ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಆಡೋದು ಪಕ್ಕಾ..! – ಐಪಿಎಲ್ ಬಗ್ಗೆ ಹಿಟ್‌ಮ್ಯಾನ್‌ ಮೌನ..!

ರೋಹಿತ್ ಶರ್ಮಾ ಟಿ20 ವಿಶ್ವಕಪ್‌ನಲ್ಲಿ ಆಡೋದು ಪಕ್ಕಾ..! – ಐಪಿಎಲ್ ಬಗ್ಗೆ ಹಿಟ್‌ಮ್ಯಾನ್‌ ಮೌನ..!

ಸೌತ್​ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಮ್ಯಾಚ್​ಗೂ ಮುನ್ನ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಒಂದು ಇಂಟ್ರೆಸ್ಟಿಂಗ್ ಪ್ರೆಸ್​​ಮೀಟ್ ಮಾಡಿದ್ದಾರೆ. ಈ ಪ್ರೆಸ್​ಮೀಟ್​ನಲ್ಲಿ ಹಲವು ವಿಚಾರಗಳನ್ನ ರೋಹಿತ್ ಬಹಿರಂಗಪಡಿಸಿದ್ದು, ಜೊತೆಗೆ ತಮ್ಮ ಕೆರಿಯರ್ ಫ್ಯೂಚರ್ ಬಗ್ಗೆ ಕೆಲ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಟಿ20 ವರ್ಲ್ಡ್​​ಕಪ್​ನಲ್ಲಿ ಆಡೋ ಬಗ್ಗೆಯೂ ಸ್ಟೇಟ್​​ಮೆಂಟ್ ಕೊಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ವರ್ಲ್ಡ್​ಕಪ್ ಫೈನಲ್​ ಸೋಲಿನ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾ ಮಾಡುತ್ತಾ ಮ್ಯಾಜಿಕ್ – ಮೊದಲ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಪಡೆಯ ಲೆಕ್ಕಾಚಾರಗಳೇನು?

ವರ್ಲ್ಡ್​​ಕಪ್​ ಫೈನಲ್​ ಸೋಲಿನ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದಿಷ್ಟೇ.. 10 ಮ್ಯಾಚ್​ಗಳನ್ನ ಯಾವ ರೀತಿ ಆಡಿದ್ವಿ ಅನ್ನೋದನ್ನ ನೀವೆಲ್ಲಾ ನೋಡಿದ್ದೀರಿ. ಆದ್ರೆ ಫೈನಲ್​​ನಲ್ಲಿ ಕೆಲ ಏರಿಯಾದಲ್ಲಿ ನಾವು ಪರ್ಫೆಕ್ಟ್ ಎಕ್ಸಿಕ್ಯೂಟ್ ಮಾಡಿಲ್ಲ. ಹೀಗಾಗಿ ಸೋತುಹೋದೆವು. ಫೈನಲ್​​ ಮ್ಯಾಚ್​ನ ಸೋಲನ್ನ ಅರಗಿಸಿಕೊಳ್ಳೋದು ತುಂಬಾ ಕಷ್ಟ. ನನಗೆ ಆ ಸೋಲಿನಿಂದ ಹೊರ ಬರುವುದು ಕಷ್ಟವಾಗಿದೆ. ಬಟ್ ಲೈಫ್​ನಲ್ಲಿ ಮೂವ್​ಆನ್ ಆಗಲೇಬೇಕು ಅಂತಾ ರೋಹಿತ್ ಹೇಳಿದ್ರು. ಸ್ಟಿಲ್​ ವರ್ಲ್ಡ್​​ಕಪ್​​ ಸೋಲಿನಿಂದ ರೋಹಿತ್ ಕಂಪ್ಲೀಟ್ ಆಗಿ ಇನ್ನೂ ಹೊರಬಂದಿಲ್ಲ ಅನ್ನೋದು ಅವರ ಫೇಸ್​ನಲ್ಲೇ ಕ್ಲೀಯರ್ ಆಗಿ ಕಾಣ್ತಿತ್ತು.

