ಮೊದಲ ಟೆಸ್ಟ್ ಪಂದ್ಯ ಸೋಲಿಗೆ ಬೌಲರ್ಸ್ ಕಾರಣ ಎಂದ ಕ್ಯಾಪ್ಟನ್ – ಬ್ಯಾಟಿಂಗ್ ಬಲವನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ

ಮೊದಲ ಟೆಸ್ಟ್ ಪಂದ್ಯ ಸೋಲಿಗೆ ಬೌಲರ್ಸ್ ಕಾರಣ ಎಂದ ಕ್ಯಾಪ್ಟನ್ – ಬ್ಯಾಟಿಂಗ್ ಬಲವನ್ನು ಸಮರ್ಥಿಸಿಕೊಂಡ ರೋಹಿತ್ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತನ್ನ ತಂಡದ ಬೌಲರ್‌ಗಳನ್ನು ದೂರಿದ್ದಾರೆ. ತಮ್ಮ ಬ್ಯಾಟಿಂಗ್ ವಿಭಾಗವನ್ನು ಬೆಂಬಲಿಸಿದ್ದಾರೆ. ಕಳಪೆ ಬ್ಯಾಟಿಂಗ್ ಎಂದವರಿಗೆ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಬೌಲರ್ಸ್ ಎಡವುತ್ತಿದ್ದಾರಾ?

ಸೌತ್​ ಆಫ್ರಿಕಾ ವಿರುದ್ಧದ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ತಮ್ಮ ಫೇಲ್ಯೂರ್​ನ್ನ ಬಿಟ್ಟು ಬೌಲರ್ಸ್​​ಗಳನ್ನು ದೂರಿದ್ದಾರೆ. ಬೌಲಿಂಗ್​ ವಿಚಾರಕ್ಕೆ ಬಂದಾಗ ಕೇವಲ ಒಬ್ಬ ಪರ್ಟಿಕ್ಯುಲರ್ ಬೌಲರ್​ನ್ನ ಮಾತ್ರ ಡಿಪೆಂಡ್ ಆಗಿರೋಕೆ ಆಗಲ್ಲ. ಉಳಿದ ಮೂವರು ಪೇಸ್ ಬೌಲರ್ಸ್​ ಕೂಡ ಪರ್ಫಾಮ್​ ಮಾಡಬೇಕಾಗುತ್ತೆ ಎಂದಿದ್ದಾರೆ. ಇಲ್ಲಿ ಒಬ್ಬ ಪರ್ಟಿಕ್ಯುಲರ್ ಬೌಲರ್​​ ಅಂತಾ ರೋಹಿತ್ ಶರ್ಮಾ ಹೇಳಿರೋದು ಜಸ್ಪ್ರಿತ್ ಬುಮ್ರಾರನ್ನ. ಟೀಂ ಇಂಡಿಯಾ ಪೇಸ್​ ಬೌಲಿಂಗ್​ನಲ್ಲಿ ವೈಫಲ್ಯ ಅನುಭವಿಸ್ತಾ ಇದೆ. ಬುಮ್ರಾಗೆ ಸರಿಯಾದ ಸಾಥ್ ಸಿಗ್ತಾ ಇಲ್ಲ ಅನ್ನೋದಂತೂ ನಿಜ. ಒಳ್ಳೆಯ ಹೈಟ್ ಹೊಂದಿರೋ ಪ್ರಸಿಧ್ ಕೃಷ್ಣ ಸೌತ್ ಆಫ್ರಿಕಾದ ಬೌನ್ಸಿ ಪಿಚ್​​ನಲ್ಲಿ ಬೆಸ್ಟ್ ಆಪ್ಷನ್ ಅಂತಾ ಅವರನ್ನ ಫಸ್ಟ್ ಟೆಸ್ಟ್​​ನಲ್ಲಿ ಆಡಿಸಿದ್ರು. ಆದ್ರೆ, ಪ್ರಸಿಧ್​ ಸರಿಯಾಗಿಯೇ ಹೊಡೆಸಿಕೊಂಡ್ರು. ಪ್ರಸಿಧ್ ಕೃಷ್ಣರಂತೆ ಅತ್ತ ಸೌತ್ ಆಫ್ರಿಕಾದಲ್ಲೂ ಒಬ್ಬ ಫಾಸ್ಟ್ ಬೌಲರ್ ಡೆಬ್ಯೂ ಮಾಡಿದ್ದ ನಾಂಡ್ರೆ ಬರ್ಗರ್ ಫಸ್ಟ್​ ಇನ್ನಿಂಗ್ಸ್​ನಲ್ಲಿ 3 ವಿಕೆಟ್ ಪಡೆದಿದ್ರು. 2ನೇ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ತೆಗೆದಿದ್ದಾರೆ. ಅದು ಪರ್ಫಾಮೆನ್ಸ್ ಅಂದ್ರೆ ಅಂತಿದ್ದಾರೆ ಫ್ಯಾನ್ಸ್.

