ಪ್ರಸಾದ ತಿಂದು ನೂರಾರು ಜನರು ಅಸ್ವಸ್ಥ ಪ್ರಕರಣ – ಫುಡ್ ಪಾಯಿಸನ್ ಗೆ ವೈದ್ಯರು ಕೊಟ್ಟ ಕಾರಣ ಇದೇ!
ಬೆಂಗಳೂರಿನ ಹಲವು ದೇವಸ್ಥಾನಗಳಲ್ಲಿ ಪ್ರಸಾದ ತಿಂದು ಸೋಮವಾರ ರಾತ್ರಿ ನೂರಾರು ಜನರು ಅಸ್ವಸ್ಥಗೊಂಡಿದ್ದಾರೆ. ಹೊಸಕೋಟೆ ಸುತ್ತಮುತ್ತಲಿನ ಹಳ್ಳಿಗಳ ಮುನ್ನೂರಕ್ಕೂ ಅಧಿಕ ಜನರಿಗೆ ಫುಡ್ ಪಾಯಿಸನ್ ಆಗಿದೆ. ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಪೊಲೀಸರಿಗೆ ಕಾರಣ ಏನಿರಬಹುದು ಎಂದು ವರದಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಜನರಿಗೆ ಫುಡ್ ಪಾಯಿಸನ್ ಆಗಿದೆ. ದೇವಸ್ಥಾನಗಳಲ್ಲಿ ಪ್ರಸಾದ ಸೇವಿಸಿದ ಜನರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, 300 ಹೆಚ್ಚು ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಫುಡ್ ಪಾಯ್ಸನಿಂಗ್ಗೆ ಕಾರಣ ಏನಿರಬಹುದು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಕಾರಣ ಏನಾಗಿರಬಹುದು ಅಂತಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಟನ್ ಸಾಂಬರ್ನಲ್ಲಿ ಮೂಳೆ ಇಲ್ಲ ಅಂತಾ ಮದುವೆ ಕ್ಯಾನ್ಸಲ್ ಮಾಡಿದ ವರ!
ಪ್ರಸಾದ ತಿಂದು ಅಸ್ವಸ್ಥಗೊಂಡವರನ್ನು ಹೊಸಕೋಟೆಯ ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಕೆಂಪಣ್ಣ, ಶ್ರೀನಿವಾಸ ಹಾಗೂ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೋಮವಾರ ರಾತ್ರಿಯೇ ಸುಮಾರು 200 ಜನ ಚೆಕಪ್ ಮಾಡಿಸಿಕೊಂಡು ವಾಪಸ್ ಆಗಿದ್ದಾರೆ. ಇನ್ನೂ 138 ಜನರು ಮೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಸುಮಾರು 35 ಜನರಿಗೆ ನಿರಂತರ ವಾಂತಿ-ಭೇದಿ ಆಗಿದ್ದು ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರೋ 138 ಜನರ ಮೇಲೆ ನಿಗಾ ಇಡಲಾಗಿದೆ. ಬಹುತೇಕರಿಗೆ ವಾಂತಿ-ಭೇದಿ ಕೂಡ ನಿಂತಿದೆ. ಮಂಗಳವಾರ ಹಲವರು ಡಿಶ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.
ಫುಡ್ ಪಾಯಿಸನ್ನಿಂದ ಘಟನೆ ಆಗಿದೆ ಅಂತ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂರು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ಹೇಗೆಲ್ಲಾ ಫುಡ್ ಪಾಯಿಸನ್ ಆಗಿರಬಹದು ಅಂತಾನೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರ ನೀಡಿರುವ ವರದಿಯಲ್ಲಿ ಹೇಗೆಲ್ಲಾ ಪುಡ್ ಪಾಯಿಸನ್ ಆಗಿರುವ ಸಾಧ್ಯತೆ ಇದೆ ಅನ್ನುವ ಮಾಹಿತಿ ಇಲ್ಲಿದೆ.
- ಅಡುಗೆ ಮಾಡಲು ಬಳಸಿದ ನೀರು ಸರಿ ಇಲ್ಲದೆ ಇರುವುದು
- ಸರಿಯಾಗಿ ಅಡುಗೆಗೆ ಬಳಸಿದ ಪಾತ್ರೆ ತೊಳೆಯದೇ ಇರಬಹುದು
- ಅಡುಗೆ ಮಾಡಿ ತುಂಬಾ ಸಮಯದ ಬಳಿಕ ಭಕ್ತರಿಗೆ ನೀಡಿರಬಹುದು
- ಅಡುಗೆ ಮಾಡಿದ ಬಳಿಕ ಸರಿಯಾಗಿ ಫ್ಲೇಟ್ ಮುಚ್ಚದೇ ಇದ್ದು, ನೊಣಗಳು ಮಾಡಿದ ಅಡುಗೆ ಮೇಲೆ ಕುಳಿತಿರಬಹುದು
- ಅಡುಗೆ ಮಾಡಿದ ಅಡುಗೆ ಭಟ್ಟರು ಸರಿಯಾಗಿ ಕೈಗಳನ್ನು ವಾಶ್ ಮಾಡದೇ ಇರಬಹುದು
- ಅವಧಿ ಮುಗಿದಿರೋ ಪದಾರ್ಥಗಳನ್ನು ಬಳಸಿರಬಹುದು
- ಅಡುಗೆ ಮಾಡಿದ ಸ್ಥಳದಲ್ಲಿ ಶುಚಿತ್ವ ಇಲ್ಲದೆ ಇರಬಹುದು
- ಕ್ವಾಂಟಿಟಿ ಇಲ್ಲದ ಪದಾರ್ಥಗಳನ್ನು ಅಡುಗೆಗೆ ಬಳಸಿರಬಹುದು
ಸದ್ಯ ಎಲ್ಲಾ ಮಾಹಿತಿ ಅಧರಿಸಿ ಹೊಸಕೋಟೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.