ಬಿಗ್ಬಾಸ್ ಮನೆಯಲ್ಲೇ ಡಿವೋರ್ಸ್ ಘೋಷಿಸಿದ ಸ್ಪರ್ಧಿ – ಅಂತಹದ್ದು ಏನಾಯ್ತು ಗೊತ್ತಾ?
ಬಿಗ್ ಬಾಸ್ ಅಂದ ಮೇಲೆ ಅಲ್ಲಿ ಹಲವು ಕಿರಿಕ್ಗಳು ಇದ್ದೇ ಇರುತ್ತೆ. ಎಷ್ಟೇ ಆಪ್ತರಾಗಿದ್ದರೂ ಕೂಡ ದೊಡ್ಮನೆಯಲ್ಲಿ ಕಿತ್ತಾಡಿಕೊಂಡಿರುವುದು ಕಾಮನ್. ಗಂಡ-ಹೆಂಡತಿ ಜೊತೆಯಾಗಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸಿದರೂ ಸಹ ಕಿತ್ತಾಟ ತಪ್ಪಿಸಲು ಸಾಧ್ಯವಿಲ್ಲ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಹಿಂದಿ ಬಿಗ್ಬಾಸ್ನಲ್ಲಿರುವ ದಂಪತಿ. ಹೌದು, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಹಿಂದಿ ಬಿಗ್ ಬಾಸ್ ಮನೆಯಲ್ಲಿ ಭಾಗವಹಿಸುತ್ತಿದ್ದಾರೆ. ಸ್ಪರ್ಧಿಗಳ ಜಗಳ ನೋಡಿ ಬೇಸತ್ತಿರುವ ವೀಕ್ಷಕರಿಗೆ ಇವರಿಬ್ಬರ ಕಿತ್ತಾಟ ತಲೆಕೆಟ್ಟುಹೋಗುವಂತೆ ಮಾಡಿದೆ. ಅಷ್ಟರ ಮಟ್ಟಿಗೆ ಇವರಿಬ್ಬರು ಜಗಳವಾಡುತ್ತಿದ್ದಾರೆ. ಸದಾ ಜಗಳವಾಡುತ್ತಿರುವ ಈ ಜೋಡಿ ಈಗ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ವೊಂದನ್ನು ನೀಡಿದ್ದಾರೆ. ಬಿಗ್ಬಾಸ್ ಮನೆಯಲ್ಲೇ ವಿಕ್ಕಿ ಜೈನ್ಗೆ ಡಿವೋರ್ಸ್ ನೀಡುತ್ತೇನೆ ಅಂಕಿತಾ ಹೇಳಿದ್ದಾರೆ.
ಇದನ್ನೂ ಓದಿ: ವಿಶ್ವದಾದ್ಯಂತ ರಿಲೀಸ್ ಆಯ್ತು ಬಹುನಿರೀಕ್ಷಿತ ಸಲಾರ್ – ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನ!
ಹೌದು, ಬಾಲಿವುಡ್ನಲ್ಲಿ ಗುರುತಿಸಿಕೊಂಡಿರುವ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ‘ಬಿಗ್ ಬಾಸ್ ಹಿಂದಿ ಸೀಸನ್ 17’ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಹೊರಜಗತ್ತಿನಲ್ಲಿ ತುಂಬ ಚೆನ್ನಾಗಿ ಇದ್ದ ಈ ದಂಪತಿಯು ದೊಡ್ಮನೆಗೆ ಬಂದ ಬಳಿಕ ಬದ್ಧ ವೈರಿಗಳಂತೆ ಜಗಳ ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ದೊಡ್ಡ ರಾದ್ಧಾಂತ ಎಬ್ಬಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಗಂಡ ಹೆಂಡತಿ ಡಿವೋರ್ಸ್ ಬಗ್ಗೆ ಮಾತನಾಡಿದ ಘಟನೆ ನಡೆದಿದೆ.
ಹೌದು, ಪ್ರೀತಿಸಿ ಮದುವೆ ಆಗಿರೋ ಈ ಜೋಡಿ ಬಿಗ್ ಬಾಸ್ ಮನೆಯಲ್ಲಿ ದಿನವೂ ಕಿತ್ತಾಡುತ್ತಲೇ ಇರುತ್ತಾರೆ. ಟಾಸ್ಕ್ ವಿಚಾರದಲ್ಲಂತೂ ಗಂಡ ಹೆಂಡತಿ ಅನ್ನೋದನ್ನೂ ಮರೆಯುತ್ತಾರೆ. ದಿನವೂ ಕಿರಿಕ್ ಮಾಡಿಕೊಂಡು ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಇದೀಗ ಡಿವೋರ್ಸ್ ವಿಚಾರ ಮಾತನಾಡಿ ಶಾಕ್ ಮೂಡಿಸಿದ್ದಾರೆ.
ಅಂಕಿತಾ ಲೋಖಂಡೆ ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅದನ್ನು ಬ್ರೇಕ್ ಮಾಡಿಕೊಂಡು ವಿಕ್ಕಿ ಜೈನ್ ಜೊತೆ ಒಂದಾದರು. ಮದುವೆ ಮಾಡಿಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಈಗ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಅಲ್ಲದೇ ಮೊನ್ನೆಯ ಸಂಚಿಕೆಯಲ್ಲಿ ವಿಕ್ಕಿ ಜೈನ್ ವಿವಾಹಿತರ ಕಷ್ಟಗಳ ಬಗ್ಗೆ ಮಾತಾಡುತ್ತಾರೆ. ಅಷ್ಟೊಂದು ಕಷ್ಟವಾದರೆ, ವಿಚ್ಛೇದನ ಪಡೆದುಕೊಳ್ಳೋಣ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ ಅಂಕಿತಾ.