ಇನ್ನು ಫಸ್ಟ್ ಟೆಸ್ಟ್​ನಲ್ಲಿ ಟೀಂ ಇಂಡಿಯಾದ ಸೋಲಿಗೆ ಕಾರಣ ಏನು ಅನ್ನೋ ಬಗ್ಗೆ ಸಚಿನ್ ತೆಂಡೂಲ್ಕರ್ ಕಾಮೆಂಟ್ ಮಾಡಿದ್ದಾರೆ. ನಮ್ಮ ಬ್ಯಾಟ್ಸ್​​ಮನ್​ಗಳ ಶಾಟ್ ಸೆಲೆಕ್ಷನ್ ಸರಿಯಾಗಿ ಇರಲಿಲ್ಲ. ಟೆಕ್ನಿಕಲಿ ಬ್ಯಾಟ್ಸ್​ಮನ್​ಗಳು ಫೇಲ್ಯೂರ್ ಆಗಿದ್ದಾರೆ ಅಂತಾ ಸಚಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದ್ರ ಜೊತೆಗೆ ರೋಹಿತ್​ ಶರ್ಮಾ ಮತ್ತು ಕೋಚ್ ದ್ರಾವಿಡ್ ಕೂಡ ಈ ಸೋಲಿಗೆ ಹೊಣೆ ಹೊತ್ತುಕೊಳ್ಳಲೇಬೇಕಾಗುತ್ತೆ. ಯಾಕಂದ್ರೆ ನಮ್ಮವರದ್ದು ಪ್ಲ್ಯಾನಿಂಗೇ ಇರಲಿಲ್ಲ. ಪಕ್ಕಾ ಸ್ಟ್ರ್ಯಾಟಜಿ ಮಾಡದೆ ಸೌತ್ ಆಫ್ರಿಕಾದಂಥಾ ಟೀಂನ್ನ ಎದುರಿಸೋಕೆ ಸಾಧ್ಯವೇ ಇಲ್ಲ. ಹೀಗಾಗಿ ಪ್ಲ್ಯಾನಿಂಗ್​​ನಲ್ಲಿ ಲ್ಯಾಪ್ಸ್​ ಆಗಿರೋದಂತೂ ಕ್ಲೀಯರ್. ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಏನೋ, ಸೆಕೆಂಡ್​​ ಮ್ಯಾಚ್​ನಲ್ಲಿ ಕಮ್​​ಬ್ಯಾಕ್ ಮಾಡ್ತೀವಿ. ಫೈಟ್ ಮಾಡಿಯೇ ಮಾಡ್ತೀವಿ ಎಂದಿದ್ದಾರೆ. ಇನ್ನು ಇರೋದೆ ಒಂದು ಟೆಸ್ಟ್ ಮ್ಯಾಚ್. ಗೆದ್ರೆ ಸೀರಿಸ್ ಲೆವೆಲ್ ಆಗುತ್ತೆ ಅಷ್ಟೇ.. ಇತಿಹಾಸ ಸೃಷ್ಟಿಸೋ ಚಾನ್ಸನ್ನಂತೂ ರೋಹಿತ್ ಟೀಂ ಕೂಡ ಮಿಸ್​ ಮಾಡಿಕೊಂಡಿದೆ. ಇದುವರೆಗೂ ಟೀಂ ಇಂಡಿಯಾ ಸೌತ್​​ ಆಫ್ರಿಕಾದಲ್ಲಿ ಒಂದೇ ಒಂದು ಬಾರಿ ಟೆಸ್ಟ್​ ಸೀರಿಸ್ ಗೆದ್ದಿಲ್ಲ. ಈ ಬಾರಿಯೂ ಸೀರೀಸ್ ಗೆಲ್ಲೋಕೆ ಆಗಲ್ಲ.

 

Sulekha