ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯ – ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿ ಟೀಮ್ ಇಂಡಿಯಾ
ಇಂಡಿಯಾ VS ಸೌತ್ ಆಫ್ರಿಕಾ ಸೆಕೆಂಡ್ ಟೆಸ್ಟ್.. ವಿನ್ ಆಗಲೇಬೇಕಿದೆ. ಗೆಲ್ಲೋದಷ್ಟೇ ಟೀಂ ಇಂಡಿಯಾದ ಮುಂದಿರೋ ಏಕೈಕ ಆಪ್ಷನ್. ಯಾಕಂದ್ರೆ ಸೋತರೆ ಹೇಗೂ ಸೀರಿಸ್ ಸೋತ ಹಾಗೆ. ಇದ್ದಿದ್ದೇ ಎರಡು ಟೆಸ್ಟ್ ಮ್ಯಾಚ್. ಫಸ್ಟ್ ಮ್ಯಾಚ್ ಸೋತಾಗಿದೆ. ಸೆಕೆಂಡ್ ಮ್ಯಾಚ್ ಗೆಲ್ಲದೆ ವಿಧಿ ಇಲ್ಲ. ಫಸ್ಟ್ ಟೆಸ್ಟ್ನಲ್ಲಿ ಮೂರೇ ದಿನಗಳಲ್ಲಿ ಟೀಮ್ ಇಂಡಿಯಾ ಆಫ್ರಿಕನ್ನರ ಮುಂದೆ ಮಂಡಿಯೂರಿದ್ದರು. ಹೀಗಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಸೆಕೆಂಡ್ ಮ್ಯಾಚ್ನಲ್ಲಿ ನಾವು ಫೈಟ್ಬ್ಯಾಕ್ ಮಾಡ್ತೀವಿ ಎಂದಿದ್ದರು. ಈಗ ಟೈಮ್ ಬಂದಿದೆ.
ಇದನ್ನೂ ಓದಿ: RCBಗೆ ಬ್ಯಾಟಿಂಗ್ ಟೆನ್ಷನ್? – ಫಾಫ್.. ಡಿಕೆ.. ಗ್ರೀನ್.. ಡೌಟ್ ಯಾಕೆ?
ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಸೆಕೆಂಡ್ ಟೆಸ್ಟ್ ಗೆ ಸಜ್ಜಾಗಿದೆ. ಫಸ್ಟ್ ಮ್ಯಾಚ್ನಲ್ಲಿ ಆರ್.ಅಶ್ವಿನ್ ಮತ್ತು ಪ್ರಸಿಧ್ ಕೃಷ್ಣ ಆಡಿದ್ರು. ಆದ್ರೆ ಸೆಕೆಂಡ್ ಮ್ಯಾಚ್ಗೆ ಇಬ್ಬರನ್ನ ಕೂಡ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ಸದ್ಯ ಆರ್.ಅಶ್ವಿನ್ ನಂಬರ್-1 ಬೌಲರ್. ಐಸಿಸಿ ಱಂಕಿಂಗ್ನಲ್ಲಿ ನಂಬರ್-1 ಪೊಸೀಶನ್ನಲ್ಲಿದ್ದಾರೆ. ಫಸ್ಟ್ ಮ್ಯಾಚ್ನಲ್ಲಿ ಅಶ್ವಿನ್ ಚೆನ್ನಾಗಿಯೇ ಬೌಲಿಂಗ್ ಮಾಡಿದ್ರು. ರನ್ ಕಂಟ್ರೋಲ್ ಮಾಡಿದ್ರು. ಆದ್ರೆ ವಿಕೆಟ್ ತೆಗೆಯುವಲ್ಲಿ ಫೇಲ್ ಆಗಿದ್ರು. ಆದ್ರೆ ಫಸ್ಟ್ ಮ್ಯಾಚ್ನಲ್ಲಿ ಟೀಂನಲ್ಲಿರದ ರವೀಂದ್ರ ಜಡೇಜ ಸೆಕೆಂಡ್ ಮ್ಯಾಚ್ಗೆ ಕಮ್ಬ್ಯಾಕ್ ಮಾಡ್ತಾ ಇದ್ದಾರೆ. ಜಡ್ಡು ಕೂಡ ಒಬ್ಬ ಬೆಸ್ಟ್ ಸ್ಪಿನ್ನರ್ ಆಗಿರೋದ್ರಿಂದ ಆರ್.