ಮತ್ತೆ ಮತ್ತೆ ಕಾರ್ತಿಕ್ ಕೋಪಕ್ಕೆ ಗುರಿಯಾದ ಸಂಗೀತಾ! – ದ್ವೇಷ ಮರೆತು ಒಂದಾದ್ರಾ ವಿನಯ್, ಕಾರ್ತಿಕ್?
ಬಿಗ್‌ಬಾಸ್ ಮನೆಯೊಳಗಿನ ಆಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಬಿಗ್‌ಬಾಸ್ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಯಾವಾಗ ಏನು ಆಗುತ್ತೆ ಅಂತಾ ಹೇಳಲು ಸಾಧ್ಯ ಇಲ್ಲ. ತುಂಬಾ ಕ್ಲೋಸ್ ಆಗಿದ್ದವರು ಯಾವಾಗ ತಿರುಗಿ ಬೀಳುತ್ತಾರೆ, ಶತ್ರುಗಳಂತೆ ಇದ್ದವರು ಯಾವಾಗ ಒಂದಾಗ್ತಾರೆ ಅಂತಾ ಹೇಳುವುದು ಕಷ್ಟ. ಇದೇ ಕಾರಣಕ್ಕೆ ಟಿಆರ್ಪಿ ಕೂಡ ಹೆಚ್ಚಾಗುತ್ತದೆ. ಸದಾ ಕಾಲ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ಕಾರ್ತಿಕ್ ಹಾಗೂ ವಿನಯ್ ಇದೀಗ ಒಂದಾಗಿದ್ದಾರೆ.
ಇದನ್ನೂ ಓದಿ: ಫಸ್ಟ್ ಹಾಫ್ ದೋಸ್ತಿ.. ಸೆಕೆಂಡ್ ಹಾಫ್ ದುಷ್ಮನ್? – ‘ಸಲಾರ್’ 2ನೇ ಟ್ರೇಲರ್ ನಲ್ಲಿ ಟ್ವಿಸ್ಟ್!
ಹೌದು, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮನಸ್ಥಿತಿ ಯಾವಾಗ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕಾರಣದಿಂದಲೇ ವೀಕ್ಷಕರಿಗೆ ಅಚ್ಚರಿಗಳು ಎದುರಾಗುತ್ತವೆ. ನಿತ್ಯ ಹೊಸ ಹೊಸ ಟ್ವಿಸ್ಟ್ಗಳು ಪ್ರೇಕ್ಷಕರಿಗಾಗಿ ಕಾಯುತ್ತಿರುತ್ತವೆ. ದಿನಕಳೆದಂತೆ ದೊಡ್ಮನೆ ಆಟ ರೋಚಕ ತಿರುವು ಪಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್ ಹಾಗೂ ವಿನಯ್ ಸದಾ ಕಚ್ಚಾಡಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ವಿಚಾರಕ್ಕೂ ಒಬ್ಬರನ್ನೊಬ್ಬರು ಟಾರ್ಗೆಟ್ ಮಾಡಿಕೊಳ್ಳುತ್ತಿದ್ದರು. ಆದ್ರೆ ಈಗ ಇಬ್ಬರೂ ಜೋಡೆತ್ತುಗಳಾಗಿದ್ದಾರೆ.
ಮಂಗಳವಾರದ ಟಾಸ್ಕ್ ಬಗ್ಗೆ ಬಿಗ್‌ಬಾಸ್ ಘೋಷಣೆ ಮಾಡಿದ್ದು, ಟಾಸ್ಕ್ ಆರಂಭದ ಮೊದಲೇ ಗಲಾಟೆ ಆರಂಭವಾಗಿದೆ. ಟಾಸ್ಕ್ಗಾಗಿ ತನಿಷಾ ಮತ್ತು ಸಂಗೀತಾರನ್ನು ನಾಯಕರನ್ನಾಗಿ ಮಾಡಲಾಗಿದೆ. ಐಪಿಎಲ್ ಹರಾಜು ಪ್ರಕ್ರಿಯೆಯಂತೆ, ಇವರಿಬ್ಬರೂ ಕೂಡ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡಕ್ಕೆ ಆಟಗಾರರನ್ನು ಖರೀದಿಸಬೇಕು ಎಂದು ಬಿಗ್‌ಬಾಸ್ ಸೂಚಿಸುತ್ತಾರೆ. ಇದಕ್ಕಾಗಿ ಪ್ರತ್ಯೇಕವಾಗಿ ಸಂಗೀತಾ ಮತ್ತು ತನಿಷಾ ಇಬ್ಬರಿಗೂ ಟಿಕೆಟ್ಗಳನ್ನೂ ಸಹ ನೀಡಿರುತ್ತಾರೆ. ಬಿಗ್‌ಬಾಸ್ ಪ್ರೋಮೋದಲ್ಲಿ ಸಂಗೀತಾ ಅವರು ಮೊದಲನೆ ಆಟಗಾರನಾಗಿ ನಮೃತಾರನ್ನು ಖರೀದಿಸುತ್ತಾರೆ. ಅದೇ ವೇಳೆ ತನಿಷಾ ಅವರು ವಿನಯ್ ಅವರನ್ನು ತಮ್ಮ ತಂಡಕ್ಕಾಗಿ ಖರೀದಿಸುವುದನ್ನು ನೋಡಬಹುದು. ನಂತರ ವಿಡಿಯೋದಲ್ಲಿ ತನಿಷಾ ಮತ್ತು ಸಂಗೀತಾ ಇಬ್ಬರೂ ತಮ್ಮ ತಂಡಕ್ಕೆ ಬರುವಂತೆ ಕಾರ್ತಿಕ್ನನ್ನು ಮನವೊಲಿಸುವುದನ್ನು ನೋಡಬಹುದಾಗಿದೆ. ಕೊನೆಗೂ ಕಾರ್ತಿಕ್ ಸಂಗೀತಾ ತಂಡಕ್ಕೆ ಹೋಗಿರುತ್ತಾರೆ.
ಆದ್ರೆ ಈ ಮಧ್ಯೆ ಸಂಗೀತಾ-ಕಾರ್ತಿಕ್ ಮಧ್ಯೆ ಎನೋ ಮಾತುಕತೆಗಳು ನಡೆಯುತ್ತದೆ. ಅಷ್ಟೊತ್ತಿಗೆ ಸಂಗೀತಾ ’ಬೇಕಾದ್ರೆ ನೀವು ಹೋಗಿ, ನೋ ಪ್ರಾಬ್ಲಮ್’ ಎಂದು ಹೇಳುತ್ತಾರೆ. ಸಂಗೀತಾ ಹೇಳಿದ ಮಾತನ್ನು ಕೇಳಿ ಕೋಪಗೊಂಡ ಕಾರ್ತಿಕ್ ‘ಇಷ್ಟೆಲ್ಲಾ ಇಗೋ ಇದ್ರೆ ನಿಲ್ಲಲ್ಲ’ ಅಂತ ಹೇಳಿ ತನ್ನ ಕೈಯಲ್ಲಿದ್ದ ಟಿಕೆಟ್ ಅನ್ನು ಮತ್ತೆ ಸಂಗೀತಾ ಕೈಗೆ ಕೊಟ್ಟು ಹೋಗಿದ್ದಾರೆ. ಈ ಸಂದರ್ಭದಲ್ಲಿ ಖುಷಿಗೊಂಡ ವಿನಯ್ ‘ಜೋಡತ್ತು, ಜೋಡೆತ್ತುಗಳು’ ಅಂತ ಹೇಳಿಕೊಂಡು ಒಬ್ಬರಿಗೊಬ್ಬರು ಮಾತನಡಿಕೊಂಡು ಗ್ರೂಪ್ ಜೊತೆ ನಿಲ್ಲುತ್ತಾರೆ. ಇದೀಗ ಜೊಡೆತ್ತುಗಳು ಒಂದಾಗಿದ್ದು, ಇವರಿಬ್ಬರು ಕಡೆವರೆಗೂ ತಮ್ಮ ಫ್ರೆಂಡ್‌ಶಿಪ್ ಉಳಿಸಿಕೊಳ್ಳುತ್ತಾರಾ? ಆಟ ಮುಗಿದ ಮೇಲೆ ಮತ್ತೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಾರಾ ಅಂತಾ ಕಾದುನೋಡಬೇಕಾಗಿದೆ.