ಬಿಗ್ಬಾಸ್ ನಲ್ಲಿ ಭಾರಿ ಹೈಡ್ರಾಮ! – ಮನೆಯಿಂದ ಹೊರಬರುತ್ತಿದ್ದಂತೆ ಜೈಲು ಸೇರಿದ ಸ್ಪರ್ಧಿ!
‘ಬಿಗ್ ಬಾಸ್ ತೆಲುಗು ಸೀಸನ್ 7’ರ ವಿನ್ನರ್ ಪಲ್ಲವಿ ಪ್ರಶಾಂತ್ ಅರೆಸ್ಟ್ ಆಗಿದ್ದಾರೆ. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣರಾಗಿದ್ದಾರೆ ಅನ್ನುವ ಕಾರಣಕ್ಕೆ ಪಲ್ಲವಿ ಪ್ರಶಾಂತ್ ಹಾಗೂ ಅವರ ಸಹೋದರನನ್ನು ಬಂಧಿಸಿದ್ದಾರೆ.
‘ಬಿಗ್ ಬಾಸ್ ಸೀಸನ್ 7’ ಬಂದ ಪಲ್ಲವಿ ಪ್ರಶಾಂತ್ ರೈತನ ಮಗ ಎಂದ ಕಾರಣಕ್ಕೆ ಗಮನ ಸೆಳೆದಿದ್ದರು. ಅವರು ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟು ಕಪ್ ಗೆದ್ದಿದ್ದಾರೆ. ಆದರೆ ಫಿನಾಲೆ ಮುಗಿದ ನಂತರ ನೂರಾರು ಅಭಿಮಾನಿಗಳು ಪ್ರಶಾಂತ್ ಅವರನ್ನು ಸ್ವಾಗತಿಸಲು ಸ್ಟುಡಿಯೋಗೆ ಆಗಮಿಸಿದ್ದರು. ಈ ವೇಳೆ ರಸ್ತೆಯಲ್ಲೇ ಅವಾಂತರ ಸೃಷ್ಟಿಸಿದರು. ಪ್ರಶಾಂತ್ ಅಭಿಮಾನಿಗಳು ಕಾರು ಹಾಗೂ ಬಸ್ಗಳ ಗಾಜನ್ನು ಒಡೆದು ದಾಂಧಲೆ ನಡೆಸಿದ್ದರು. ಆ ಬಳಿಕ ಪಲ್ಲವಿ ಪ್ರಶಾಂತ್ ವಿರುದ್ಧ ಜುಬಿಲಿ ಹಿಲ್ಸ್ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಲವಿ ಪ್ರಶಾಂತ್ ಹಾಗೂ ಅವರ ಸಹೋದರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ (ಡಿಸೆಂಬರ್ 20) ರಾತ್ರಿ ಜುಬಿಲಿ ಹಿಲ್ಸ್ ಪೊಲೀಸರು ಪ್ರಶಾಂತ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಕ್ಕೆ ಇವರನ್ನು ಬಂಧಿಸಲಾಗಿದೆ. ಸುಮಾರು ಆರು ಗಂಟೆಗಳ ಕಾಲ ಪೊಲೀಸರು ಪಲ್ಲವಿ ಪ್ರಶಾಂತ್ ಅವರ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: 24 ಲಕ್ಷದ ಬೈಕಿನ ಸ್ಪೀಡ್ ತೋರಿಸುತ್ತೇನೆ ಅಂತಾ ಬಂದ – ವ್ಹೀಲಿಂಗ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ!
ಈ ಪ್ರಕರಣದಲ್ಲಿ ಪಲ್ಲವಿ ಪ್ರಶಾಂತ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪಲ್ಲವಿ ಪ್ರಶಾಂತ್ ಎ1 ಆರೋಪಿ ಆಗಿದ್ದಾರೆ. ಅವರ ಸಹೋದರನನ್ನು ಎ2 ಆರೋಪಿ ಆಗಿ ಹೆಸರಿಸಲಾಗಿದೆ. ಎ4 ಮತ್ತು ಎ5 ಆರೋಪಿಯನ್ನೂ ಬಂಧಿಸಲಾಗಿದೆ. ಪ್ರಶಾಂತ್ ವಿರುದ್ಧ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಈಗಾಗಲೇ ಪಲ್ಲವಿ ಪ್ರಶಾಂತ್ ಹಾಗೂ ಮನೋಹರ್ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಅವರನ್ನು ಚಂಚಲಗುಡ ಜೈಲಿಗೆ ಸ್ಥಳಾಂತರಿಸಲಾಗಿದೆ.