ಬಿಗ್‌ಬಾಸ್‌ ಮನೆಯಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ? – ಹೆಣ್ಮಕ್ಕಳಿಗೆ ಸಿಕ್ತಿಲ್ವಾ ಅವಕಾಶ?

ಬಿಗ್‌ಬಾಸ್‌ ಮನೆಯಲ್ಲಿ ಗಂಡು-ಹೆಣ್ಣು ಎಂಬ ತಾರತಮ್ಯ? – ಹೆಣ್ಮಕ್ಕಳಿಗೆ ಸಿಕ್ತಿಲ್ವಾ ಅವಕಾಶ?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ 10 ಅಂತಿಮ ಘಟ್ಟದಲ್ಲಿದೆ. ದಿನದಿಂದ ದಿನಕ್ಕೆ ಶೋ ರೋಚಕ ಹಂತಕ್ಕೆ ತಲುಪುತ್ತಿದೆ. ಕಳೆದ ಎರಡು ವಾರ ಕೊಂಚ ಶಾಂತವಾಗಿದ್ದ ಮನೆಯಲ್ಲಿ ಮತ್ತೆ ಗದ್ದಲ ಎದ್ದಿದೆ. ಹೆಣ್ಣು, ಗಂಡು ಎಂಬ ತಾರತಮ್ಯದ ವಿಚಾರವಾಗಿ ಗಲಾಟೆ ಎದ್ದಿದೆ. ಈ ಜಗಳ ನೋಡಿದಾಗ, ಬಿಗ್‌ಬಾಸ್ ಮನೆಯಲ್ಲಿ ಮಹಿಳೆಯರಿಗೆ ಸರಿಯಾದ ಅವಕಾಶ ಸಿಕ್ತಿಲ್ವಾ ಅನ್ನೋ ಪ್ರಶ್ನೆ  ನೋಡಿದವರ ಮನಸಲ್ಲಿ ಏಳುವಂತಿದೆ.

ಇದನ್ನೂ ಓದಿ: ಕಾರ್ತಿಕ್​ನೇ ಬೇಕು.. ಮದುವೆ ಆಗಿ ಅಂತ ಕೂತ್ಕೋತಿನಿ ಆಗ್ತೀರಾ? – ಕಾರ್ತಿಕ್‌ ಬಳಿ ನೇರವಾಗಿ ಕೇಳಿದ ನಮೃತಾ!

ಹೌದು, ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಟಾಸ್ಕ್​ ವೇಳೆ ಸ್ಪರ್ಧಿಗಳು ಪರಸ್ಪರ ಮಾನವೀಯತೆ ಮರೆತು ಆಟವಾಡುತ್ತಿರುವುದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಗ್‌ಬಾಸ್‌ ಮನೆಯಲ್ಲಿ ಇಷ್ಟು ದಿನ ಟಾಸ್ಕ್ ಗೆಲ್ಲಲು ಇಬ್ಬರ ನಡುವೆ ಫೈಟ್ ಆಗುತ್ತಿತ್ತು. ಆದ್ರೆ ಈ ಬಾರಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ಆಗುತ್ತಿದೆ ಎಂದು ಗಂಭೀರ ಆರೋಪವನ್ನು ಸಂಗೀತಾ ಆರೋಪ ಮಾಡಿದ್ದಾರೆ.

ಬುಧವಾರ ಕಲರ್ಸ್‌ ಕನ್ನಡ ವಾಹಿನಿ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್​​ಬಾಸ್​ ಮನೆಯ ಸ್ಫರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡುತ್ತಾರೆ. ಈ ವೇಳೆ ಮನೆಯ ಸದಸ್ಯ ವಿನಯ್​ ತಾವು, ಕಾರ್ತಿಕ್, ಮೈಕೆಲ್ ಹಾಗೂ ತುಕಾಲಿ ಸಂತೋಷ್​ ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಗೀತಾ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಮನೆಯ ಸ್ಫರ್ಧಿಗಳ ನಡುವೆ ವಾಕ್ಸಮರ ನಡೆದಿದೆ.

ಈ ವೇಳೆ ವಿನಯ್​, ತನಿಷಾ ಹಾಗೂ ಸಂಗೀತಾ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಸಂಗೀತಾ ಕನ್ನಡಿ ಮುಂದೆ ಏಕಾಂಗಿಯಾಗಿ ನಿಂತು ಯೋಚಿಸುತ್ತಿರುವುದನ್ನು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನೋಡಬಹುದಾಗಿದೆ. ಬಿಡುಗಡೆಯಾಗಿರುವ ಪ್ರೋಮೋ ವೀಕ್ಷಕರ ಕುತೂಹಲ ಮೂಡಿಸಿದ್ದು, ತಾರತಮ್ಯ ಹೊರತುಪಡಿಸಿ ಯಾವ ಕಾರಣಕ್ಕೆ ಸ್ಫರ್ಧಿಗಳ ನಡುವೆ ಜಗಳವಾಗಿರಬಹುದು ಎಂದು ಯೋಚಿಸುತ್ತಿದ್ದಾರೆ.

Shwetha M