ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಬಾರದಾ – ಚಿಕನ್ ಕ್ಲೀನ್ ಮಾಡಿದ್ರೆ ಆರೋಗ್ಯ ಹಾಳಾಗುತ್ತಾ?
ಸಾಮಾನ್ಯವಾಗಿ ಮೀನು ಅಥವಾ ಮಾಂಸವನ್ನು ಚೆನ್ನಾಗಿ ತೊಳೆದು ಅಡುಗೆ ಮಾಡ್ತೇವೆ. ಆದ್ರೆ ಚಿಕನ್ ಅನ್ನು ಜಾಸ್ತಿ ತೊಳೆಯಬಾರದಂತೆ. ಅರೆ ಇದೇನಪ್ಪಾ ಮಾಂಸ ತಂದರೆ ಚೆನ್ನಾಗಿ ಕ್ಲೀನ್ ಮಾಡಬೇಕು ಅಂತಾರೆ ಅನ್ನಿಸಬಹುದು. ಅದಕ್ಕೆ ಕಾರಣವೂ ಇದೆ.
ಇದನ್ನೂ ಓದಿ : ಮುದ್ದಿನಿಂದ ಬೆಳೆಸಿದ ಮಗಳು ಕ್ಯಾನ್ಸರ್ ಗೆ ಬಲಿ – ಪುತ್ರಿಯ ಸುಂದರ ಮೂರ್ತಿ ಮಾಡಿಸಿದ ತಾಯಿ
ನಾರ್ಮಲ್ ಆಗಿ ಮನೆಗೆ ಚಿಕನ್ ತಂದ್ರೆ ಮೊದ್ಲು ಅದನ್ನ ಚೆನ್ನಾಗಿ ತೊಳೀತಾರೆ. ಯಾಕಂದ್ರೆ ತೊಳೆಯದಿದ್ದರೆ ಅಡುಗೆ ಚೆನ್ನಾಗಿ ಆಗಲ್ಲ. ಹಾಗೇ ಹಸಿಮಾಂಸದಲ್ಲಿ ಕ್ಯಾಂಪಿಲೋಬ್ಯಾಕ್ಟರ್ ಮತ್ತು ಸಾಲ್ಮೊನೆಲ್ಲಾದಂತಹ ಕೆಟ್ಟ ಬ್ಯಾಕ್ಟೀರಿಯಾಗಳಿರುತ್ತವೆ. ಇವುಗಳನ್ನ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಹೊಟ್ಟೆ ನೋವು, ಅತಿಸಾರ ಮತ್ತು ಫುಡ್ ಪಾಯ್ಸನಿಂಗ್ ಆಗುತ್ತೆ. ಹೀಗಿದ್ರೂ ಯಾಕೆ ಮಾಂಸವನ್ನು ನೀಟಾಗಿ ತೊಳೆಯಬಾರದು ಅಂತಾ ನಿಮಗೆ ಅನ್ನಿಸಬಹುದು. ಯಾಕಂದ್ರೆ ಚಿಕನ್ ಅನ್ನು ಚೆನ್ನಾಗಿ ತೊಳೆಯುವಾಗ ಮಾಂಸದಲ್ಲಿರುವ ಬ್ಯಾಕ್ಟೀರಿಯಾಗಳು ಬಟ್ಟೆ, ಪಾತ್ರೆಗಳು, ಕೈಗಳು ಮತ್ತು ಸಿಂಕ್ಗಳಿಗೆ ಹರಡುತ್ತದೆ. ಆಕಸ್ಮಿಕವಾಗಿ ಇವು ನಿಮ್ಮ ದೇಹ ಸೇರಿದರೆ ಸಂಪೂರ್ಣವಾಗಿ ಗೂಡುಕಟ್ಟುತ್ತದೆ. ಅಲ್ಲದೆ ಈ ಬ್ಯಾಕ್ಟೀರಿಯಾ 50 ಸೆಂಟಿಮೀಟರ್ವರೆಗೂ ಬೆಳೆದು ಆರೋಗ್ಯ ಹಾಳು ಮಾಡುತ್ತೆ. ಹೀಗಾಗಿ ಅಡುಗೆಗೂ ಮುನ್ನ ತುಂಬಾ ಹೊತ್ತು ಚಿಕನ್ ತೊಳೆಯಬೇಡಿ. ಆದ್ರೆ ಮಾಂಸವನ್ನು ಬಿಸಿನೀರಿನಲ್ಲಿ ತೊಳೆದರೆ ಬ್ಯಾಕ್ಟೀರಿಯಾಗಳು ಸಾಯುತ್ತವೆ, ಚಿಕನ್ ಕೂಡ ಕ್ಲೀನ್ ಆಗುತ್ತೆ ಅಂತಾ ಸಂಶೋಧಕರೇ ಹೇಳಿದ್ದಾರೆ.