80 ಗಿಡುಗಗಳಿಗೆ ಟಿಕೆಟ್ ಬುಕ್ ಮಾಡಿ ವಿಮಾನದಲ್ಲಿ ಪ್ರಯಾಣ – ಸೌದಿ ದೊರೆಗಳಿಗೆ ಗಿಡುಗಗಳು ಅಂದ್ರೆ ಅಚ್ಚುಮೆಚ್ಚು ಯಾಕೆ?
ಬಸ್ ನಲ್ಲಿ, ಕಾರಿನಲ್ಲಿ, ಟ್ರೈನ್ ನಲ್ಲಿ. ಹೀಗೆ ಈ ಎಲ್ಲಾ ವಾಹನಗಳಲ್ಲೂ ಬಹುತೇಕ ಜನ ಓಡಾಡಿರುತ್ತಾರೆ. ಆದರೆ ತುಂಬಾ ಜನರಿಗೆ ವಿಮಾನದಲ್ಲಿ ಓಡಾಡಬೇಕು ಎಂಬ ಆಸೆ ಇರುತ್ತದೆ. ಈ ಆಸೆ ಕೆಲವರಿಗೆ ಈಡೇರುತ್ತದೆ. ಇನ್ನೂ ಕೆಲವರಿಗೆ ಕನಸಾಗಿಯೇ ಉಳಿದಿರುತ್ತದೆ. ಆದರೆ ಸೌದಿ ಅರೇಬಿಯಾದಲ್ಲಿ ರಾಜನೊಬ್ಬ ತಾನು ಸಾಕಿದ ಗಿಡುಗಗಳನ್ನ ವಿಮಾನದಲ್ಲಿ ಕರೆದೊಯ್ದಿದ್ದಾನೆ.
ಇದನ್ನೂ ಓದಿ : ಶಾಲೆಗೆ ಎಂಟ್ರಿಕೊಟ್ಟ ಕರಡಿ.. – ಶಿಕ್ಷಕರ ಕೊಠಡಿಗೆ ನುಗ್ಗಿ ಆಹಾರ ಪದಾರ್ಥ ತಿಂದ ಜಾಂಬವಂತ!
ವಿಮಾನ ಪ್ರಯಾಣ ಅಂದ್ರೆ ಅದು ಸುಲಭದ ಮಾತಲ್ಲ. ದುಬಾರಿ ವಿಮಾನದ ಪ್ರಯಾಣ ಸಾಮಾನ್ಯ ಜನರ ಕೈಗೆ ಎಷ್ಟು ಸುಲಭವಾಗಿ ಸಿಗೋದಿಲ್ಲ. ಆದರೆ ಸೌದಿ ಅರೇಬಿಯಾದ ರಾಜನೊಬ್ಬ ತಾನು ಸಾಕಿದ್ದ 80 ಗಿಡುಗಗಳಿಗೆ ವಿಮಾನದಲ್ಲಿ ಒಂದೊಂದು ಟಿಕೆಟ್ ಬುಕ್ ಮಾಡಿ ಟ್ರಾವೆಲ್ ಮಾಡಿದ್ದಾನೆ. ಸೌದಿ ಅರೇಬಿಯಾದ ವಿಮಾನದಲ್ಲಿ ಗಿಡುಗಗಳ ಜೊತೆ ಪ್ರಯಾಣಿಕರು ಪ್ರಯಾಣ ಮಾಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸೌದಿ ರಾಜ ತನ್ನ ಪ್ರೀತಿಯ 80 ಗಿಡುಗಗಳಿಗೋಸ್ಕರ ವಿಮಾನದ 80 ಸೀಟ್ ಅನ್ನು ಬುಕ್ ಮಾಡಿದ್ದಾನೆ. ವಿಮಾನದಲ್ಲಿ ತನ್ನ ಗಿಡುಗಗಳ ಜೊತೆ ಬಿಂದಾಸ್ ಆಗಿ ಪ್ರಯಾಣ ಮಾಡಿದ್ದಾನೆ. ಮಧ್ಯ ಪ್ರಾಚ್ಯ ದೇಶದಲ್ಲಿ ಗಿಡುಗಗಳನ್ನ ಒಂದು ಕಡೆಯಿಂದ ಮತ್ತೊಂದು ಜಾಗಕ್ಕೆ ಸಾಗಿಸೋದು ಸರ್ವೇ ಸಾಮಾನ್ಯವಾದ ವಿಚಾರ. ಇವುಗಳಿಗೆ ಬೇಟೆಯಾಡಲು ಟ್ರೈನಿಂಗ್ ಕೊಡುವ ಸೌಧಿ ಮಂದಿಗೆ ಗಿಡುಗಗಳು ಅಂದ್ರೆ ಅಚ್ಚುಮೆಚ್ಚು.
ಸಾವಿರಾರು ವರ್ಷಗಳಿಂದ ಸೌದಿ ಅರೇಬಿಯಾದ ರಾಜ, ಮಹಾರಾಜರು ಗಿಡುಗಗಳನ್ನು ಸಾಕುತ್ತಾ ಬಂದಿದ್ದಾರೆ. ಸೌದಿ ಅರೇಬಿಯಾದ ಜನ ತಾವು ಸಾಕುವ ಗಿಡುಗಗಳಿಗೆ ಪಾಸ್‌ಪೋರ್ಟ್ ಕೂಡ ಮಾಡಿಸುತ್ತಾರೆ. ಆಶ್ಚರ್ಯವಾದ್ರೂ ಸತ್ಯ. ಒಂದು ಕಡೆಯಿಂದ ಮತ್ತೊಂದು ಜಾಗಕ್ಕೆ ಗಿಡುಗಗಳನ್ನ ಕೊಂಡೊಯ್ಯಲು ಇದನ್ನ ಬಳಸಲಾಗುತ್ತೆ. ಇವುಗಳಿಗೆ ಮೂರು ವರ್ಷಗಳ ಕಾಲಾವಧಿ ಇರುತ್ತೆ. ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ, ಪಾಕಿಸ್ತಾನ, ಮೊರಾಕೊ ಮತ್ತು ಸಿರಿಯಾದಲ್ಲಿ ಚಾಲ್ತಿಯಲ್ಲಿದೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಗಿಡುಗಗಳಿಗೆ ಭಾರೀ ಡಿಮ್ಯಾಂಡ್ ಇದೆ. ಒಂದೇ ಒಂದು ಗಿಡುಗವನ್ನು ಮಿಲಿಯನ್ ಡಾಲರ್ ಕೊಟ್ಟು ಕೊಂಡುಕೊಳ್ಳುತ್ತಾರೆ. ಗಿಡುಗಗಳ ಆರೋಗ್ಯ ಏರುಪೇರಾದ್ರೆ ಚಿಕಿತ್ಸೆ ನೀಡಲು ದೊಡ್ಡ, ದೊಡ್ಡ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ.