ದೇಶದಲ್ಲಿ ಕೊರೊನಾ ಆರ್ಭಟ – ಜೆಎನ್.1 ಗೂ ಮುನ್ನ ಸೈಲೆಂಟ್ ಆಗಿ ಬಂದು ಹೋಗಿವೆ 6 ಉಪತಳಿ!
ದೇಶದಾದ್ಯಂತ ಕೊರೊನಾ ಅಬ್ಬರ ಜೋರಗಿದೆ. ಕೊರೊನಾ ರೂಪಾಂತರಿ ತಳಿ ಜೆಎನ್.1 ತಲ್ಲಣಗೊಳಿಸುತ್ತಿದೆ. ದಿನದಿಂದ ದಿನಕ್ಕೆ ಉಪತಳಿ ಜೆಎನ್.1 ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಕೊರೊನಾ ಹರಡುವಿಕೆಯನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ರೂಲ್ಸ್ಗಳನ್ನು ಜಾರಿಮಾಡುತ್ತಲೇ ಇದೆ. ಇದೀಗ ಶಾಕಿಂಗ್ ಸುದ್ದಿಯೊಂದು ಹೊರಬಂದಿದೆ. ಹೊಸ ಉಪತಳಿ ಸೋಂಕು ಪತ್ತೆಗೂ ಮುನ್ನ ಓಮಿಕ್ರಾನ್ನ 6 ಉಪತಳಿಗಳು ಸದ್ದಿಲ್ಲದೆ ಬಂದು ಹೋಗಿವೆ ಎಂದು ವರದಿಯಾಗಿದೆ.
ಹೌದು, ಜಗತ್ತಿಗೆ ಕೋವಿಡ್ ವೈರಾಣು ಕಾಲಿಟ್ಟ ಬಳಿಕ ಜನರ ಜೀವ ಹಿಂಡುತ್ತಿದೆ. ಕಾಲಕ್ಕೊಂದು ರೂಪದಲ್ಲಿ ಎಂಟ್ರಿ ಕೊಟ್ಟು ಜನ ಜೀವದ ಚೆಲ್ಲಾಟ ಆಡುತ್ತಿದೆ. ಇದೀಗ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಕಳೆದೊಂದು ವರ್ಷದಲ್ಲಿ ಎರಡು ತಿಂಗಳಿಗೆ ಒಂದರಂತೆ ಕೊರೊನಾ ರೂಪಾಂತರಿ ಓಮಿಕ್ರಾನ್ನ 6 ಉಪತಳಿಗಳು ಸೈಲೆಂಟ್ ಆಗಿ ಬಂದು ಹೋಗಿದೆ. ಇದೀಗ ಅದೇ ಸಾಲಿಗೆ ಜೆಎನ್.1 ರೂಪಾಂತರಿ ಸಹ ಸೇರಿಕೊಂಡಿದೆ. ಆದರೆ ಈ ರೂಪಾಂತರಿ ತಳಿ ಕೊಂಚ ಹೆಚ್ಚು ಸದ್ದು ಮಾಡುವ ಮೂಲಕ ಆತಂಕಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಕ್ಸಿಡೆಂಟ್ – 5 ಖಾಸಗಿ ಬಸ್ಗಳ ನಡುವೆ ಸರಣಿ ಅಪಘಾತ
ಕೊರೊನಾ ಮೊದಲ ಅಲೆಯ ಬಳಿಕ ಆರೋಗ್ಯ ಇಲಾಖೆ ರಾಜ್ಯ ಕಣ್ಗಾವಲು ಪಡೆಯನ್ನು ತೀವ್ರಗೊಳಿಸಿದೆ. ಸೋಂಕು ದೃಢವಾದ ಯಾವ ವ್ಯಕ್ತಿಯ ಮಾದರಿಗಳಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುತ್ತದೆಯೋ ಆ ಮಾದರಿಗಳನ್ನು ನಿರಂತರವಾಗಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಳೆದ ಮೂರು ಅಲೆಯಲ್ಲಿ ಅತ್ಯಧಿಕ ರೂಪಾಂತರಿ ವೈರಸ್ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಪತಳಿಗಳು ವರದಿಯಾಗಿರುವುದು ಓಮಿಕ್ರಾನ್ನಲ್ಲಿ ಮಾತ್ರ.
ಇಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ದ್ವಿಗುಣಗೊಂಡಿದ್ದು, ಸಾವು ಹಾಗೂ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ತುಂಬಾ ಕಡಿಮೆ ಇತ್ತು. ರಾಜ್ಯದಲ್ಲಿ ಇದುವರೆ ಜೆಎನ್.1 ಸೇರಿದಂತೆ 6 ರೂಪಾಂತರಿ ಹಾಗೂ 6 ಉಪತಳಿಗಳು ವರದಿಯಾಗಿವೆ. ಮೊದಲ ಎರಡು ಅಲೆಯಲ್ಲಿ ಕೊರೊನಾ ರೂಪಾಂತರಿ ಆಲ್ಫಾ, ಬೇಟಾ, ಡೆಲ್ಟಾ, ಇತರೆ ಇಟಿಎ, ಕಪ್ಪಾ, ಪಂಗೋ ವರದಿಯಾಗಿದ್ದರೂ ತಕ್ಷಣವೇ ಅಂತ್ಯ ಕಂಡಿವೆ. ಆದರೆ 2023 ರಲ್ಲಿ ಓಮಿಕ್ರಾನ್ ರೂಪಾಂತರಿ ತಳಿ ವರದಿಯಾಗಿದ್ದು, ತದನಂತರದ ದಿನದಲ್ಲಿ ಓಮಿಕ್ರಾನ್ ಸಬ್-ವೇರಿಯಂಟ್ಗಳಾದ ಬಿಎ 1.1.5, ಬಿ.ಎ.1, ಬಿ.ಎ2, ಬಿ.ಎ.3, ಬಿ.ಎ.4, ಬಿ.ಎ.5 ಹಾಗೂ ಬಿ.ಎ.5 ಎಕ್ಸ್ಬಿಬಿ ವರದಿಯಾಗಿದೆ.
ಓಮಿಕ್ರಾನ್ನ ಉಪತಳಿಗಳು ಬೇರೆ ಬೇರೆ ವೇಷಗಳಲ್ಲಿ ಪತ್ತೆಯಾದರೂ ಆರೋಗ್ಯದ ಮೇಲೆ ಯಾವುದೇ ರೀತಿಯಾದ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಅನ್ನೋದು ಸದ್ಯ ನಿಟ್ಟುಸಿರಿನ ವಿಚಾರ. ಇಲ್ಲಿತನಕ 20 ಸಾವಿರ ಮಂದಿಗೆ ರೂಪಾಂತರಿ ಸಂಬಂಧ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾದ ಕೋವಿಡ್ ಸೋಂಕಿತರ ಮಾದರಿಗಳಲ್ಲಿ 20,304 ಮಂದಿಯಲ್ಲಿ ರೂಪಾಂತರಿ ಹಾಗೂ ಉಪತಳಿಗಳು ವರದಿಯಾಗಿವೆ. 14,199 ಮಂದಿಯಲ್ಲಿ ಓಮಿಕ್ರಾನ್, 9928 ಮಂದಿಯಲ್ಲಿ ಒಮಿಕ್ರಾನ್ ಉಪತಳಿ ಬಿಎ 2, 1873 ಮಂದಿಯಲ್ಲಿ ಬಿಎ1, 1007 ಮಂದಿಯಲ್ಲಿ ಎಕ್ಸ್ಬಿಬಿ ಉಪತಳಿ ವರದಿಯಾಗಿದ್ದು, ಉಳಿದ ಉಪತಳಿ ಹೆಚ್ಚಾಗಿ ಪತ್ತೆಯಾಗಿಲ್ಲ. ಒಟ್ಟಾರೆ ಸದ್ದಿಲ್ಲದೇ 6 ಉಪತಳಿಗಳು ಬಂದು ಹೋಗಿವೆ ಎಂದು ತಜ್ಞರು ಹೇಳಿದ್ದಾರೆ.