ಇನ್ನು ಪ್ರೆಸ್​​ಮೀಟ್​​ನಲ್ಲಿ ಇನ್ನೊಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನ ರೋಹಿತ್ ಪ್ರಸ್ತಾಪಿಸಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧ ಇದುವರೆಗೂ ಟೀಂ ಇಂಡಿಯಾ ಒಂದೇ ಒಂದು ಬಾರಿ ಟೆಸ್ಟ್ ಸೀರಿಸ್ ಗೆದ್ದಿಲ್ಲ. ಹೀಗಾಗಿ ಈ ಬಾರಿ ರೋಹಿತ್ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಸೀರಿಸ್ ಗೆದ್ರೆ ಅದೊಂದು ದೊಡ್ಡ ಸಾಧನೆಯಾಗಲಿದೆ. ರೋಹಿತ್ ಟೀಂ ಇತಿಹಾಸವನ್ನೇ ಸೃಷ್ಟಿಸಿದಂತಾಗುತ್ತೆ. ಹೀಗಾಗಿಯೇ ಈ ಸೀರಿಸ್​ ತುಂಬಾ ಸ್ಪೆಷಲ್ ಆಗಿರೋದು. ಸೋ ರೋಹಿತ್ ಶರ್ಮಾ ಪ್ರೆಸ್​ಮೀಟ್ ವೇಳೆ ಜರ್ನಲಿಸ್ಟ್ ಒಬ್ರು ಕ್ವಶ್ಚನ್ ಕೇಳ್ತಾರೆ. ಸೌತ್​ ಆಫ್ರಿಕಾದಲ್ಲಿ ಟೆಸ್ಟ್ ಸೀರಿಸ್ ಗೆದ್ರೆ ವರ್ಲ್ಡ್​​ಕಪ್​​ ಸೋಲಿನಿಂದ ಓವರ್​ಕಮ್ ಆಗಬಹುದಾ ಅನ್ನೋದಾಗಿ ಕೇಳ್ತಾರೆ. ಅದಕ್ಕೆ ರೋಹಿತ್ ವರ್ಲ್ಡ್​​ಕಪ್ ಏನಿದ್ರೂ ವರ್ಲ್ಡ್​​ಕಪ್ಪೇ.. ಈ ಸೀರಿಸ್​ಗೂ ವರ್ಲ್ಡ್​ಕಪ್​ಗೂ ಕಂಪೇರ್ ಮಾಡೋಕೆ ಸಾಧ್ಯವೇ ಇಲ್ಲ ಅಂತಾ ಹೇಳಿದ್ದಾರೆ. ಇದರ ಜೊತೆಗೆ ಇನ್ನೊಂದು ಮಾತು ಹೇಳಿದ್ದಾರೆ. ಏನೋ ಒಂದು ದೊಡ್ಡದು ನಮಗೆ ಬೇಕಿದೆ. ನಾವು ತುಂಬಾ ಕಷ್ಟಪಟ್ಟಿದ್ದೀವಿ. ಹೀಗಾಗಿ ದೊಡ್ಡ ಅಚೀವ್​ಮೆಂಟ್ ಮಾಡಲೇಬೇಕಿದೆ. ದೇಶಕ್ಕೆ..ಜನತೆಗೆ ಗ್ಲೋರಿ ತಂದುಕೊಡಬೇಕಿದೆ. ಇದಕ್ಕಾಗಿ ಟೀಮ್​ನ ಪ್ರತಿಯೊಬ್ಬ ಪ್ಲೇಯರ್ ಕೂಡ ಡೆಸ್ಪರೇಟ್ ಆಗಿದ್ದಾರೆ ಅಂತಾ ರೋಹಿತ್ ಸ್ಟೇಟ್​​ಮೆಂಟ್ ಕೊಟ್ಟಿದ್ದಾರೆ.

ರೋಹಿತ್​ ಇಲ್ಲಿ ಡೆಸ್ಪರೇಟ್ ಅನ್ನೋ ಪದ ಬಳಸ್ತಾರೆ. ಟೀಮ್​ನ ಪ್ರತಿಯೊಬ್ಬ ಪ್ಲೇಯರ್​​ ಕೂಡ ದೊಡ್ಡ ಅಚೀವ್​ಮೆಂಟ್​​ಗಾಗಿ ಡೆಸ್ಪರೇಟ್ ಆಗಿದ್ದಾರೆ ಅನ್ನೋದು. ಅದಕ್ಕೆ ಡೆಸ್ಪರೇಟ್ ಅಂದರೆ ಟಿ-20 ವರ್ಲ್ಡ್​​ಕಪ್ ಗೆಲ್ಲೋದಾ ಅನ್ನೋ ಪ್ರಶ್ನೆಯನ್ನ ರೋಹಿತ್​ಗೆ ಕೇಳ್ತಾರೆ. ನಮಗೆ ಯಾವ ಟೂರ್ನಿಯಲೆಲ್ಲ್ಲಾ ಆಡೋಕೆ ಚಾನ್ಸ್ ಸಿಗುತ್ತೋ ಅಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಡಬೇಕು. ಟಿ-20 ವರ್ಲ್ಡ್​​ಕಪ್​ ವಿಚಾರವಾಗಿ ನಿಮಗೆ ಮುಂದಕ್ಕೆ ಆನ್ಸರ್​ ಸಿಗುತ್ತೆ ಅಂತಾ ಮಾರ್ಮಿಕವಾಗಿ ಆನ್ಸರ್ ಮಾಡ್ತಾರೆ. ರೋಹಿತ್​ ಹೇಳಿರೋ ಪ್ರಕಾರ ಸದ್ಯ ಅವರ ಫ್ಯೂಚರ್ ಪ್ಲ್ಯಾನ್ ಇಷ್ಟೇ. ತಮಗೆ ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಳ್ಳೋದು. ಆದ್ರೂ ಟಿ-20 ವರ್ಲ್ಡ್​​ಕಪ್ ಆಡಬೇಕು ಅನ್ನೋ ಟಾರ್ಗೆಟ್​​ನ್ನಂತೂ ರೋಹಿತ್​​ ಇಟ್ಕೊಂಡಿರೋದು ನಿಜಾನೇ. ಯಾಕಂದ್ರೆ ರೋಹಿತ್ ಇಲ್ಲಿ ಇನ್ನೊಂದು ಮಾತನ್ನ ಕೂಡ ಹೇಳಿದ್ರು. ನಾನೀಗ ಕೆರಿಯರ್​ನ ಬೆಸ್ಟ್​ ಫಾರ್ಮ್​ನಲ್ಲಿ ಇದ್ದೇನೆ ಅನ್ನೋದಾಗಿ. ಇದ್ರ ಅರ್ಥ, ಟಿ-20 ವರ್ಲ್ಡ್​ಕಪ್ ಆಡೋಕೆ ರೆಡಿ ಅನ್ನೋ ಆ್ಯಂಗಲ್​​ನಲ್ಲೇ ರೋಹಿತ್ ಮಾತನಾಡಿದ್ದಾರೆ. ನೀವು ಗಮನಿಸಿರ್ತೀರಾ, ವಂಡೇ ವರ್ಲ್ಡ್​​ಕಪ್​ನಲ್ಲೂ ಅಷ್ಟೇ ರೋಹಿತ್ ಎವರೇಜ್ ಬಗ್ಗೆ ತಲೆಯೇ ಕೆಡಿಸಿಕೊಂಡಿರಲಿಲ್ಲ. ಓಪನಿಂಗ್ ಬಂದು ಟಿ-20 ಸ್ಟೈಲ್​​ನಲ್ಲಿ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಮಾಡಿದ್ರು. ವಂಡೇನಲ್ಲೂ ಕೂಡ ಟಿ20 ಸ್ಟ್ರೈಕ್​​ರೇಟ್​​ನಲ್ಲೇ ಆಡಿದ್ರು. ರೋಹಿತ್​ ವಂಡೇ ವರ್ಲ್ಡ್​​ಕಪ್​ನಲ್ಲಿ ಆಡಿದ್ದನ್ನ ನೋಡಿದ್ರೆ ಟಿ-20 ವರ್ಲ್ಡ್​​ಕಪ್​​ಗೆ ಕಂಪ್ಲೀಟ್ ಆಗಿ ಫಿಟ್ ಆಗಿದೆ. ಕಳೆದ ಒಂದು ವರ್ಷದಿಂದ ರೋಹಿತ್ ಟೀಂ ಇಂಡಿಯಾ ಪರ ಯಾವುದೇ ಟಿ-20 ಮ್ಯಾಚ್​ಗಳನ್ನ ಆಡಿಲ್ಲ ಅನ್ನೋದನ್ನ ಬಿಟ್ರೆ, ರೋಹಿತ್​ ಪರ್ಫಾಮೆನ್ಸ್​​ನಲ್ಲೇನೂ ಡೌನ್ ಆಗಿಲ್ಲ. ವಂಡೇ ವರ್ಲ್ಡ್​​ಕಪ್​​ ಪರ್ಫಾಮೆನ್ಸ್​​ನ್ನೇ ಟಿ-20 ವರ್ಲ್ಡ್​​ಕಪ್​ನಲ್ಲೂ ಮೇಂಟೇನ್ ಮಾಡಿದ್ರೆ ಸಾಕು.

