ಲೋಕಸಭೆ-2024 ಸಿ-ವೋಟರ್ ಸಮೀಕ್ಷೆ – ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

ಲೋಕಸಭೆ-2024 ಸಿ-ವೋಟರ್ ಸಮೀಕ್ಷೆ –  ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

ದೇಶದಲ್ಲಿ ರಾಜಕಾರಣಿಗಳು, ರಾಜಕೀಯ ಪಕ್ಷಗಳ ಫೋಕಸ್ ಈಗ ಕಂಪ್ಲೀಟ್ ಆಗಿ 2024ರ ಲೋಕಸಭೆ ಚುನಾವಣೆಯತ್ತ ಶಿಫ್ಟ್ ಆಗಿದೆ. ಹ್ಯಾಟ್ರಿಕ್ ಗೆಲುವಿಗೆ ಬಿಜೆಪಿ ಈಗಾಗ್ಲೇ ಭರ್ಜರಿ ತಯಾರಿ ಶುರು ಮಾಡಿದೆ. ಅತ್ತ ಮೋದಿಯನ್ನ ತಡೆಯೋಕೆ ಇಂಡಿಯಾ ಮೈತ್ರಿಕೂಟದ ಹೆಸರಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳೆಲ್ಲಾ ಒಂದಾಗಿವೆ. ಇದರ ಮಧ್ಯೆ ಲೋಕಸಭೆ ಚುನಾವಣೆಗೆ ಕೆಲ ತಿಂಗಳುಗಳಷ್ಟೇ ಬಾಕಿರೋವಾಗ ಸಮೀಕ್ಷೆಯ ರಿಸಲ್ಟ್ ಒಂದು ಹೊರಬಿದ್ದಿದೆ. ಸಿ-ವೋಟರ್​ ದೇಶಾದ್ಯಂತ ಸಮೀಕ್ಷೆ ನಡೆಸಿ ತನ್ನ ರಿಪೋರ್ಟ್ ಕಾರ್ಡ್ ನೀಡಿದೆ. 2024ರ ಲೋಕಸಭೆ ಚುನಾವಣೆಯ ಭವಿಷ್ಯ ನುಡಿದಿದೆ. ಇವೆಲ್ಲದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ವಿರುದ್ಧ ಸೇಡು ತೀರಿಸಿಕೊಳ್ತಾರಾ ಕುಮಾರಣ್ಣ? – ಹೇಗಿದೆ ಮಂಡ್ಯ ರಾಜಕೀಯ..!? 

ಸಿ-ವೋಟರ್​ ಸಮೀಕ್ಷೆ ಪ್ರಕಾರ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ. ಆದ್ರೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟಕ್ಕೆ ಹೆಚ್ಚು ಅಡ್ವಾಂಟೇಜ್ ಸಿಗಲಿದೆ.

ಸಿ-ವೋಟರ್ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶದ 29 ಲೋಕಸಭಾ ಕ್ಷೇತ್ರಗಳ ಪೈಕಿ 27 ರಿಂದ 29 ಕ್ಷೇತ್ರಗಳನ್ನ ಬಿಜೆಪಿ ಗೆಲ್ಲೋ ಸಾಧ್ಯತೆ ಇದೆ. ಅಂದ್ರೆ ಮಧ್ಯಪ್ರದೇಶದಲ್ಲಿ ಕ್ಲೀನ್​ಸ್ವೀಪ್​ ಮಾಡೋ ಎಲ್ಲಾ ಅವಕಾಶಗಳೂ ಬಿಜೆಪಿಗೆ ಇದೆ. ಇತ್ತೀಚೆಗಷ್ಟೇ ನಡೆದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿತ್ತು. 163 ಕ್ಷೇತ್ರಗಳನ್ನ ಬಾಚಿಕೊಂಡು ಮತ್ತೊಮ್ಮೆ ಅಧಿಕಾರಕ್ಕೇರಿದೆ. ವಿಧಾನಸಭೆ ಚುನಾವಣೆಯಲ್ಲೇ ಬಿಜೆಪಿ ಇಷ್ಟೊಂದು ಮಾರ್ಜಿನ್​​ನಲ್ಲಿ ಗೆದ್ದಿರೋವಾಗ ಇನ್ನು ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಕ್ಲೀನ್​ಸ್ವೀಪ್ ಮಾಡಿದ್ರೂ ಆಶ್ಚರ್ಯ ಇಲ್ಲ. ಹಾಗೆ ನೋಡಿದ್ರೆ ಮಧ್ಯೆ ಪ್ರದೇಶದಲ್ಲಿ ಪ್ರಧಾನಿ ಮೋದಿ ಹೆಚ್ಚಿನ ಪ್ರಚಾರ ನಡೆಸಬೇಕಾದ ಅನಿವಾರ್ಯತೆಯೇ ಇಲ್ಲ. ಯಾಕಂದ್ರೆ ವಿಧಾನಸಭೆ ಚುನಾವಣೆ ವೇಳೆಯೂ ಮೋದಿಯನ್ನ ಮುಂದಿಟ್ಟುಕೊಂಡೇ ಬಿಜೆಪಿ ಅಖಾಡಕ್ಕಿಳಿದಿತ್ತು. ಖುದ್ದು ಮೋದಿಯೇ ಹಲವು ಱಲಿಗಳನ್ನ ನಡೆಸಿದ್ರು. ಹೀಗಾಗಿ ಮಧ್ಯಪ್ರದೇಶದಲ್ಲಿ ಮೋದಿ ಹವಾ ಹಾಗೆಯೇ ಇದ್ದು, ಲೋಕಸಭೆ ಚುನಾವಣೆ ಗೆಲ್ಲೋಕೂ ಹೆಲ್ಪ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಇನ್ನು ಸಿ-ವೋಟರ್ ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಹೆಚ್ಚಂದ್ರೆ 2 ಕ್ಷೇತ್ರಗಳನ್ನ ಗೆಲ್ಲಬಹುದಂತೆ. ಇಲ್ಲದಿದ್ರೆ ಸೊನ್ನೆ ಸುತ್ತಬಹುದು ಅಂತಾ ಸಮೀಕ್ಷಾ ಫಲಿತಾಂಶದಲ್ಲಿ ಉಲ್ಲೇಖವಾಗಿದೆ.

