ಗೀಸರ್ ನೀರಲ್ಲಿ ಬ್ಯಾಕ್ಟೀರಿಯಾ..! – ಚಳಿಗಾಲದಲ್ಲಿ ಗೀಸರ್ ತಾಪಮಾನ ಎಷ್ಟಿದ್ದರೆ ಸೇಫ್?
ಚಳಿಗಾಲ ಆರಂಭವಾದಂತೆ ನಲ್ಲಿಯಲ್ಲಿ ಬರುವ ನೀರು ಕೂಡಾ ಅತಿಯಾಗಿ ತಂಪಾಗಿರುತ್ತೆ. ಹೀಗಾದಾಗ ತಣ್ಣೀರು ಸ್ನಾನ ಮಾಡುವುದು ಸುಲಭವಲ್ಲ. ಗೀಸರ್ ಬಳಕೆ ಅಗತ್ಯವಾಗಿರುತ್ತದೆ. ಆದರೆ ವಿದ್ಯುತ್ ದರಕ್ಕೆ ಹೆದರಿ ಜನರು ಗೀಸರ್ ನ ತಾಪಮಾನವನ್ನು ಕಡಿಮೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಆದರೆ ಇದು ನಿಜವಲ್ಲ. ವಿದ್ಯುತ್ ಉಳಿಸುವ ಸಲುವಾಗಿ, ನೀವು ಮಾಡುವ ಕೆಲಸದಿಂದ ಗೀಸರ್ ನಿಂದ ಬರುವ ನೀರು ಅನೇಕ ರೋಗಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಚಳಿಗಾಲದಲ್ಲಿ ಮುಖದಲ್ಲಿ ಬಿರುಕು ಬೀಳಲು, ಮುಖ ಕೆಂಪಾಗಲು ಇದೇ ಕಾರಣ!
ಗೀಸರ್ ನ ತಾಪಮಾನವನ್ನು ಕಡಿಮೆ ಮಾಡಿದ್ರೆ ಗೀಸರ್ ನೀರಿನಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ಗಳ ಅಪಾಯ ಹೆಚ್ಚಾಗಬಹುದು. ಈ ಬ್ಯಾಕ್ಟೀರಿಯಾಗಳು ಮತ್ತು ವೈರಸ್ಗಳು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು. ಗೀಸರ್ ನೀರಿನಲ್ಲಿ ಲೀಜಿಯೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಇರುತ್ತೆ. ಈ ಬ್ಯಾಕ್ಟೀರಿಯಾ ಚಳಿಗಾಲದಲ್ಲಿ ಗೀಸರ್ ನೀರಿನಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಗೀಸರ್ ನೀರು 50 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಿದ್ದರೆ ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ ಎಂದು ಅಧ್ಯಯನದ ವೇಳೆ ಗೊತ್ತಾಗಿದೆ.
2000 ರ ದಶಕದ ಆರಂಭದಲ್ಲಿ ಕೆನಡಾದಲ್ಲಿ ಲೀಜಿಯೋನೆಲ್ಲಾ ಪ್ರಕರಣಗಳು ಹೆಚ್ಚಾದವು. ಈ ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದರು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕೆನಡಾ ಸರ್ಕಾರವು ‘ಸೇಫ್ ಕಿಡ್ಸ್ ಕೆನಡಾ ಅಭಿಯಾನ’ವನ್ನು ಪ್ರಾರಂಭಿಸಿತು. ಮನೆಗಳಲ್ಲಿ ಬಳಸುವ ನೀರಿನ ತಾಪಮಾನವನ್ನು ಕಡಿಮೆ ಮಾಡದಂತೆ ಜನರಿಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. ಅಭಿಯಾನದ ಪ್ರಕಾರ, ಮನೆಗಳಲ್ಲಿ ಗೀಸರ್ ನೀರಿನ ತಾಪಮಾನವು 49 ರಿಂದ 60 ಡಿಗ್ರಿಗಳ ನಡುವೆ ಇರಬೇಕು. ಹಾಗಾದಾಗ ಲೀಜಿಯೋನೆಲ್ಲಾ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಬಹುದು ಅಂತಾ ಕೆನಡಾ ಸರ್ಕಾರ ಹೇಳಿದೆ.
ಇನ್ನು ಗೀಸರ್ ತಾಪಮಾನ ಎಷ್ಟಿರಬೇಕು ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ. ಚಳಿಗಾಲದಲ್ಲಿ ಗೀಸರ್ ತಾಪಮಾನವನ್ನು 60 ರಿಂದ 65 ಡಿಗ್ರಿಗಳಲ್ಲಿ ಇಡಬೇಕು. ಇದು ಲೀಜಿಯೋನೆಲ್ಲಾ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಬಹುದು. ಬೇಸಿಗೆಯಲ್ಲಿ, ಗೀಸರ್ ತಾಪಮಾನವನ್ನು 50 ರಿಂದ 55 ಡಿಗ್ರಿಗಳಲ್ಲಿ ಇರಿಸಬಹುದು. ಆದರೆ, ಗೀಸರ್ 70-75 ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡಬಾರದು. ಇದು ಗೀಸರ್ನ ಟ್ಯಾಂಕ್ ಮತ್ತು ಪೈಪ್ಗಳಿಗೆ ಹಾನಿಯನ್ನು ಉಂಟುಮಾಡಬಹುದು.