ಸಂಸತ್ ಭವನದಲ್ಲಿ ಭದ್ರತಾ ಲೋಪ ಪ್ರಕರಣ – ಅಟ್ಯಾಕ್ ಆದ್ಮೇಲೆ ಸಂಸತ್ ಸೆಕ್ಯೂರಿಟಿಯಲ್ಲಿ ಭಾರಿ ಬದಲಾವಣೆ!
ಸಂಸತ್ ಭವನದಲ್ಲಿ ಹೆಜ್ಜೆ ಹೆಜ್ಜೆಗೂ ಭದ್ರತಾ ಸಿಬ್ಬಂದಿ, ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಇದೆ ಅಂತಾ ಹೇಳಲಾಗುತ್ತೆ. ಆದ್ರೆ ಬುಧವಾರ ನಡೆದಿರೋ ದಾಳಿ ನಿಜಕ್ಕೂ ಇಡೀ ಭಾರತವನ್ನೇ ಬೆಚ್ಚಿ ಬೀಳಿಸಿದೆ. ಭಾರತದ ಪ್ರಜಾಪ್ರಭುತ್ವದ ಪ್ರತೀಕವಾಗಿರುವ, ಸಾರ್ವಭೌಮತೆಯ ಬೆನ್ನೆಲುಬಾಗಿರುವ ಸಂಸತ್ ಮೇಲೆಯೇ ಅತಿದೊಡ್ಡ ದಾಳಿ ನಡೆದಿದೆ. ಹೊಸ ಸಂಸತ್ ಭವನದಲ್ಲೇ ಇಬ್ಬರು ಕೋಲಾಹಲ ಸೃಷ್ಟಿಸಿದ್ದಾರೆ. ಸ್ಮೋಕ್ ಕ್ರ್ಯಾಕರ್ಸ್ ಸಿಡಿಸಿ ರಂಪಾಟ ಮಾಡಿದ್ದಾರೆ. ಸಂಸತ್ ಮೇಲೆ ಅಟ್ಯಾಕ್ ಆದ್ಮೇಲೆ ಸಂಸತ್ ಸೆಕ್ಯೂರಿಟಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಸಂಸತ್ ಭದ್ರತೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಅನ್ನೋ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಸಂಸತ್ನಲ್ಲಿ ಭದ್ರತಾ ಲೋಪ ಪ್ರಕರಣ – ಮಾಸ್ಟರ್ಮೈಂಡ್ ಲಲಿತ್ ಝಾ ಅರೆಸ್ಟ್!
ವೀಕ್ಷಕರ ಗ್ಯಾಲರಿಗೆ ಗ್ಲಾಸ್ ಬ್ಯಾರಿಯರ್!
ಸಾಗರ್ ಮತ್ತು ಮನೋರಂಜನ್ ವೀಕ್ಷಕರ ಗ್ಯಾಲರಿಯಿಂದ ಲೋಕಸಭೆ ಹಾಲ್ನೊಳಕ್ಕೆ ಜಂಪ್ ಮಾಡಿದ್ರು. ಹೀಗಾಗಿ ವೀಕ್ಷಕರ ಗ್ಯಾಲರಿಗೆ ಗ್ಲಾಸ್ ಬ್ಯಾರಿಯರ್ನ್ನ ಅಳವಡಿಸೋಕೆ ತೀರ್ಮಾನಿಸಲಾಗಿದೆ. ಈ ಗ್ಲಾಸ್ ಬ್ಯಾರಿಯರ್ಗಳೂ ಅಷ್ಟೇ, ಬುಲೆಟ್ ಪ್ರೂಫ್ ಆಗಿದ್ರೂ ಆಶ್ಚರ್ಯ ಇಲ್ಲ.
ಎಲ್ಲರಿಗೂ ಸಪರೇಟ್ ಎಂಟ್ರಿ ಗೇಟ್!
ಇದು ಸಂಸದರು, ಅಧಿಕಾರಿಗಳು, ಸ್ಟಾಫ್ ಮೆಂಬರ್ಸ್ಗೆ, ವಿಸಿಟರ್ಸ್ಗಳಿಗೆ ಒಂದೇ ಎಂಟ್ರಿ ಗೇಟ್ ಇತ್ತು. ಆದ್ರೆ ಇನ್ಮುಂದೆ ಸಂಸದರಿಗೇ ಒಂದು ಎಂಟ್ರಿ ಗೇಟ್..ಅಧಿಕಾರಿಗಳು ಮತ್ತು ಸಾಫ್ ಮೆಂಬರ್ಸ್ಗಳಿಗೆ ಒಂದು ಗೇಟ್ ಮತ್ತು ವಿಸಿಟರ್ಸ್ಗಳಿಗೆ ಅಂತಾನೆ ಸಪರೇಟ್ ಎಂಟ್ರಿ ಗೇಟ್ ಅಳವಡಿಸೋಕೆ ತೀರ್ಮಾನಿಸಲಾಗಿದೆ.