ರಾಜಸ್ಥಾನದಲ್ಲೂ ಕ್ಲೀನ್​ ಸ್ವೀಪ್ ಮಾಡುತ್ತಾ ಬಿಜೆಪಿ?

ಮಧ್ಯಪ್ರದೇಶದ ಜೊತೆಗೆ ರಾಜಸ್ಥಾನ ವಿಧಾನಸಭೆ ಚುನಾವಣೆ ರಿಸಲ್ಟ್ ಕೂಡ ಬಂದಿತ್ತು. ರಾಜಸ್ಥಾನದಲ್ಲೂ ಬಿಜೆಪಿಯೇ ಅಧಿಕಾರಕ್ಕೇರಿದೆ. ಲೋಕಸಭೆ ಚುನಾವಣೆ ವಿಚಾರಕ್ಕೆ ಬರೋದಾದ್ರೆ ರಾಜಸ್ಥಾನದಲ್ಲಿ ಒಟ್ಟು 25 ಕ್ಷೇತ್ರಗಳಿವೆ. ಸಿ-ವೋಟರ್ ಸಮೀಕ್ಷೆ ಪ್ರಕಾರ ರಾಜಸ್ಥಾನದಲ್ಲಿ ಬಿಜೆಪಿ 23-25 ಸ್ಥಾನಗಳನ್ನ ಗೆಲ್ಲುವ ಸಾಧ್ಯತೆ ಇದೆ. ಮಧ್ಯಪ್ರದೇಶದಂತೆ ಇಲ್ಲೂ ಕೂಡ ಕ್ಲೀನ್​ಸ್ವೀಪ್ ಮಾಡುವ ಅವಕಾಶ ಬಿಜೆಪಿಗೆ ಇದೆ. ಇನ್ನು ಕಾಂಗ್ರೆಸ್ ಮ್ಯಾಕ್ಸಿಮಮ್ ಅಂದ್ರೆ 2 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ಸಿ-ವೋಟರ್ ಸಮೀಕ್ಷೆ ವರದಿ ಮಾಡಿದೆ. ರಾಜಸ್ಥಾನದಲ್ಲೂ ಅಷ್ಟೇ, ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆಯನ್ನ ಗೆದ್ದಿರೋದು ಲೋಕಸಭೆಯಲ್ಲೂ ಬಿಜೆಪಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿರಲಿದೆ. ರಾಜಸ್ಥಾನದಲ್ಲೂ ಜನರ ಒಲವು ಮೋದಿ ಕಡೆಗೆ ಇದ್ದು, ಸದ್ಯದ ಸ್ವಿಚ್ಯುವೇಶನ್​ನಲ್ಲಿ ಬಿಜೆಪಿ ಗೆಲ್ಲೋ ಫೇವರೇಟ್ ಪಕ್ಷವಾಗಿದೆ.

ಛತ್ತೀಸ್​ ಗಢದಲ್ಲೂ ಮೋಡಿ ಮಾಡ್ತಾರಾ ಮೋದಿ?

ಛತ್ತೀಸ್​ಗಢದಲ್ಲೂ ಅಷ್ಟೇ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದ ಕಾಂಗ್ರೆಸ್​ಗೆ ಅಕ್ಷರಶ: ಶಾಕ್ ಕೊಟ್ಟಿತ್ತು. ವಿಧಾನಸಭೆಯಲ್ಲಿದ್ದ ಗೆದ್ದಿದ್ದ ಬಿಜೆಪಿಗೆ ಲೋಕಸಭೆಯಲ್ಲೂ ಅದೇ ರಿಸಲ್ಟ್ ಸಿಗೋ ಸಾಧ್ಯತೆ ಇದೆ. ಸಿ-ವೋಟರ್ ಸಮೀಕ್ಷೆ ಪ್ರಕಾರ ಛತ್ತೀಸ್​ಗಢದ 11 ಲೋಕಸಭಾ ಕ್ಷೇತ್ರಗಳ ಪೈಕಿ 9 – 11 ಕ್ಷೇತ್ರಗಳನ್ನ ಬಿಜೆಪಿ ಗೆಲ್ಲಬಹುದಂತೆ. ಕಾಂಗ್ರೆಸ್​ ಗರಿಷ್ಠ ಅಂದ್ರೆ 2 ಕ್ಷೇತ್ರಗಳನ್ನ ಗೆಲ್ಲಬಹುದು. ಇಲ್ಲವಾದಲ್ಲಿ ಬಿಜೆಪಿಯೇ ಕ್ಲೀನ್​ಸ್ವೀಪ್ ಮಾಡಬಹುದು ಅಂತಾ ಸಿ-ವೋಟರ್ ಭವಿಷ್ಯ ನುಡಿದಿದೆ.

ನಿರ್ಣಾಯಕ ಪಂಚ ರಾಜ್ಯಗಳಲ್ಲೂ ಬಿಜೆಪಿ ಗೆಲುವು?

ಇನ್ನು ಪಂಜಾಬ್, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ಮತ್ತು ಉತ್ತರಪ್ರದೇಶ ಈ ಐದು ರಾಜ್ಯಗಳಲ್ಲಿ ಒಟ್ಟು 223 ಲೋಕಸಭಾ ಕ್ಷೇತ್ರಗಳಿವೆ. ಹೀಗಾಗಿ ಈ ಪಂಚರಾಜ್ಯಗಳ ಫಲಿತಾಂಶ ಲೋಕಸಭೆಯಲ್ಲಿ ಡಿಸೈಡಿಂಗ್ ಫ್ಯಾಕ್ಟರ್ ಆಗಲಿದೆ. ಈ ಐದು ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನ ಗೆದ್ರಷ್ಟೇ ಕೇಂದ್ರದಲ್ಲಿ ಅಧಿಕಾರಕ್ಕೇರೋಕೆ ಸಾಧ್ಯ. ಸಿ-ವೋಟರ್ ಸಮೀಕ್ಷೆ ವರದಿ ಪ್ರಕಾರ ಈ 5 ರಾಜ್ಯಗಳ 223 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ತನ್ನ ಮಿತ್ರ ಪಕ್ಷಗಳ ಜೊತೆಗೂಡಿ 125-130 ಸ್ಥಾನಗಳನ್ನ ಗೆಲ್ಲಬಹುದಂತೆ. ಅದ್ರಲ್ಲೂ ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 73-75 ಸೀಟ್​​ಗಳು ಬಿಜೆಪಿ ಬುಟ್ಟಿಗೆ ಬೀಳಬಹುದು. ಕಾಂಗ್ರೆಸ್ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಸೇರಿ ಯುಪಿನಲ್ಲಿ 4-6 ಕ್ಷೇತ್ರಗಳನ್ನ ಗೆಲ್ಲಬಹುದು. ಮಾಯಾವತಿಯ ಬಿಎಸ್​​ಪಿ ಅಬ್ಬಬ್ಬಾ ಅಂದ್ರೆ 2 ಕ್ಷೇತ್ರ ಗೆಲ್ಲಬಹುದಷ್ಟೇ ಅಂತಾ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.

ಪಂಜಾಬ್​ ನಲ್ಲಿ ಆಪ್​ ಗೆ ಕಾಂಗ್ರೆಸ್ ಹೊಡೆತ?

ಇನ್ನು ಸಿ-ವೋಟರ್ ಸಮೀಕ್ಷೆ ಪ್ರಕಾರ ಪಂಜಾಬ್​​ನಲ್ಲಿ ಲೋಕಸಭೆ ಚುನಾವಣೆ ತುಂಬಾನೆ ಇಂಟ್ರೆಸ್ಟಿಂಗ್ ಆಗಿರಲಿದೆ. ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಅಧಿಕಾರದಲ್ಲಿದೆ. ಆದ್ರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲುವ ಫೇವರೇಟ್ ಪಾರ್ಟಿಯಾಗಿದೆ. ಪಂಜಾಬ್​ನಲ್ಲಿ ಒಟ್ಟು 13 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್ 5-7 ಸ್ಥಾನಗಳನ್ನ ಗೆಲ್ಲಬಹುದು. ಆಮ್ ಆದ್ಮಿ ಪಾರ್ಟಿ 4-6 ಕ್ಷೇತ್ರಗಳನ್ನ ಗೆಲ್ಲಬಹುದು. ಬಿಜೆಪಿ ಮತ್ತು ಶಿರೋಮಣಿ ಅಕಾಲಿದಳ ಮ್ಯಾಕ್ಸಿಮಮ್ ಅಂದ್ರೆ ತಲಾ 2 ಸ್ಥಾನಗಳನ್ನ ಗೆಲಬಹುದಷ್ಟೇ ಅಂತಾ ಸಿ-ವೋಟರ್ ಸಮೀಕ್ಷೆಯಲ್ಲಿ ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಮೇಲೆ ಅಘಾಡಿ ಸವಾರಿ? 

ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಕೂಡ ತುಂಬಾನೆ ಇಂಟ್ರೆಸ್ಟಿಂಗ್ ಆಗಿರಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್-ಶಿವಸೇನೆ-ಎನ್​ ಸಿಪಿ ಮೈತ್ರಿಕೂಟ 26-28 ಸ್ಥಾನಗಳನ್ನ ಗೆಲ್ಲಬಹುದಂತೆ. ಬಿಜೆಪಿ-ಶಿಂಧೆ ಬಣದ ಬಿಜೆಪಿ ಮತ್ತು ಅಜಿತ್​ ಪವಾರ್​ ಬಣದ ಎನ್​ ಸಿಪಿ ಸೇರಿ 19-21 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ಸಿ-ವೋಟರ್ ವರದಿ ಮಾಡಿದೆ. ಹೀಗಾಗಿ ಸದ್ಯದ ಟ್ರೆಂಡ್ ಪ್ರಕಾರ ಲೋಕಸಭೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆ ಇದೆ.

ದೀದಿ ಕೋಟೆಯೊಳಗೂ ಮೋದಿಗೆ ಸವಾಲ್?

ಇನ್ನು ಪಶ್ಚಿಮ ಬಂಗಾಳದಲ್ಲೂ ಅಷ್ಟೇ ಬಿಜೆಪಿ ದೊಡ್ಡ ಮಟ್ಟದ ಚಾಲೆಂಜ್ ಎದುರಿಸಲಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿರೋ ಬಂಗಾಳದಲ್ಲಿ 16-18 ಸ್ಥಾನಗಳನ್ನ ಬಿಜೆಪಿ ಗೆದ್ರೆ, ಟಿಎಂಸಿ 23-25 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ಸಿ-ವೋಟರ್ ಸಮೀಕ್ಷೆ ವರದಿ ಮಾಡಿದೆ. ಹೀಗಾಗಿ ಬಂಗಾಳದಲ್ಲಿ ಮಮತಾ ಕೋಟೆಯನ್ನ ಭೇದಿಸೋದೆ ಬಿಜೆಪಿ ಮುಂದಿರೋ ಮತ್ತೊಂದು ಬಹುದೊಡ್ಡ ಸವಾಲು.

ಹಾಗೆಯೇ ಬಿಹಾರದಲ್ಲೂ ಈ ಬಾರಿ ಬಿಜೆಪಿಯ ಆಟ ನಡೆಯೋದು ಡೌಟ್. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ. ಸಿ-ವೋಟರ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್-ಜೆಡಿಯು-ಆರ್ ​​ಜೆಡಿ ಅಂದ್ರೆ ಇಂಡಿಯಾ ಮೈತ್ರಿಕೂಟದ ಸದಸ್ಯರು 21-23 ಕ್ಷೇತ್ರಗಳನ್ನ ಗೆಲ್ಲೋ ಸಾಧ್ಯತೆ ಇದೆ. ಇನ್ನು ಬಿಜೆಪಿ ಮಿತ್ರಪಕ್ಷಗಳ ಜೊತೆ ಸೇರಿ 16-18 ಕ್ಷೇತ್ರಗಳನ್ನ ಗೆಲ್ಲಬಹುದಂತೆ.

ಇನ್ನು ಗುಜರಾತ್ ಮತ್ತು ಅಸ್ಸಾಂನಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಓವರ್​ಆಲ್​ ಆಗಿ ಹಿಂದಿ ಭಾಷಿಕ 10 ರಾಜ್ಯಗಳ 333 ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ ಎನ್ ​ಡಿಎ 210 ಕ್ಷೇತ್ರಗಳನ್ನ ಗೆಲ್ಲಬಹುದು ಅಂತಾ ಸಿ-ವೋಟರ್​ ಸಮೀಕ್ಷೆ ವರದಿ ಮಾಡಿದೆ. ಆದ್ರೆ ಕಮಲ ಪಾಳಯಕ್ಕೆ ಚಾಲೆಂಜ್ ಆಗಿರೋದು ದಕ್ಷಿಣದ ರಾಜ್ಯಗಳು. ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಲಿದೆ ಅಂತಾ ಸಿ-ವೋಟರ್ ಸಮೀಕ್ಷೆ ಕೂಡ ವರದಿ ಮಾಡಿದೆ.

ಕರ್ನಾಟಕದಲ್ಲಿ ಯಾರಿಗೆ ಎಷ್ಟು ಸೀಟು?

ದಕ್ಷಿಣ ರಾಜ್ಯಗಳ ಪೈಕಿ ಬಿಜೆಪಿಗೆ ಅಡ್ವಾಂಟೇಜ್ ಆಗಿರೋದು ಒಂದೇ ರಾಜ್ಯದಲ್ಲಿ. ಅದು ಕರ್ನಾಟಕ. ಸಿ-ವೋಟರ್ ಸಮೀಕ್ಷೆ ಪ್ರಕಾರ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 22-24 ಸ್ಥಾನಗಳನ್ನ ಗೆಲ್ಲಬಹುದು. ಕಾಂಗ್ರೆಸ್ 4-6 ಕ್ಷೇತ್ರಗಳನ್ನ ಗೆಲ್ಲುವ ಸಾಧ್ಯತೆ ಇದೆ ಅಂತಾ ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದು, ಹೀಗಾಗಿ ಕನಿಷ್ಠ ನಾಲ್ಕು ಕ್ಷೇತ್ರಗಳನ್ನ ಜೆಡಿಎಸ್​​ಗೆ ಬಿಟ್ಟು ಕೊಡುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಈ ಬಾರಿ ಎಷ್ಟು ಸ್ಥಾನಗಳನ್ನ ಗೆಲ್ಲಬಹುದು ಅನ್ನೋದು ಇನ್ನಷ್ಟು ಕುತೂಹಲ ಕೆರಳಿಸಿದೆ.

ಸದ್ಯ ಪ್ರಧಾನಿ ಮೋದಿ 2024ರಲ್ಲಿ 400+ ಸೀಟ್​​ಗಳನ್ನ ಗೆಲ್ಲೋ ಟಾರ್ಗೆಟ್ ಇಟ್ಟುಕೊಂಡಿದ್ದಾರೆ. ಕನಿಷ್ಠ 350+ ಕ್ಷೇತ್ರಗಳನ್ನಾದ್ರೂ ಗೆಲ್ಲಲೇಬೇಕು ಎಂದುಕೊಂಡಿದ್ದಾರೆ. ಬಿಹಾರ, ಮಹಾರಾಷ್ಟ್ರ, ಒಡಿಶಾ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಹೊಡೆತ ತಿನ್ನೋ ಸಾಧ್ಯತೆ ಇದ್ದು, ಹೀಗಾಗಿ ಮೋದಿಯ 350+, 400+ ಟಾರ್ಗೆಟ್ ರೀಚ್​ ಆಗೋದು ಬಿಜೆಪಿಗೆ ಸಾಧ್ಯವಿಲ್ಲ ಅಂತಾ ಸಿ-ವೋಟರ್​​ ಸಮೀಕ್ಷಾ ಫಲಿತಾಂಶದಿಂದ ಬಹಿರಂಗವಾಗಿದೆ. ಆದ್ರೂ 2024ರಲ್ಲಿ ಮತ್ತೆ ಮೋದಿ ಸರ್ಕಾರವೇ ಆಡಳಿತಕ್ಕೆ ಬರೋದು ಗ್ಯಾರಂಟಿ ಅನ್ನೋದಾಗಿ ಸಮೀಕ್ಷೆ ಭವಿಷ್ಯ ನುಡಿದಿದೆ.

Sulekha