3 ವರ್ಷಗಳ ನಂತರ ಅಪ್ಪ ಅಮ್ಮನ ಸಮಾಗಮ – ಹೆತ್ತವರ ನೋಡಿ ಗಳಗಳನೆ ಕಣ್ಣೀರು ಸುರಿಸಿದ ಡ್ರೋನ್ ಪ್ರತಾಪ್

3 ವರ್ಷಗಳ ನಂತರ ಅಪ್ಪ ಅಮ್ಮನ ಸಮಾಗಮ – ಹೆತ್ತವರ ನೋಡಿ ಗಳಗಳನೆ ಕಣ್ಣೀರು ಸುರಿಸಿದ ಡ್ರೋನ್ ಪ್ರತಾಪ್

ಬಿಗ್ ಬಾಸ್‌ನಲ್ಲಿ ಈ ವಾರ ಫ್ಯಾಮಿಲಿ ವೀಕ್ ಇತ್ತು. ಸ್ಪರ್ಧಿಗಳ ಮನೆಯವರು ಬರುವ ಮೂಲಕ ಬಿಗ್‌ಬಾಸ್ ಮನೆಯಲ್ಲಿ ಸಂಭ್ರಮ ತುಳುಕಾಡಿದೆ. ಇದರ ಜೊತೆಗೆ ಡ್ರೋನ್ ಪ್ರತಾಪ್ ಮನೆಯಿಂದ ಯಾರು ಬರ್ತಾರೆ ಎಂಬ ಕುತೂಹಲವೂ ಇತ್ತು. ಯಾಕೆಂದರೆ, ಡ್ರೋನ್ ಪ್ರತಾಪ್ ಅವರು ಹಲವು ವರ್ಷಗಳಿಂದ ತಂದೆ-ತಾಯಿ ಜೊತೆ ಮಾತನಾಡಿಲ್ಲ. ಈ ಬಗ್ಗೆ ಅವರಿಗೆ ಬೇಸರ ಇದೆ. ಅಪ್ಪ ಹಾಗೂ ಅಮ್ಮನ ಜೊತೆ ಮಾತನಾಡಬೇಕು ಎಂದು ಹೇಳುತ್ತಲೇ ಇದ್ದರು. ಇವರ ಆಸೆ ಬಿಗ್‌ಬಾಸ್ ಮನೆಯಲ್ಲಿ ನೆರವೇರಿದೆ. ಪ್ರತಾಪ್ ಅವರ ಅಪ್ಪ ಹಾಗೂ ಅಮ್ಮ ದೊಡ್ಮನೆಗೆ ಬಂದಿದ್ದಾರೆ.

ಇದನ್ನೂ ಓದಿ: ವಿನಯ್ ಸೇಡಿಗೆ ಆಸ್ಪತ್ರೆ ಸೇರಿದ ಸಂಗೀತಾ, ಡ್ರೋನ್ ಪ್ರತಾಪ್ – ಸ್ಪರ್ಧಿಗಳ ಅತಿರೇಕದ ವರ್ತನೆಗೆ ಬಿಗ್‌ಬಾಸ್ ಮೌನವೇಕೆ?

ಡ್ರೋನ್ ಪ್ರತಾಪ್ ಅವರು ಅಪ್ಪ, ಅಮ್ಮ, ತಂಗಿಯನ್ನ ನೋಡದೆ 3 ವರ್ಷ ಆಯ್ತು. ಅವರ ಜೊತೆ ನಾನು ಮಾತನಾಡುತ್ತಿಲ್ಲ ಎಂಬುದನ್ನು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಹೇಳಿಕೊಂಡಿದ್ದರು. ಆದರೆ ಈಗ ಅಪ್ಪ-ಅಮ್ಮನನ್ನು ನೇರವಾಗಿ ಭೇಟಿಯಾಗುವ ಅವಕಾಶವನ್ನು ಬಿಗ್ ಬಾಸ್ ಮಾಡಿಕೊಟ್ಟಿದ್ದಾರೆ. ಬಿಗ್‌ಬಾಸ್ ಮನೆಗೆ ಪ್ರತಾಪ್ ಅವರ ಅಪ್ಪ ಹಾಗೂ ಅಮ್ಮ ಬಂದಿದ್ದಾರೆ. ಈ ವೇಳೆ ಡೋರ್ ಲಾಕ್ ಆಗಿತ್ತು. ಪ್ರತಾಪ್ ಅವರು ಕಣ್ಣೀರು ಹಾಕಿ ಗಳಗಳನೆ ಅತ್ತಿದ್ದಾರೆ. ‘ಬಿಗ್ ಬಾಸ್ ಬಾಗಿಲು ತೆಗೆಯಿರಿ’ ಎಂದು ಅತ್ತಿದ್ದಾರೆ. ತಂದೆ-ಮಗನ ಸಮಾಗಮ ನೋಡಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.

ಡ್ರೋನ್ ಪ್ರತಾಪ್ ಅವರು ಕುಟುಂಬದ ಸದಸ್ಯರಿಂದ ದೂರ ಇರುವುದು ಎಲ್ಲರಿಗೂ ಗೊತ್ತು. ಬಿಗ್ ಬಾಸ್ ಮನೆಯೊಳಗೆ ಪ್ರತಾಪ್ ಅವರನ್ನು ಕಳುಹಿಸಿಕೊಡುವುದಕ್ಕೂ ಅವರ ಕುಟುಂಬದವರು ಯಾರೂ ಬಂದಿರಲಿಲ್ಲ. ಹೀಗಾಗಿ, ಅನೇಕ ಬಾರಿ ಕುಟುಂಬವನ್ನು ನೆನೆದು ಡ್ರೋನ್ ಪ್ರತಾಪ್ ಭಾವುಕರಾಗಿದ್ದರು. ಒಮ್ಮೆ ಬಿಗ್ ಬಾಸ್’ಮನೆಗೆ ಕರೆ ಮಾಡಿದ್ದ ಡ್ರೋನ್ ಪ್ರತಾಪ್ ತಂದೆ, ಮಗನ ಜೊತೆ ಮಾತನಾಡಿದ್ದರು. 3 ವರ್ಷಗಳ ಬಳಿಕ ಅಪ್ಪನ ಜೊತೆ ಮಾತನಾಡಿದ್ದ ಪ್ರತಾಪ್, ಚಿಕ್ಕ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಪ್ಪ.. ತಪ್ಪಾಯ್ತಪ್ಪ.. ನಿಮಗೆಲ್ಲಾ ನಾನು ಬಹಳ ನೋವು ಕೊಟ್ಟಿದ್ದೀನಿ.. ಅಪ್ಪ.. ತಪ್ಪಾಯ್ತಪ್ಪ.. ಎಂದು ಕ್ಷಮೆ ಕೇಳಿದ್ದರು. ಇಂಥದ್ದೊಂದು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸುದೀಪ್ ಮತ್ತು ಬಿಗ್ ಬಾಸ್ ಗೆ ಥ್ಯಾಂಕ್ಸ್ ಕೂಡ ಹೇಳಿದ್ದರು. ಹೆತ್ತವರಿಗಾಗಿ ಚಡಪಡಿಸುತ್ತಿದ್ದರು. ಊಟ ಕೂಡಾ ಮಾಡದೇ ಹೆತ್ತವರಿಗಾಗಿ ಕಾಯುತ್ತಿದ್ದರು. ಮನೆಯೊಳಗೆ ಯಾವ ಕಡೆಯಿಂದ ಬರಬಹುದು ಅಂತ ಎಲ್ಲ ಕಡೆಯೂ ಹುಡುಕುತ್ತಿದ್ದರು. ಕೊನೆಗೂ ಬಿಗ್‌ಬಾಸ್ ಡ್ರೋನ್ ಪ್ರತಾಪ್‌ಗೆ ಹೆತ್ತವರ ಭೇಟಿ ಮಾಡುವ ಅವಕಾಶವನ್ನು ಕಲ್ಪಿಸುವ ಮೂಲಕ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

Sulekha