ಫುಲ್ ಬಾಡಿ ಸ್ಕ್ಯಾನಿಂಗ್ ಮಷಿನ್!
ಸಂಸತ್ಗೆ ಎಂಟ್ರಿಯಾಗುವಲ್ಲಿ ಇದುವರೆಗೆ ಮೆಟಲ್ ಡಿಟೆಕ್ಟರ್ನ್ನ ಫಿಕ್ಸ್ ಮಾಡಲಾಗಿತ್ತು. ಎಲ್ಲರೂ ಮೆಟಲ್ ಡಿಟೆಕ್ಟರ್ ಮೂಲಕವೇ ಹಾದು ಹೋಗಬೇಕಿತ್ತು. ಈಗ ಅಟ್ಯಾಕ್ ಮಾಡಿದ್ದ ಸಾಗರ್ ಮತ್ತು ಮನೋರಂಜನ್ ಕೂಡ ಮೆಟಲ್ ಡಿಟೆಕ್ಟರ್ ಮೂಲಕವೇ ಪಾಸ್ ಆಗಿದ್ರು. ಆದ್ರೆ ಅವರ ಶೂವಿನೊಳಗಿದ್ದ ಸ್ಮೋಕಿಂಗ್ ಗ್ಯಾಸ್ ಮಾತ್ರ ಮೆಟಲ್ ಡಿಟೆಕ್ಟರ್ನಲ್ಲಿ ಡಿಟೆಕ್ಟ್ ಆಗಿಯೇ ಇಲ್ಲ. ಈ ಸಂಗತಿಯಲ್ಲಿ ಮೊದಲೇ ಕನ್ಫರ್ಮ್ ಮಾಡಿಕೊಂಡೇ ಕಿರಾತಕರಿಬ್ರೂ ಎಂಟ್ರಿಯಾಗಿದ್ರು. ಮೆಟಲ್ ಡಿಟೆಕ್ಟರ್ನ ಲೂಪ್ಹೋಲ್ ಏನು ಅನ್ನೋದು ಅವರಿಗೆ ಗೊತ್ತಿತ್ತು. ಹೀಗಾಗಿ ಈಗ ಮೆಟಲ್ ಡಿಟೆಕ್ಟರ್ ಮಾತ್ರವಲ್ಲ ಫುಲ್ ಬಾಡಿ ಸ್ಕ್ಯಾನಿಂಗ್ ಮಷಿನ್ನನ್ನ ಕೂಡ ಸಂಸತ್ ಎಂಟ್ರಿ ಗೇಟ್ನಲ್ಲಿ ಅಳವಡಿಸೋಕೆ ತೀರ್ಮಾನಿಸಲಾಗಿದೆ. ಬಾಡಿ ಸ್ಕ್ಯಾನಿಂಗ್ ಮೂಲಕ ಇಡೀ ಬಾಡಿಯನ್ನ ಸ್ಕ್ಯಾನ್ ಮಾಡಬಹುದು. ತಲೆಯಿಂದ ಹಿಡಿದು, ಕಾಳಿನವರೆಗೂ ಏನೇ ಇದ್ರೂ ಅದ್ರಲ್ಲಿ ಪತ್ತೆಯಾಗುತ್ತೆ.
ಸಂಸದರ ಐಡಿ ಕಾರ್ಡ್ ಕೂಡ ಚೆಕ್ಕಿಂಗ್!
