ವಾಟ್ಸ್ಆ್ಯಪ್ ಶಾಕಿಂಗ್ ನ್ಯೂಸ್! – ಇನ್ನು ಮುಂದೆ ವಾಟ್ಸ್ಆ್ಯಪ್ ನಲ್ಲಿ ಫ್ರೀ ಸೇವೆ ಇರಲ್ಲ!
ಈಗ ಎಲ್ಲರೂ ವಾಟ್ಸ್ಆ್ಯಪ್ ಯೂಸ್ ಮಾಡ್ತಾರೆ. ಮೆಟಾ ಮಾಲೀಕತ್ವದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ಇಂದು ಬಳಕೆದಾರರಿಗೆ ಅಗತ್ಯ ಫೀಚರ್ಗಳನ್ನು ಪರಿಚಯಿಸಿ ಮೆಚ್ಚಿನ ಆ್ಯಪ್ ಆಗಿ ಬಿಟ್ಟಿದೆ. ಕೋಟಿಗಟ್ಟಲೆ ಜನರು ಇದನ್ನು ಉಪಯೋಗಿಸುತ್ತಿದ್ದಾರೆ. ಹೀಗಿರುವಾಗ ವಾಟ್ಸ್ಆ್ಯಪ್ ಇದೀಗ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ.
ಇದನ್ನೂ ಓದಿ: ಟಾಯ್ಲೆಟ್ನಲ್ಲಿ ಕುಳಿತು ಪೇಪರ್ ಓದುವುದು, ಫೋನ್ ಬಳಸುತ್ತೀರಾ?
ಹೌದು, ಆಂಡ್ರಾಯ್ಡ್ ವಾಟ್ಸ್ಆ್ಯಪ್ ಬಳಕೆದಾರರು ತಮ್ಮ ಚಾಟ್ ಬ್ಯಾಕಪ್ ಡೇಟಾವನ್ನು ಗೂಗಲ್ ಡ್ರೈವ್ನಲ್ಲಿ ಸೇವ್ ಮಾಡಿಕೊಟ್ಟುಕೊಳ್ಳುದ್ದಾರೆ. ಈ ಸೇವೆಗಳು ಪ್ರಸ್ತುತ ಉಚಿತವಾಗಿದೆ. ಆದರೆ, ಕಂಪನಿಯು ಇನ್ನು ಮುಂದೆ 2024 ರಿಂದ ಗೂಗಲ್ ಡ್ರೈವ್ನಲ್ಲಿ ಉಚಿತ ಅನಿಯಮಿತ ಬ್ಯಾಕಪ್ಗಳನ್ನು ನೀಡುವುದಿಲ್ಲ ಅಂತಾ ಹೇಳಿದೆ. ಇನ್ನು ಮುಂದೆ ವಾಟ್ಸ್ಆ್ಯಪ್ ಬ್ಯಾಕ್ಅಪ್ಗಳು ಸೀಮಿತ ಸಂಗ್ರಹಣೆ ಕೋಟಾವನ್ನು ಮಾತ್ರ ಪಡೆಯುತ್ತವೆ. ಗೂಗಲ್ ಡ್ರೈವ್ನಲ್ಲಿ ಒದಗಿಸಲಾದ 15GB ಸಂಗ್ರಹದ ಮಿತಿಯನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಇನ್ನಷ್ಟು ಸ್ಟೋರೇಜ್ ಹೆಚ್ಚಿಸಬೇಕಾದರೆ ಹಣ ಕೊಡಬೇಕು.
ಚಾಟ್ ಬ್ಯಾಕ್ಅಪ್ಗಳಿಗಾಗಿ ಗೂಗಲ್ ಡ್ರೈವ್ನಲ್ಲಿ ಜಾಗವನ್ನು ನಿಗದಿಪಡಿಸುವ ನಿಯಮವು 2024 ರ ಆರಂಭದಿಂದ ಜಾರಿಗೆ ಬರಲಿದೆ. ಬಳಕೆದಾರರು ಎಷ್ಟು ಸ್ಟೋರೇಜ್ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ವಾಟ್ಸ್ಆ್ಯಪ್ ಸೆಟ್ಟಿಂಗ್ಗಳಲ್ಲಿ ಸ್ಟೋರೇಜ್ ಆಯ್ಕೆಯನ್ನು ಪರಿಶೀಲಿಸಬಹುದು. ಚಾಟ್ ಬ್ಯಾಕಪ್ ಸಂಗ್ರಹಣೆಗೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬುದರ ಕುರಿತು ವಾಟ್ಸ್ಆ್ಯಪ್ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆಯಂತೆ.