ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು – ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಎಡವಿದ್ದು ಎಲ್ಲಿ?

ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲು – ಸೌತ್ ಆಫ್ರಿಕಾದಲ್ಲಿ ಟೀಂ ಇಂಡಿಯಾ ಎಡವಿದ್ದು ಎಲ್ಲಿ?

ದಕ್ಷಿಣ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್ ಮ್ಯಾಚ್​​ನ್ನ ಟೀಂ ಇಂಡಿಯಾ ಇಷ್ಟೊಂದು ಹೀನಾಯವಾಗಿ ಸೋಲುತ್ತೆ ಅಂತಾ ಯಾರೂ ಕೂಡ ಅಂದುಕೊಂಡಿರಲಿಲ್ಲ. ಇನ್ನಿಂಗ್ಸ್ ಡಿಫೀಟ್.. ಮ್ಯಾಚ್​ ಆರಂಭಕ್ಕೂ ಮುನ್ನ ನಡೆದ ಪ್ರೆಸ್​ಮೀಟ್​ನಲ್ಲಿ ನಾವು ಗೆಲ್ಲೋಕೆ ಡೆಸ್ಪರೇಟ್ ಆಗಿದ್ದೀವಿ ಎಂದಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಪಡೆ ಸೌತ್​ ಆಫ್ರಿಕಾ ಮುಂದೆ ಅಕ್ಷರಶ: ಮಂಡಿಯೂರಿದ್ದಾರೆ. ತಂಡದ ಪರ್ಫಾಮೆನ್ಸ್​ ನೋಡಿದ್ರೆ ಇದೇನಾ ವರ್ಲ್ಡ್​ಕ್ಲಾಸ್ ಟೀಂ ಇಂಡಿಯಾ. ಐಸಿಸಿ ಟೆಸ್ಟ್​ ಱಂಕಿಂಗ್​​ನಲ್ಲಿ ನಂಬರ್-1 ಪೊಸೀಶನ್​ನಲ್ಲಿರೋದು ಇವರೇನಾ ಅನ್ನೋ ಡೌಟ್ ಬರೋದಂತೂ ಸುಳ್ಳಲ್ಲ. ಕೇವಲ ಮೂರೇ ದಿನಕ್ಕೆ ಮ್ಯಾಚ್​​ ಮುಗಿದಿದೆ. ಯಾವ ಹಂತದಲ್ಲೂ ಕೂಡ ಫೈಟ್​ ನೀಡಲೇ ಇಲ್ಲ. ರೋಹಿತ್​ ಶರ್ಮಾ ಕ್ಯಾಪ್ಟನ್ಸಿ ಅಂದ್ರೆ ಏನು ಅನ್ನೋದನ್ನೇ ಮರೆತಿರೋ ಹಾಗಿದೆ. ಟೀಂ ಇಂಡಿಯಾ ಸೋಲಿಗೆ ನಿಜವಾದ ಕಾರಣ ಏನು? ಸೋಲಿನ ಬಳಿಕ ರೋಹಿತ್ ಶರ್ಮಾ ಗೂಬೆ ಕೂರಿಸಿರೋದು ಯಾರ ಮೇಲೆ? ಅನ್ನೋದನ್ನು ವಿವರ ಇಲ್ಲಿದೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು – ರೋಹಿತ್ ಶರ್ಮಾ ಲೆಕ್ಕಾಚಾರ ಫೇಲ್?

ಟೆಸ್ಟ್​ ಮ್ಯಾಚ್ ಅಂದರೆ ಮೊದಲ ದಿನದಾಟದಲ್ಲೇ 90 ಓವರ್​ಗಳಿರುತ್ತೆ. ​​ಆದರೆ, ಭಾರತ ತಂಡ ಸೌತ್​ ಆಫ್ರಿಕಾ ವಿರುದ್ಧದ ಫಸ್ಟ್ ಟೆಸ್ಟ್​​ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ 101 ಓವರ್​​ಗಳನ್ನ ಆಡಿದ್ದಾರೆ ಅಷ್ಟೇ. ಫಸ್ಟ್ ಇನ್ನಿಂಗ್ಸ್​​ನಲ್ಲಿ ಕೇವಲ 67 ಓವರ್ ಆಡಿ 245 ರನ್​ಗೆ ಆಲೌಟ್ ಆದರು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ 34 ಓವರ್​ಗಳಲ್ಲಿ ಬರೀ 131 ರನ್​ಗಳಿಗೆ ಅಲೌಟ್ ಆಗಿದ್ದಾರೆ. ಬ್ಯಾಟಿಂಗ್​, ಬೌಲಿಂಗ್, ಕ್ಯಾಪ್ಟನ್ಸಿ ಎಲ್ಲಾ ವಿಭಾಗದಲ್ಲೂ ಟೀಂ ಇಂಡಿಯಾ ಕಂಪ್ಲೀಟ್ ಫೇಲ್ ಆಗಿದೆ. 3ನೇ ದಿನದಾಟದ ಆರಂಭದ ವೇಳೆ ಸೌತ್ ಆಫ್ರಿಕಾ 5 ವಿಕೆಟ್​​ಗಳನ್ನ ಕಳೆದುಕೊಂಡಿತ್ತು. ಆದ್ರೆ, ಆಫ್ರಿಕನ್ನರನ್ನ ಫಸ್ಟ್​​ ಇನ್ನಿಂಗ್ಸ್​ನಲ್ಲಿ ಅಲೌಟ್ ಮಾಡೋಕೆ ಭಾರತದ ಬೌಲರ್ಸ್ ಒದ್ದಾಡಿದ್ರು. ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಶಾರ್ದುಲ್ ಠಾಕೂರ್ ಇವಱರ ಬೌಲಿಂಗ್ ಕೂಡ ವರ್ಕೌಟ್ ಆಗಲೇ ಇಲ್ಲ. ಮಾರ್ಕೊ ಜಾನ್ಸನ್ ಕೂಡ 84 ರನ್​ ಹೊಡೆದ್ರು. ಹೀಗಾಗಿ ಸೌತ್ ಆಫ್ರಿಕಾ ಫಸ್ಟ್ ಇನ್ನಿಂಗ್ಸ್​ನಲ್ಲಿ 408 ರನ್ ಗಳಿಸ್ತು. 163 ರನ್​ಗಳ ಇನ್ನಿಂಗ್ಸ್ ಲೀಡ್ ಪಡೆದುಕೊಂಡಿತ್ತು. ಆದ್ರೆ ಟೀಮ್  ಇಂಡಿಯಾ ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ ಫಸ್ಟ್​ ಇನ್ನಿಂಗ್ಸ್​ ಗಿಂತಲೂ ಕೆಟ್ಟದಾಗಿಯೇ ಆಡಿದರು. ಲೀಸ್ಟ್​ ಫಸ್ಟ್​ ಇನ್ನಿಂಗ್ಸ್​ಗಿಂತಾದ್ರೂ ಹೆಚ್ಚು ಸ್ಕೋರ್​ ಮಾಡೋದು ಬಿಟ್ಟು ಕೇವಲ 131 ರನ್​ಗೆ ಅಲೌಟ್ ಆದ್ರು.

ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ 0. ಫಸ್ಟ್​ ಇನ್ನಿಂಗ್ಸ್​​ನಲ್ಲಿ 5 ರನ್​ ಹೊಡೆದಿದ್ದ ರೋಹಿತ್, ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ ಸೊನ್ನೆ ಸುತ್ತಿದ್ದಾರೆ. ಔಟಾಗಿರೋದು ಮತ್ತದೇ ರಬಾಡ ಬೌಲಿಂಗ್​ನಲ್ಲಿ. 