ಟೈಟ್ ಜೀನ್ಸ್ ಧರಿಸಿದ್ರೆ ಶಕ್ತಿ ಕಳೆದುಕೊಳ್ಳುತ್ತವೆ ಕಾಲುಗಳು – ಜೀನ್ಸ್ ಪ್ಯಾಂಟ್ ನಿಂದ ಇಷ್ಟೆಲ್ಲಾ ಅಪಾಯ ಇದ್ಯಾ?
ನೀವೇನಾದ್ರೂ ಜೀನ್ಸ್ ಪ್ಯಾಂಟ್ ಧರಿಸುತ್ತೀರಾ? ಅಯ್ಯೋ ಇದೇನಪ್ಪಾ ಇಂಥಾ ಪ್ರಶ್ನೆ ಕೇಳ್ತಾರೆ. ದಿನಬೆಳಗಾದ್ರೆ ನಾವು ಹಾಕೋದೇ ಜೀನ್ಸ್ ಪ್ಯಾಂಟ್ ಅಂತೀರಾ. ಹಾಗಾದ್ರೆ ಮಿಸ್ ಮಾಡದೆ ಈ ಮಾಹಿತಿಯನ್ನು ತಿಳಿದುಕೊಳ್ಳಿ.
ಇದನ್ನೂ ಓದಿ : ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಬಾರದಾ – ಚಿಕನ್ ಕ್ಲೀನ್ ಮಾಡಿದ್ರೆ ಆರೋಗ್ಯ ಹಾಳಾಗುತ್ತಾ?
ಮಕ್ಕಳಿಂದ ಹಿಡಿದು ವೃದ್ಧರವರೆಗೂ, ಹೆಣ್ಮಕ್ಕಳು, ಗಂಡು ಮಕ್ಕಳೆಲ್ಲಾ ಜೀನ್ಸ್ ಪ್ಯಾಂಟ್ ಧರಿಸ್ತಾರೆ. ಆದ್ರೆ ನೀವೇನಾದ್ರೂ ಟೈಟ್ ಜೀನ್ಸ್ ಪ್ಯಾಂಟ್ ಹಾಕುತ್ತಿದ್ರೆ ಈಗಲೇ ಎಚ್ಚೆತ್ತುಕೊಳ್ಳಿ. ಬಿಗಿಯಾದ ಉಡುಪುಗಳು ದೇಹಕ್ಕೆ ತುಂಬಾನೇ ಅಪಾಯಕಾರಿ. ಬೆನ್ನು ನೋವು, ಕಾಲುಗಳಲ್ಲಿ ನೋವು, ರಕ್ತನಾಳಗಳಲ್ಲಿ ಹಿಡಿತದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯನ ದೇಹದಲ್ಲಿ ಸೊಂಟದ ಭಾಗದಿಂದ ತೊಡೆಯ ಭಾಗಕ್ಕೆ ಸಂವೇದನಾ ನರಗಳು ಸಕ್ರಿಯತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ನೀವು ಸತತವಾಗಿ ಜೀನ್ಸ್ ಪ್ಯಾಂಟ್ ಧರಿಸಿದ್ದೇ ಆದಲ್ಲಿ ಈ ನರಗಳು ತಮ್ಮ ಕಾರ್ಯ ನಿಲ್ಲಿಸುತ್ತವೆ. ಇದ್ರಿಂದ ಭಾರ ಎತ್ತುವಾಗ, ಬಗ್ಗುವಾಗ, ಮೇಲೇಳುವಾಗ ಮತ್ತು ನಿಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗಳಲ್ಲಿ ನಿಶ್ಯಕ್ತಿ ಕಾಡಲಾರಂಭಿಸುತ್ತದೆ. ಹಾಗೂ ಮೂತ್ರನಾಳದ ಸೋಂಕಿಗೂ ಕೂಡ ಕಾರಣವಾಗಬಹುದು. ಸೊಂಟ ಮತ್ತು ತೊಡೆಯ ಭಾಗದಲ್ಲಿ ಚರ್ಮದ ಮೇಲೆ ನೋವು ಅಥವಾ ಕೆರೆತ ಉಂಟಾಗಿ ಅಲರ್ಜಿ ಉಂಟಾಗಬಹುದು. ಹೀಗಾಗಿ ಆದಷ್ಟು ಸ್ವಲ್ಪ ಫ್ರೀ ಎನಿಸುವ ಜೀನ್ಸ್ ಪ್ತಾಂಟ್ ಗಳನ್ನ ಧರಿಸಿ.