ಇದುವರೆಗೆ ವಿಸಿಟರ್ಸ್ಗಳು, ಸ್ಟಾಫ್ ಮೆಂಬರ್ಗಳು, ಸಂಸತ್ ಭವನದ ಸಿಬ್ಬಂದಿಯ ಐಡಿ ಕಾರ್ಡ್ಗಳನ್ನಷ್ಟೇ ಎಮಟ್ರಿ ಗೇಟ್ನಲ್ಲಿ ಚೆಕ್ ಮಾಡಲಾಗ್ತಿತ್ತು. ಆದ್ರೆ ಇನ್ಮುಂದೆ ಸಂಸದರ ಐಡಿ ಕಾರ್ಡ್ನ್ನ ಕೂಡ ಪರಿಶೀಲನೆ ನಡೆಸಲಾಗುತ್ತೆ. ಕೇವಲ ಕಾರಿನಲ್ಲಿ ಸ್ಟಿಕ್ಕರ್ ಇದ್ರಷ್ಟೇ ಸಾಕಾಗೋದಿಲ್ಲ. ಐಡಿ ಕಾರ್ಡ್ ಹಾಕ್ಕೊಂಡಿದ್ರಷ್ಟೇ ಸಂಸದನಿಗೂ ಎಂಟ್ರಿಗೆ ಪರ್ಮಿಷನ್.. ಅದರ್ವೈಸ್ ಸಂಸದನಿಗೂ ನೋ ಎಂಟ್ರಿ. ಜೊತೆಗೆ ಸಂಸದರ ಕಾರನ್ನ ಕೂಡ ಕಂಪ್ಲೀಟ್ ಆಗಿ ಸ್ಕ್ಯಾನ್ ಮಾಡಲಾಗ್ತಿದೆ. ಎಷ್ಟೇ ದೊಡ್ಡವರಾಗಿರಲಿ ಇನ್ಮುಂದೆ ನೋ ಕಾಂಪ್ರಮೈಸ್. ಇದ್ರ ಜೊತೆಗೆ ಸಂಸದರ ಇನ್ಮುಂದೆ ತಮ್ಮ ಪಟಾಲಂನ್ನ ಕಟ್ಟಿಕೊಂಡು ಸಂಸತ್ಗೆ ಎಂಟ್ರಿಯಾಗುವಂತೆಯೂ ಇಲ್ಲ. ಬೆಂಬಲಿಗರು, ಸಂಬಂಧಿಕರು ಬಿಡಿ ಈವನ್ ಸಂಸದರ ಪಿಎಗೂ ಕೂಡ ನೋ ಎಂಟ್ರಿ. ಸಂಸದರೆಲ್ಲಾ ಇನ್ನು ಸಿಂಗಲ್ ಶೇರ್ಗಳಷ್ಟೇ.. ಸಿಂಗಲ್ ಆಗಿ ಬರ್ಬೇಕು.. ಸಿಂಗಲ್ ಆಗಿ ಹೋಗ್ಬೇಕು.. ಹೊರಗಡೆ ಎಷ್ಟು ಮಂದಿಯನ್ನ ಬೇಕಾದ್ರೂ ಕಟ್ಕೊಂಡು ಜಾತ್ರ ಮಾಡಿಕೊಳ್ಳಲಿ.. ಇದ್ರ ಜೊತೆಗೆ ಮಾಜಿ ಸಂಸದರು ಕೂಡ ಬರುವಂತೆ ಅಲ್ಲ. ಅವರಿಗೆ ನೀಡಲಾಗಿದ್ದ ಎಂಟ್ರಿ ಪಾಸ್ನ್ನ ಕೂಡ ವಾಪಸ್ ಪಡೆದುಕೊಳ್ಳಲಾಗ್ತಿದೆ.
ಸಂಸತ್ ಸೆಕ್ಯೂರಿಟಿ ಮತ್ತಷ್ಟು ಹೆಚ್ಚಳ!
ಇನ್ನು ಸಂಸತ್ ಭವನದ ಸೆಕ್ಯೂರಿಟಿ ಲೆವೆಲ್ನ್ನ ಇನ್ನಷ್ಟು ಹೈ ಮಾಡಲಾಗ್ತಿದೆ. ಸಿಆರ್ಪಿಎಫ್, ಐಟಿಬಿಪಿ, ದೆಹಲಿ ಪೊಲೀಸ್, ಎಸ್ಪಿಜಿ ಅಂದ್ರೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್, ಎನ್ಎಸ್ಜಿ ಮತ್ತು ಇಂಟೆಲಿಜೆನ್ಸ್ ಬ್ಯೂರೋ ಎಲ್ಲರೂ ಒಟ್ಟಾಗಿ ಸಂಸತ್ನ ಭದ್ರತೆಯನ್ನ ಹೊಣೆ ಹೊತ್ತುಕೊಂಡಿದ್ದಾರೆ. ಇಡೀ ಸೆಕ್ಯೂರಿಟಿ ರೆಸ್ಪಾನ್ಸಿಬಿಲಿಟಿ ಅವರ ಮೇಲೆಯೇ ಇರುತ್ತೆ. ಹಾಗೆಯೇ ಪ್ರಧಾನಿ ಮೋದಿ ಕೂಡ ಉನ್ನತ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಇಡೀ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆಯೂ ಸಲಹೆಗಳನ್ನ ನೀಡಿದ್ದಾರೆ.