14ನೇ ಬಾರಿಗೆ ರೋಹಿತ್ ಶರ್ಮಾ ಕಗಿಸೋ ರಬಾಡಗೆ ವಿಕೆಟ್ ಒಪ್ಪಿಸಿದ್ದಾರೆ. ರಬಾಡ ಬೌಲಿಂಗ್​​ನ್ನ ರೀಡ್ ಮಾಡೋಕೆ ರೋಹಿತ್ ಶರ್ಮಾಗೆ ಸಾಧ್ಯವಾಗಿಲ್ಲ. ಹೀಗಾಗಿ ಕ್ಲೀನ್ ಬೌಲ್ಡ್ ಆದ್ರು. ಇನ್ನು ಯಶಸ್ವಿ ಜೈಸ್ವಾಲ್ 5 ರನ್​ಗೆ ಔಟಾದ್ರು. ಶುಬ್ಮನ್ ಗಿಲ್ ಕೇವಲ 26 ರನ್ ಮಾಡಿ ವಿಕೆಟ್ ಒಪ್ಪಿಸಿದ್ರು. ಟೀಂ ಇಂಡಿಯಾ ಬ್ಯಾಟ್ಸ್​​ಮನ್​ಗಳು ಸೆಕೆಂಡ್​​ ಇನ್ನಿಂಗ್ಸ್​​ನಲ್ಲಿ ಪರೇಡ್ ಮಾಡಬೇಕು ಅಂತಾ ಮೊದಲೇ ನಿರ್ಧರಿಸಿದ್ರು ಅಂತಾ ಕಾಣ್ಸುತ್ತೆ. ಶ್ರೇಯಸ್ ಅಯ್ಯರ್ 6 ರನ್, ಕೆ.ಎಲ್. ರಾಹುಲ್ 4 ರನ್, ರವಿಚಂದ್ರನ್ ಅಶ್ವಿನ್ 0, ಶಾರ್ದುಲ್ ಠಾಕೂರ್ 2 ರನ್ ಹೀಗೆ ಬ್ಯಾಟ್ಸ್​​ಮನ್​ಗಳು ಅಂದುಕೊಂಡವರೆ ಸಾಧನೆ ಸಿಂಗಲ್ ಡಿಜಿಟ್​ ಅಷ್ಟೇ. ಆದ್ರೆ ಇನ್ನಿಂಗ್ಸ್​ ಡಿಫೀಟ್​​ನಿಂದ ತಪ್ಪಿಸೋಕೆ ಕ್ರೀಸ್​​ನಲ್ಲಿ ನಿಂತಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್​ಮನ್. ವಿರಾಟ್ ಕೊಹ್ಲಿ.. ಯಾರು ಆಡದಿದ್ರೇನು.. ವಿರಾಟ್ ಕೊಹ್ಲಿಯಂತೂ ಆಡಿಯೇ ಆಡ್ತಾರೆ. ಬೇರೆಲ್ಲಾ ಬ್ಯಾಟ್ಸ್​​ಮನ್​ಗಳು ಹಾಗೆ ಬಂದು, ಹೀಗೆ ಹೋಗ್ತಿದ್ರೆ ವಿರಾಟ್​ ಕೊಹ್ಲಿ ಮಾತ್ರ ಕ್ರೀಸ್​​ನಲ್ಲಿ ಸ್ಟೇಯಾಗಿದ್ರು. ಒಬ್ಬ ಕ್ವಾಲಿಟಿ, ಎಕ್ಸ್​ಪೀರಿಯನ್ಸ್​ ಬ್ಯಾಟ್ಸ್​​ಮನ್​ ಹೇಗೆ ಆಡಬೇಕು ಅನ್ನೋದನ್ನ ಕೊಹ್ಲಿ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಕೊಹ್ಲಿಗೂ ಬೌಲಿಂಗ್ ಮಾಡಿರೋದು ಅದೇ ಸೌತ್ ಆಫ್ರಿಕಾ ಬೌಲರ್ಸ್​ಗಳೇ ಅಲ್ವಾ. ಕೊಹ್ಲಿ ಏನು ಬೇರೆ ಬೌಲರ್ಸ್​ಗಳನ್ನ ಫೇಸ್ ಮಾಡಿಲ್ಲ. ಆದ್ರೆ ಕೊಹ್ಲಿಗೆ ಮಾತ್ರ ಯಾಕೆ ಸ್ಕೋರ್ ಮಾಡೋಕೆ ಸಾಧ್ಯವಾಯ್ತು. ಅದಕ್ಕೆ ವಿರಾಟ್ ಕೊಹ್ಲಿ ಅಷ್ಟೊಂದು ಸ್ಪೆಷಲ್ ಬ್ಯಾಟ್ಸ್​ಮನ್​ ಆಗಿರೋದು. ಕೊಹ್ಲಿ 82 ಬಾಲ್​​ಗಳಲ್ಲಿ 76 ರನ್​ ಹೊಡೆದ್ರು. ವಂಡೇ ಮ್ಯಾಚ್​​ನಂತೆಯೇ ಆಡಿದ್ರು. ಅಗ್ರೆಸ್ಸಿವ್ ಆಗಿ ಆಡದೆ ಕೊಹ್ಲಿಗೆ ಬೇರೆ ಆಪ್ಷನೇ ಇರಲಿಲ್ಲ. ಯಾಕಂದ್ರೆ ನಾನ್​​ಸ್ಟ್ರೈಕ್ ಎಂಡ್​​ನಿಂದ ಕೊಹ್ಲಿಗೆ ಯಾರಿಂದಲೂ ಸಾಥ್ ಸಿಕ್ಕಿಯೇ ಇಲ್ಲ. ಇನ್ನೊಬ್ಬರು ಯಾರಾದ್ರೂ ನಿಂತು ಆಡಿದ್ರಷ್ಟೇ ಪಾಟ್ನರ್​ಶಿಪ್​ ಬಿಲ್ಡ್ ಮಾಡಬಹುದು. ಆದ್ರೆ, ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಕೊಹ್ಲಿ ಜೊತೆಗೆ ಕ್ರೀಸ್​​ನಲ್ಲಿ ಗಟ್ಟಿಯಾಗಿ ನಿಂತಿಲ್ಲ. ಆದ್ರೂ ಅಂಥಾ ಪ್ರೆಷರ್ ಟೈಮ್​ನಲ್ಲೂ ಜವಾಬ್ದಾರಿ ಹೊತ್ತು ವಿರಾಟ್​ ಕೊಹ್ಲಿ 76 ರನ್​ ಹೊಡೆದಿರೋದು ನಿಜಕ್ಕೂ ಗ್ರೇಟ್ ಅಚೀವ್​ಮೆಂಟ್. ಇದು ವಿರಾಟ್ ಕೊಹ್ಲಿಯ ವನ್ ಆಫ್ ದಿ ಬೆಸ್ಟ್ ಇನ್ನಿಂಗ್ಸ್ ಅಂದ್ರೆ ತಪ್ಪಾಗೋದಿಲ್ಲ. ಇದ್ರ ಜೊತೆಗೆ ವಿರಾಟ್ ಕೊಹ್ಲಿ ಕೆಲ ವರ್ಲ್ಡ್​ ರೆಕಾರ್ಡ್​​ಗಳನ್ನ ಕೂಡ ಮಾಡಿದ್ದಾರೆ. 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ವರ್ಷದಲ್ಲಿ 7 ಬಾರಿ 2000ಕ್ಕೂ ಹೆಚ್ಚು ರನ್​​ ಗಳಿಸಿದ ಏಕೈಕ ಕ್ರಿಕೆಟರ್​ ಅಂದ್ರೆ ಅದು ಕೊಹ್ಲಿ ಮಾತ್ರ. 2012 – 2186 ರನ್, 2014-2286 ರನ್, 2016-2595 ರನ್, 2017-2818 ರನ್, 2018-2735 ರನ್, 2019-2455 ರನ್ ಹೊಡೆದಿದ್ರು. 1877ರ ಬಳಿಕ ಇಂಟರ್​ನ್ಯಾಷನಲ್​ ಕ್ರಿಕೆಟ್​​ನಲ್ಲಿ ಇದೇ ಮೊದಲ ಬಾರಿಗೆ ವರ್ಷವೊಂದರಲ್ಲಿ 7 ಬಾರಿ 2000 ಎಬೋವ್ ಸ್ಕೋರ್ ಮಾಡಿದ ಸಾಧನೆಯನ್ನ ಕೊಹ್ಲಿ ಮಾಡಿದ್ದಾರೆ. ಇದ್ರ ಜೊತೆಗೆ ಸೌತ್​ ಆಫ್ರಿಕಾದಲ್ಲಿ ಅತೀ ಹೆಚ್ಚು ರನ್​ ಮಾಡಿದ ಭಾರತೀಯ ಬ್ಯಾಟ್ಸ್​​ಮನ್​​ ರೆಕಾರ್ಡ್ ಕೂಡ ಈಗ ಕೊಹ್ಲಿ ಹೆಸರಲ್ಲೇ ಇದೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 51 ಇನ್ನಿಂಗ್ಸ್​ ಗಳಲ್ಲಿ 1724 ರನ್ ಹೊಡೆದಿದ್ರು. ಆದ್ರೆ ಕೊಹ್ಲಿ 35 ಇನ್ನಿಂಗ್ಸ್​​ಗಳಲ್ಲೇ 1786 ರನ್ ಹೊಡೆದಿದ್ದಾರೆ. ಇಷ್ಟಾದ್ರೂ ವಿರಾಟ್ ಕೊಹ್ಲಿಯನ್ನ ಕೆಲವರು ಸೆಲ್ಫಿಶ್ ಪ್ಲೇಯರ್ ಅಂತಾರೆ.

 

Sulekha