‘2024ಕ್ಕೆ ನಾನು ಅಮ್ಮನಾಗುವೆ’ – ಫೋಟೋ ಸಮೇತ ತಾಯಿಯಾಗುವ ಖುಷಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ
ಸ್ಯಾಂಡಲ್‌ವುಡ್ ನಟಿ ನಟಿ ಅದಿತಿ ಪ್ರಭುದೇವ ಹೊಸ ವರ್ಷದ ದಿನದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್ ಮಾಡಿರುವ ಅದಿತಿ, ತಾನು ಅಮ್ಮನಾಗುತ್ತಿರುವ ವಿಷಯವನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಕಾಟೇರ ಅಬ್ಬರ – ಧೂಳೆಬ್ಬಿಸಿದ ಡಿ ಬಾಸ್ , ಮಾಲಾಶ್ರೀ ಮಗಳ ಅಭಿನಯಕ್ಕೆ ಫುಲ್ ಮಾರ್ಕ್ಸ್
2022ರ ನವೆಂಬರ್ 28ರಂದು ನಟಿ ಅದಿತಿ ಪ್ರಭುದೇವ ಅವರು ಯಶಸ್ ಜೊತೆ ವಿವಾಹವಾಗಿದ್ದರು. ಈಗ ಅವರು ತಾಯಿಯಾಗುತ್ತಿರುವ ಸಿಹಿ ಸುದ್ದಿ ನೀಡಿದ್ದಾರೆ. ಅದು ಕೂಡಾ ಫೋಟೋ ಸಮೇತ ಖುಷಿಯನ್ನು ಹಂಚಿಕೊಂಡಿದ್ದಾರೆ. ‘ಸಂಬಂಧಗಳಲ್ಲಿ ಶ್ರೇಷ್ಠವಾದದ್ದು. ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ ಅಮ್ಮ’ ಎಂದು ಪೋಸ್ಟ್ ಆರಂಭಿಸಿದ್ದಾರೆ ನಟಿ ಅದಿತಿ ಪ್ರಭುದೇವ. ‘ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ ಅಮ್ಮ. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ ಅಮ್ಮ. 2024ಕ್ಕೆ ನಾನು ಅಮ್ಮನಾಗುವೆ’ ಎಂದು ಪೋಸ್ಟ್ ಹಾಕಿದ್ದಾರೆ.
ಜನವರಿ 26ರಂದು ಅದಿತಿ ಪ್ರಭುದೇವ ನಟನೆಯ ‘ಅಲೆಕ್ಸಾ’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮಧ್ಯೆ ಅವರು ಮತ್ತೊಂದು ಖುಷಿ ಸುದ್ದಿ ನೀಡಿದ್ದಾರೆ. ಅಭಿಮಾನಿಗಳು ನಟಿ ಶುಭಹಾರೈಸಿದ್ದಾರೆ.