ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್‌ಗೆ ಕ್ವಾಲಿಫೈ ಆಗಲು ಟೀಮ್ ಇಂಡಿಯಾ ಮುಂದಿದೆ ಸವಾಲು..!
ಅದ್ಯಾಕೋ ಇಂಡಿಯನ್ ಕ್ರಿಕೆಟ್ ಟೀಮ್ನ ಟೈಂ ಕೆಟ್ಟಂತೆ ಕಾಣ್ತಾ ಇದೆ. ವರ್ಲ್ಡ್ಕಪ್ ಫೈನಲ್ ಸೋತ್ರು.. ಈಗ ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್ ಮ್ಯಾಚ್ನ್ನ ಕೂಡ ಹೀನಾಯವಾಗಿ ಸೋತಿದ್ದಾರೆ. ಇದ್ರ ಜೊತೆಗೆ ಟೀಂ ಇಂಡಿಯಾ ಮಾಡಿರೋ ಮತ್ತೊಂದು ಎಡವಟ್ಟಿನಿಂದಾಗಿ 2025ರಲ್ಲಿ ನಡೆಯೋ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಕ್ವಾಲಿಫೈ ಆಗಲು ಭಾರತ ಸಮಸ್ಯೆ ಎದುರಿಸುವಂತಾಗಿದೆ.
ಇದನ್ನೂ ಓದಿ:ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು – ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಎಡವಿದ್ದು ಎಲ್ಲಿ?
ದಕ್ಷಿಣ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್ ಮ್ಯಾಚ್ನಲ್ಲಿ ಟೀಂ ಇಂಡಿಯಾ ಸೋಲುತ್ತಲೇ, ಮ್ಯಾಚ್ ರಿಸಲ್ಟ್ ಹೊರ ಬರುತ್ತಲೇ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಒಂದು ಸ್ಟೇಟ್ಮೆಂಟ್ನ್ನ ರಿಲೀಸ್ ಮಾಡಿತ್ತು. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ಗೆ ಸಂಬಂಧಿಸಿ ರೋಹಿತ್ ಶರ್ಮಾ ಸೈಡ್ ಎರಡು ಕ್ರೂಶಿಯಲ್ ಪಾಯಿಂಟ್ಗಳನ್ನ ಕಳೆದುಕೊಂಡಿದೆ. ಸೌತ್ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್ ಮ್ಯಾಚ್ನ ಲ್ಲಿ ಟೀಂ ಇಂಡಿಯಾ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದೆ. ಇದ್ರಿಂದಾಗಿ ಎರಡು ಓವರ್ಗಳ ಶಾರ್ಟೇಜ್ ಆಗಿದೆ. ಹೀಗಾಗಿ ವರ್ಲ್ಡ್ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಶಿಪ್ಗೆ ಸಂಬಂಧಿಸಿ ಟೀಂ ಇಂಡಿಯಾ ಎರಡು ಪಾಯಿಂಟ್ಗಳನ್ನ ಕಳೆದುಕೊಳ್ಳಬೇಕಾಗುತ್ತೆ ಅಂತಾ ಐಸಿಸಿ ಸ್ಟೇಟ್ಮೆಂಟ್ ಕೊಟ್ಟಿತ್ತು. ಇದ್ರ ಜೊತೆಗೆ ಟೀಂ ಇಂಡಿಯಾದ ಪ್ಲೇಯರ್ಸ್ಗಳಿಗೆ 5 ಪರ್ಸೆಂಟ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾಗೆ ಮ್ಯಾಚ್ ಫೀಸ್ನ 10 ಪರ್ಸೆಂಟ್ನಷ್ಟು ದಂಡ ವಿಧಿಸಲಾಗಿತ್ತು.
