ಭಾರತ ಸೇರಿ 40 ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ ಕೊರೊನಾ ರೂಪಾಂತರಿ! – ದೇಶದಲ್ಲಿ ಕೋವಿಡ್ ಕಟ್ಟೆಚ್ಚರ!
ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ಹಾಗೆ, ಕೊಂಚ ಕಾಲ ತಣ್ಣಗಾಗಿದ್ದ ಕೋವಿಡ್ ಹೆಮ್ಮಾರಿ ಮತ್ತೆ ತನ್ನ ಅಬ್ಬರ ಶುರುಮಾಡಿದೆ. ಈಗ ಹೊಸ ವೇಷ ಧರಿಸಿ ಬಂದಿರುವ JN.1 ರೂಪಾಂತರ ತಳಿ ಹಲವು ದೇಶಗಳಲ್ಲಿ ತಲ್ಲಣ ಮೂಡಿಸಿದೆ. JN.1 ವೈರಸ್ ಆತಂಕ ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಇದು ಜಾಗತಿಕ ಆತಂಕಕ್ಕೂ ಕಾರಣವಾಗಿದೆ.
ಹೌದು, ಕೊಂಚ ಕಾಲ ತಣ್ಣಗಾಗಿದ್ದ ಕೊರೊನಾ, ತನ್ನ ತನ್ನ ಆರ್ಭಟ ಶುರುಮಾಡಿದೆ. ಮಹಾಮಾರಿ ಕೊರೊನಾ ವೈರಸ್ ಮತ್ತೊಂದು ರೂಪಾಂತರ ತಾಳಿದ್ದು, ತವರು ಚೀನಾ ಸೇರಿದಂತೆ ಭಾರತ, ಸಿಂಗಾಪುರ ಸೇರಿ ಜಗತ್ತಿನ 40 ದೇಶಗಳಲ್ಲಿ ರೂಪಾಂತರಿ ವೈರಸ್ ಪತ್ತೆಯಾಗುವ ಮೂಲಕ ವ್ಯಾಪಕ ಭೀತಿ ಹುಟ್ಟಿಸಿದೆ.
ಇದನ್ನೂ ಓದಿ: ವರುಣನ ಆರ್ಭಟಕ್ಕೆ ತಮಿಳುನಾಡು ತತ್ತರ! – ಮೂವರು ಸಾವು, ಸಾವಿರಾರು ಮಂದಿ ಸ್ಥಳಾಂತರ!
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದೆ. ಪ್ರಮುಖವಾಗಿ ಕೇರಳದಲ್ಲಿ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು, ತಮಿಳುನಾಡಿನಲ್ಲಿ ರೂಪಾಂತರಿ ಸೋಂಕಿತರ ಸಂಖ್ಯೆ 8 ಕ್ಕೇರಿಕೆಯಾಗಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ಕರ್ನಾಟಕದಲ್ಲೂ ಕೂಡ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿದೆ. ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಪಾಸಿಟಿವ್ ಕೇಸ್ ಜಾಸ್ತಿಯಾದ ಹಿನ್ನೆಲೆ ಕೇಂದ್ರ ಸರ್ಕಾರ ಕೊವಿಡ್ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ. ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ. ಐಎಲ್ಐ, ಸ್ಯಾರಿ ಕೇಸ್ಗಳ ಮೇಲೆ ನಿಗಾ ಇಡಲು ಚಿಕಿತ್ಸೆ ಬೇಕಾದ ಮೂಲ ಸೌಕರ್ಯ ಕ್ರೋಢೀಕರಣ. ಆರ್ಟಿಪಿಸಿಆರ್ ಪಾಸಿಟಿವ್ ಬಂದರೆ ಜೆನೆಮಿಕ್ ಸೀಕ್ವೆನ್ಸ್ಗೆ ಸ್ಯಾಂಪಲ್ ಕಳಿಸಬೇಕು. ಆ ಮೂಲಕ ಕೋವಿಡ್ ರೂಲ್ಸ್ ನಿರ್ಧಾರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಣೆ ನೀಡಿದೆ.
