರರ ಪರ್ಫಾಮೆನ್ಸ್ನ್ನ ನೋಟ್ ಮಾಡಿಕೊಂಡ ಮೇಲೆ ಟಿ-20 ವರ್ಲ್ಡ್ಕಪ್ಗೆ ಅಂತಿಮ 15 ಮಂದಿ ಆಟಗಾರರ ಲಿಸ್ಟ್ನ್ನ ಬಿಸಿಸಿಐ ಸೆಲೆಕ್ಷನ್ ಕಮಿಟಿ ಫೈನ್ ಮಾಡಲಿದೆ. ಹೀಗಾಗಿ ಟಿ-20 ವರ್ಲ್ಡ್ಕಪ್ನಲ್ಲಿ ಆಡಬೇಕು ಅಂದುಕೊಂಡಿರೋ ಭಾರತೀಯ ಕ್ರಿಕೆಟಿಗರಿಗೆ ಐಪಿಎಲ್ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ. ಓವರ್ಆಲ್ ಆಗಿ ಐಪಿಎಲ್ ಪರ್ಫಾಮೆನ್ಸ್ ಆಧಾರದ ಮೇಲೆಯೇ ವರ್ಲ್ಡ್ಕಪ್ ಟೀಂ ಸೆಲೆಕ್ಟ್ ಮಾಡೋಕೆ ಬಿಸಿಸಿಐ ನಿರ್ಧರಿಸಿದೆ.
ಇವೆಲ್ಲದ್ರ ಮಧ್ಯೆ ಇಂಜ್ಯೂರಿಗೆ ಒಳಗಾಗಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಕಮ್ಬ್ಯಾಕ್ ಮಾಡೋಕೆ ಫುಲ್ ಪ್ರಿಪೇರ್ ಆಗ್ತಾ ಇದ್ದಾರೆ. ಫಿಟ್ನೆಸ್ ಮೇಲೆ ಸಿಕ್ಕಾಪಟ್ಟೆ ವರ್ಕೌಟ್ ಮಾಡ್ತಾ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡೋ ಫೋಟೋ, ವಿಡಿಯೋವನ್ನ ಪೋಸ್ಟ್ ಮಾಡಿದ್ರು. ಪ್ರೋಗ್ರೆಸ್ ಎವ್ರಿಡೇ ಅಂತಾ ಪಾಂಡ್ಯಾ ಬರೆದುಕೊಂಡಿದ್ದಾರೆ. ಬಟ್ ಅಫ್ಘಾನಿಸ್ತಾನ ಟಿ-20 ಸೀರಿಸ್ನಲ್ಲಿ ಪಾಂಡ್ಯಾ ಆಡೋದು ಅನುಮಾನವೇ. ಆದ್ರೆ ಐಪಿಎಲ್ ವೇಳೆಗೆ ಕಮ್ಬ್ಯಾಕ್ ಮಾಡೋದು ಗ್ಯಾರಂಟಿ. ಅದು ಬೇರೆ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಹೇಗಾದ್ರೂ ಮಾಡಿ ಐಪಿಎಲ್ ಟೈಮ್ಗೆ ಫುಲ್ ಫಿಟ್ ಆಗಬೇಕು ಅನ್ನೋ ಟಾರ್ಗೆಟ್ನ್ನ ಪಾಂಡ್ಯಾ ಇಟ್ಟುಕೊಂಡಿರೋದು ಮಾತ್ರ ಕ್ಲೀಯರ್. ಟೋಟಲಿ, ಈ ಬಾರಿಯ ಐಪಿಎಲ್ ಟೂರ್ನಿ ಹಲವು ಆ್ಯಂಗಲ್ಗಳಲ್ಲಿ ತುಂಬಾನೆ ಇಂಟ್ರೆಸ್ಟಿಂಗ್ ಆಗಿದೆ. ಮೇನ್ ಆಗಿ ಟೀಂ ಇಂಡಿಯಾದ ಟಿ20 ವರ್ಲ್ಡ್ಕಪ್ ಟೀಮ್ ಫೈನಲ್ ಆಗೋದು ಪ್ಲೇಯರ್ಸ್ಗಳ ಐಪಿಎಲ್ ಪರ್ಫಾಮೆನ್ಸ್ ಮೇಲೆ. ಈವನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಐಪಿಎಲ್ ತುಂಬಾ ಕ್ರೂಶಿಯಲ್ ಆಗಿರಲಿದೆ. ಹೀಗಾಗಿ ಎಲ್ಲರ ಫೋಕಸ್ ಈ ಇಬ್ಬರು ಸ್ಟಾರ್ಗಳ ಮೇಲೆಯೇ ಇರುತ್ತೆ. ಇನ್ನು ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯಾ ಯಾವ ರೀತಿ ಕಮ್ಬ್ಯಾಕ್ ಮಾಡ್ತಾರೆ? ಪಾಂಡ್ಯಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಕಥೆಯೇನಾಗಬಹುದು ಅನ್ನೋದು. ಜೊತೆಗೆ ಪಾಂಡ್ಯಾ ಕ್ಯಾಪ್ಟನ್ಸಿ ಅಂಡರ್ನಲ್ಲಿ ರೋಹಿತ್ ಶರ್ಮಾ ಹೇಗೆ ಆಡ್ತಾರೆ. ರೋಹಿತ್ ಬಾಡಿ ಲಾಂಗ್ವೇಜ್ ಹೇಗಿರಬಹುದು ಇದೇ ತುಂಬಾ ಇಂಟ್ರೆಸ್ಟಿಂಗ್ ಆಗಿರೋದು. ಸೋ 2024 ಐಪಿಎಲ್ ಹಲವು ಆಯಾಮಗಳಲ್ಲಿ ಅತ್ಯಂತ ಹೈವೋಲ್ಟೇಜ್ ಐಪಿಎಲ್ ಟೂರ್ನಿಯಾಗೋದ್ರಲ್ಲಿ ಡೌಟೇ ಇಲ್ಲ.