ವೈಕುಂಠ ಏಕಾದಶಿ ಹಿನ್ನೆಲೆ ತಿರುಪತಿಗೆ ಭಕ್ತರ ದಂಡು – ವಿಐಪಿಗಳ ಲೈನ್ ನಲ್ಲೂ ಕ್ಯೂ
ಜಗತ್ತಿನ ಕುಬೇರ ದೇವಸ್ಥಾನ ಅಂತಾನೇ ಕರೆಸಿಕೊಳ್ಳುವ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡ್ತಾರೆ. ಕ್ಯೂನಲ್ಲಿ ನಿಂತು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ. ಆದರೆ ಈಗ ತಿರುಪತಿಗೆ ಹೋಗುತ್ತಿರುವವರು ದಿನವಿಡೀ ಕಾಯುವಂಥ ಪರಿಸ್ಥಿತಿ ಉಂಟಾಗಿದೆ. ವೈಕುಂಠ ಏಕಾದಶಿ ಹಿನ್ನೆಲೆ ಭಕ್ತರ ದಂಡೇ ಹರಿದು ಬರುತ್ತಿದೆ.
ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ವಿಷ್ಣುವನ್ನು ಪೂಜಿಸಲು ಮೀಸಲಿಡಲಾಗಿದೆ ಮತ್ತು ಭಕ್ತರು ಉಪವಾಸವನ್ನು ಆಚರಿಸುತ್ತಾರೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ವಿಷ್ಣುವಿನ ಆಶೀರ್ವಾದ ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಶುಭ ದಿನದಂದು, ವೈಕುಂಠದ ದ್ವಾರಗಳು ಭಕ್ತರಿಗೆ ತೆರೆಯುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ವೈಕುಂಠ ಏಕಾದಶಿಯಂದು ತಿರುಮಲಕ್ಕೆ ತಿಮ್ಮಪ್ಪನ ಭಕ್ತರ ಸಾಗರವೇ ಹರಿದು ಬಂದಿದೆ. ಇತ್ತ ವಿಐಪಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಟಿಟಿಡಿ ಅಧಿಕಾರಿಗಳು ಟಿಕೆಟ್ ಇಲ್ಲದೇ ಬರುವ ಭಕ್ತರಿಗೆ ಕ್ಯೂನಲ್ಲಿ ನಿಲ್ಲಲು ಪ್ರವೇಶ ನಿರಾಕರಿಸುತ್ತಿದ್ದಾರೆ. ಸದ್ಯ ವೈಕುಂಠಂ ಸರದಿಯಿಂದ ನಾರಾಯಣ ತೀರ್ಥದವರೆಗೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬರುವ ಗಣ್ಯರು ವಸತಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಇದನ್ನೂ ಓದಿ : ಶ್ರೀರಾಮನಿಗಾಗಿ ಸಿದ್ಧವಾಯ್ತು 108 ಅಡಿ ಉದ್ದದ ಊದುಬತ್ತಿ! – ಅಯೋಧ್ಯೆಯಲ್ಲಿ 48 ದಿನ ಪರಿಮಳ ಬೀರಲಿದೆ ವಿಶೇಷ ಅಗರಬತ್ತಿ!