ಸಿಂಗಾಪುರದಲ್ಲಿ ವಾರದ ಅವಧಿಯಲ್ಲಿ 56,000 ಹೊಸ ಪ್ರಕರಣ
ಭಾರತದ ಪರಿಸ್ಥಿತಿ ಹೀಗಿರುವಾಗಲೇ ಸಿಂಗಾಪುರದಲ್ಲಿ ಕೊರೋನಾ ವೈರಸ್ ತನ್ನ ಬಾಹುಗಳನ್ನು ಚಾಚುತ್ತಿದ್ದು, ಕೇವಲ ಒಂದು ವಾರದ ಅವಧಿಯಲ್ಲಿ ಬರೊಬ್ಬರಿ 56,000 ಹೊಸ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಸಿಂಗಾಪುರ ಆರೋಗ್ಯ ಸಚಿವಾಲಯವು ನಾಗರಿಕರು ಮತ್ತು ಪ್ರಯಾಣಿಕರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಸಚಿವಾಲಯದ ಪ್ರಕಾರ, ಡಿಸೆಂಬರ್ 3 ರಿಂದ 9 2023 ರ ವಾರದಲ್ಲಿ ಅಂದಾಜು 56,043 ಪ್ರಕರಣಗಳ COVID-19 ಪ್ರಕರಣಗಳು ದಾಖಲಾಗಿವೆ. ಇದೇ ಹಿಂದಿನ ವಾರದಲ್ಲಿ 32,035 ಪ್ರಕರಣಗಳು ವರದಿಯಾಗಿತ್ತು ಎಂದು ಹೇಳಲಾಗಿದೆ.
ಭಾರತ ಸೇರಿ 40 ದೇಶಗಳಲ್ಲಿ ಸೋಂಕು ಪತ್ತೆ
ಹೊಸ JN.1 ರೂಪಾಂತರಿ ವೈರಸ್ ಭಾರತ ಮಾತ್ರವಲ್ಲದೇ ತವರು ಚೀನಾ ಸೇರಿದಂತೆ ಜಗತ್ತಿನ 40 ದೇಶಗಳಲ್ಲಿ ಪತ್ತೆಯಾಗಿದೆ. ಡಿಸೆಂಬರ್ 10ರ ವೇಳೆಗೆ ಜಗತ್ತಿನ ಕನಿಷ್ಠ 40 ಇತರ ದೇಶಗಳು ರೂಪಾಂತರಿ ವೈರಸ್ ಪ್ರಕರಣಗಳನ್ನು ವರದಿ ಮಾಡಿವೆ. ಅಮೆರಿಕದ 17 ರಾಜ್ಯಗಳಲ್ಲಿ ಕೋವಿಡ್ -19 ಮತ್ತು ಇತರ ಫ್ಲೂ ಪ್ರಕರಣಗಳು ಹೆಚ್ಚಾಗುತ್ತಿರುವ ಕುರಿತು ಆಸ್ಪತ್ರೆಗಳು ವರದಿ ಮಾಡುತ್ತಿವೆ ಎನ್ನಲಾಗಿದೆ. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 23,432 ಕ್ಕೆ ಏರಿದೆ. ಸಾಧ್ಯವಾದಷ್ಟು ಬೇಗ COVID-19, ಫ್ಲೂ ಮತ್ತು RSV ಲಸಿಕೆಗಳನ್ನು ನೀಡಲು ಅವರನ್ನು ಪ್ರೋತ್ಸಾಹಿಸುತ್ತದೆ ಆಡಳಿತ ಹೇಳಿದೆ ಎಂದು ವರದಿ ಹೇಳಿದೆ. ಅಲ್ಲದೆ ಕಳೆದ ತಿಂಗಳಲ್ಲಿ, ಎಲ್ಲಾ ವಯೋಮಾನದವರಿಗೆ, ಕೋವಿಡ್-19 ಗೆ 200 ಪ್ರತಿಶತದಷ್ಟು ಮತ್ತು US ನಲ್ಲಿ ಜ್ವರಕ್ಕೆ 51 ಪ್ರತಿಶತದಷ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಚೀನಾ ಮೂಲದ ರೋಗನಿರೋಧಕಶಾಸ್ತ್ರಜ್ಞರ ಪ್ರಕಾರ, ಹೆಚ್ಚಿನ ಪ್ರಕರಣಗಳು ವೈರಸ್ಗೆ ಯಾವುದೇ ಗಡಿಯಿಲ್ಲದ ಕಾರಣ JN.1 ರೂಪಾಂತರವನ್ನು ನಿರೀಕ್ಷಿಸಲಾಗಿದೆ. ಆದರೆ ಇದು ಸಾರ್ವಜನಿಕರ ಕಾಳಜಿಯಲ್ಲ. ಏಕೆಂದರೆ ಕೊರೋನ ವೈರಸ್ ಹೊಸ ರೂಪಾಂತರಗಳು ಭವಿಷ್ಯದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.