ಅಶ್ವಿನ್ರನ್ನ ಡ್ರಾಪ್ ಮಾಡೋ ಸಾಧ್ಯತೆ ಇದೆ. ಇನ್ನು ಈ ಟೆಸ್ಟ್ ಮ್ಯಾಚ್ ಟೀಂ ಇಂಡಿಯಾದ ಒಬ್ಬ ಮೇನ್ ಬ್ಯಾಟ್ಸ್ಮನ್ಗೆ ತುಂಬಾನೆ ಕ್ರೂಶಿಯಲ್ ಆಗಿರಲಿದೆ. ಶುಬ್ಮನ್ ಗಿಲ್.. ಟೆಸ್ಟ್ ಕ್ರಿಕೆಟ್ನಲ್ಲಿ ಶುಬ್ಮನ್ ಗಿಲ್ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇದೆ. ಕಳೆದ ಹಲವು ಮ್ಯಾಚ್ಗಳಲ್ಲಿ ಶುಬ್ಮನ್ ಗಿಲ್ ಪರ್ಫಾಮ್ ಮಾಡಿಯೇ ಇಲ್ಲ. ನಿರಂತರವಾಗಿ ಫೇಲ್ ಆಗ್ತಾನೆ ಇದ್ದಾರೆ. ಹೀಗಾಗಿ ಶುಬ್ಮನ್ ಗಿಲ್ರನ್ನ ರಿಪ್ಲೇಸ್ ಮಾಡಬೇಕು ಅನ್ನೋ ಬಗ್ಗೆಯೂ ಕೆಲ ಸೀನಿಯರ್ ಕ್ರಿಕೆಟರ್ ರಿಯಾಕ್ಟ್ ಮಾಡಿದ್ದಾರೆ. ಒಂದು ವೇಳೆ ಸೌತ್ ಆಫ್ರಿಕಾ ವಿರುದ್ಧ ಸೆಕೆಂಡ್ ಟೆಸ್ಟ್ನಲ್ಲಿ ಶುಬ್ಮನ್ ಗಿಲ್ ದೊಡ್ಡ ಮೊತ್ತದ ಸ್ಕೋರ್ ಗಳಿಸಿಲ್ಲ ಅಂದ್ರೆ ನೆಕ್ಸ್ಟ್ ಸೀರಿಸ್ಗೆ ಟೆಸ್ಟ್ ಟೀಂನಿಂದ ಡ್ರಾಪ್ ಆಗುವ ಸಾಧ್ಯತೆ ಹೆಚ್ಚಿದೆ. ಇಂಗ್ಲೆಂಡ್ ವಿರುದ್ಧ 5 ಮ್ಯಾಚ್ಗಳ ಟೆಸ್ಟ್ ಸೀರಿಸ್ ನಡೆಯಲಿದೆ. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಸೆಕೆಂಡ್ ಟೆಸ್ಟ್ ಶುಬ್ಮನ್ ಗಿಲ್ಗೆ ತುಂಬಾನೆ ಇಂಪಾರ್ಟೆಂಟ್.
ಕೇವಲ ಶುಬ್ಮನ್ ಗಿಲ್ ಅಷ್ಟೇ ಅಲ್ಲ, ಮಿಡ್ಲ್ ಆರ್ಡರ್ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ಗೂ ಅಷ್ಟೇ. ಟೆಸ್ಟ್ ಟೀಂನಲ್ಲಿ ಪರ್ಮನೆಂಟ್ ಸ್ಥಾನ ಪಡೆದುಕೊಳ್ಳೋಕೆ ಶ್ರೇಯಸ್ಗೆ ಈಗ ಒಳ್ಳೆಯ ಅಪಾರ್ಚ್ಯುನಿಟಿ ಸಿಕ್ಕಿದೆ. ಇದನ್ನ ಯೂಸ್ ಮಾಡಿಲ್ಲ ಅಂದ್ರೆ ಶ್ರೇಯಸ್ ಕೂಡ ರಿಪ್ಲೇಸ್ ಆಗಬಹುದು.
ಇನ್ನು ಬೌಲರ್ಸ್ಗಳ ವಿಚಾರಕ್ಕೆ ಬರೋದಾದ್ರೆ, ಸೌತ್ ಆಫ್ರಿಕಾದ ಪೇಸ್ ಮತ್ತು ಬೌನ್ಸಿ ಪಿಚ್ನ ಅಡ್ವಾಂಟೇಜ್ನ್ನ ನಮ್ಮ ಫಾಸ್ಟ್ ಬೌಲರ್ಸ್ ಅಷ್ಟೊಂದು ಯೂಸ್ ಮಾಡಿಕೊಂಡಿಲ್ಲ. ಫಸ್ಟ್ ಟೆಸ್ಟ್ನಲ್ಲಿ ಜಸ್ಪ್ರಿತ್ ಬುಮ್ರಾ ಮಾತ್ರ ಸ್ವಲ್ಪ ಎಫೆಕ್ಟಿವ್ ಆಗಿ ಬೌಲಿಂಗ್ ಮಾಡಿದ್ರು ಅನ್ನೋದನ್ನ ಬಿಟ್ರೆ, ಮತ್ತೆಲ್ಲರೂ ಹೊಡೆಸ್ಕೊಂಡವರೇ. ಹೀಗಾಗಿ ಕೇಪ್ಟೌನ್ನಲ್ಲಾದ್ರೂ ಅಲ್ಲಿನ ಬೌನ್ಸಿ, ಸ್ವಿಂಗ್ ಪಿಚ್ನ್ನ ಯುಟಿಲೈಸ್ ಮಾಡ್ತಾರಾ? ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳಿಗೂ ಒಂದಷ್ಟು ಚಾಲೆಂಜ್ ಮಾಡ್ತಾರಾ ನೋಡಬೇಕಿದೆ.