ಟೀಂ ಇಂಡಿಯಾ ಆಡುವ ಪ್ರತಿ ಟೆಸ್ಟ್ ಮ್ಯಾಚ್ ಕೂಡ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಅಂಡರ್ನಲ್ಲೇ ಬರುತ್ತೆ. ಕೇವಲ ಟೀಂ ಇಂಡಿಯಾ ಅಂತೇನಲ್ಲಾ ಟೆಸ್ಟ್ ಆಡುವ ಎಲ್ಲಾ ಟೀಂಗಳು ಕೂಡ 2025ರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ರೇಸ್ನಲ್ಲೇ ಇವೆ. ಸದ್ಯ ಟೀಂ ಇಂಡಿಯಾ ಮೂರು ಮ್ಯಾಚ್ಗಳಲ್ಲಿ ಅಂದ್ರೆ, ಈ ಹಿಂದೆ ಆಡಿದ ಟೆಸ್ಟ್ ಪಂದ್ಯಗಳನ್ನ ಕೂಡ ಸೇರಿಸಿ ಒಟ್ಟು 16 ಪಾಯಿಂಟ್ಸ್ಗಳನ್ನ ಗಳಿಸಿತ್ತು. ಪಾಯಿಂಟ್ಸ್ ಪರ್ಸೆಂಟೇಜ್ 44.44ರಷ್ಟಿತ್ತು. ಹಾಗೆಯೇ WTC ಟೇಬಲ್ನಲ್ಲಿ ಭಾರತ 5ನೇ ಪೊಸೀಶನ್ನಲ್ಲಿತ್ತು. ಆದ್ರೆ ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್ನಲ್ಲಿ ಸ್ಲೋ ಬೌಲಿಂಗ್ನಿಂದಾಗಿ ಎರಡು WTC ಪಾಯಿಂಟ್ಸ್ಗಳನ್ನ ಕಳೆದುಕೊಂಡಿದೆ. ಹೀಗಾಗಿ 16 ಇದ್ದ ಪಾಯಿಂಟ್ಸ್ 14ಕ್ಕೆ ಇಳಿದಿದೆ. ಪಾಯಿಂಟ್ಸ್ ಪರ್ಸೆಂಟೇಜ್ ಕೂಡ 44.44 ರಿಂದ 38.89ಗೆ ಡೌನ್ ಆಗಿದೆ. ಇನ್ನು ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಟೇಬಲ್ನಲ್ಲಿ 5ರಿಂದ 6ನೇ ಸ್ಥಾನಕ್ಕೆ ಕುಸಿದಿದೆ.
ಸೌತ್ ಆಫ್ರಿಕಾ ವಿರುದ್ಧ ಫಸ್ಟ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಸ್ಲೋ ಬೌಲಿಂಗ್ ಮಾಡಿದ್ರಿಂದ ಈಗ WTC ಪಾಯಿಂಟ್ಸ್ನ್ನೇ ಕಳೆದುಕೊಂಡಿದೆ. ಒಂದು ವೇಳೆ ಕೇಪ್ಟೌನ್ನಲ್ಲಿ ನಡೆಯೋ ಸೆಕೆಂಡ್ ಟೆಸ್ಟ್ ಮ್ಯಾಚ್ನ್ನ ಕೂಡ ಸೋತ್ರೆ WTC ಕ್ವಾಲಿಫಿಕೇಶನ್ಗೆ ಸಂಬಂಧಿಸಿ ಟೀಂ ಇಂಡಿಯಾದ ಸ್ವಿಚ್ಯುವೇಶನ್ ಇನ್ನಷ್ಟು ಸೀರಿಯಸ್ ಆಗುತ್ತೆ.
ಸೌತ್ ಆಫ್ರಿಕಾ ಆದ್ಮೇಲೆ ಇಂಗ್ಲೆಂಡ್ ಜೊತೆ 5 ಟೆಸ್ಟ್ ಮ್ಯಾಚ್ಗಳಿರುತ್ತೆ. ನಂತರ ಆಸ್ಟ್ರೇಲಿಯಾದಲ್ಲಿ ಪುನ: 5 ಟೆಸ್ಟ್ ಮ್ಯಾಚ್ಗಳನ್ನ ರೋಹಿತ್ ಟೀಂ ಆಡಲಿದೆ.
