ಬಸ್ ಹತ್ತಿರದಿಂದ ಸಂಚರಿಸುವಾಗ ಎಚ್ಚರ! – ಸೈಕಲ್ ಸಹಿತ ಬಸ್ ಚಕ್ರಕ್ಕೆ ಸಿಲುಕಿದ್ದ ಸವಾರ ಗ್ರೇಟ್ ಎಸ್ಕೇಪ್!

ರಸ್ತೆಯಲ್ಲಿ ಹೋಗುವಾಗ ಎಷ್ಟು ಎಚ್ಚರದಿಂದ ಇದ್ರೂ ಸಾಲಲ್ಲ. ಯಾವಾಗ ಯಾವ ವಾಹನ ಬಂದು ಡಿಕ್ಕಿ ಹೊಡೆಯುತ್ತೆ ಅಂತಾ ಹೇಳೋದಿಕ್ಕೆ ಆಗಲ್ಲ. ವಾಹನದಲ್ಲೇ ಆಗಲಿ, ನಡೆದುಕೊಂಡು ಹೋಗುತ್ತಿರುವಾಗ ಆಗಲಿ ಜಾಗರೂಕತೆಯಿಂದ ಇರಬೇಕು. ಇಲ್ಲದಿಲ್ಲರೆ ಜೀವಕ್ಕೆ ಅಪಾಯ ಗ್ಯಾರಂಟಿ. ಇದೀಗ ಇಲ್ಲೊಂದು ಅಪಘಾತದ ದೃಶ್ಯ ಸೆರೆಯಾಗಿದೆ. ಸೈಕಲ್ನಲ್ಲಿ ಪ್ರಯಾಣಿಸುತ್ತಿದ್ದ ಸವಾರನೊಬ್ಬ ಸೈಕಲ್ ಸಹಿತ ಬಸ್ ಮುಂದಿನ ಚಕ್ರಕ್ಕೆ ಸಿಲುಕಿ ಗ್ರೇಟ್ ಎಸ್ಕೇಪ್ ಆಗಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ವಾಟರ್ ಡಿಸ್ಪೆನ್ಸರ್ ಬೆಲೆ ನೂರು, ಇನ್ನೂರಲ್ಲ.. ಬರೋಬ್ಬರಿ 41,000 ರೂಪಾಯಿ!
ಹೌದು, ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ನಡೆದಿದೆ. ರಸ್ತೆಯಲ್ಲಿ ಸೈಕಲ್ನಲ್ಲಿ ತೆರಳುತ್ತಿದ್ದಾಗ ಖಾಸಗಿ ಬಸ್ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸೈಕಲಲ್ಲಿ ಪ್ರಯಾಣಿಸುತ್ತಿದ್ದ ಸವಾರ ಸೈಕಲ್ ಸಹಿತ ಬಸ್ ಮುಂದಿನ ಚಕ್ರಕ್ಕೆ ಸಿಲುಕಿ ಅಪಾಯದಿಂದ ಪಾರಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಅಷ್ಟಕ್ಕೂ ಆಗಿದ್ದೇನು?
ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ವ್ಯಕ್ತಿಯೊಬ್ಬರು ಸೈಕಲ್ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ನಡು ರಸ್ತೆಯಲ್ಲಿ ಬಸ್ ಏಕಾಏಕಿ ಎಡಮಗ್ಗಲಿಗೆ ತಿರುಗಿದೆ. ಇದರಿಂದಾಗಿ ರಸ್ತೆಯ ಅಂಚಿನಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಮುಂಭಾಗದ ಚಕ್ರದಡಿಗೆ ಸೈಕಲ್ ಸಿಲುಕಿದೆ. ಸೈಕಲ್ ಚಾಲಕನ ಮೇಲೆ ಟೈಯರ್ ಹರಿದು ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಸೈಕಲ್ ಮುರಿದು ಪುಡಿ ಪುಡಿಯಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಸ್ಥಳೀಯರು ಬಂದು ಸೈಕಲ್ ಸವಾರನ್ನು ಮೇಲಕ್ಕೆತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೆಲ್ಮಟ್ಗೆ ಅಳವಡಿಸಿದ ಕ್ಯಾಮೆರಾದಲ್ಲಿ, ಈ ಭೀಕರ ದೃಶ್ಯ ದಾಖಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.