ಇನ್ನು ಸೌತ್ ಆಫ್ರಿಕಾ ಟೀಂ ಅಂತೂ ಹೇಗಾದ್ರೂ ಮಾಡಿ ಸೆಕೆಂಡ್ ಟೆಸ್ಟ್ನ್ನ ಕೂಡ ಗೆಲ್ಲಲೇಬೇಕು ಅಂತಾ ಪಣತೊಟ್ಟಿದೆ. ಯಾಕಂದ್ರೆ ದಕ್ಷಿಣ ಆಫ್ರಿಕಾ ಓಪನಿಂಗ್ ಬ್ಯಾಟ್ಸ್ಮನ್ ಡೀನ್ ಎಲ್ಗರ್ ತಮ್ಮ ಕೆರಿಯರ್ನ ಕೊನೆಯ ಟೆಸ್ಟ್ ಮ್ಯಾಚ್ನ್ನ ಆಡ್ತಾ ಇದ್ದಾರೆ. ಇದು ಡೀನ್ ಎಲ್ಗರ್ ಪಾಲಿಗೆ ಫೈನಲ್ ಸೀರಿಸ್. ಈ ಮ್ಯಾಚ್ ಬಳಿಕ ಡೀನ್ ಎಲ್ಗರ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗ್ತಾ ಇದ್ದಾರೆ. ಒಟ್ಟು 85 ಟೆಸ್ಟ್ ಮ್ಯಾಚ್ಗಳನ್ನಾಡಿರೋ ಡೀನ್ ಎಲ್ಗರ್ 5331 ರನ್ ಗಳಿಸಿದ್ದಾರೆ. 14 ಸೆಂಚೂರಿ ಹೊಡೆದಿದ್ದಾರೆ. ಸೌತ್ ಆಫ್ರಿಕಾದ ವನ್ ಆಫ್ ದಿ ಬೆಸ್ಟ್ ಟೆಸ್ಟ್ ಬ್ಯಾಟ್ಸ್ಮನ್. ಫಸ್ಟ್ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ವಿರುದ್ಧ ಸೆಂಚೂರಿ ಬೇರೆ ಹೊಡೆದಿದ್ರು. ಹೀಗಾಗಿ ಸೆಕೆಂಡ್ ಟೆಸ್ಟ್ನಲ್ಲೂ ಅಷ್ಟೇ ಡೀನ್ ಎಲ್ಗರ್ರನ್ನ ಬೇಗನೆ ಔಟ್ ಮಾಡದೆ ಟೆಸ್ಟ್ ಮ್ಯಾಚ್ ಗೆಲ್ಲೋಕೆ ಸಾಧ್ಯವಿಲ್ಲ. ಅತ್ತ ಸೌತ್ ಆಫ್ರಿಕಾ ಟೀಂ ಅಂತೂ ಮ್ಯಾಚ್ ಮತ್ತು ಸೀರಿಸ್ ವಿನ್ ಆಗೋ ಮೂಲಕ ತಮ್ಮ ಬೆಸ್ಟ್ ಬ್ಯಾಟ್ಸ್ಮನ್ಗೆ ಗುಡ್ಬೈ ಹೇಳೋ ಪ್ಲ್ಯಾನ್ನಲ್ಲಿದೆ.
ಸೌತ್ ಆಫ್ರಿಕಾ ವಿರುದ್ಧದ ಸೆಕೆಂಡ್ ಟೆಸ್ಟ್ ಮ್ಯಾಚ್ಗೆ ಟೀಂ ಇಂಡಿಯಾದ ಪ್ಲೇಯಿಂಗ್-11 ಹೇಗಿರಬಹುದು? ಸಂಭಾವ್ಯ ತಂಡದಲ್ಲಿ ಯಾರೆಲ್ಲಾ ಇದ್ದಾರೆ.
ಟೀಂ ಇಂಡಿಯಾ PLAYING-11?
- ರೋಹಿತ್ ಶರ್ಮಾ
- ಯಶಸ್ವಿ ಜೈಸ್ವಾಲ್
- ಶುಬ್ಮನ್ ಗಿಲ್
- ವಿರಾಟ್ ಕೊಹ್ಲಿ
- ಶ್ರೇಯಸ್ ಅಯ್ಯರ್
- ಕೆ.ಎಲ್.ರಾಹುಲ್
- ರವೀಂದ್ರ ಜಡೇಜ
- ಅವೇಶ್ ಖಾನ್
- ಮುಕೇಶ್ ಕುಮಾರ್
- ಮೊಹಮ್ಮದ್ ಸಿರಾಜ್
- ಜಸ್ಪ್ರಿತ್ ಬುಮ್ರಾ