ಸದ್ಯ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ ಹೇಗಿದೆ ಅನ್ನೋದನ್ನ ಈ ಕೆಳಗಿದೆ.
- ದಕ್ಷಿಣ ಆಫ್ರಿಕಾ – 100
- ಪಾಕಿಸ್ತಾನ – 61.11
- ನ್ಯೂಜಿಲ್ಯಾಂಡ್ – 50.00
- ಬಾಂಗ್ಲಾದೇಶ – 50.00
- ಆಸ್ಟ್ರೇಲಿಯಾ – 41.67
- ಭಾರತ – 38.89
2025ರ ಜೂನ್ನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನಡೆಯುತ್ತೆ. ಸದ್ಯದ ಪಾಯಿಂಟ್ಸ್ ಟೇಬಲ್ ನೋಡಿದ್ರೆ ಸೌತ್ ಆಫ್ರಿಕಾ ಕ್ವಾಲಿಫೈ ಆಗೋ ಚಾನ್ಸ್ ಹೆಚ್ಚಿದೆ. ಯಾಕಂದ್ರೆ, ನೆಕ್ಸ್ಟ್ ಶ್ರೀಲಂಕಾ ಮತ್ತು ಪಾಕಿಸ್ತಾನದ ಜೊತೆಗೆ ಸೌತ್ ಆಫ್ರಿಕಾದಲ್ಲೇ ಟೆಸ್ಟ್ ಸೀರಿಸ್ ನಡೆಯುತ್ತೆ. ಹೋಮ್ ಗ್ರೌಂನಲ್ಲಿ ಹರಿಣಗಳನ್ನ ಹೊಡೆಯೋರು ಸದ್ಯಕ್ಕಂತೂ ಯಾರೂ ಇಲ್ಲ. ಬಳಿಕ ನ್ಯೂಜಿಲ್ಯಾಂಡ್, ವೆಸ್ಟ್ಇಂಡೀಸ್ ಮತ್ತು ಬಾಂಗ್ಲಾದೇಶಕ್ಕೆ ಹೋಗಿ ಆಡ್ತಾರೆ.
ಇನ್ನು ಟೀಂ ಇಂಡಿಯಾದ ವಿಚಾರಕ್ಕೆ ಬರೋದಾದ್ರೆ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತದಲ್ಲೇ ಟೆಸ್ಟ್ ಸೀರಿಸ್ ನಡೆಯುತ್ತೆ. ಬಳಿಕ ಆಸ್ಟ್ರೇಲಿಯಾಗೆ ಹೋಗಿ ನಮ್ಮವರು 5 ಮ್ಯಾಚ್ಗಳನ್ನ ಆಡ್ತಾರೆ. ಹೀಗಾಗಿ 2025ರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ಗೆ ಕ್ವಾಲಿಫೈ ಆಗೋದು ಟೀಂ ಇಂಡಿಯಾಗೆ ಅಷ್ಟೊಂದು ಸುಲಭ ಇಲ್ಲ. ನಮ್ಮ ಜೊತೆ ಬಿಗ್ ರೇಸ್ನಲ್ಲಿರೋದು ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ. ಕಳೆದ 2 ಬಾರಿ ಕೂಡ ಟೀಂ ಇಂಡಿಯಾ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸೋತಿತ್ತು. ಈ ಬಾರಿ ರೋಹಿತ್ ಶರ್ಮಾ ಟೀಂ ಕ್ವಾಲಿಫೈ ಆಗುತ್ತಾ? ಇಲ್ವಾ? ಅನ್ನೋದನ್ನು ಕಾದು ನೋಡಬೇಕಿದೆ.