ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರ ಅಲ್ಲ.. ಈ ನಗರಗಳಿಗೂ ಬರುತ್ತಂತೆ ನಮ್ಮ ಮೆಟ್ರೋ!
ಸಿಲಿಕಾನ್ ಸಿಟಿಯ ಸಂಚಾರ ಜೀವನಾಡಿ ನಮ್ಮ ಮೆಟ್ರೋ ಎಂದೇ ಹೇಳಬಹುದು. ಆಫೀಸ್‌ಗೆ ಹೋಗಲು, ಕಾಲೇಜ್‌ಗೆ ಹೋಗಲು ಸಾವಿರಾರು ಮಂದಿ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಇದೀಗ ಬಿಎಂಆರ್‌ಸಿಎಲ್ ಬೆಂಗಳೂರಿನ ಜನತೆಗೆ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಇನ್ನು ಮುಂದೆ ನಮ್ಮ ಮೆಟ್ರೋವನ್ನು ಬೆಂಗಳೂರಿನ ಉಪನಗರಗಳಿಗೆ ವಿಸ್ತರಿಸಲು ಮುಂದಾಗಿದೆ.
ಇದನ್ನೂ ಓದಿ: ಕೋಳಿ ಮಾಂಸದ ತೂಕದಲ್ಲಿ ಭಾರಿ ವಂಚನೆ – ವ್ಯಾಪಾರಿಯನ್ನು ಮರಕ್ಕೆ ಕಟ್ಟಿಹಾಕಿದ ರೈತ!
ಹೌದು, ಬೆಂಗಳೂರಿನ ನಮ್ಮ ಮೆಟ್ರೋ 4 ನೇ ಹಂತದ ಸಂಪರ್ಕ ಜಾಲಕ್ಕೆ 129 ಕಿಮೀ ಸೇರಿಸುವ ಕಾರ್ಯಸಾಧ್ಯತೆಯ ಅಧ್ಯಯನ ಇದೀಗ ಇನ್ನೊಮ್ಮೆ ಮುಂಚೂಣಿಗೆ ಬಂದಿದೆ. ಈ ಅಧ್ಯಯನದಲ್ಲಿ ಬೆಂಗಳೂರು ನಗರದಲ್ಲಿ ಇನ್ನೂ ಮೆಟ್ರೋ ಸಂಪರ್ಕ ದೊರೆಯದ ಭಾಗಗಳು ಮತ್ತು ಬೆಂಗಳೂರಿನ ಉಪನಗರಗಳಿಗೆ ಮೆಟ್ರೋ ಜಾಲ ವಿಸ್ತರಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಈಗಿರುವ ನೇರಳೆ ಮತ್ತು ಹಸಿರು ಮಾರ್ಗಗಳನ್ನು ಬಿಡದಿ (ಮೈಸೂರು ರಸ್ತೆ), ಹಾರೋಹಳ್ಳಿ (ಕನಕಪುರ ರಸ್ತೆ), ಅತ್ತಿಬೆಲೆ (ಹೊಸೂರು ರಸ್ತೆ) ಮತ್ತು ಕುಣಿಗಲ್ ಕ್ರಾಸ್‌ವರೆಗೆ (ತುಮಕೂರು ರಸ್ತೆ) ನಾಲ್ಕು ದಿಕ್ಕುಗಳಲ್ಲಿ ನಮ್ಮ ಮೆಟ್ರೋ ವಿಸ್ತರಿಸಲು ಪ್ರಸ್ತಾವನೆಯಲ್ಲಿ ನಮೂದಿಸಲಾಗಿದೆ.
ಬೆಂಗಳೂರು ನಗರದ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವ ಜಿಗಣಿ, ಆನೇಕಲ್, ಅತ್ತಿಬೆಲೆ, ಸರ್ಜಾಪುರ ಮತ್ತು ವರ್ತೂರು ಭಾಗಗಳನ್ನು ಸಂಪರ್ಕಿಸುವ ಹೊಸ ಮಾರ್ಗದ ಕುರಿತು BMRCL ಪ್ರಸ್ತಾವನೆ ಸಲ್ಲಿಸಿದೆ. ಈ ಮಾರ್ಗಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರದಿಂದ ಹಣವನ್ನು ಕೋರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕೆಲವು ತಿಂಗಳ ಹಿಂದೆ ಬೆಂಗಳೂರಿನ ಪಕ್ಕದ ರಾಮನಗರಕ್ಕೂ ಸಹ ಭವಿಷ್ಯದಲ್ಲಿ ಮೆಟ್ರೋ ಸೇವೆ ಆರಂಭವಾಗುವ ಕುರಿತು ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಮಾಹಿತಿ ಬಿಚ್ಚಿಟ್ಟಿದ್ದರು. ರಾಮನಗರ ಜಿಲ್ಲೆಯ ಮಾಗಡಿ, ಕನಕಪುರ, ಚನ್ನಪಟ್ಟಣ ತಾಲೂಗಳಲ್ಲಿ ನಮ್ಮ ಮೆಟ್ರೋ ಸೇವೆ ಆರಂಭವಾಗುವ ನಿರೀಕ್ಷೆಯಿದೆ.