ದಾವೂದ್ ಇಬ್ರಾಹಿಂ ವಿಷಪ್ರಾಶನದ ಅಸಲಿಯತ್ತೇನು? – ಪಾಕಿಸ್ತಾನದಲ್ಲಿ ಇಂಟರ್ನೆಟ್ ಬಂದ್ ಆಗಿದ್ಯಾಕೆ?
ದಾವೂದ್ ಕಸ್ಕರ್ ಇಬ್ರಾಹಿಂ.. ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್.. 1993ರ ಮುಂಬೈ ಸೀರಿಸ್ ಬಾಂಬ್ ಬ್ಲಾಸ್ಟ್ ಮಾಸ್ಟರ್ಮೈಂಡ್ ದಾವೂದ್ ಈಗ ಮತ್ತೆ ಸುದ್ದಿಯಲ್ಲಿದ್ದಾನೆ. ಭೂಗತ ಪಾತಕಿ ದಾವೂದ್ ಇದ್ದಕ್ಕಿದ್ದಂತೆ ಕರಾಚಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದು ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಕೆಲ ಪಾಕಿಸ್ತಾನದ ಮಾಧ್ಯಮಗಳಲ್ಲೂ ಬಂದಿರೋ ವರದಿ ಪ್ರಕಾರ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ ಮಾಡಲಾಗಿದೆ. ವಿಷಪ್ರಾಷನಕ್ಕೊಳಗಾಗಿ ಭೂಗತ ಪಾತಕಿ ಆರೋಗ್ಯ ಗಂಭೀರವಾಗಿದ್ದು, ಈಗ ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ನಿಜಕ್ಕೂ ದಾವೂದ್ ಕೇಸ್ನಲ್ಲಿ ಆಗಿರೋದೇನು? ಅಂಡರ್ವರ್ಲ್ಡ್ ಡಾನ್ಗೆ ವಿಷ ಕೊಟ್ಟಿದ್ಯಾರು? ಭಾರತದ ಇಂಟೆಲಿಜೆನ್ಸ್ ಏಜೆನ್ಸಿ ಮತ್ತೊಂದು ಮಹಾ ಬೇಟೆಯಾಡಿದ್ಯಾ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ವಿಷ ಪ್ರಾಶನ? – ಆಸ್ಪತ್ರೆಗೆ ದಾಖಲು!
ದಾವೂದ್ ಇಬ್ರಾಹಿಂ ಸದ್ಯ ಕರಾಚಿಯಲ್ಲಿರೋ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ನಲ್ಲಿದ್ದಾನೆ. ಆತನ ಆರೋಗ್ಯ ತುಂಬಾ ಸೀರಿಯಸ್ ಆಗಿದ್ದು, ಸಾವಿನ ಅಂಚಿಗೆ ತಲುಪಿದ್ದಾನೆ. ಡಿಸೆಂಬರ್ 15ರಂದು ತನ್ನ ಬಂಗಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದಾವೂದ್ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾವೂದ್ ಅಡ್ಮಿಟ್ ಆಗಿರೋ ಕರಾಚಿ ಆಸ್ಪತ್ರೆಯ ಇಡೀ ಪ್ಲೋರ್ನ್ನೇ ಸೀಲ್ ಮಾಡಲಾಗಿದೆ. ಅಂದ್ರೆ ಆ ಫ್ಲೋರ್ನಲ್ಲಿ ದಾವುದ್ ಬಿಟ್ರೆ ಇನ್ಯಾವ ಪೇಷೆಂಟ್ ಕೂಡ ಇಲ್ಲ. ಕೇವಲ ದಾವೂದ್ ಕುಟುಂಬಸ್ಥರು ಮತ್ತು ಹಾಸ್ಪಿಟಲ್ ಸಿಬ್ಬಂದಿಗೆ ಮಾತ್ರ ಫ್ಲೋರ್ಗೆ ಎಂಟ್ರಿಗೆ ಅವಕಾಶ ನೀಡಲಾಗ್ತಿದೆ. ಆಸ್ಪತ್ರೆಗೆ ಹೈ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಪಾಕಿಸ್ತಾನದ ಸೇನೆಯೇ ಆಸ್ಪತ್ರೆಯನ್ನ 24/7 ಗಾರ್ಡ್ ಮಾಡ್ತಿದೆ. ಆದ್ರೆ ಇಲ್ಲಿ ಇಂಟ್ರೆಸ್ಟಿಂಗ್ ಆಗಿರೋದು ದಾವೂದ್ ಆಸ್ಪತ್ರೆಗೆ ದಾಖಲಾಗಿರೋದು ಯಾಕೆ ಅನ್ನೋದು? ಪಾಕಿಸ್ತಾನದ ಮಾಧ್ಯಮಗಳೇ ವರದಿ ಮಾಡಿರೋ ಪ್ರಕಾರ ದಾವೂದ್ ಇಬ್ರಾಹಿಂಗೆ ಯಾರೋ ವಿಷ ಪ್ರಾಶನ ಮಾಡಿದ್ದಾರೆ. ದಾವುದ್ ಸೇವಿಸೋ ಆಹಾರದಲ್ಲೋ ಏನೊ ವಿಷ ಮಿಕ್ಸ್ ಮಾಡಲಾಗಿದ್ದು, ಇದನ್ನ ತಿಂದು ದಾವೂದ್ ಬಂಗಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದನಂತೆ. ಬಳಿಕ ಕುಟುಂಬಸ್ಥರು ದಾವೂದ್ನನ್ನ ಕರಾಚಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷ ಸೇವಿಸಿದ್ರಿಂದಾಗಿ ದಾವೂದ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ಯಂತೆ. ಇನ್ನೂ ಕೆಲವರು ದಾವೂದ್ ಸತ್ತೇ ಹೋಗಿದ್ದಾನೆ ಅಂತಾನೂ ಸುದ್ದಿ ಹಬ್ಬಿಸ್ತಾ ಇದ್ದಾರೆ. ಡಿಸೆಂಬರ್ 17ರಂದು ರಾತ್ರಿ 8ರಿಂದ 9 ಗಂಟೆ ನಡುವೆ ದಾವೂದ್ ಸತ್ತು ಹೋಗಿದ್ದಾನಂತೆ. ಆದ್ರೆ ಆತ ಸತ್ತಿರೋದಕ್ಕೆ ಇದುವರೆಗೂ ಯಾವುದೇ ಪುರಾವೆ ಸಿಕ್ಕಿಲ್ಲ. ಈ ಬಗ್ಗೆ ಪಾಕ್ ಸರ್ಕಾರ ಕೂಡ ಬಾಯಿ ಬಿಟ್ಟಿಲ್ಲ. ಬಟ್ ಗಂಭೀರ ಪರಿಸ್ಥಿತಿಯಲ್ಲಿ ದಾವೂದ್ ಹಾಸ್ಪಿಟಲ್ಗೆ ಅಡ್ಮಿಟ್ ಆಗಿರೋದಂತೂ ನಿಜ.
ಯಾವಾಗ ದಾವೂದ್ಗೆ ವಿಷಪ್ರಾಶನ ಮಾಡಲಾಗಿದೆ, ಅಂಡರ್ವರ್ಲ್ಡ್ ಡಾನ್ ಆಸ್ಪತ್ರೆ ಸೇರಿದ್ದಾನೆ ಅನ್ನೋ ಮಾಹಿತಿ ಬಯಲಾಯ್ತೋ ಪಾಕಿಸ್ತಾನದಲ್ಲಿ ಅಲ್ಲೋಲಕಲ್ಲೋಲವಾಗ್ತಿದೆ. ದಾವೂದ್ ಆಸ್ಪತ್ರೆ ಸೇರಿಸೋ ಸುದ್ದಿ ಮೊದಲಿಗೆ ಲೀಕ್ ಆಗಿರೋದು ಸೋಷಿಯಲ್ ಮೀಡಿಯಾ ಮೂಲಕ. ಹೀಗಾಗಿ ಪಾಕಿಸ್ತಾನದಾದ್ಯಂತ ಇಂಟರ್ನೆಟ್ ಕನೆಕ್ಷನ್ನನ್ನ ಕಂಪ್ಲೀಟ್ ಆಗಿ ಬಂದ್ ಮಾಡಲಾಗಿದೆ. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ, ಯೂಟ್ಯೂಬ್, ಗೂಗಲ್ ಯಾವುದೇ ಸೋಷಿಯಲ್ ಮೀಡಿಯಾಗಳು, ಸರ್ಚ್ ಎಂಜಿನ್ಗಳು ವರ್ಕ್ ಆಗ್ತಿಲ್ಲ. ಪಾಕಿಸ್ತಾನದ ಪತ್ರಕರ್ತೆ ಅರ್ಜು ಕಾಸ್ಮಿ ಹೇಳಿರೋ ಪ್ರಕಾರ, ಪಾಕ್ ಸರ್ಕಾರ ದಾವೂದ್ ಕುರಿತ ಸುದ್ದಿಯನ್ನ ಹತ್ತಿಕ್ಕೋಕೆ ಪ್ರಯತ್ನ ಮಾಡ್ತಿದ್ಯಂತೆ. ದಾವುದ್ ಹಾಸ್ಪಿಟಲೈಸೇಶನ್ ಆಗ್ತಿದಂತೆ ಪಾಕ್ ಸರ್ಕಾರ ಪ್ಯಾನಿಕ್ ಆಗಿದೆ.