ಉಗ್ರಂ ಸಿನಿಮಾ ಎಳೆಯನ್ನೇ ಇಟ್ಟುಕೊಂಡು ಸಲಾರ್ ಮಾಡಿದ್ರಾ ಪ್ರಶಾಂತ್ ನೀಲ್ – ಪ್ರಭಾಸ್ ಚಿತ್ರದ ಬಗ್ಗೆ ಫ್ಯಾನ್ಸ್ ಹೇಳೋದೇನು?
ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಲಾರ್ ಸಿನಿಮಾಗೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆ ಕಂಡಿದೆ. ಮೊದಲ ದಿನವೇ ಚಿತ್ರ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ : ವಿಶ್ವದಾದ್ಯಂತ ರಿಲೀಸ್ ಆಯ್ತು ಬಹುನಿರೀಕ್ಷಿತ ಸಲಾರ್ – ಮೊದಲ ದಿನವೇ ಹೌಸ್ ಫುಲ್ ಪ್ರದರ್ಶನ!
ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಮತ್ತು ಕೆಜಿಎಫ್ ಫೇಮ್ನ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಸಲಾರ್. ಭಾರೀ ನಿರೀಕ್ಷೆ ಮೂಡಿಸಿದ್ದ ಈ ಚಿತ್ರ ತೆರೆ ಕಂಡಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಆದ್ರೆ ಸಿನಿಮಾ ನೋಡಿದ ಬಹುತೇಕರು ಇದು ಉಗ್ರಂ ಫಿಲ್ಮ್ನ ರೀಮೇಕ್ ಅಂತಿದ್ದಾರೆ. ಯಾಕಂದ್ರೆ ಉಗ್ರಂ ನಲ್ಲಿ ಅಗಸ್ತ್ಯ ಕಾರು ಮೆಕಾನಿಕ್ ಆಗಿರ್ತಾನೆ. ಸಲಾರ್ನ ದೇವ ಮೈನಿಂಗ್ ಲಾರಿಗಳ ಮೆಕಾನಿಕ್. ಅಲ್ಲಿನ ಮುಗೋರ್ ಬದಲು ಇಲ್ಲಿ ಖಾನ್ಸಾರ್ ಎಂಬ ಹೊಸ ಅದ್ಧೂರಿ ಸಾಮ್ರಾಜ್ಯ ಸೃಷ್ಟಿಸಿದ್ದಾರೆ. ತಾಯಿ ಸೆಂಟಿಮೆಂಟ್, ಲವ್ ಸ್ಟೋರಿ, ಫ್ರೆಂಡ್ಶಿಪ್ ಎಳೆಗಳನ್ನ ಉಗ್ರಂನಿಂದಲೇ ತೆಗೆದುಕೊಂಡಂತಿದೆ. ಆದ್ರಿಲ್ಲಿ ಪ್ರಭಾಸ್ಗೆ ವಿಜೃಂಭಣೆ ಸ್ವಲ್ಪ ಜಾಸ್ತಿನೇ ನೀಡಿರೋದ್ರಿಂದ ಫ್ಯಾನ್ಸ್ಗೆ ನಿರಾಸೆಯಾಗಲ್ಲ. ಕೆಜಿಎಫ್ ಶೈಲಿಯಲ್ಲೇ ಇಲ್ಲೂ ಕೂಡ ಕತ್ತಲೆ ಪ್ರಪಂಚದ ಮೇಕಿಂಗ್ ಇದೆ. ಉಳಿದಂತೆ ಪೃಥ್ವಿರಾಜ್ ಸುಕುಮಾರನ್ ನಟನೆ ಎಲ್ಲರಿಗೂ ಇಷ್ಟವಾಗುತ್ತೆ. ಉಗ್ರಂ ನೋಡಿದವ್ರಿಗೆ ಸಿನಿಮಾ ಅದೇ ಕಥೆ ಅನ್ನಿಸಬಹುದು. ಉಗ್ರಂ ನೋಡದೇ ಇರೋರಿದೆ ಸಿನಿಮಾ ಖುಷಿ ಕೊಡುತ್ತೆ.