ದೇವಸ್ಥಾನದ ಉತ್ಸವಕ್ಕೆ ಕರೆ ತಂದಿದ್ದ ಆನೆಗೆ ಮದ! – ಗಜರಾಜನ ಆರ್ಭಟಕ್ಕೆ 2 ಕಾರು, ಟೆಂಪೋ ಟ್ರಾವೆಲ್ಲರ್ ಜಖಂ!
ದೇವಸ್ಥಾನದ ಉತ್ಸವಗಳಲ್ಲಿ, ಮೆರವಣಿಗೆ, ಜಾತ್ರೆಗಳಲ್ಲಿ ಆನೆಗಳನ್ನು ಬಳಸಿಕೊಳ್ಳುವುದು ಸಾಮಾನ್ಯ. ಮೆರವಣಿಗೆಯಲ್ಲಿ ಆನೆಗಳು ಕೂಡ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತವೆ. ಕೆಲವೊಂದು ಬಾರಿ ಗದ್ದಲ ಉಂಟಾದಾಗ ಆನೆಗಳು ಹೆದರುವುದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ದೇವಸ್ಥಾನದ ಉತ್ಸವಕ್ಕೆ ಕರೆತಂದಿದ್ದ ಆನೆಗೆ ಮದವೇರಿದ್ದು, ವಾಹನಗಳ ಮೇಲೆ ದಾಳಿ ಮಾಡಿದೆ.
ಇದನ್ನೂ ಓದಿ: ಗೆಳತಿ ಮೇಲೆ ಕಾರು ಹರಿಸಿ ಕೈ, ಕಾಲು ಮುರಿದ ಐಎಎಸ್ ಅಧಿಕಾರಿ ಮಗ – ಹೋಟೆಲ್ ಮುಂದೆಯೇ ನಡೆದಿತ್ತು ಅಮಾನುಷ ಕೃತ್ಯ
ಹೌದು, ಈ ಘಟನೆ ಕೇರಳದ ತ್ರಿಶ್ಯೂರ್ ಜಿಲ್ಲೆಯಲ್ಲಿ ನಡೆದಿದೆ. ದೇವಸ್ಥಾನದ ಉತ್ಸವಕ್ಕೆ ಕರೆ ತಂದಿದ್ದ ಆನೆಯೊಂದಕ್ಕೆ ಮದವೇರಿದೆ. ಆನೆ ಜನರನ್ನು ಎಲ್ಲೆಂದರಲ್ಲಿ ಅಟ್ಟಿಸಿಕೊಂಡು ಹೋಗಿದೆ. ಬಳಿಕ 2 ಕಾರು, ಒಂದು ಟೆಂಪೋ ಟ್ರಾವೆಲ್ಲರ್ ಅನ್ನು ಜಖಂಗೊಳಿಸಿದೆ ಎಂದು ವರದಿಯಾಗಿದೆ.
ತೃಪ್ರಯಾರ್ನಲ್ಲಿರುವ ಶ್ರೀರಾಮ ಕ್ಷೇತ್ರದ ಉತ್ಸವಕ್ಕೆ ಪ್ರತಿ ವರ್ಷ ಆನೆಯನ್ನು ಕರೆ ತರಲಾಗುತ್ತಿದೆ. ಈ ರೀತಿಯಾಗಿ ಕರೆ ತಂದಾಗ ಜನರು ಆನೆಯ ಫೋಟೋ, ವಿಡಿಯೋ ತೆಗೆದಿದ್ದಾರೆ. ಈ ಸಂದರ್ಭದಲ್ಲಿ ಆನೆಗೆ ಮದವೇರಿ 2 ಕಾರು, ಒಂದು ಟಿಟಿಯನ್ನು ಸಂಪೂರ್ಣ ಜಖಂಗೊಳಿಸಿದೆ. ಸೊಂಡಿಲು ಬಳಸಿ ಟಿಟಿಯನ್ನು ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿದೆ. ಈ ವೇಳೆ ಅಲ್ಲಿದ್ದ ಜನ ಆನೆಯ ಮೇಲೆ ಕಲ್ಲು ಎಸೆದಿದ್ದಾರೆ. ವಿಚಾರ ತಿಳಿದು ತ್ರಿಶ್ಯೂರ್ನಿಂದ ಎಲಿಫೆಂಟ್ ಸ್ಕ್ವಾಡ್ ಸದಸ್ಯರು ಆಗಮಿಸಿ ಹಗ್ಗ ಬಳಸಿ ಆನೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಂದೂವರೆ ಗಂಟೆಯ ಬಳಿಕ ಆನೆ ಶಾಂತವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.