ಸಂಜುಗೆ ಹಿಟ್ ಮ್ಯಾನ್ ಪವರ್! – ರೋಹಿತ್ ಗೆ ಟ್ರಿಬ್ಯೂಟ್ ಕೊಟ್ಟಿದ್ದೇಕೆ?
ಸೌತ್ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ವಂಡೇ ಸೀರಿಸ್ ವಿನ್ ಆಗಿದೆ. ಈ ಹಿಂದೆ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಭಾರತ ವಂಡೇ ಸೀರಿಸ್ ಗೆದ್ದಿತ್ತು. ಇದೀಗ ಕೊಹ್ಲಿ ಬಳಿಕ ಕೆಎಲ್ ರಾಹುಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸೀರಿಸ್ ಗೆದ್ದಿದೆ. ಆ್ಯಕ್ಚುವಲಿ ಕ್ಯಾಪ್ಟನ್ ಆಗಿ ಕೆಎಲ್ ರಾಹುಲ್ ಪಾಲಿಗೂ ಇದು ಗ್ರೇಟ್ ಅಚೀವ್ಮೆಂಟ್. ಆದ್ರೆ ಫೈನಲ್ ವಂಡೇ ಮ್ಯಾಚ್ನಲ್ಲಿ ಕೆಲ ಟೇಕ್ ಅವೇಗಳಿವೆ. ಸಂಜು ಸ್ಯಾಮ್ಸನ್ ಇನ್ನಿಂಗ್ಸ್, ಟೀಂ ಇಂಡಿಯಾದ ಬೌಲಿಂಗ್ ಮತ್ತು ರಾಹುಲ್ ಕ್ಯಾಪ್ಟನ್ಸಿ ವಿಚಾರದ ಬಗ್ಗೆಯೂ ಮಾಹಿತಿ ಇಲ್ಲಿದೆ..
ಫಸ್ಟ್ ಅಫ್ ಆಲ್ ಸಂಜು ಸ್ಯಾಮ್ಸನ್.. ರೀಯಲಿ ಕ್ಲಾಸ್ ಇನ್ನಿಂಗ್ಸ್.. ಟಾಸ್ ಸೋತು ಮತ್ತೊಮ್ಮೆ ಟೀಂ ಇಂಡಿಯಾ ಬ್ಯಾಟಿಂಗ್ಗೆ ಇಳಿದ್ರೂ ಓಪನರ್ಸ್ಗಳು ಹೆಚ್ಚು ಸ್ಕೋರ್ ಮಾಡಲಿಲ್ಲ. ಸಾಯಿ ಸುದರ್ಶನ್ 10 ರನ್ಗೆ ಔಟಾಗ್ತಾರೆ. ರಜತ್ ಪಾಟೀದಾರ್ 22 ರನ್ ಮಾಡ್ತಾರೆ. ಟ್ರಬಲ್ನಲ್ಲಿದ್ದ ಟೀಂ ಇಂಡಿಯಾಗೆ ನೆರವಾಗಿದ್ದು ಕೇರಳದ ಕ್ಲಾಸ್ ಪ್ಲೇಯರ್ ಸಂಜು ಸ್ಯಾಮ್ಸನ್. ಕಳೆದ ಏಷ್ಯಾಕಪ್ಗೆ ಸಂಜು ಸೆಲೆಕ್ಟ್ ಆಗಿರಲಿಲ್ಲ.. ವಂಡೇ ವರ್ಲ್ಡ್ಕಪ್ನಿಂದಲೂ ಡ್ರಾಪ್ ಆಗಿದ್ರು.. ಬಟ್ ಕಂಪ್ಲೀಟ್ ಸೈಡ್ಲೈನ್ ಮಾಡುವಂಥಾ ಪ್ಲೇಯರ್ ನಾನಲ್ಲ ಅನ್ನೋದನ್ನ ಸಂಜು ಸ್ಯಾಮ್ಸನ್ ಮತ್ತೆ ಪ್ರೂವ್ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರದ್ದೇ ನೆಲದಲ್ಲಿ ಸೆಂಚೂರಿ ಹೊಡೆದಿದ್ದಾರೆ. ಸಂಜು ಪಾಲಿಗೆ ಇದು ಫಸ್ಟ್ ವಂಡೇ ಸೆಂಚೂರಿ. ಅದು ಕೂಡ ಅತ್ಯಂತ ಕ್ರೂಶಿಯಲ್ ಟೈಮ್ನಲ್ಲಿ. 114 ಬಾಲ್ಗಳಲ್ಲಿ ಸಂಜು 108 ರನ್ ಬಾರಿಸಿದ್ರು. ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡೋದು ಸುಲಭವಿರಲಿಲ್ಲ. ಇದು ಕಂಪ್ಲೀಟ್ ಸ್ಲೋ ಪಿಚ್ ಆಗಿತ್ತು. ಆದ್ರೆ ಸಂಜು ಮಾತ್ರ ಆದಷ್ಟು ಹೊತ್ತು ಕ್ರೀಸ್ನಲ್ಲಿ ನಿಲ್ಲಲೇಬೇಕು ಅಂತಾ ಮೆಂಟಲಿ ಫಿಕ್ಸ್ ಆಗಿಯೇ ಬಂದಿದ್ರು. ಆರಂಭದಿಂದಲೇ ಸುಮ್ನೆ ಹೊಡಿಬಡಿ ಆಡೋಕೆ ಹೋಗಿಲ್ಲ. ಟೈಮ್ ತಗೊಂಡ್ರು..ನಿಧಾನಕ್ಕೆ ಇನ್ನಿಂಗ್ಸ್ ಬಿಲ್ಡ್ ಮಾಡಿದ್ರು.. ಒಂದ್ಸಲಾ ಕ್ರೀಸ್ನಲ್ಲಿ ಸೆಟ್ ಆಗುತ್ತಲೇ ಬಳಿಕ ಒಂದಷ್ಟು ಬೌಂಡರಿ, ಸಿಕ್ಸರ್ಗಳನ್ನ ಹೊಡೆಯೋಕೆ ಶುರು ಮಾಡಿದ್ರು. ಪ್ರೆಷರ್ ಟೈಮ್ನಲ್ಲಿ 94 ಸ್ಟ್ರೈಕ್ರೇಟ್ನಲ್ಲಿ ಸಂಜು ಆಡಿದ್ದಾರೆ.
ಇದನ್ನೂ ಓದಿ: ಐಪಿಎಲ್‌ನಲ್ಲಿ ರೂಲ್ಸ್ ಚೇಂಜ್! – ಹೊಸ ನಿಯಮ ಪ್ಲೇಯರ್ಸ್ ಮೇಲೆ ಯಾವ ರೀತಿ ಎಫೆಕ್ಟ್ ಆಗುತ್ತೆ?
