ಕೊರೊನಾ ರೂಪಾಂತರ ಜೆಎನ್​1 ಸೋಶಿಯೋ ಎಕಾನಮಿಕ್ ವೈರಸ್! – ತ್ಯಾಜ್ಯ ನೀರಿನ ಮೇಲೂ ನಿಗಾ ಇರಿಸಿದ ತಜ್ಞರು!

ಕೊರೊನಾ ರೂಪಾಂತರ ಜೆಎನ್​1 ಸೋಶಿಯೋ ಎಕಾನಮಿಕ್ ವೈರಸ್! – ತ್ಯಾಜ್ಯ ನೀರಿನ ಮೇಲೂ ನಿಗಾ ಇರಿಸಿದ ತಜ್ಞರು!

ರಾಜ್ಯದಲ್ಲಿ ಕೊರೊನಾ ಉಪತಳಿ  ಜೆಎನ್ 1ಅಬ್ಬರ ಜೋರಾಗಿದೆ. ಮಹಾಮಾರಿ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಹೊಸದಾಗಿ ಪತ್ತೆಯಾಗಿರುವ ಕೋವಿಡ್ 19 ಪ್ರಕರಣಗಳಲ್ಲಿ ಹೆಚ್ಚಿನವುಗಳು ಒಮಿಕ್ರಾನ್ ರೂಪಾಂತರ ಜೆಎನ್ 1 ಎಂಬ ವಿಚಾರ ಬಯಲಾಗಿದೆ. ಇದರ ಬೆನ್ನಲ್ಲೇ, ಜೆಎನ್ 1 ಎಂಬುದು ಒಂದು ಸೋಶಿಯೋ ಎಕಾನಮಿಕ್ ವೈರಸ್ (ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಮರ್ಥ್ಯವುಳ್ಳದ್ದು) ಎಂದು ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ.. ತಡವಾಗಿ ಈ ಇ-ಮೇಲ್‌ ಪರಿಶೀಲಿಸಿದ ಅಧಿಕಾರಿಗಳು! – ಆಮೇಲೆ ಆಗಿದ್ದೇನು ಗೊತ್ತಾ?

ಹೌದು, ರಾಜ್ಯದಲ್ಲಿ ಕೊರೊನಾ ವೈರಲ್‌ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಜೆಎನ್ 1 ಹರಡುವಿಗೆ ಆ ವೈರಸ್​​ನ ನಮೂನೆಯ ಬಗ್ಗೆ ತಿಳಿದುಕೊಳ್ಳಲು ವಿವಿಧ ರೀತಿಯಲ್ಲಿ ನಿಗಾವಹಿಸಲಾಗಿದೆ. ರಾಜ್ಯ ಸರ್ಕಾರ ಕೂಡ ತಜ್ಞರ ಸಮಿತಿಯನ್ನು ರಚಿಸಿದೆ. ಇದೀಗ ವೈರಸ್‌ ಕುರಿತು ತಜ್ಞರು ಹಲವು ಪರೀಕ್ಷೆಗಳನ್ನು ಕೈಗೊಳ್ಳುತ್ತಿದ್ದಾರೆ. ಜೊತೆಗೆ ತ್ಯಾಜ್ಯ ನೀರಿನ ಮಾದರಿಗಳನ್ನು ಸಹ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಈ ಬಗ್ಗೆ ಹಿರಿಯ ಆನ್ಕೋಲಜಿಸ್ಟ್ ಡಾ. ವಿಶಾಲ್ ರಾವ್ ಮಾಹಿತಿ ನೀಡಿದ್ದು, ಜೆಎನ್ 1 ಎಂಬುದೊಂದು ಸೋಶಿಯೋ ಎಕಾನಮಿಕ್ ವೈರಸ್ ಆಗಿದೆ. ಇದು ವೇಗವಾಗಿ ಮತ್ತು ಹೆಚ್ಚು ಹರಡಬಲ್ಲಂತಹದ್ದಾಗಿದೆ. ಚಳಿಗಾಲದ ಈ ಸಂದರ್ಭದಲ್ಲಿ ಈ ವೈರಸ್ ಹೆಚ್ಚು ಹರಡುವ ಆತಂಕವಿದೆ. ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಉಂಟುಮಾಡುವ ಇತರ ವೈರಸ್​​ಗಳ ಜೊತೆ ಇದಕ್ಕೆ ಸಾಮ್ಯತೆ ಇದೆ. ಕ್ರಿಸ್ಮಸ್, ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ವೈರಸ್ ಹರಡುವ ಆತಂಕ ಹೆಚ್ಚಾಗಿದೆ. ಇದರಿಂದಾಗಿ ಕೋವಿಡ್ ಪ್ರಕರಣಗಳಲ್ಲಿ ಭಾರಿ ಹೆಚ್ಚಳ ಕಂಡು ಬರಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈರಸ್ ಸೋಂಕು ಹೊರಡುವುದರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ್ದು ಅತೀ ಅಗತ್ಯ. ಜೆಎನ್ 1 ಬಹಳ ಗಂಭೀರವಾದ ವೈರಸ್ ಅಲ್ಲದಿದ್ದರೂ ಬಹಳ ವೇಗವಾಗಿ ಹರಡಬಲ್ಲಂಥದ್ದಾಗಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕಟ್ಟೆಚ್ಚರವಹಿಸಬೇಕಾದದ್ದು ಅಗತ್ಯ ಎಂದು ಅವರು ಹೇಳಿದ್ದಾರೆ.

Shwetha M