ಇವೆಲ್ಲದ್ರ ಮಧ್ಯೆ, ಲೋಕಸಭೆ ಮತ್ತು ರಾಜ್ಯಸಭೆ ಕಲಾಪದ ವೇಳೆ ಒಂದಷ್ಟು ಹಂಗಾಮ ಕೂಡ ನಡೆದಿದೆ. ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿ ಚರ್ಚೆಯಾಗಬೇಕು. ಸರ್ಕಾರ ಉತ್ತರ ನೀಡಬೇಕು ಅಂತಾ ಪ್ರತಿಪಕ್ಷ ಸದಸ್ಯರು ಕಲಾಪ ಆರಮಭವಾದಾಗಿನಿಂದಲೂ ಆಗ್ರಹಿಸ್ತಿದ್ರು. ಆದ್ರೆ ಸ್ಪೀಕರ್ ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಆಗ ವಿಪಕ್ಷ ಸದಸ್ಯರು ಪ್ರತಿಭಟನೆ ಮಾಡಿದ್ರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗಲಾಟೆ ಎಬ್ಬಿಸಿದ್ರು. ಹೀಗಾಗಿ ಪ್ರತಿಪಕ್ಷಗಳ 15 ಮಂದಿ ಸದಸ್ಯರನ್ನ ಸ್ಪೀಕರ್ ಸಸ್ಪೆಂಡ್ ಮಾಡಿದ್ದಾರೆ. ಖಂಡಿತಾ ಸರ್ಕಾರ ಇಲ್ಲಿ ಸಂಸತ್ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿ ಆನ್ಸರ್ ಮಾಡಲೇಬೇಕಾಗುತ್ತೆ. ಚರ್ಚೆ ನಡೆಸಲೇಬೇಕು. ಯಾಕಂದ್ರೆ, ಸಂಸದರ ಭದ್ರತೆ ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುವಂಥಾ ಘಟನೆ ನಡೆದಿರೋವಾಗ ಆಳೋ ಸರ್ಕಾರ ಭದ್ರತೆಯ ಹೊಣೆ ಹೊತ್ತುಕೊಳ್ಳಲೇಬೇಕಾಗುತ್ತೆ. ಇಲ್ಲಿ ಪ್ರತಿಪಕ್ಷದ ಮಂದಿ ಚರ್ಚೆಗೆ ಆಗ್ರಹಿಸಿರೋದ್ರಲ್ಲಿ ಯಾವುದೇ ತಪ್ಪಿಲ್ಲ. ಬಂಧನವಾದ ಆರೋಪಿಗಳ ಹಿಂದೆ ಇನ್ಯಾರೆಲ್ಲಾ ಇದ್ದಾರೆ? ಉದ್ದೇಶ ಏನಾಗಿತ್ತು ಎಲ್ಲವೂ ಇನ್ನಷ್ಟೇ ಗೊತ್ತಾಗಬೇಕಿದೆ. ಸದ್ಯ ಪ್ರಾಥಮಿಕ ಹಂತದ ತನಿಖೆ ನಡೆದಿದೆಯಷ್ಟೇ. ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಇದು ಅತ್ಯಂತ ಗಂಭೀರ ಪ್ರಕರಣವಾಗಿರೋದ್ರಿಂದ ಇನ್ನಷ್ಟು ಆಳವಾಗಿ ತನಿಖೆ ನಡೆಸಲೇಬೇಕಿದೆ. ತನಿಖಾ ರಿಪೋರ್ಟ್ ಬಂದ ಬಳಿಕ ಖುದ್ದು ಗೃಹ ಸಚಿವರೇ ಈ ಬಗ್ಗೆ ಸಂಸತ್ನಲ್ಲಿ ಸ್ಪಷ್ಟನೆ ಕೊಡಬಹುದು. ಹೀಗಾಗಿ ಇಂಥಾ ಕೇಸ್ನಲ್ಲಿ ರಾಜಕೀಯ ಮೈಲೇಜ್ ಪಡೆದುಕೊಳ್ಳೋದು ಕೂಡ ಸರಿಯಲ್ಲ. ಎಲ್ಲಾ ಪಕ್ಷಗಳು ಒಟ್ಟಾಗಿ, ಸಂಸತ್ನಲ್ಲೂ ಚರ್ಚೆ ನಡೆಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆಯನ್ನ ವಿನಿಯಮ ಮಾಡಿಕೊಳ್ಳಬೇಕಿದೆ. ಯಾಕಂದ್ರೆ ಸಂಸತ್ ಅನ್ನೋದು ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇದು ದೇಶದ ಸ್ವತ್ತು.. 140 ಕೋಟಿ ಭಾರತೀಯರ ಸಂಪತ್ತು.