ಇಲ್ಲಿ ಇನ್ನೊಂದು ವಿಚಾರವನ್ನ ಕೂಡ ಹೇಳಲೇಬೇಕು. ರೋಹಿತ್​ ಶರ್ಮಾ ಪ್ರೆಸ್​​ಮೀಟ್ ವೇಳೆ ಐಪಿಎಲ್​ ಬಗ್ಗೆಯೂ ಪ್ರಶ್ನೆ ಕೇಳಲಾಗಿತ್ತು. ಆದ್ರೆ, ರೋಹಿತ್​ ಐಪಿಎಲ್​ ವಿಚಾರವಾಗಿ ಸದ್ಯ ಏನನ್ನೂ ಮಾತನಾಡದೆ ಇರೋದಕ್ಕೆ ತೀರ್ಮಾನಿಸಿದ್ದಾರೆ. ನನ್ನ ಬಳಿ ಈಗ ಐಪಿಎಲ್​​ ಬಗ್ಗೆ ಯಾವುದೇ ಕ್ವಶ್ಚನ್ ಕೇಳಬೇಡಿ. ಓನ್ಲಿ ಇಂಟರ್​ನ್ಯಾಷನಲ್​ ಕ್ರಿಕೆಟ್ ಬಗ್ಗೆಯಷ್ಟೇ ಮಾತನಾಡಿ ಅಂದರು. 2024ರ ಐಪಿಎಲ್​​ ವೇಳೆಗೆ ರೋಹಿತ್​ ನೆಕ್ಸ್ಟ್ ಸ್ಟೆಪ್ ಈಗಲೂ ಟಾಪ್​ ಸೀಕ್ರೆಟ್ ಆಗಿಯೇ ಇದೆ. ಐಪಿಎಲ್​​ ವಿಚಾರವಾಗಿ ರೋಹಿತ್​ ಕೆರಿಯರ್​ನಿಂದ ಮುಂದಿನ ದಿನಗಳಲ್ಲಿ ಏನು ಬೇಕಾದ್ರೂ ಚೇಂಜೆಸ್​​ಗಳಾಗಬಹುದು. ಇಲ್ಲಿ ಇನ್ನೊಂದು ಇಂಪಾರ್ಟೆಂಟ್​​ ಇನ್​ಫಾರ್ಮೇಶನ್ ಕೂಡ ಇದೆ. ರೋಹಿತ್​ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿರೋ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿಯ ಡಿಸೀಶನ್​ ರೋಹಿತ್​ ಟೀಂ ಇಂಡಿಯಾ ಕ್ಯಾಪ್ಟನ್ಸಿ ಮೇಲೆ ಯಾವುದೇ ರೀತಿಯಲ್ಲೂ ಎಫೆಕ್ಟ್ ಆಗೋದಿಲ್ವಂತೆ.

ಅಂದ್ರೆ ಮುಂಬೈ ಇಂಡಿಯನ್ಸ್ ತನ್ನ ಕ್ಯಾಪ್ಟನ್​ನನ್ನ ಚೇಂಜ್ ಮಾಡಿದೆ ಅನ್ನೋ ಕಾರಣಕ್ಕೆ ಬಿಸಿಸಿಐ ಕೂಡ ಇಂಥಾ ನಿರ್ಧಾರ ಕೈಗೊಳ್ಳೋದಿಲ್ಲ.

Sulekha