ಸಂಜು ಸ್ಯಾಮ್ಸನ್ರಿಂದ ಈ ಇನ್ನಿಂಗ್ಸ್ ಬಾರದೆ ಇರ್ತಿದ್ರೆ ಟೀಂ ಇಂಡಿಯಾಗೆ ಸೀರಿಸ್ ಗೆಲ್ಲೋಕೆ ಸಾಧ್ಯವಾಗ್ತಾ ಇರಲಿಲ್ಲ. ಸಂಜು ಸೆಂಚೂರಿಯಿಂದಾಗಿಯೇ ಫೈನಲ್ ಮ್ಯಾಚ್ನ್ನ ಭಾರತ ಗೆದ್ದಿದೆ ಅಂದ್ರೆ ತಪ್ಪಾಗೋದಿಲ್ಲ ಬಿಡಿ. ಜೊತೆಗೆ ಸಂಜು ಪಾಲಿಗೂ ಅವರ ಕೆರಿಯರ್ ಭವಿಷ್ಯದ ದೃಷ್ಟಿಯಿಂದಲೂ ಈ ಇನ್ನಿಂಗ್ಸ್ ತುಂಬಾನೆ ಇಂಪಾರ್ಟೆಂಟ್ ಆಗಿತ್ತು. ಎಲ್ಲಾ ರೀತಿಯಲ್ಲೀ ಆಡಲೇಬೇಕಾದ ಪ್ರೆಷರ್ನಲ್ಲಿದ್ರು. ಆದ್ರೂ ಸಂಜು ನಿಜಕ್ಕೂ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಈಗ ಸಂಜು ವಿಚಾರದಲ್ಲಿ ಬಿಸಿಸಿಗೆ ಮತ್ತು ಟೀಂ ಮ್ಯಾನೇಜ್ಮೆಂಟ್ಗೆ ಹೇಳ್ಬೇಕಾಗಿರೋದಿಷ್ಟೇ. ಇನ್ನಾದ್ರೂ ಸಂಜು ಸ್ಯಾಮ್ಸನ್ಗೆ ಆಡೋಕೆ ಚಾನ್ಸ್ ಕೊಡ್ರಪ್ಪಾ.. ಕನ್ಸಿಸ್ಟೆಂಟ್ ಆಗಿ ಚಾನ್ಸ್ ಕೊಡಲಿ.. ಒಂದು ಸೀರಿಸ್ನಲ್ಲಿ ಆಡಿಸೋದು, ನೆಕ್ಸ್ಟ್ ಸೀರಿಸ್ಗೆ ಡ್ರಾಪ್ ಮಾಡೋದು..ಹೀಗೆ ಮಾಡಿದ್ರೆ ಆಗಲ್ಲ. ಸಂಜು ಸ್ಯಾಮ್ಸನ್ ವಿಚಾರದಲ್ಲಿ ಆಗಿರೋದು ಇದೆ.
ಟಿ-20 ಕ್ರಿಕೆಟ್ನಲ್ಲೂ ಅಷ್ಟೇ, ವಂಡೇ ಫಾರ್ಮೆಟ್ನಲ್ಲೂ ಅಷ್ಟೇ.. 2015ರಲ್ಲಿ ಸಂಜು ಸ್ಯಾಮ್ಸನ್ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ಡೆಬ್ಯೂ ಮಾಡಿದ್ರು. ಆದ್ರೆ ಭಾರತದ ಪರ ಸಂಜು ಇದುವರೆಗೆ ಆಡಿರೋದು ಕೇವಲ 24 ಟಿ-20 ಮ್ಯಾಚ್ಗಳನ್ನ ಮಾತ್ರ. 2021ರಲ್ಲಿ ಸಂಜು ವಂಡೇಗೆ ಸೆಲೆಕ್ಟ್ ಆಗ್ತಾರೆ. ಆಡೋಕೆ ಚಾನ್ಸ್ ಸಿಕ್ಕಿರೋದು 16 ಮ್ಯಾಚ್ಗಳನ್ನ ಮಾತ್ರ. 2015ರಲ್ಲಿ ಟಿ-20ಗೆ ಡೆಬ್ಯೂ ಆಗಿದ್ರೂ 2021ರವರೆಗೂ ವಂಡೇ ಸ್ಕ್ವಾಡ್ಗೆ ಸಂಜುರನ್ನ ಸೆಲೆಕ್ಟ್ ಮಾಡಿಯೇ ಇರಲಿಲ್ಲ. ಚಾನ್ಸ್ ಕೊಟ್ರೆ ತಾನೆ ಟ್ಯಾಲೆಂಟ್ ಪ್ರೂವ್, ರನ್ ಗಳಿಸೋಕೆ ಅವಕಾಶ ಸಿಗೋದು. ಸಂಜು ಸ್ಯಾಮ್ಸನ್ರಂಥಾ ಕ್ಲಾಸ್ ಪ್ಲೇಯರ್ನ್ನ ಬ್ಯಾಕ್ಅಪ್ ಮಾಡೋದು ತುಂಬಾನೆ ಇಂಪಾರ್ಟೆಂಟ್. ರೋಹಿತ್ ಶರ್ಮಾ ಕೆರಿಯರ್ ಆರಂಭದಲ್ಲಿ ಹಲವು ಮ್ಯಾಚ್ಗಳಲ್ಲಿ ಸ್ಕೋರ್ ಗಳಿಸೋಕೆ ಫೇಲ್ ಆಗಿದ್ರು. ನಿರಂತರವಾಗಿ ಫೇಲ್ಯೂರ್ ಆಗ್ತಿದ್ರು. ಹಾಗಂತಾ ಆಗ ಕ್ಯಾಪ್ಟನ್ ಆಗಿದ್ದ ಎಂ.ಎಸ್.ಧೋನಿ ರೋಹಿತ್ ಶರ್ಮಾರನ್ನ ಬಿಟ್ಟು ಕೊಟ್ಟಿರಲಿಲ್ಲ. ಚಾನ್ಸ್ ಕೊಡ್ತಾನೆ ಇದ್ರು..ಬ್ಯಾಕ್ಅಪ್ ಮಾಡ್ತಾನೆ ಇದ್ರು. ಈಗ ರೋಹಿತ್ ಶರ್ಮಾ ಯಾವ ಲೆವೆಲ್ಗೆ ಬೆಳೆದಿದ್ದಾರೆ ಅನ್ನೋದನ್ನ ಹೇಳ್ಬೇಕಾದ ಅವಶ್ಯಕತೆಯೇ ಇಲ್ಲ ಬಿಡಿ. ಒಂದು ವೇಳೆ ಅಂದು ಧೋನಿ ಬ್ಯಾಕ್ಅಪ್ ಮಾಡಿಲ್ಲ ಅಂದ್ರೆ ರೋಹಿತ್ ಕೆರಿಯರ್ ಏನಾಗ್ತಿತ್ತು. ಈಗ ಸಂಜು ಸ್ಯಾಮ್ಸನ್ ವಿಚಾರದಲ್ಲೂ ಆಗಬೇಕಿರೋದು ಇದೇ.. ಬ್ಯಾಕ್ ಹಿಮ್ ಅಪ್.. ಈಗ ಅಲ್ಲ, ಯಾವಾಗಲೋ ಆಗಬೇಕಿತ್ತು ಇದು. ಒಂದು ವೇಳೆ ಅಂದೇ ಬ್ಯಾಕ್ಅಪ್ ಮಾಡ್ತಿದ್ರೆ ಸಂಜು ವಂಡೇ ವರ್ಲ್ಡ್ಕಪ್ನ್ನ ಕೂಡ ಆಡ್ತಿದ್ರೋ ಏನೊ. ಇನ್ನು ಈಗ ಸೌತ್ ಆಫ್ರಿಕಾ ವಿರುದ್ಧ ವಂಡೇ ಸ್ಕ್ವಾಡ್ಗೆ ಸಂಜು ಸೆಲೆಕ್ಟ್ ಆಗಿದ್ದಾರೆ ಅಂದ್ರೆ ಅದಕ್ಕೆ ಮೇನ್ ರೀಸನ್ ರೋಹಿತ್ ಶರ್ಮಾ. ಟೀಂ ಇಂಡಿಯಾದಲ್ಲಿ ಸಂಜು ಬೆನ್ನಿಗೆ ನಿಂತಿರೋರು ಯಾರಾದ್ರೂ ಇದ್ರೆ ಅದು ಇಬ್ಬರು. ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಗೆ ಮಾತ್ರ ಸಂಜು ಸ್ಟ್ರೆಂತ್ ಏನು ಅನ್ನೋದು ಚೆನ್ನಾಗಿಯೇ ಗೊತ್ತಿದೆ. ರೋಹಿತ್ ಶರ್ಮಾ ಯಾವಾಗಲೂ ನನ್ನನ್ನ ಸಪೋರ್ಟ್ ಮಾಡ್ತಾನೆ ಇರ್ತಾರೆ. ವರ್ಲ್ಡ್ಕಪ್ ಸ್ಕ್ವಾಡ್ನಿಂದ ಡ್ರಾಪ್ ಆದಗಲೂ ಫಸ್ಟ್ ಕಾಲ್ ಮಾಡಿ ನನ್ನ ಜೊತೆ ಮತನಾಡಿದ್ದೇ ರೋಹಿತ್ ಶರ್ಮಾ ಅಂತಾ ಸಂಜು ಈ ಹಿಂದೆ ಹೇಳಿಕೊಂಡಿದ್ರು. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧ ಸೆಂಚೂರಿ ಹೊಡೆದಾಗ ಸಂಜು ತಮ್ಮ ಮಸಲ್ ಫ್ಲೆಕ್ಸ್ ಮಾಡಿ ಸಂಭ್ರಮಿಸಿದ್ರು. ಇದು ರೋಹಿತ್ ಶರ್ಮಾಗೆ ಸಂಜು ನೀಡಿರೋ ಟ್ರಿಬ್ಯೂಟ್.
ನಿಮಗೆ ನೆನಪಿರಬಹುದು, ವಂಡೇ ವರ್ಲ್ಡ್ಕಪ್ ಸಂದರ್ಭದಲ್ಲಿ ಪಾಕಿಸ್ತಾನ ವಿರುದ್ಧದ ಮ್ಯಾಚ್ ವೇಳೆ ಸಿಕ್ಸ್ ಹೊಡೆದ ಬಳಿಕ ಅಂಪೈರ್ ಬಳಿ ತಮ್ಮ ಮಸಲ್ ಪವರ್ ತೋರಿಸಿದ್ರು. ಈಗ ಸಂಜು ಸ್ಯಾಮ್ಸನ್ ಕೂಡ ಅದನ್ನೇ ಮಾಡಿ ರೋಹಿತ್ ಶರ್ಮಾಗೆ ಥ್ಯಾಂಕ್ಸ್ ಹೇಳಿದ್ದಾರೆ. ಇನ್ನು ಸುನಿಲ್ ಗವಾಸ್ಕರ್ ಅಂತೂ ಸಂಜು ಸ್ಯಾಮ್ಸನ್ರ ಈ ಇನ್ನಿಂಗ್ಸ್ ಅವರ ಕೆರಿಯರ್ನ್ನೇ ಚೇಂಜ್ ಮಾಡಲಿದೆ ಎಂದಿದ್ದಾರೆ. ಈ ಹಿಂದೆಲ್ಲಾ ಸಂಜು ಆರಂಭದಲ್ಲೇ ಆಗ್ರೆಸ್ಸಿವ್ ಆಡೋಕೆ ಹೋಗಿ ಔಟಾಗ್ತಿತ್ತು. ಆದ್ರೆ ಸೌತ್ ಆಫ್ರಿಕಾ ವಿರುದ್ಧ ಫೈನಲ್ ಮ್ಯಾಚ್ನಲ್ಲಿ ಸಂಜು ಬ್ಯಾಡ್ ಬಾಲ್ಗಾಗಿ ವೇಯ್ಟ್ ಮಾಡಿದ್ರು. ಶಾಟ್ ಸೆಲೆಕ್ಷನ್ ಕೂಡ ತುಂಬಾನೆ ಸ್ಟ್ಯಾಂಡರ್ಡ್ ಆಗಿತ್ತು. ಈ ಒಂದು ಶತಕದಿಂದಾಗಿ ಸಂಜು ಬ್ಯಾಟಿಂಗ್ ಅಪ್ರೋಚ್ನಲ್ಲಿ ಚೇಂಜೆಸ್ಗಳಾಗಲಿವೆ. ಹೆಚ್ಚಿನ ಅವಕಾಶಗಳು ಕೂಡ ಸಂಜುಗೆ ಸಿಗಲಿದೆ ಅಂತಾ ಸುನಿಲ್ ಗವಾಸ್ಕರ್ ಹೇಳಿದ್ದಾರೆ.