ವದಂತಿಗಳ ಬೆನ್ನಲ್ಲೇ ಒಟ್ಟಿಗೆ ಕಾಣಿಸಿಕೊಂಡ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್!

ಕರಾವಳಿ ಬೆಡಗಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯಕ್ಕೆ ಬರೋಬ್ಬರಿ ಹದಿನಾರು ವರ್ಷಗಳಾಗಿವೆ. ಇಬ್ಬರಿಗೆ ಆರಾಧ್ಯ ಎಂಬ ಮುದ್ದಾದ ಮಗಳಿದ್ದಾಳೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನದಲ್ಲಿ ಬಿರುಕು ಬಿದ್ದಿದೆ. ಈ ಜೋಡಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವಿಚಾರ ಪದೇ ಪದೇ ಸುದ್ದಿಯಾಗುತ್ತಿದೆ. ಕಳೆದ ಬಾರಿ ಕೂಡ ಇಂತಹದ್ದೇ ಸುದ್ದಿ ಹಬ್ಬಿದಾಗ ‘ದಿ ಆರ್ಚೀಸ್’ ಸಿನಿಮಾದ ಪ್ರೀಮಿಯರ್ ನೈಟ್ನಲ್ಲಿ ಇಡೀ ಬಚ್ಚನ್ ಕುಟುಂಬದೊಂದಿಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಜಂಟಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಇವರಿಬ್ಬರು ದೂರವಾಗಿದ್ದಾರೆ. ಗಂಡನ ಮನೆ ಬಿಟ್ಟು ಐಶ್ವರ್ಯ ತಾಯ ಮನೆಗೆ ಬಂದಿದ್ದಾರೆ ಎಂಬ ವದಂತಿ ಹಬ್ಬುತ್ತಿದೆ. ಈ ಬೆನ್ನಲ್ಲೇ ಕಾರ್ಯಕ್ರಮವೊಂದರಲ್ಲಿ ಬಚ್ಚನ್ ಕುಟುಂಬದ ಎಲ್ಲ ಸದಸ್ಯರು ಒಟ್ಟಾಗಿ ಕಾಣಿಸಿಕೊಂಡಿದೆ. ಈ ಮೂಲಕ ವದಂತಿಗಳಿಗೆ ಕೊನೆ ಹಾಡಿದ್ದಾರೆ.
ಇದನ್ನೂ ಓದಿ: ಶೀಘ್ರದಲ್ಲಿಯೇ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಂಪತಿ ವಿಚ್ಛೇದನ?
ಹೌದು, ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ಈ ವದಂತಿಗೆ ಬ್ರೇಕ್ ಹಾಕುವಂತೆ ಬಚ್ಚನ್ ಕುಟುಂಬದ ಸದಸ್ಯರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಬಚ್ಚನ್ ಫ್ಯಾಮಿಲಿ ಖುಷಿ ಖುಷಿಯಿಂದ ಭಾಗಿಯಾಗಿದ್ದಾರೆ. ಇದರ ಫೋಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಭಿಷೇಕ್ ಹಾಗೂ ಐಶ್ವರ್ಯಾ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಮುಂಬೈನಲ್ಲಿರುವ ಧೀರೂಬಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಬಚ್ಚನ್ ಕುಟುಂಬದ ಕುಡಿ ಆರಾಧ್ಯಾ ಶಿಕ್ಷಣ ಪಡೆಯುತ್ತಿದ್ದಾಳೆ. ಅವಳ ಶಾಲೆಯಲ್ಲಿ ಶುಕ್ರವಾರ (ಡಿಸೆಂಬರ್ 15) ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ಐಶ್ವರ್ಯಾ, ಅಭಿಷೇಕ್, ಅಮಿತಾಭ್, ಅಗಸ್ತ್ಯ ನಂದ ಆಗಮಿಸಿದ್ದರು. ಈ ಕಾರ್ಯಕ್ರಮದ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಐಶ್ವರ್ಯಾ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಕುಟುಂಬದ ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡಿರುವುದು ಹಲವು ವದಂತಿಗೆ ತೆರೆ ಎಳೆದಂತೆ ಆಗಿದೆ.
ಇತ್ತೀಚೆಗೆ ಅಗಸ್ತ್ಯ ನಂದ ಅವರ ಮೊದಲ ಸಿನಿಮಾ ‘ದಿ ಆರ್ಚೀಸ್’ ರಿಲೀಸ್ ಆಗಿತ್ತು. ಈ ಸಿನಿಮಾ ನೋಡಲು ಇಡೀ ಕುಟುಂಬದವರು ಭಾಗಿ ಆಗಿದ್ದರು. ಆ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಆರಾಧ್ಯಾಗಾಗಿ ಇಡೀ ಕುಟುಂಬ ಒಟ್ಟಿಗೆ ಆಗಮಿಸಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಮಿತಾಭ್ ಹಾಗೂ ಅಭಿಷೇಕ್ ಒಟ್ಟಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ.
ಬಚ್ಚನ್ ಕುಟುಂಬದ ಕೆಲವು ನಡೆಗಳು ಸಾಕಷ್ಟು ಕುತೂಹಲ ಮೂಡಿಸಿದ್ದವು. ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬೇರೆ ಬೇರೆ ವಾಸ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇನ್ನು, ಇನ್ಸ್ಟಾಗ್ರಾಮ್ನಲ್ಲಿ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ಅನ್ಫಾಲೋ ಮಾಡಿದ್ದು ಸಾಕಷ್ಟು ಸುದ್ದಿ ಆಯಿತು. ಈ ಎಲ್ಲಾ ಕಾರಣದಿಂದ ವಿಚ್ಛೇದನ ವದಂತಿ ಜೋರಾಯಿತು.