ಸದ್ಯ ವೈಕುಂಠಂ ಸರದಿಯಿಂದ ನಾರಾಯಣ ತೀರ್ಥದವರೆಗೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬರುವ ಗಣ್ಯರು ವಸತಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ತಿರುಮಲಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಟಿಕೆಟ್ ಇಲ್ಲದೆ ಸರ್ವದರ್ಶನಕ್ಕೆ ಬರುವ ಭಕ್ತರಿಗೆ ಸರತಿ ಸಾಲಿನಲ್ಲಿ ಹೋಗಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಶನಿವಾರ ವೈಕುಂಠದ ಮೂಲಕ ದರ್ಶನ ಪಡೆಯಲು ದೇಶ ವಿದೇಶಗಳಿಂದ ಗಣ್ಯರು ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಐವರು ಸುಪ್ರೀಂ ನ್ಯಾಯಮೂರ್ತಿಗಳ ಜೊತೆಗೆ ವಿವಿಧ ಹೈಕೋರ್ಟ್‌ಗಳಿಂದ 35 ನ್ಯಾಯಾಧೀಶರು ಬರುತ್ತಿದ್ದಾರೆ. 12 ಸಚಿವರು ಮತ್ತು ಸ್ಪೀಕರ್ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯ 11 ಸದಸ್ಯರು ತಿರುಮಲದಲ್ಲಿಯೇ ಮೊಕಂ ಮಾಡಿದ್ದಾರೆ. ತಿರುಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು, ಎಂಎಲ್ ಸಿಗಳು ಆಗಮಿಸುತ್ತಿದ್ದಾರೆ. ಅಲ್ಲದೇ ಕೆಲವು ವಿಐಪಿಗಳು ಬರುವುದರಿಂದ ಟಿಟಿಡಿ ಅಧಿಕಾರಿಗಳಿಗೆ ಸ್ಥಳಾವಕಾಶ ಕಲ್ಪಿಸಲು ತೊಂದರೆಯಾಗುತ್ತಿದೆ. ಮತ್ತೊಂದೆಡೆ ಭಕ್ತರ ದಂಡು ಹೆಚ್ಚಾಗುತ್ತಿದೆ. ವೈಕುಂಠದ ಮೂಲಕ ದರ್ಶನಕ್ಕಾಗಿ ಆಫ್‌ಲೈನ್ ಟಿಕೆಟ್‌ಗಳು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರಾರಂಭವಾಗಿವೆ. ಪೂರ್ಣಗೊಳ್ಳುವವರೆಗೆ ನೀಡಲು ನಿರ್ಧರಿಸಲಾಗಿದೆ. ಸದ್ಯ ಡಿಸೆಂಬರ್ 27ಕ್ಕೆ ನಿಗದಿ ಮಾಡಿರುವ ಟಿಕೆಟ್ ನೀಡಲಾಗುತ್ತಿದೆ. ಶನಿವಾರ ಬೆಳಗಿನ ಜಾವ 1:45ಕ್ಕೆ ವೈಕುಂಠ ದ್ವಾರ ತೆರೆಯಲಾಗುತ್ತದೆ. ದಿನಕ್ಕೆ 80 ಸಾವಿರ ಭಕ್ತರಿಗೆ ವೈಕುಂಠ ದರ್ಶನ ನೀಡಲು ಟಿಟಿಡಿ ವ್ಯವಸ್ಥೆ ಮಾಡಿದೆ. ವೈಕುಂಠದ್ವಾರದ ಮೂಲಕ ತಿಮ್ಮಪ್ಪನ ದರ್ಶನ ಪಡೆದುಕೊಳ್ಳಲು ಜನವರಿ 1ರವರೆಗೆ ಸರ್ವದರ್ಶನಕ್ಕೆ ಅವಕಾಶ ನೀಡಲಾಗಿದೆ.
ಈಗಾಗಲೇ 21 ಕಂಪಾರ್ಟ್ಮೆಂಟ್ಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ದರ್ಶನಕ್ಕಾಗಿ ಟಿಕೆಟ್ ಇಲ್ಲದೇ ಬರುವ ಭಕ್ತರಿಗೆ ಕ್ಯೂ ಗೆ ಎಂಟ್ರಿ ಕೊಡುತ್ತಿಲ್ಲ, ಈ ಹಿನ್ನೆಲೆಯಲ್ಲಿ ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿಯೊಂದಿಗೆ ಕೆಲ ಭಕ್ತರು ವಾಗ್ವಾದ ಕೂಡ ನಡೆಸಿದ್ದಾರೆ. ಇತ್ತ ತಿರುಪತಿಯಲ್ಲಿ ತೆರೆದಿರುವ 90 ಕೌಂಟರ್‌ಗಳಲ್ಲಿ ಗುರುವಾರ ರಾತ್ರಿಯಿಂದಲೇ ಭಕ್ತರು ಟಿಕೆಟ್ಗಾಗಿ ಕಾಯುತ್ತಿದ್ದಾರೆ. ಮೊದಲ ದಿನ ವಿಐಪಿಗಳು ಹಾಗೂ ಭಕ್ತರ ನೂಕುನುಗ್ಗಲು ಉಂಟಾಗಿ ಯಾವುದೇ ತೊಂದರೆಯಾಗದಂತೆ ವೈಕುಂಠ ದರ್ಶನದ ವೇಳೆ ವಿಶೇಷ ಕ್ರಮಗಳನ್ನು ಟಿಟಿಡಿ ಕೈಗೊಂಡಿದೆ.